ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಕೊಡುಗೆಗಳು: ಆಡಳಿತ, ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿ-ಗತಿಗಳ ಕುರಿತ ಸಂಪೂರ್ಣ ವಿವರಗಳು.
ವಿಜಯನಗರ ಸಾಮ್ರಾಜ್ಯದ ಕೊಡುಗೆಗಳು ಆಡಳಿತ ವಿಜಯನಗರ ಸಾಮ್ರಾಜ್ಯದ ಆಡಳಿತವು ಪಾರಂಪರಿಕವಾಗಿ ಮುಂದುವರೆಯಿತು . ರಾಜರೇ ಅಧಿಕಾರದ ಕೇಂದ್ರವಾಗಿದ್ದರು . ರಾಜರು ತಮ್ಮ ಜೇಷ್ಠ ಪುತ್ರನನ್ನೇ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುತ್ತಿದ್ದರು . ವಿಕೇಂದ್ರಿಕೃತ ವ್ಯವಸ್ಥೆಯಿದ್ದರೂ ವಿಜಯನಗರವು ಪ್ರಬಲ ಕೇಂದ್ರಾಡಳಿತವನ್ನು ಹೊಂದಿತ್ತು . ಆಡಳಿತ ವ್ಯವಸ್ಥೆಯನ್ನು ಮಂತ್ರಿಮಂಡಲ ಸೇನಾಡಳಿತ ಮತ್ತು ಪ್ರಾಂತೀಯ ಮಾಂಡಲಿಕತ್ವವೆಂದು ವಿಂಗಡಿಸಲಾಗಿತ್ತು . ಪ್ರಾಂತೀಯ ಹಂತದಲ್ಲಿ ನಾಯಂಕರ ಅಥವಾ ಅಮರ ನಾಯಕರು ( ನಾಯಕರು ), ರಾಜ್ಯ, ಮಂಡಲ , ಗ್ರಾಮಾಡಳಿತ ಹೀಗೆ ವಿವಿಧ ಬಗೆಗಳಿದ್ದವು . ಆಡಳಿತಾತ್ಮಕವಾಗಿ ಸಾಮ್ರಾಜ್ಯವು ರಾಜ್ಯ , ನಾಡು ಹಾಗೂ ಗ್ರಾಮಗಳೆಂಬ ಆಡಳಿತ ಘಟಕಗಳನ್ನು ಹೊಂದಿತ್ತು . ಅರಸನು ನ್ಯಾಯಾಂಗ ವಿಚಾರಗಳಲ್ಲಿ ಪರಮಾಧಿಕಾರವನ್ನು ಪಡೆದಿದ್ದನು . ಪ್ರಾಂತಗಳಲ್ಲಿ ಪ್ರಾಂತಾಧಿಕಾರಿಯು ನ್ಯಾಯ ತೀರ್ಮಾನ ಮಾಡುತ್ತಿದ್ದನು . ಶಿಕ್ಷೆಗಳು ಉಗ್ರವಾಗಿದ್ದವು . ಗ್ರಾಮಗಳು ಆಡಳಿತ ವ್ಯವಸ್ಥೆಯ ಕೊನೆಯ ಘಟಕಗಳಾಗಿದ್ದು , ಅಲ್ಲಿ ಗ್ರಾಮಸಭೆಗಳು ಆಡಳಿತ ನಿರ್ವಹಿಸುತ್ತಿದ್ದವು . ಗೌಡ , ಕರಣಮ್ ( ಶಾನುಭೋಗ ), ತಳವಾರ ಗ್ರಾಮಾಡಳಿತದಲ್ಲಿ ನೆರವಾಗುತ್ತಿದ್ದರು . ನಾಡುಗಳಲ್ಲಿ ನಾಡಗೌಡರು ಮತ್ತು ಪಟ್ಟಣಗಳಲ್ಲಿ ಪಟ್ಟಣ ಸ್ವಾಮಿ ಅಥವಾ ಪಟ್ಟಣಶೆಟ್ಟಿ ಆಡಳ...