Posts

Showing posts from August, 2025

ಭಾರತದ ಇತಿಹಾಸ – ಆರಂಬ ಕಾಲದಿಂದ ಶಾತವಾಹನರವರೆಗೆ. ಪ್ರಥಮ ಚತುರ್ಮಾಸಕ್ಕಾಗಿ. (ಪರಿಷ್ಕೃತ NEP ಅನುಸಾರ)

ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ KARNATAK UNIVERSITY, DHARWAD ಪ್ರಥಮ ಸೆಮಿಸ್ಟರ್‌ ಇತಿಹಾಸ  ಪಠ್ಯಕ್ರಮ – ಕಲಾ ವಿಭಾಗ With Effect from 2026-27 ಶೀರ್ಷಿಕೆ : ಭಾರತದ ಇತಿಹಾಸ – ಆರಂಬ ಕಾಲದಿಂದ ಶಾತವಾಹನರವರೆಗೆ . Title: HISTORY OF INDIA (From Earliest to the Satavahanas) Course Code: A1 HIS 1T1 ***** ಘಟಕ   1. ಮೂಲಾಧಾರಗಳು ಮತ್ತು ಇತಿಹಾಸಪೂರ್ವ ಕಾಲ. Unit 1. Sources and Pre-HistoricPeriod ಪೀಠಿಕೆ - ಭಾರತದ ಇತಿಹಾಸದ ಪರಿಚಯ;  ಭಾರತದ ಭೌಗೋಳಿಕ ಲಕ್ಷಣಗಳು; ಆಧಾರಗಳು   ಮತ್ತು ಇತಿಹಾಸ ಪುನರ್‌ರಚನೆಯ ಆಕರಗಳು – ಪುರಾತತ್ವ ( ಪ್ರಾಕ್ತನಾ ಶಾಸ್ತ್ರಾಧಾರಗಳು ಮತ್ತು ಸಾಹಿತ್ಯಾಧಾರಗಳು. Introduction-Understanding the History of India and Geographical Features of India,  Sources and Tools of Historical Reconstruction- Archaeological and Literary.  ಹಳೆಶಿಲಾಯುಗ ಸಂಸ್ಕೃತಿ – ವಿಸ್ತರಣೆ; ಶಿಲಾ ಉದ್ಯಮಗಳು ಮತ್ತು ಇತರೆ ತಾಂತ್ರಿಕ ಬೆಳವಣಿಗೆ ಗಳು;  ಮಧ್ಯಶಿಲಾಯುಗ ಸಂಸ್ಕೃತಿ – ಕಾಲಾನುಗತ ಮತ್ತು ಪ್ರಾದೇಶಿಕ ವಿಸ್ತರಣೆ; ತಾಂತ್ರಿಕ, ಆರ್ಥಿಕ ಮತ್ತು ಶಿಲಾ ಚಿತ್ರಕಲೆಗಳ ಲ್ಲಿ ಹೊಸ ಬೆಳವಣಿಗೆಗಳು. Paleolithic Culture- Sequence and Distribution; Stone Industries ...

ಹೊಯ್ಸಳರ ಸಾಂಸ್ಕೃತಿಕ ಕೊಡುಗೆಗಳು

ಹೊಯ್ಸಳರ ಆಡಳಿತ ವ್ಯವಸ್ಥೆ    ಪ್ರಾರಂಭದ ಹೊಯ್ಸಳ ಪ್ರಭುಗಳು ತಲಕಾಡಿನ ಗಂಗರ ಮತ್ತು ಕಲ್ಯಾಣ ಚಾಳುಕ್ಯರ ಆಡಳಿತ ಪದ್ಧತಿಯನ್ನು ಅಳವಡಿಸಿ ಕೊಂಡಿದ್ದರು . ಮುಂದೆ ರಾಜ್ಯ ವಿಸ್ತಾರವಾಗಿ , ಆಡಳಿತದ ಭಾರ ಹೆಚ್ಚಾಗುತ್ತಿದ್ದಂತೆ ಆಯಾ ಸಂದರ್ಭಕ್ಕೆ ಅನುಕೂಲವಾಗುವಂತೆ , ಮೂಲ ವ್ಯವಸ್ಥೆಗೆ ಭಂಗ ಬರದ ರೀತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡಿದ್ದೂ ಉಂಟು . ರಾಜ್ಯಾಡಳಿತ ಮೂರು ಘಟ್ಟಗಳಲ್ಲಿ ನಡೆಯುತ್ತಿತ್ತು . ಎಲ್ಲಕ್ಕೂ ಉನ್ನತ ಘಟ್ಟದಲ್ಲಿ ಇಡೀ ರಾಜ್ಯದ ಮೇಲೆ ಅಧಿಕಾರವನ್ನು ಚಲಾಯಿಸುತ್ತಿ ದ್ದವನು ಚಕ್ರವರ್ತಿ . ಈ ರಾಜ್ಯವು ಅನೇಕ ಸಣ್ಣ ವಿಭಾಗಗಳಾಗಿ ವಿಂಗಡಿತವಾಗಿದ್ದು , ಅವುಗಳ ಮೇಲೆ ರಾಜನ ಸಂಬಂಧಿಗಳೋ ದಂಡನಾಯಕರೋ ಅಥವಾ ಸಾಮಂತ ರಾಜವಂಶದವರೋ ಅಧಿಕಾರ ನಡೆಸುತ್ತಿದ್ದರು . ಈ ಪ್ರಾಂತಗಳಲ್ಲಿದ್ದ ಗ್ರಾಮಗಳಲ್ಲಿ ಒಂದೊಂದಕ್ಕೂ ಪ್ರತ್ಯೇಕವಾದ ಸ್ಥಳೀಯ ಆಡಳಿತ ಸಂಸ್ಥೆಗಳಿರುತ್ತಿದ್ದುವು . ರಾಜ ಆಡಳಿತದ ಸರ್ವಶ್ರೇಷ್ಠ ಅಧಿಕಾರಿಯಾಗಿದ್ದ . ರಾಜತ್ವ ವಂಶಪಾರಂಪರ್ಯವಾಗಿತ್ತು . ಹಿರಿಯ ಮಗ ಉತ್ತರಾಧಿಕಾರಿಯಾಗುತ್ತಿದ್ದ . ಮಂತ್ರಿಗಳನ್ನೂ ಸೇನಾಧಿಕಾರಿಗಳನ್ನೂ ಆಡಳಿತ ಯಂತ್ರದ ಇತರ ಉಚ್ಚ ಅಧಿಕಾರಿಗಳನ್ನೂ ಆರಿಸುವುದು ರಾಜನ ಕರ್ತವ್ಯವಾಗಿತ್ತು . ರಾಜನು ಸವೋಚ್ಚ ಸೇನಾನಿಯೂ ನ್ಯಾಯಾಧಿಪತಿಯೂ ಆಗಿರುತ್ತಿದ್ದ . ಆದರೆ ಸ್ವೇಚ...