ಉತ್ತರ ವೈದಿಕ ಕಾಲ
ಪೀಠಿಕೆ : ವೈದಿಕ ಸಂಸ್ಕೃತಿಯ ಕಾಲವನ್ನು ಸಾಮಾಜಿಕ , ಧಾರ್ಮಿಕ , ಮತ್ತು ರಾಜಕೀಯ ಸ್ಥಿತಿಗಳಲ್ಲಿ ಉಂಟಾದ ಬದಲಾವಣೆಗಳನ್ನು ಆಧರಿಸಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವುಗಳೆಂದರೆ ಪೂರ್ವ ಮತ್ತು ಉತ್ತರ ವೈದಿಕ ಕಾಲ . ಉತ್ತರ ವೈದಿಕ ಕಾಲವು ಸಾ . ಶ . ಪೂ 1600 ರಿಂದ ಸಾ . ಶ . ಪೂ 600 ರವರೆಗೆ ಅಂದರೆ ಹೊಸ ಮತಗಳ ಉದಯದವರೆಗೆ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ . ಈ ಕಾಲವನ್ನು ಹಲವಾರು ಬದಲಾವಣೆಗಳಿಗೆ ಒಳಗಾದ ಕಾಲವೆಂದು ಗುರುತಿಸಲಾಗಿದೆ . ಅಂತಹ ಬದಲಾವಣೆಗಳೆಂದರೆ ಭೌಗೋಳಿಕ ಚಲನೆ , ಕಬ್ಬಿಣದ ಅಧಿಕ ಬಳಕೆ , ಕೃಷಿಯ ವಿಸ್ತರಣೆ ಮತ್ತು ನಗರಗಳ ಬೆಳವಣಿಗೆ ರಾಜ್ಯದ ಕಲ್ಪನೆಯ ಉದಯ , ಆಶ್ರಮ ವ್ಯವಸ್ಥೆ ಮತ್ತು ಸಂಸ್ಕಾರಗಳ ಏಳಿಗೆ , ವೃತ್ತಿ ಆಧಾರಿತ ಜಾತಿ ಪದ್ಧತಿಗಳ ಉದಯ ಮತ್ತು ಸಾಮಾಜಿಕವಾಗಿ ಉಂಟಾದವುಗಳೇ ಆಗಿವೆ . 1. ಭೌಗೋಳಿಕ ಚಲನೆ : ಪೂರ್ವ ವೈದಿಕ ಕಾಲದಲ್ಲಿ ಆ ಕಾಲದ ಜನರು ಸಿಂಧೂ ಮತ್ತು ಅದರ ಉಪನದಿಗಳ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದರು . ಇದನ್ನು ಸಪ್ತಸಿಂಧೂ ಪ್ರದೇಶ ಎಂದು ಕರೆಯಲಾಗಿದೆ . ಆದರೆ ಉತ್ತರ ವೈ ದಿಕ ಕಾಲದ ವೇಳೆಗೆ ಅಧಿಕ ಸಂಖ್ಯೆಯ ಜನರು ಪೂರ್ವದಲ್ಲಿ ಗಂಗಾ , ಯಮುನಾ ನದಿಗಳ ಬಯಲಿಗೆ ವಲಸೆ ಹೋದರು . ಇದನ್ನು ಪೂರ್ವದ ಕಡೆಗಿನ ಚಲನೆ ಅಥವಾ ಭೌಗೋಳಿಕ ಸ್ಥಿತ್ಯಂತರ ಎಂತಲೂ ಕರೆಯಲಾಗಿ...