ಶಾತವಾಹನರು, ರಾಜಕೀಯ ಇತಿಹಾಸ, ಆಡಳಿತ ಪದ್ಧತಿ ಮತ್ತು ಅವರ ಸಾಂಸ್ಕೃತಿಕ ಕೊಡುಗೆಗಳು
ಶಾತವಾಹನರು. ಮೌರ್ಯರ ಪತನಾನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಹಿರಿಯ ರಾಜ ಮನೆತನವೆಂದರೆ ಶಾತವಾಹನರು. ಇವರ ಇತಿಹಾಸದ ಪುನರ್‌ರಚನೆಗೆ ಮತ್ಸ್ಯ, ವಿಷ್ಣು & ಭಾಗವತ ಪುರಾಣಗಳಲ್ಲಿ ಆಧಾರಗಳು ಲಭ್ಯ. ಕಾರ್ಲೆ, ನಾಸಿಕ್ & ಕನ್ಹೇರಿಗಳಲ್ಲಿನ ಪ್ರಾಕೃತ ಶಾಸನಗಳು ಪುರಾಣಗಳಲ್ಲಿನ ಮಾಹಿತಿಗಳಿಗೆ ಪೂರಕವಾಗಿವೆ. ಇವರ ಕಾಲದ ನಾಣ್ಯಗಳೂ ಸಹ ಇವರ ಇತಿಹಾಸದ ಪುನರ್‌ರಚನೆಗೆ ಮಾಹಿತಿ ಒದಗಿಸುತ್ತವೆ. ಇವರು ತಮ್ಮನ್ನು ದಕ್ಷಿಣಾಪಥದ ಒಡೆಯರು ಎಂದು ಸ್ವಯಂ ಉಲ್ಲೇಖಿಸಿಗೊಂಡಿದ್ದಾರೆ. ಇವರ ರಾಜ್ಯವು ಕೊಂಕಣದಿಂದ ಕೃಷ್ಣ ನದಿಯ ಮುಖಜಭೂಮಿಯವರೆಗೆ ಹರಡಿತ್ತು. ಚಿತ್ರದುರ್ಗ ಬಳಿಯ ಚಂದ್ರವಳ್ಲೀ ಇವರ ದಕ್ಷಿಣದ ಗಡಿಯಾಗಿತ್ತು. ಮತ್ಸ್ಯ ಪುರಾಣದಂತೆ ಈ ಮನೆತನದ 30 ಅರಸರು ಸು. 460 ವರ್ಷಗಳ ಕಾಲ ಆಳಿದ್ದಾರೆ. ಕೆಲವು ವಿದ್ವಾಂಸರು ಇವರ ಆಳ್ವಿಕೆ ಸಾ.ಶ.ಪೂ. 300 ರಲ್ಲಿ ಆರಂಭವಾಯಿತು ಎಂದು ತಿಳಿಸಿದ್ದರೆ, ಡಿ.ಸಿ ಸರ್ಕಾರರ್ರವರು ಇವರ ಆಳ್ವಿಕೆಯ ಆರಂಭದ ಕಾಲವು ಸು. ಸಾ.ಶ.ವ. 30 ರಲ್ಲಿ ಆಗಿರಬಹುದು ಎಂದು ವಾದಿಸಿದ್ದಾರೆ. ಅವರ ಪ್ರಕಾರ ವಿವಿಧ ಪುರಾಣಗಳು ತಿಳಿಸುವಂತೆ ಶಾತವಾಹನರಿಗಿಂತ ಮುನ್ನ ಆಳ್ವಿಕೆ ನಡೆಸಿದ ಮೌರ್ಯ, ಶೃಂಗ & ಕಣ್ವರ ಒಟ್ಟು ಆಳ್ವಿಕೆಯ ಕಾಲ ಸು. 294 ವರ್ಷಗಳು. ಮೌರ್ಯರ ಸ್ಥಾಪಕ ಚಂದ್ರಗುಪ್ತನ ಕಾಲವು ಸಾ.ಶ.ಪೂ. 324 ಆಗಿದ್ದು, ಅದರಲ್ಲಿ ಮೇಲಿನ ಒಟ್ಟು ಕಾಲವನ್ನು ಕಳೆದರೆ ಉಳಿಯುವ 30 ಶಾತವಾಹನರ ಆರ...