Posts

Showing posts with the label ಕುಶಾಣರು

ಕುಶಾಣರು - ಅಧ್ಯಯನ ಸಾಮಗ್ರಿ

ಪೀಠಿಕೆ:- ಕುಶಾಣರು ಮೌರ್ಯರ ನಂತರ ಉತ್ತರ ಭಾರತದಲ್ಲಿ ವಿಶಾಲ ರಾಜ್ಯ ಸ್ಥಾಪಿಸಿದವರು. ಪುರುಷಪುರ ಇವರ ರಾಜಧಾನಿಯಾಗಿತ್ತು. ಇವರು ಭಾರತಕ್ಕೆ ರಾಜಕೀಯ ಮತ್ತು ಆರ್ಥಿಕ   ಐಕ್ಯತೆ ತಂದ ಪ್ರಥಮ ವಿದೇಶಿಯರು. ಇವರ ರಾಜ್ಯವು ಉತ್ತರ ಭಾರತ , ದಕ್ಷಿಣ ಚೀನಾ ಮತ್ತು ಬ್ಯಾಕ್ಟ್ರಿಯಾ ಸೇರಿದಂತೆ ಮೂರು ರಾಜ್ಯಗಳಲ್ಲಿ ಹರಡಿತ್ತು. ಇವರು ಗಾಂಧಾರ ಕಲೆ ಮತ್ತು ಮಹಾಯಾನ ಬೌದ್ಧಪಂಥದ ಪೋಷಕರಾಗಿದ್ದರು. ಇವರ ಕಾಲದಲ್ಲಿ ಗ್ರೀಕ್ ‌ ಮತ್ತುರೋಮ್ ‌ ನೊಂದಿಗಿನ ವ್ಯಾಪಾರ ಸಂಪರ್ಕ ಮತ್ತಷ್ಟು ವೃದ್ಧಿಯಾಯಿತು. ಕುಶಾನರ ಬಗೆಗಿನ ಆಧಾರಗಳು ಅಶ್ವಘೋಷನ ಬುದ್ಧಚರಿತೆ , ಕ ಲ್ಹ ನನ ರಾಜತರಂಗಿಣಿ , ಹ್ಯೂಯನ್ ‌ ತ್ಸಾಂಗನ ಬರವಣಿಗೆಗಳು, ಚೀನಿ ಬರವಣಿಗೆಗಳು. ಕುಶಾಣರ ಮೂಲ :- ಇವರು ದಕ್ಷಿಣ ಚೀನಾದ ಯೂಚಿ ಪಂಗಡದ ಅಲೆಮಾರಿಗಳು; ಇವರನ್ನು ಟೊಚಾರಿಯನ್ನರೆಂದೂ ಕರೆಯುತ್ತಾರೆ . ಕ್ರಿ . ಪೂ . 165 ರಲ್ಲಿ ಹೂಣರ ಧಾಳಿಯಿಂದಾಗಿ ಪಶ್ಚಿಮಕ್ಕೆ ವಲಸೆ ಹೊರಟರು. ಹಾಗೆ ಹೊರಟ ಒಂದು ಗುಂಪು ಟಿಬೆಟ್ ‌ ನತ್ತ ಪಯಣ ಮಾಡಿತು. ಮತ್ತೊಂದು ಗುಂಪಿನವರು ಜಾಕ್ಸಾರ್ಟನ್ ‌ ನದಿ ದಂಡೆಯಲ್ಲಿ ಶಕರನ್ನು ಸೋಲಿಸಿ ಬ್ಯಾಕ್ಟ್ರಿಯಾದಲ್ಲಿ ನೆಲೆಸಿದರು . ಇವರು ಬ್ಯಾಕ್ಟ್ರಿಯಾದಲ್ಲಿದ್ದಾಗ 5 ಪ್ರಾಂತ್ಯಗಳಿಂದ ಕೂಡಿದ್ದರು . ಅವುಗಳೆಂದರೆ ಕಿಷಾಂಗ್ ‌( ಕುಶಾನ ), ಹುವಿ , ಕುಲಿಶುಂಗ್ ‌, ಹಿಲೂಯನ್ ‌ ಮತ್ತು ತುಮಿ ಅವು...