ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ
ಯಾವುದೇ ದೇಶದ ಇತಿಹಾಸವು ಆಯಾ ದೇಶದ ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ . ಭೌಗೋಳಿಕ ಅಂಶಗಳು ಮಾನವನ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ . ಭೌಗೋಳಿಕ ಅಂಶಗಳು ಪರ್ವತಗಳು , ನದಿಗಳು , ಬೆಟ್ಟ - ಗುಡ್ಡಗಳು , ಅರಣ್ಯಗಳು , ಹವಾಗುಣ , ಭೂಗುಣ ಇತ್ಯಾದಿ . ಇವುಗಳು ಮನುಷ್ಯನ ಮೇಲೆ ತಮ್ಮ ಪ್ರಭಾವ ಬೀರುವುದೇಕೆ ? ಮಾನವ ಪ್ರಕೃತಿಯ ಶಿಶು ; ಕಾರಣ ಅವನ ಮೇಲೆ ಪ್ರಕೃತಿಯ ಪ್ರಭಾವ ಇದ್ದೇ ಇರುತ್ತದೆ . ಅಂತೆಯೇ , ಇತಿಹಾಸದ ಹುಟ್ಟು , ಬೆಳವಣಿಗೆ ಮತ್ತು ನಿರಂತರತೆಗಳು ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆ . ಜನರ ರಾಜಕೀಯ , ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಈ ಅಂಶಗಳಿಂದ ಪ್ರಭಾವಿತ . ಎಲ್ಲಾ ನಾಗರೀಕತೆಗಳು ನದಿಗಳ ತೀರಗಳಲ್ಲಿಯೇ ಹುಟ್ಟಿ ಬೆಳೆದಿವೆ . ಉದಾ :- ಈಜಿಪ್ಟ್ ನಾಗರೀಕತೆ . ಹರಪ್ಪ ನಾಗರೀಕತೆ . ಇಂಗ್ಲೆಂಡ್ ಸುದೀರ್ಘ ಸಮುದ್ರ ತೀರ ಹೊಂದಿರುವ ಕಾರಣ ನೌಕಾಯಾನದಲ್ಲಿ ಶ್ರೇಷ್ಠತೆ ಸಾಧಿಸಿತು ; ಜಗತ್ತಿನ ಮೇಲೆ ಒಡೆತನ ಸಾಧಿಸಿತು . ಭೂಗೋಳದ ಅಧ್ಯಯನ ಏಕೆ? ಇತಿಹಾಸವು ಭೂಗೋಳದ ನಿರ್ಮಾಣ . ಭೂಗೋಳವನ್ನು ತಿಳಿಯದೇ ಅದರ ಇತಿಹಾಸ ಅಧ್ಯಯನ ಅಪೂರ್ಣ ; ಅಸಾಧ್ಯ . ಭೂಗೋಳವಿಲ್ಲದೇ ಇತಿಹಾಸವಿಲ್ಲ . ಕಾರಣ , ಭೂಗೋಳವು ಐತಿಹಾಸಿಕ ಜ್ಞಾನದ ತಳಹದಿಯಾಗಿದೆ . ಭೂಗೋಳದ ಮಹತ್ವ ; ವಿದ್ವಾಂಸರ ಅಭಿಪ್ರಾಯಗಳು :...