ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ

   ಯಾವುದೇ ದೇಶದ ಇತಿಹಾಸವು ಆಯಾ ದೇಶದ ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಭೌಗೋಳಿಕ ಅಂಶಗಳು ಮಾನವನ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ.

ಭೌಗೋಳಿಕ ಅಂಶಗಳು

ಪರ್ವತಗಳು, ನದಿಗಳು, ಬೆಟ್ಟ-ಗುಡ್ಡಗಳು, ಅರಣ್ಯಗಳು, ಹವಾಗುಣ, ಭೂಗುಣ ಇತ್ಯಾದಿ.

ಇವುಗಳು ಮನುಷ್ಯನ ಮೇಲೆ ತಮ್ಮ ಪ್ರಭಾವ ಬೀರುವುದೇಕೆ?

ಮಾನವ ಪ್ರಕೃತಿಯ ಶಿಶು; ಕಾರಣ ಅವನ ಮೇಲೆ ಪ್ರಕೃತಿಯ ಪ್ರಭಾವ ಇದ್ದೇ ಇರುತ್ತದೆ. ಅಂತೆಯೇ, ಇತಿಹಾಸದ ಹುಟ್ಟು, ಬೆಳವಣಿಗೆ ಮತ್ತು ನಿರಂತರತೆಗಳು ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆ. ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅಂಶಗಳಿಂದ ಪ್ರಭಾವಿತ. ಎಲ್ಲಾ ನಾಗರೀಕತೆಗಳು ನದಿಗಳ ತೀರಗಳಲ್ಲಿಯೇ ಹುಟ್ಟಿ ಬೆಳೆದಿವೆ.
ಉದಾ:- ಈಜಿಪ್ಟ್ ನಾಗರೀಕತೆ.
ಹರಪ್ಪ ನಾಗರೀಕತೆ.
ಇಂಗ್ಲೆಂಡ್ ಸುದೀರ್ಘ ಸಮುದ್ರ ತೀರ ಹೊಂದಿರುವ ಕಾರಣ ನೌಕಾಯಾನದಲ್ಲಿ ಶ್ರೇಷ್ಠತೆ ಸಾಧಿಸಿತು; ಜಗತ್ತಿನ ಮೇಲೆ ಒಡೆತನ ಸಾಧಿಸಿತು.

ಭೂಗೋಳದ ಅಧ್ಯಯನ ಏಕೆ?

ಇತಿಹಾಸವು ಭೂಗೋಳದ ನಿರ್ಮಾಣ. ಭೂಗೋಳವನ್ನು ತಿಳಿಯದೇ ಅದರ ಇತಿಹಾಸ ಅಧ್ಯಯನ ಅಪೂರ್ಣ; ಅಸಾಧ್ಯ. ಭೂಗೋಳವಿಲ್ಲದೇ ಇತಿಹಾಸವಿಲ್ಲ. ಕಾರಣ, ಭೂಗೋಳವು ಐತಿಹಾಸಿಕ ಜ್ಞಾನದ ತಳಹದಿಯಾಗಿದೆ.

ಭೂಗೋಳದ ಮಹತ್ವ; ವಿದ್ವಾಂಸರ ಅಭಿಪ್ರಾಯಗಳು:-

ಇತಿಹಾಸವು ಎರಡು ಮಹಾನ್ ಶಕ್ತಿಗಳ ನಿರ್ಮಾಣ; ವ್ಯಕ್ತಿ ಮತ್ತು ಪರಿಸರ.” ಮಹಾನ್ ವ್ಯಕ್ತಿಗಳ ಜೀವನವು ಅವರು ಹುಟ್ಟಿ ಬೆಳೆದ ಪರಿಸರದಿಂದ ಪ್ರಭಾವಿತ.

ರಿಚರ್ಡ್ ಹಕ್ಲೂಟ್:- “ಭೂಗೋಳ ಮತ್ತು ಕಾಲಗಣನೆಗಳು ಇತಿಹಾಸದ ಎರಡು ಕಣ್ಣುಗಳಿದ್ದಂತೆ

ಡಾ. ರಾಯ್ ಚೌಧರಿ:- “ಭಾರತದ ಚರಿತ್ರೆಯು ಪ್ರಪಂಚದ ಇತರೆ ರಾಷ್ಟ್ರಗಳ ಚರಿತ್ರೆಯಂತೆ ಅದರ ಭೌಗೋಳಿಕ ಅಂಶಗಳಿಂದ ಬಹುವಾಗಿ ಪ್ರಭಾವಿಸಲ್ಪಟ್ಟಿದೆ.”

   ಅಂತೆಯೇ ಕರ್ನಾಟಕದ ಇತಿಹಾಸವೂ ಸಹಾ ಅದರ ಭೌಗೋಳಿಕ ಅಂಶಗಳಿಂದ ಪ್ರಭಾವಿಸಲ್ಪಟ್ಟಿರುತ್ತದೆ.     ಆದ್ದರಿಂದ ಕರ್ನಾಟಕದ ಇತಿಹಾಸ ಅಧ್ಯಯನಕ್ಕೆ ತೊಡಗುವ ಮುನ್ನ ಅದರ ಭೌಗೋಳಿಕ ಸನ್ನಿವೇಶದ ಪರಿಚಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕೆಳಗೆ ಕರ್ನಾಟಕದ ಭೌಗೋಳಿಕ ಲಕ್ಷಣಗಳಿಗೆ ಸಂಬಂದಿಸಿದಂತೆ ಕೆಲವು ಮಾಹಿತಿಗಳು ನೀಡಲ್ಪಟ್ಟಿದ್ದು, ಕೆಲವು ಪ್ರಶ್ನೆಗಳೂ ಸಹಾ ಇವೆ. ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿರಿ.

   ಭೌಗೋಳಿಕ ನೆಲೆ:- ಭಾರತದ ದಕ್ಷಿಣ ಭಾಗದಲ್ಲಿದೆ. ದಖನ್‌ ಪ್ರಸ್ಥಭೂಮಿಯ ಪಶ್ಚಿಮದಲ್ಲಿದೆ. ಕರ್ನಾಟಕವು 11.31 ರಿಂದ 18.48 ಉತ್ತರ ಅಕ್ಷಾಂಶಗಳು ಹಾಗೂ 74.12 ರಿಂದ 78.40 ಪೂರ್ವ ರೇಖಾಂಶಗಳ ನಡುವೆ ಇದೆ.

ನೆರೆ ರಾಜ್ಯಗಳು ಯಾವುವು?

ಸಮುದ್ರಮಟ್ಟದಿಂದ ಸುಮಾರು 2000 ಅಡಿಗಳಷ್ಟು ಎತ್ತರದಲ್ಲಿದೆ. ಪೂರ್ವ-ಪಶ್ಚಿಮವಾಗಿ 250 ಉತ್ತರ-ದಕ್ಷಿಣವಾಗಿ 480 ಮೈಲುಗಳಷ್ಟಿದೆ.

ವಿಸ್ತೀರ್ಣ: 1,91,773 ಚ.ಕೀಮೀ ಗಳಷ್ಟಿದೆ.

ಭೌಗೋಳಿಕ ವಿಭಾಗಗಳು:- ಅಧ್ಯಯನದ ಅನುಕೂಲಕ್ಕಾಗಿ,

1.     ಕರಾವಳಿ ಪ್ರದೇಶ

2.     ಘಟ್ಟ ಪ್ರದೇಶ ಅಥವಾ ಮಲೆನಾಡು

  1. ನದಿಬಯಲು ಪ್ರದೇಶ
  2. ಉತ್ತರದ ಪ್ರಸ್ಥಭೂಮಿ
  3. ದಕ್ಷಿಣದ ಪ್ರಸ್ಥಭೂಮಿ

ಎಂದು ವಿಭಾಗ ಮಾಡಿಕೊಳ್ಳಬಹುದು.

 

  1. ಕರಾವಳಿ ಪ್ರದೇಶ:- ಸು. 218 ಕಿ.ಮೀ ಉದ್ದ. ಮೂರು ಜಿಲ್ಲೆಗಳು. ಪೂರ್ವ-ಪಶ್ಚಿಮವಾಗಿ ಸು. 30-40 ಕಿ.ಮೀ ಹರಡಿದೆ. ಪ್ರಾಚೀನ ಕಾಲದಿಂದಲೂ ಬಂದರುಗಳ ಅನುಕೂಲ ಒದಗಿಸಿದೆ.

ಕರ್ನಾಟಕದಲ್ಲಿರುವ ಬಂದರುಗಳು ಯಾವುವು?

  1. ಘಟ್ಟಪ್ರದೇಶ ಅಥವಾ ಮಲೆನಾಡು:- ಕರಾವಳಿ ಮತ್ತು ನದಿಬಯಲುಗಳ ನಡುವೆ ವಿಶಾಲವಾಗಿ ಹರಡಿಕೊಂಡಿರುವ ಎತ್ತರದ ಪ್ರದೇಶವಿದು. ಸಹ್ಯಾದ್ರಿ ಪರ್ವತ ಶ್ರೇನಿಗಳಿಂದ ಅಲಂಕರಿಸಲ್ಪಟ್ಟಿದೆ. ಸಮುದ್ರಮಟ್ಟಕ್ಕಿಂತ ಸರಾಸರಿ 2000 ಅಡಿಗಳಿಗಿಂತ ಎತ್ತರವಾಗಿದೆ. ಉನ್ನತ ಗಿರಿಗಳಿದ್ದು ದ್ರೋಣ ಪರ್ವತದ ಮುಳ್ಳಯ್ಯನಗಿರಿ ಅತೀ ಎತ್ತರದ ಗಿರಿಶಿಖರವಾಗಿದೆ. ದಟ್ಟವಾದ ಕಾಡುಗಳಿಂದ ಆವೃತವಾಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳು ಇಲ್ಲಿವೆ.ಅಪಾರವಾದ ನೈಸರ್ಗಿಕ ಸಂಪತ್ತು ಇಲ್ಲಿ ಲಭ್ಯ.

ಮುಳ್ಳಯ್ಯನ ಗಿರಿಯ ಎತ್ತರವೆಷ್ಟು?

3.     ನದಿಬಯಲು ಪ್ರದೇಶ:- ಕೃಷ್ಣ ಮತ್ತು ಕಾವೇರಿಗಳ ನಡುವಣ ಅನೇಕ ಉಪನದಿಗಳು ಇವೆ. ವಿಶಾಲವಾದ ಬಯಲುಗಳಿಗೆ ನೀರಾವರಿ ಸೌಲಭ್ಯ ಒದಗಿಸಿವೆ. ನದಿಗಳು ಆರ್ಥಿಕ ಬೆಳವಣಿಗೆ ಮತ್ತು ಸಂಸ್ಕೃತಿಗಳ ಬೆಳವಣಿಗೆಗೆ ಸಹಾಯಕವಾಗಿವೆ. ರಾಜಮನೆತನಗಳ ಉಗಮಕೇಂದ್ರಗಳು ನದಿಗಳ ತೀರದಲ್ಲಿಯೇ ಇವೆ.

ಕೃಷ್ಣ ಮತ್ತು ಕಾವೇರಿ ನದಿಗಳ ಉಪನದಿಗಳು ಯಾವುವು?

4.     ಉತ್ತರದ ಪ್ರಸ್ಥಭೂಮಿ:- ಬೀದರ್‌, ವಿಜಯಪುರ, ರಾಯಚೂರು, ಗುಲ್ಬರ್ಗಾ ಮತ್ತು ಯಾದಗಿರಿಗಳ ಪೂರ್ಣ ಭಾಗ ಹಾಗೂ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಪೂರ್ವದ ಭಾಗಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಕಪ್ಪು ಮಣ್ಣಿನ ಪ್ರದೇಶ. ಹತ್ತಿ ಮತ್ತು ಬೇಳೆಕಾಳುಗಳು ಪ್ರಮುಖ ಬೆಳೆಗಳು.

  1. ದಕ್ಷಿಣದ ಪ್ರಸ್ಥಭೂಮಿ:- ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಪೂರ್ವದ ಭಾಗಗಳನ್ನು ಒಳಗೊಂಡಿದೆ. ಹೆಚ್ಚು ಎತ್ತರದಲ್ಲಿದೆ. ಬಿಳಿಗಿರಿರಂಗನ ಬೆಟ್ಟ, ಕನಕಪುರ, ರಾಮನಗರ, ಮಧುಗಿರಿ ಮತ್ತು ಪಾವಗಡಗಳ ಮೂಲಕ ಗ್ರಾನೈಟ್‌ ನಿಕ್ಷೇಪ ಹರಡಿದೆ. ಮುಂದುರಿದ ಭಾಗವಾಗಿ ಸೊಂಡೂರು ಬಳಿ ಕಬ್ಬಿಣದ ಅದಿರು ನಿಕ್ಷೇಪಗಳಿವೆ.

   ಕರ್ನಾಟಕದ ಇತಿಹಾಸವೂ ಸಹಾ ಅದರ ಭೌಗೋಳಿಕ ಲಕ್ಷಣಗಳಿಂದ ಸಾಕಷ್ಟು ಪ್ರಭಾವಿಸಲ್ಪಟ್ಟಿದೆ. ಹೇಗೆ?

***** 

Comments

Post a Comment

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources