ಕದಂಬರ ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳ ಪ್ರಶ್ನಾವಳಿಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಕದಂಬ ಅರಸರು ಎಂಥಹ ಪ್ರಭುತ್ವ ಹೊಂದಿದ್ದರು?

2. ಜ್ಯೇಷ್ಠಪುತ್ರನಿಗೆ ಅಧಿಕಾರ ಪ್ರಾಪ್ತಿ ಎಂದರೇನು?

3. ಕದಂಬರ ಮಂತ್ರಿಮಂಡಲದಲ್ಲಿ ಎಷ್ಟು ಸದಸ್ಯರಿದ್ದರು?

4. ಕದಂಬರ ಆರಂಭಿಕ ಆಡಳಿತ ಭಾಷೆ ಯಾವುದಾಗಿತ್ತು?

5. ಕದಂಬರ ಯುವರಾಜರನ್ನು ಯಾವ ಕಾರಣಕ್ಕಾಗಿ ಮಾಂಡಲೀಕರನ್ನಾಗಿ ನೇಮಿಸಲಾಗುತ್ತಿತ್ತು?

6.     ಬೆಳಗಾವಿ ಜಿಲ್ಲೆಯಲ್ಲಿದ್ದ ಕದಂಬರ  ಉಪರಾಜಧಾನಿ ಯಾವುದು?

7.     ಪ್ರಧಾನ ನ್ಯಾಯಾಧೀಶನ ಹೆಸರೇನು?

8.     ರಾಜ್ಯದ ದೊಡ್ಡ ಆಡಳಿತ ಘಟಕ ಯಾವುದು?

9.     ಕಂಪಣದ ಅಧಿಕಾರಿಗಳನ್ನು ಏನೆಂದು ಕರೆಯಲಾಗುತ್ತಿತ್ತು?

10.  ಯಾರು ಸರ್ವೋಚ್ಛ ನ್ಯಾಯಾಧೀಶನಾಗಿದ್ದನು?

11.  ಹಿಂಸಾಪರಾಧಕ್ಕೆ ಎಷ್ಟು ಗದ್ಯಾಣಗಳ ದಂಡ ವಿಧಿಸಲಾಗುತ್ತಿತ್ತು?

12.  ಕೊಲೆ ಅಪರಾಧದಲ್ಲಿ ಸಂತ್ರಸ್ತರಿಗೆ ಎಷ್ಟು ಗದ್ಯಾಣಗಳ ಪರಿಹಾರ ನೀಡಲಾಗುತ್ತಿತ್ತು?

13.  ಭೂತೆರಿಗೆಯ ಪ್ರಮಾಣವೆಷ್ಟು?

14.  ಪೆರ್ಜುಂಕ ಎಂಬ ತೆರಿಗೆ ಯಾವುದಕ್ಕೆ ಸಂಬಂಧಿಸಿದ್ದು?

15.  ಹೇರುಗಳು ಎಂದರೇನು?

16.  ಮಾರಾಟ ತೆರಿಗೆಯನ್ನು ಏನೆಂದು ಕರೆಯಲಾಗುತ್ತಿತ್ತು?

17.  ವೀಳ್ಯದೆಲೆ ಸುಂಕ ಯಾವುದಾಗಿತ್ತು?

18.  ಚತುರಂಗ ಬಲ ಎಂದರೇನು?

19.  ಸ್ಥಾಯಿ ಸೈನ್ಯ ಎಂದರೇನು?

20.  ಕದಂಬರ ಸೇನೆಯು ಯಾವುದರಲ್ಲಿ ನೈಪುಣ್ಯತೆ ಹೊಂದಿತ್ತು?

21.  ಚತುರಂಗಬಲದಲ್ಲಿ ಮುಖ್ಯ ಪಡೆ ಯಾವುದಾಗಿತ್ತು?

22.  ವರ್ಣಾಶ್ರಮ ಪದ್ಧತಿ ಎಂದರೇನು?

23.  ಎಂಥಹ ಕುಟುಂಬ ಕದಂಬರ ಕಾಲದಲ್ಲಿ ಜಾರಿಯಲ್ಲಿತ್ತು?

24.  ಗೋತ್ರ ವಿವಾಹ ಎಂದರೇನು?

25.  ಆಸ್ತಿಯ ಅಧಿಕಾರ ಸ್ವಾಭಾವಿಕವಾಗಿ ಯಾರಿಗೆ ಲಭಿಸುತ್ತಿತ್ತು?

26.  ಜನಸಾಮಾನ್ಯರಲ್ಲಿ ಎಂತಹ ಪತ್ನಿತ್ವ ಜನಪ್ರಿಯವಾಗಿತ್ತು?

27.  ಶ್ರೇಣಿಗಳು ಎಂದರೇನು?

28.  ಗೋವಾ, ಮಂಗಳೂರು, ಹೊನ್ನಾವರ, ಭಟ್ಕಳಗಳು ಏಕೆ ಪ್ರಸಿದ್ಧಿ ಪಡೆದಿದ್ದವು?

29.  ಯಾವ ವಿದೇಶಿಯರೊಂದಿಗೆ ಕದಂಬರು ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು?

30.  ಪದ್ಮಟಂಕ ಎಷ್ಟು ಗ್ರೈನ್‌ ತೂಕ ಹೊಂದಿತ್ತು

31.  ಕದಂಬರು ಯಾವ ಮತಾವಲಂಬಿಗಳು?

32.  ಭಾರತದ ಯಾವ ಭಾಗದಿಂದ ಬ್ರಾಹ್ಮಣರು ತುಳುನಾಡಿಗೆ ಬಂದಿದ್ದರು?

33.  ಪೂಜ್ಯಪಾದ, ನಿರವದ್ಯ ಮತ್ತು ಕುಮಾರದತ್ತ ಇವರು ಯಾವ ಧರ್ಮಕ್ಕೆ ಸೇರಿದ ಧಾರ್ಮಿಕ ಗುರುಗಳು?

34.  ಹಲಸಿಯಲ್ಲಿ ಜೈನ ಬಸದಿ ನಿರ್ಮಾಣ ಮಾಡಿಸಿದವರು ಯಾರು?

35.  ಬನವಾಸಿ ಬೌದ್ಧರ ಕೇಂದ್ರವಾಗಿತ್ತು ಎಂದು ಯಾರು ತನ್ನ ಬರವಣಿಗೆಗಳಲ್ಲಿ ವಿವರಣೆ ನೀಡಿದ್ದಾರೆ?

36.  ಘಟಿಕೆಗಳು, ಅಗ್ರಹಾರಗಳು, ಬ್ರಹ್ಮಪುರಿಗಳು ಎಂತಹ ಕೇಂದ್ರಗಳಾಗಿದ್ದವು?

37.  ಯಾವುದು ಕದಂಬರ ಕಾಲದ ಶಿಕ್ಷಣದ ಪ್ರಮುಖ ವಿಷಯವಾಗಿತ್ತು?

38.  ಘಟಿಕ ಸಾಹಸಿ ಎಂಬ ಬಿರುದನ್ನು ಯಾರಿಗೆ ನೀಡಲಾಗುತ್ತಿತ್ತು?

39.  ಮದನತಿಲಕ, ಇದು ಯಾರ ಕೃತಿ?

40.  ಕದಂಬರ ದೇವಾಲಯಗಳ ಗೋಪುರಗಳು ಹೇಗೆ ನಿರ್ಮಾಣಗೊಳ್ಳುತ್ತಿದ್ದವು?

41.  ಯಾವ ಮಠದ ಗುಹೆಯಲ್ಲಿ ಇವರ ಕಾಲದ ಚಿತ್ರಕಲೆಗಳು ಕಂಡುಬಂದಿವೆ?

42.  ಚಂದ್ರವಳ್ಳಿಯಲ್ಲಿ ಕಂಡುಬಂದಿರುವ ಶಾಸನ ಯಾವ ಭಾಷೆಯಲ್ಲಿದೆ? 

Comments

  1. This comment has been removed by a blog administrator.

    ReplyDelete

Post a Comment

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources