ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು

The Salient Features of the Indus Valley Civilization

Antiquity: The Harappan civilisation is dated between 2600 and 1900 BC. There were earlier and later cultures, known as Early Harappan and Later Harappan. The Harappan period characterised by seals, beads, weights, stone blades and baked bricks is called as the Mature Harappan culture. The Carbon-14 datings indicate the mature Harappan period to be from C. 2800/2900–1800 BC. Modern research on the Harappan civilization, establishing evidence of their contact with the Mesopotamian Civilization also corroborates this dating.

ಪ್ರಾಚೀನತೆ: ಹರಪ್ಪಾ ನಾಗರೀಕತೆಯು ಸಾ.ಶ.ಪೂ. ಸು. ೨೫೦೦ ವರ್ಷಗಳಷ್ಟು ಹಿಂದಿನದ್ದಾಗಿದ್ದು, ಪೂರ್ವಹರಪ್ಪ ಮತ್ತು ನಂತರದ ಹರಪ್ಪ ಎಂಬ ಸಂಸ್ಕೃತಿಗಳು ಇದ್ದವು ಎಂಬುದು ವಿದ್ವಾಂಸರ ಅಭಿಪ್ರಾಯ. ಮುದ್ರೆಗಳು, ಮಣಿಗಳು, ತೂಕದ ಸಾಧನಗಳು, ಕಲ್ಲಿನ ಆಯುಧಗಳು ಮತ್ತು ಸುಟ್ಟ ಇಟ್ಟಿಗೆಗಳಿಂದ ಕೂಡಿದ ಹರಪ್ಪಾ ಕಾಲಘಟ್ಟವನ್ನು ಪ್ರಬುದ್ಧ ಹರಪ್ಪಾ ಕಾಲವೆಂದು ಕರೆಯಲಾಗಿದೆ. ಆದರೆ, ಇಂಗಾಲ ೧೪ರ ಪರೀಕ್ಷೆಯ ಪ್ರಕಾರ ಪ್ರಬುಧ್ಧ ಹರಪ್ಪ ನಾಗರೀಕತೆಯು ಸಾ.ಶ..ಪೂ. 2900 ರಿಂದ 1800 ವರ್ಷಗಳ ನಡುವೆ ಇತ್ತೆಂದು ತಿಳಿದು ಬರುತ್ತದೆ. ಆಧುನಿಕ ಸಂಶೋಧನೆಗಳ ಪ್ರಕಾರ ಮೆಸಪಟೋಮಿಯದೊಂದಿಗಿನ ಿವರ ಸಂಬಂಧಗಳು ಮೇಲಿನ ಕಾಲವನ್ನು ದೃಢಪಡಿಸಿವೆ.

Extent: The Harappan culture covered parts of Punjab, Sind, Baluchistan, Gujarat, Rajasthan and the fringes of western Uttar’ “Pradesh. It extended from Jammu in the north to the Narmada estuary in the South, and from the Makran coast of Baluchistan in the west to Meerut in the north-east. The area formed a triangle and accounted for about 1,299,600 square kilometers.

ವ್ಯಾಪ್ತಿ: ಹರಪ್ಪ ನಾಗರೀಕತೆಯು ಭಾರತದ ಪಂಜಾಬ್‌, ರಾಜಸ್ಥಾನ, ಗುಜರಾತ್‌, ಉತ್ತರಪ್ರದೇಶ, ಕಾಶ್ಮೀರ, ಪಾಕಿಸ್ತಾನದ ಸಿಂಧ್‌, ಬಲೂಚೀಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಒಟ್ಟು ೧೨,೯೯,೬೦೦ ಚ.ಕಿ.ಮೀ ಗಳಷ್ಟು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ತ್ರಿಕೋಣಾಕಾರದ ಭೂವ್ಯಾಪ್ತಿಯನ್ನು ಪಡೆದಿತ್ತು. ಅಂದರೆ ಈ ನಾಗರೀಕತೆಯು ಉತ್ತರದಲ್ಲಿ ಜಮ್ಮುವಿನಿಂದ ದಕ್ಷಿಣದಲ್ಲಿ ನರ್ಮದಾ ನದಿ ಕಣಿವೆಯವರೆಗೆ ಮತ್ತು ಪಶ್ಚಿಮದಲ್ಲಿ ಬಲೂಚಿಸ್ತಾನದ ಮಕ್ರಾನ್‌ ತೀರದಿಂದ ಪೂರ್ವದಲ್ಲಿ ಉತ್ತರಪ್ರದೇಶದ ಮೀರತ್‌ವರೆಗೆ ಹರಡಿಕೊಂಡಿತ್ತು.

 

The Salient features of the Indus Valley Civilization are as follows:

ಹರಪ್ಪಾ ನಾಗರೀಕತೆಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.

1. Town Planning ನಗರ ಯೋಜನೆ: The most remarkable feature of the Harappan civilization was its urbanisation. Each city was divided into a citadel area where the essential institutions of Civil and religious life were located and the lower residential area where the urban population lived.

ನಗರ ಯೋಜನೆಯು ಇದು ಈ ನಾಗರೀಕತೆಯ ಪ್ರಮುಖ ಲಕ್ಷಣಗಳಲ್ಲೊಂದು. ಪ್ರತಿ ನಗರವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದು, ಕೇಂದ್ರ ಭಾಗದಲ್ಲಿ ಆಡಳಿತ ಮತ್ತು ಧಾರ್ಮಿಕ ಕಟ್ಟಡಗಳು ನಿರ್ಮಾಣಗೊಂಡಿದ್ದರೆ, ಅದರ ಹೊರವಲಯದಲ್ಲಿ ವಾಸಸ್ಥಾನಗಳು ಇದ್ದವು.

In Mohenjodaro and Harappa, the citadel was surrounded by a brick wall. At Kalibangan, both the citadel and the lower city were surrounded by a wall. Usually, towns or cities were laid out in a parallel grammas form. The use of baked and unbaked bricks of standard size shows that the brick making was a large scale industry for the Harappans. In the citadel area, the Great Bath at Mohenjodaro is the most striking structure. It is assumed that it was meant for some elaborate ritual of vital importance for the people.

ಹರಪ್ಪಾ ಮತ್ತು ಮೊಹೆಂಜೊ-ದಾರೊ ನಗರಗಳಲ್ಲಿ ಮುಖ್ಯ ಕಟ್ಟಡಗಳಿಗೆ ರಕ್ಷಣಾಗೋಡೆಗಳಿದ್ದು, ಕಾಲಿಬಂಗನ್‌ ನಗರದಲ್ಲಿ ಎರಡೂ ವಲಯಗಳಿಗೂ ರಕ್ಷಣಾಗೋಡೆಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ನಗರಗಳು ನೇರ ಅಥವಾ ಸಮಾನಾಂತರ ಚತುರ್ಭುಜಗಳ ಆಕೃತಿಯಲ್ಲಿ ನಿರ್ಮಾಣಗೊಂಡಿರುತ್ತಿದ್ದವು. ಸುಟ್ಟ ಮತ್ತು ಅರೆಸುಟ್ಟ ಇಟ್ಟಿಗೆಗಳನ್ನು ನಗರಗಳ ನಿರ್ಮಾಣಕ್ಕೆ ಬಳಸಿದ್ದನ್ನು ಗಮನಿಸಿದರೆ ಇವರಿಗೆ ಇಟ್ಟಿಗೆ ತಯಾರಿಕೆಯ ಕೌಶಲ್ಯ ತಿಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಮೊಹೆಂಜೊದಾರೊದಲ್ಲಿನ ಮುಖ್ಯನಗರದ ಭಾಗದಲ್ಲಿರುವ ಬೃಹತ್‌ ಈಜುಕೊಳವು ಅತ್ಯಂತ ಆಕರ್ಷಕವಾದ ರಚನೆಯಾಗಿದೆ. ಇದನ್ನು ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿ ಪವಿತ್ರಸ್ನಾನ ಮಾಡುವ ಸಲುವಾಗಿ ಬಳಸಲಾಗುತ್ತಿದ್ದಿತು ಎಂದು ಊಹಿಸಲಾಗಿದೆ.

To the west of the Great Bath there are the remains of a large granary. In Mohenjodaro, to another side of the Great Bath, is a long building which has been identified as the residence of a very high official. Another significant building here is an assembly hall.

ಈ ಈಜುಕೊಳದ ಪಶ್ಚಿಮಕ್ಕೆ ವಿಶಾಲವಾದ ಉಗ್ರಾಣದ ಅವಶೇಷಗಳು ಕಂಡುಬಂದಿವೆ. ಇದರ ಮತ್ತೊಂದು ಪಕ್ಕದಲ್ಲಿರುವ ದೊಡ್ಡ ಕಟ್ಟಡದ ಅವಶೇಷಗಳು ಉನ್ನತಾಧಿಕಾರಿಯ ನಿವಾಸವಿರಬಹುದೆಂದು ಗುರ್ತಿಸಲಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ರಚನೆಯೆಂದರೆ ಬೃಹತ್‌ ಸಭಾಭವನದಂತಹ ಕಟ್ಟಡ.

At Harappa remarkable number of granaries has also been found ranged in two rows of six, with a central passage. The most significant discoveries at Kalibangan and Lothal are the fire altars.

ಹರಪ್ಪಾದಲ್ಲಿ ನಿರ್ದಿಷ್ಟ ಸಂಖ್ಯೆಯ ಉಗ್ರಾಣಗಳು ಆರು ಸಂಖ್ಯೆಯ ಎರಡು ಸಾಲುಗಳಲ್ಲಿ ಕಂಡುಬಂದಿದ್ದು, ನಡುವೆ ವಿಶಾಲವಾದ ಜಾಗವನ್ನು ಬಿಡಲಾಗಿದೆ. ಕಾಲಿಬಂಗನ್‌ ಮತ್ತು ಲೋಥಾಲ್‌ಗಳಲ್ಲಿನ ಬಹುಮುಖ್ಯವಾದ ಅನ್ವೇಷಣೆಗಳೆಂದರೆ ಅಗ್ನಿಕುಂಡಗಳು.

The lower town was divided into wards like a chess board, by north-south and east-west main roads and smaller lanes, cutting each other at right angles, as in a grid system. The rectangular town planning was a unique feature of the civilization.

ಹೊರವಲಯದ ನಗರವು ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣವಾಗಿ ಹರಡಿಕೊಂಡಿದ್ದು, ಮುಖ್ಯರಸ್ತೆ ಮತ್ತು ಉಪರಸ್ತೆಗಳು ನೇರವಾಗಿದ್ದು, ಲಂಬಕೋನಗಳಲ್ಲಿ ಸಂಧಿಸುವಂತೆ ನಿರ್ಮಾಣವಾಗಿರುವ ಕಾರಣ ಚದುರಂಗದ ಹಾಸಿನಂತೆ ಕಾಣುತ್ತವೆ. ಆಯಾತಾಕಾರದ ನಗರ ಯೋಜನೆಯು ಈ ನಾಗರೀಕತೆಯ ವಿಶಿಷ್ಟ ರಚನೆಯಾಗಿದೆ.

The major roads were provided with covered drains having additional soak pits made of pots and placed at convenient intervals.

ಮುಖ್ಯರಸ್ತೆಗಳು ಮೇಲುಹೊದಿಕೆಗಳಿಂದ ಕೂಡಿರುವ ಒಳಚರಂಡಿಗಳಿಂದ ಕೂಡಿದ್ದು, ಚರಂಡಿಗಳಿಗೆ ನಿಯಮಿತವಾದ ಅಂತರದಲ್ಲಿ ಸುಟ್ಟ ಮಣ್ಣಿನ ಮಡಕೆಗಳಂತಹ ರಚನೆಗಳಿರುವ ಆಳುಗುಂಡಿಗಳನ್ನು ನಿರ್ಮಿಸಲಾಗಿದೆ.

The houses of varying sizes point towards the economic groups in the settlement. The parallel rows of two room cottages unearthed at Mohenjodaro and Harappa were perhaps used by the poorer sections of society, while the big houses, which had much the same plan- a square courtyard around which were a number of rooms – were used by the rich. The houses were equipped with private wells and toilets.

ಬೇರೆ-ಬೇರೆ ಗಾತ್ರದ ಮನೆಗಳು ಇಲ್ಲಿನ ನಗರಗಳಲ್ಲಿ ವಿವಿಧ ಆರ್ಥಿಕ ಅಂತಸ್ತುಳ್ಳ ಜನರಿದ್ದರೆಂದು ತಿಳಿಸುತ್ತವೆ. ಹರಪ್ಪಾ ಮತ್ತು ಮೊಹೆಂಜೋದಾರೊಗಳಲ್ಲಿ ಸಮಾಂತರ ಸಾಲುಗಳಲ್ಲಿ ನಿರ್ಮಿಸಿರುವ ಎರಡು ಕೋಣೆಗಳ ಮನೆಗಳು ಬಡಜನರಿಂದ ಉಪಯೋಗಿಸಲ್ಪಡುತ್ತಿದ್ದವು ಮತ್ತು ದೊಡ್ಡ ಗಾತ್ರದ ಮನೆಗಳು ಹೆಚ್ಚು ಕೋಣೆಗಳಿಂದ ಕೂಡಿದ್ದು,  ಶ್ರೀಮಂತರಿಂದ ಬಳಸಲ್ಪಡುತ್ತಿದ್ದವು ಎನ್ನಲಾಗಿದೆ. ಪ್ರತಿ ಮನೆಯು ಪ್ರತ್ಯೇಕ ನೀರಿನ ಬಾವಿ ಮತ್ತು ಶೌಚಾಲಯಗಳಿಂದ ಕೂಡಿವೆ.

The bathrooms were connected by drains with sewers under the main street. The drainage system is one of the most impressive achievements of the Harappans and presupposes existence of some kind of municipal organisation.

ಮನೆಯ ಶೌಚಾಲಯಗಳು ಕೊಳವೆಗಳ ಮೂಲಕ ಮುಖ್ಯರಸ್ತೆಯ ಒಳಚರಂಡಿಗಳಿಗೆ ಸಂಪರ್ಕಿಸಲ್ಪಟ್ಟಿವೆ. ಒಳಚರಂಡಿ ವ್ಯವಸ್ಥೆಯು ಈ ನಾಗರೀಕತೆಯ ಬಹುಮುಖ್ಯ ಸಾಧನೆಯಾಗಿದ್ದು, ನಾಗರೀಕ ಆಡಳಿತ ವ್ಯವಸ್ಥೆಯ ಅಸ್ಥಿತ್ವದ ಬಗ್ಗೆ ಪುರಾವೆ ಒದಗಿಸುತ್ತದೆ.

The houses were constructed with the kiln-made or Kuccha bricks, not stones. The bathrooms and drains were invariably built with pukka bricks made waterproof by adding gypsum.

ಮನೆಗಳು ಕಲ್ಲುಗಳ ಬದಲು ಸುಟ್ಟ ಅಥವಾ ಕಚ್ಚಾ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದ್ದವು. ಶೌಚಾಲಯಗಳು ಮತ್ತು ಒಳಚರಂಡಿಗಳು ಪಕ್ಕಾ ಅಥವಾ ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿದ್ದು ನೀರು ನಿರೋಧಕವಾದ ಜಿಪ್ಸಂ ಅನ್ನು ಇದಕ್ಕೆ ಬಳಸಲಾಗಿದೆ.

 

2. Agriculture ಕೃಷಿ: The Harappans cultivated wheat and barley, peas and dates and also sesame and mustard which were used for oil. However, the people cultivated rice as early as 1,800 B.C. in Lothal. The Harappans were the earliest people to grow cotton. Irrigation depended on the irregular flooding of the rivers of Punjab and Sind. The evidence of a furrowed field in Kalibangan indicates that the Harappans were using some sort of woodern plough. It has also suggested that the Harappan people used a toothed harrow.

 ಹರಪ್ಪನ್‌ ಜನರು ಗೋಧಿ ಮತ್ತು ಬಾರ್ಲಿ, ಬಟಾಣಿ, ಎಳ್ಳು ಮತ್ತು ಸಾಸಿವೆಯಂತಹ ಎಣ್ಣೆ ಬೆಳೆಗಳನ್ನು ಬೆಳೆಯುತ್ತಿದ್ದರು. ಲೋಥಾಲ್‌ ಮತ್ತು ರಂಗಪುರಗಳಲ್ಲಿ ಸಾ.ಶ.ವ. ೧೮೦೦ ವರ್ಷಗಳಷ್ಟು ಹಿಂದಿನ ಬತ್ತದ ಅವಶೇಷಗಳು ಕಂಡುಬಂದಿವೆ. ಹತ್ತಿಯ ಬಳಕೆ ಇವರಿಗೆ ತಿಳಿದಿತ್ತು ಮತ್ತು ಇದು ಅತ್ಯಂತ ಪ್ರಾಚೀನ ಕುರುಹಾಗಿದೆ. ಪಂಜಾಬ್‌ ಮತ್ತು ಸಿಂಧ್‌ ಪ್ರಾಂತ್ಯಗಳಲ್ಲಿನ ನದಿ ಪ್ರವಾಹಗಳು ನೀರಾವರಿಗಾಗಿ ಬಳಸಲ್ಪಡುತ್ತಿದ್ದವು. ಮರದ ನೇಗಿಲಿನಂತಹ  ಸಾಧನದಿಂದ ಉಳುಮೆ ಮಾಡಿದ ಕುರುಹುಗಳು ಕಂಡುಬಂದಿವೆ.

 

Animal husbandry or Stock Breeding - ಪಶುಪಾಲನೆ:-

No less important than agriculture was stock breeding. Besides sheep and goats humped cattle, buffalos and elephants were domesticated. The camal was rare and the horse was probably not known to the Harappans.

ಕೃಷಿಯ ಜೊತೆಗೆ ಪಶುಪಾಲನೆಯೂ ಮುಖ್ಯ ಕಸುಬಾಗಿತ್ತು. ಕುರಿ & ಆಡುಗಳ ಜೊತೆಗೆ ಡುಬ್ಬದ ಗೂಳಿ, ಎಮ್ಮೆ ಮತ್ತು ಆನೆಗಳು ಸಾಕುಪ್ರಾಣಿಗಳಾಗಿದ್ದವು. ಒಂಟೆ ತಿಳಿದಿದ್ದರೂ ಅದು ಅಪರೂಪವಾಗಿತ್ತು. ಆದರೆ ಇವರಿಗೆ ಕುದುರೆ ತಿಳಿದಿರಲಿಲ್ಲ.

 

3.  Economy - ಆರ್ಥಿಕತೆ:

Trade and Its Network ವಾಣಿಜ್ಯ ಮತ್ತು ವ್ಯಾಪಾರ ಸಂಪರ್ಕಗಳು:

There was extensive inland and foreign trade. It has also been reasonably established that this trade might have been overland as well as maritime. It is proved by the occurrence of small terracotta boats, and above all, by the vast brick built dock at Lothal. As there is a no evidence of coins, barter must have been the normal method of exchange of goods.

ಹರಪ್ಪಾ ಜನರು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ಲಬ್ಯ ಅವಶೇಷಗಳಿಂದ ಒಳನಾಡು ಮತ್ತು ಸಮುದ್ರದ ಮೂಲಕ ನಡೆಯುತ್ತಿದ್ದ ವಿದೇಶೀ ವ್ಯಾಪಾರ ಅಸ್ಥಿತ್ವದಲ್ಲಿತ್ತು. ಟೆರ್ರಾಕೋಟಾ ಆಟಿಕೆಗಳಲ್ಲಿ ಕಂಡುಬಂದಿರುವ ಹಡಗುಗಳು ಮತ್ತು ಲೋಥಾಲ್ನಲ್ಲಿರುವ ವಿಶಾಲವಾದ ಹಡಗುಕಟ್ಟೆ ಇದಕ್ಕೆ ಸಾಕ್ಷಿಯಾಗಿದೆ. ನಾಣ್ಯಗಳ ಬಳಕೆ ಇದ್ದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ವಿನಿಮಯ ಪದ್ಧತಿಯು ವ್ಯಾಪಾರದಲ್ಲಿ ಬಳಕೆಯಲ್ಲಿದ್ದಿರಬೇಕು.

What they imported must have been goods locally unavailable such as copper (from South India, Baluchistan and Arabia), gold (South India, Afghanistan and Persia), Silver (Afghanistan and Iran), lapis lazuli  ಅಂದರೆ ಪಚ್ಚೆ(Badak-shan in north east Afghanistan) turquoise ಅಂದರೆ ನೀಲಿ ಹರಳು(Iran), Jade ಅಂದರೆ ಹಸಿರು ಕಲ್ಲು (Central Asia), amethyst ಅಂದರೆ ಹವಳ (Maharashtra),  chalcedony and carnelian ಅಂದರೆ ಕೆಂಪು ಹರಳು from Saurashtra and western India. Harappan seals and other small objects used by the merchants and traders for stamping their goods have been found in Mesopotamia.

ಸ್ಥಳೀಯವಾಗಿ ಸಿಗದಿದ್ದ ತಾಮ್ರ (ದಕ್ಷಿಣ ಭಾರತದಿಂದ), ಚಿನ್ನ (ದಕ್ಷಿಣ ಭಾರತ, ಅರೇಬಿಯಾ, ಬಲೂಚೀಸ್ಥಾನ, ಅಫ್ಘಾನಿಸ್ಥಾನ ಮತ್ತು ಪರ್ಷಿಯಾಗಳಿಂದ), ಬೆಳ್ಳಿ (ಅಫ್ಘಾನಿಸತಾನ ಮತ್ತು ಇರಾನ್ಗಳಿಂದ) ಆಮದು ಮಾಡಿಕೊಳ್ಳುತ್ತಿದ್ದರು. ವ್ಯಾಪಾರಿ ವಸ್ತುಗಳ ಮೇಲೆ ಮುದ್ರೆ ಹಾಕಲು ಬಳಸುತ್ತಿದ್ದ ಮುದ್ರೆಗಳು ಮತ್ತು ವ್ಯಾಪಾರಿಗಳು ಬಳಸುತ್ತಿದ್ದ ಇನ್ನಿತರ ವಸ್ತುಗಳು ಮೆಸಪಟೋಮಿಯಾದಲ್ಲಿ ಕಂಡುಬಂದಿವೆ.

Mesopotamian literature speaks of the merchants  carrying on trade with foreign countries. In Mesopotamia , the word Meluhha is generally understood to mean India, especially the Indus region and Saurashtra.

ಮೆಸಪಟೋಮಿಯಾದಲ್ಲಿನ ಬರವಣಿಗೆಗಳಲ್ಲಿ  ಅಲ್ಲಿನ ಜನರು ವಿದೇಶೀ   ವ್ಯಾಪಾರ ನಡೆಸುತ್ತಿದ್ದ ಬಗ್ಗೆ ಮಾಹಿತಿ ನೀಡಿವೆ ಮತ್ತು ಭಾರತದ ಸೌರಾಷ್ಟ್ರ ಮತ್ತು ಮಹಾರಾಷ್ಟ್ರಗಳ ಭಾಗಗಳನ್ನು ಅವರು ಮೆಲುಹಾ ಎಂದು ಕರೆಯುತ್ತಿದ್ದರು.

Main exports were several agricultural products and a variety of finished products such as cotton goods, carnelian beads, pottery, shell and bone inlays etc.

ಇವರ ಪ್ರಮುಖ ರಫ್ತು ವಸ್ತುಗಳೆಂದರೆ, ಕೃಷಿ ಉತ್ಪನ್ನಗಳು, ಸಿದ್ಧವಸ್ತುಗಳು ಅಂದರೆ ಹತ್ತಿಯ ಉತ್ಪನ್ನಗಳು, ಮಣಿಗಳು, ಮಡಕೆಗಳು, ಕಪ್ಪೆಚಿಪ್ಪಿನ ಉತ್ಪನ್ನಗಳು ಮತ್ತು ಮೂಳೆಗಳಿಂದ ತಯಾರಿಸಿದ ಉತ್ಪನ್ನಗಳು.

 

4. weights and measures ಅಳತೆ ಮತ್ತು ತೂಕದ ಮಾಪಕಗಳು:

The system of weights and measures was excellent. For weighing goods – small as well as large – perfectly made cubes of agate were employed. The weights followed a binary system in the lower denominations: 1, 2, 4, 8 16, 32 to 64 and then going to 160 and then in decimal multiples of 160, 320, 640, 1,600, 3,200 etc.

ಅಳತೆ ಮತ್ತು ತೂಕಗಳಲ್ಲಿ ಇವರು ಹೆಚ್ಚಿನ ಪರಿಣತಿ ಸಾಧಿಸಿದ್ದರು. > ಸಣ್ಣ ಮತ್ತು ದೊಡ್ಡ ಗಾತ್ರದ ವಸ್ತುಗಳನ್ನು ತೂಕ ಮಾಡಲು ಪ್ರತ್ಯೇಕ ತೂಕದ ಬೊಟ್ಟು ಅಥವಾ ಕಲ್ಲುಗಳನ್ನು ಬಳಸುತ್ತಿದ್ದರು. ಸಣ್ಣ ಪ್ರಮಾಣದ ಅಳತೆ ಮಾಡುವಾಗ ತೂಕದ ಮೂಲಮಾನಗಳು ದ್ವಿಮಾನ ಪದ್ಧತಿಯಂತೆ 1, 2, 4, 8, 16, 32 ರಿಂದ 64 ಮತ್ತು 160 ವರೆಗೆ ಎಣಿಕೆ ಮಾಡಲಾಗುತ್ತಿತ್ತು ನಂತರ 160, 320, 640, 1,600, 3,200 ಇತ್ಯಾದಿಗಳಂತೆ ದ್ವಿಗುಣವಾಗುತ್ತಿದ್ದವು.

 

5. Handicrafts ಕರಕುಶಲ ಕಲೆ:

The various occupations in which the people were engaged spanned a wide which included range  spinning and weaving of cotton and wool, pottery- making, bead-making and seal making. Metal working was highly skilled. They made fine jewellery in gold, bronze implements, copper beakers, saws, chisels and knives of different metals. The Bearded Head in stone from Mohenjodaro is a well known piece of art.

ಹರಪ್ಪಾ ಜನರು ಮಾಡುತ್ತಿದ್ದ ಕಸುಬುಗಳಲ್ಲಿ ಹತ್ತಿ ಮತ್ತು ಉಣ್ಣೆಯಿಂದ ನೂಲು ತೆಗೆಯುವುದು, ನೇಯುವುದು, ಕುಂಬಾರಿಕೆ, ಮಣಿಗಳ ತಯಾರಿಕೆ ಮತ್ತು ಮುದ್ರೆಗಳ ತಯಾರಿಕೆಯಂತಹ ವಿಭಿನ್ನ ವೃತ್ತಿಗಳಿಂದ ಕೂಡಿತ್ತು. ಲೋಹಗಾರಿಕೆಯಲ್ಲಿ ಅವರು ಹೆಚ್ಚು ಪರಿಣತಿ ಸಾದಿಸಿದ್ದರು. ಅವರು ಉತ್ತಮವಾದ ಚಿನ್ನದ ಆಭರಣಗಳನ್ನು ತಯಾರಿಸುವುದರ ಜೊತೆಗೆ ಕಂಚಿನ ಉಪಕರಣಗಳಲ್ಲದೆ ಖಡ್ಗಗಳು, ಉಳಿಗಳು ಮತ್ತು ಚಾಕುಗಳನ್ನು ವಿವಿಧ ಲೋಹಗಳಿಂದ ತಯಾರಿಸಿದ್ದರು. ಮೊಹೆಂಜೊದಾರೊದಲ್ಲಿನ ಗಡ್ಡಧಾರಿಯಾದ ಮನುಷ್ಯನ ಮೂರ್ತಿಯು ಅವರ ಕಲೆಗಾರಿಕೆಗೆ ಪ್ರಸಿದ್ಧವಾಗಿದೆ.

 

6. Science - ವಿಜ್ಞಾನ:

The Harappans knew mining, metal- working and the art of constructing well-planned buildings, some of which were higher than two stories. They were also adopting at manufacturing gypsum cement which was used to join stones and even metals. They knew how to make long-lasting paints and dyes.

ಹರಪ್ಪಾ ಜನರು ಗಣಿಗಾರಿಕೆ, ಲೋಹದ ಕೆಲಸ ಮತ್ತು ಕಟ್ಟಡ ನಿರ್ಮಾಣದಲ್ಲಿ ವಿಶೇಷ ಪರಿಣತಿ ಸಾಧಿಸಿದ್ದರು. ಅವರು ವಿವಿಧ ಅಂತಸ್ತುಗಳ ಮನೆಗಳನ್ನು ನಿರ್ಮಾಣ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅವರು ಇಂದಿನವರು ನೀರು ನಿರೋಧಕದಂತೆ ಬಳಸುವ ಸಿಮೆಂಟ್‌ ರೀತಿಯ ಜಿಪ್ಸಂ ಬಳಕೆ ಕಲಿತಿದ್ದರು. ಅಲ್ಲದೇ ದೀರ್ಘಕಾಲಿಕವಾಗಿ ಉಳಿಯಬಲ್ಲ ಬಣ್ಣಗಳ ತಯಾರಿಕೆಯೂ ಅವರಿಗೆ ತಿಳಿದಿತ್ತು.

 

7. The Indus Script – ಸಿಂಧೂ ಲಿಪಿ:

The Harappan script has not been deciphered so far, but overlaps of letters on some of the potsherds from Kalibangan show that the writing was boustrophedon or from right to left and from left to right in alternate lines.

ಹರಪ್ಪಾ ಲಿಪಿಯು ಇದುವರೆಗೂ ನಿಶ್ಚಿತವಾಗಿ ಓದಲಾಗಿಲ್ಲವಾದರೂ ಅದು ಪರ್ಯಾಯ ಸಾಲುಗಳಲ್ಲಿ ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಬರೆಯುವಂತಹ ಲಿಪಿಯಾಗಿದೆ. ಅಕ್ಷರ ಮತ್ತು ಚಿತ್ರಗಳಿಂದ ಕೂಡಿರುವ ಅದನ್ನು ಕೆಲವು ವಿದ್ವಾಂಸರು ಚಿತ್ರಲಿಪಿ ಎಂದು ಕರೆದಿದ್ದಾರೆ. ಇದರ ಹಿಂದಿನ ಮತ್ತು ನಂತರದ ಭಾಷೆಗಳು ಪತ್ತೆಯಾಗಿರದ ಕಾರಣ ಇದರ ಅರ್ಥೈಸುವಿಕೆ ಇನ್ನೂ ಸಾದ್ಯವಾಗಿಲ್ಲ.

ಹರಪ್ಪಾ ಲಿಪಿ ಕುರಿತಂತೆ ವಿದ್ವಾಂಸರ ಅಭಿಪ್ರಾಯಗಳು ಈ ಕೆಳಗಿನಂತಿವೆ:

ಮಹಾದೇವನ್ – “ಹರಪ್ಪಾ ಲಿಪಿಯು ಸಂಕೇತಗಳಿಂದ ಕೂಡಿದ ದ್ರಾವಿಡ ಲಿಪಿಯಾಗಿದೆ” ಎಂದಿದ್ದಾರೆ.

ಎ. ಎಲ್. ಬಾಷ್ಯಂ – “ಪ್ರಾಚೀನ ಸುಮೇರಿಯನ್ ಲಿಪಿಯೊಂದಿಗೆ ಹೋಲಿಕೆ ಹೊಂದಿದೆ” ಎಂದಿದ್ದಾರೆ.

ಹೆರಾಸ್ & ಮಾರ್ಷಲ್ – “ಈ ಭಾಷೆಯು ದ್ರಾವಿಡರ ಉಪಭಾಷೆ ತಮಿಳನ್ನು ಹೋಲುತ್ತದೆ” ಎಂದಿದ್ದಾರೆ.

ಲ್ಯಾಂಗ್ಡನ್, ಪ್ರಾಣನಾಥ & ಹಂಟರ್:- “ಈ ಭಾಷೆಯು ಸಂಸ್ಕೃತ ಇಲ್ಲವೇ ಬ್ರಾಹ್ಮಿ ಲಿಪಿಯ ಮೂಲವಾಗಿರಬಹುದು” ಎಂದಿದ್ದಾರೆ.

ಬಿ. ವಿ. ಸುಬ್ರಾಯಪ್ಪ – “ಇದೊಂದು ಅಂಕಸೂಚಕ ಭಾಷೆಯಾಗಿದೆ; ಭಾಷೆ ಸೂಚಕವಲ್ಲ” ಎಂದಿದ್ದಾರೆ

ಆದರೆ ಪ್ರಸ್ತುತ ಈ ಲಿಪಿಯಲ್ಲಿನ ಬಹುಸಂಖ್ಯಾತ ಚಿತ್ರಬರವಣಿಗೆಗಳ ಕಾರಣ ಇದೊಂದು ಚಿತ್ರಲಿಪಿ ಎನ್ನಲಾಗಿದೆ

8. Religion - ಧರ್ಮ:

Except for the discovery of fire altars at Kalibangan, we have not found any cult objects, temples at any of the Harappan sites. On the basis of the material remains discovered at various Harappan sites we can say that the Harappan people had many features of the later Hinduism, such as worship of the Mother Goddess, Pashupati Siva, animal worship, tree-worship, etc.

ಕಾಲಿಬಂಗನ್‌ನಲ್ಲಿ ಕಂಡುಬಂದಿರುವ ಅಗ್ನಿಕುಂಡಗಳ ಹೊರತು ಯಾವುದೇ ಮತ ಅಥವಾ ಧರ್ಮಕ್ಕೆ ಸೇರಿದ ದೇವತೆ, ಆಚರಣೆಯ ಕುರುಹುಗಳು ಈ ನಾಗರೀಕತೆಯ ಅವಶೇಷಗಳಲ್ಲಿ ಕಂಡುಬಂದಿಲ್ಲ. ಆದರೆ ವಿವಿಧ ಉತ್ಖನನಗಳಲ್ಲಿ ಕಂಡುಬಂದಿರುವ ಅವಶೇಷಗಳು ಪ್ರಸ್ತುತ ಹಿಂದೂಗಳು ಅನುಸರಿಸುವ ವಿವಿಧ ಧಾರ್ಮಿಕ ಆಚರಣೆಗಳನ್ನು ಅಂದರೆ, ಮಾತೃದೇವತೆಯ ಆರಾಧನೆ, ಲಿಂಗದ ಆರಾಧನೆ, ಪ್ರಾಣಿಪೂಜೆ ಮತ್ತು ಮರಗಳ ಆರಾಧನೆಯ ಬಗ್ಗೆ ಮಾಹಿತಿ ಒದಗಿಸುತ್ತವೆ.

The chief female deity was Mother Goddess. In one terracotta figurine found at Harappa, a plant is shown growing out of the embryo of a woman. Probably the image represents the goddess of earth. The Harappans, therefore, looked upon the earth as a fertility goddess and worshipped her. Clay figures of the mother Goddess, worshipped by the people as the symbol of fertility, have been found.

ಮಾತೃದೇವತೆಯು ಸ್ತ್ರೀದೇವತೆಗಳಲ್ಲಿ ಪ್ರಮುಖವಾಗಿದ್ದು, ಹರಪ್ಪಾದಲ್ಲಿನ ಒಂದು ಮುದ್ರೆಯಲ್ಲಿ ಸ್ತ್ರೀಯ ಗರ್ಭದಿಂದ ಗಿಡವೊಂದು ಬೆಳೆದಿರುವಂತೆ ಚಿತ್ರಿಸಿದ್ದು, ಅದು ಭೂಮಿಯ ಆರಾಧನೆಯನ್ನು ಸ್ತ್ರೀರೂಪದಲ್ಲಿ ಮಾಡುತ್ತಿದ್ದುದನ್ನು ಸೂಚಿಸುತ್ತದೆ. ಮಾತೃದೇವತೆಯ ಮಣ್ಣಿನ ಮೂರ್ತಿಗಳು ಕಂಡುಬಂದಿದ್ದು, ಅವರು ಮಾತೃದೇವತೆಯನ್ನು ಸಂತಾನ ಕರುಣಿಸುವ ದೇವತೆಯಾಗಿ ಆರಾಧಿಸುತ್ತಿದ್ದರು ಎನ್ನಲಾಗಿದೆ.

A seated figure of a male god, carved on a small stone seal, has also been found. The seal immediately brings to mind the traditional image of Pasupati mahadeva. Certain trees seem to have been treated as sacred, such as the pipal.

ಧ್ಯಾನಾಸಕ್ತನಾಗಿ ಕುಳಿತ ಪುರುಷ ಚಿತ್ರವು ಮುದ್ರೆಯ ಮೇಲೆ ಕಂಡುಬಂದಿದ್ದು, ಅದರ ಸುತ್ತಲೂ ವಿವಿಧ ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಇದು ಪಶುಪತಿ ಶಿವನನ್ನು ಹೋಲುತ್ತದೆ. ಅಶ್ವತ್ಥ ವೃಕ್ಷವು ಅವರಿಗೆ ಪವಿತ್ರವಾಗಿದ್ದಿತು. ಅಂತೆಯೇ ಲಿಂಗರೂಪದ ವಿವಿಧ ರಚನೆಗಳು ಈ ನೆಲೆಗಳಲ್ಲಿ ಕಂಡುಬಂದಿವೆ.

 

Burial Practices - ಶವಸಂಸ್ಕಾರ:

Cemeteries excavated at several Indus sites like Mohenjodaro, Harappa, Kalibangan, Lothal and Ropar throws light on the burial practises of the Harappans. Three forms of burials have been found at Mohenjo-Daro, viz., complete burials, (means the burial of the whole body along with the grave goods) fractional burials, (burial of some bones after the exposure of the body to wild beasts and birds) and post-cremation burials.

From the Lothal cemetery comes evidence of another burial type with several examples of pairs of skeletons, one male and one female in each case, buried in a single grave. Bodies were always placed in the north-south direction with the head in the north.

 ಹರಪ್ಪಾ ಜನರು ವಿವಿಧ ರೀತಿಯ ಶವಸಂಸ್ಕಾರ ಪದ್ಧತಿಗಳನ್ನು ಬಳಸುತ್ತಿದ್ದರು. ಸಂಪೂರ್ಣವಾಗಿ ಶವವನ್ನು ಹೂಳುವುದು, ಸತ್ತವರ ದೇಹವನ್ನು ಪ್ರಾಣಿ ಅಥವಾ ಪಕ್ಷಿಗಳಿಗೆ ತಿನ್ನಲು ನೀಡಿ ನಂತರ ಉಳಿದ ಅಸ್ತಿಗಳನ್ನು ಹೂಳುವ ಭಾಗಶಃ ಶವಸಂಸ್ಕಾರ ಅವರಿಗೆ ತಿಳಿದಿತ್ತು. ಸಾಮಾನ್ಯವಾಗಿ ಶವಗಳನ್ನು ಉತ್ತರ-ದಕ್ಷಿಣವಾಗಿ ಹೂಳುತ್ತಿದ್ದರು. ಸಮಾದಿಗಳಲ್ಲಿ ಸತ್ತವರು ಬಳಸುತ್ತಿದ್ದ ವಸ್ತುಗಳು ಕಂಡುಬಂದಿರುವ ಕಾರಣ ಸಾವಿನ ನಂತರದ ಜೀವನ ಅಥವಾ ಪುನರ್ಜನ್ಮದಲ್ಲಿ ಆ ನೆಲೆಯ ಜನರಿಗೆ ನಂಬಿಕೆ ಇತ್ತೆಂದು ತಿಳಿದು ಬರುತ್ತದೆ. ಲೋಥಾಲ್‌ನಲ್ಲಿ ಸ್ತ್ರೀ-ಪುರುಷರಿಬ್ಬರನ್ನು ಒಂದೇ ಸಮಾದಿಯಲ್ಲಿ ಹೂತಿರುವುದು ಗಮನಾರ್ಹವಾಗಿದೆ.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ