Posts

Showing posts from June, 2023

ತಂಜಾವೂರಿನ ಚೋಳರು

   ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ರಾಜಮನೆತನಗಳಲ್ಲೊಂದು . ಚೇರ ಪಾಂಡ್ಯರ ಜೊತೆಗೆ ಚೋಳರು ಕ್ರಿ . ಪೂ . ದಲ್ಲೇ ಇದ್ದುದಕ್ಕೆ ಆಧಾರಗಳಿವೆ . ಕಾವೇರಿ ತೀರ ಇವರ ಮೂಲನೆಲೆ . ಕಾವೇರಿಯ ಮುಖದಲ್ಲಿಯ ಕಾವೇರಿ ಪಟ್ಟಣ ಮತ್ತು ಅದೇ ನದಿಯ ದಡದ ಮೇಲಿರುವ ಒರೆಯೂರ್ ಇವರ ಪ್ರಾಚೀನ ನಗರಗಳು . ಚೋಳ ಎಂಬ ಹೆಸರು ಬರಲು ಕಾರಣ ತಿಳಿಯದು . ಕಪ್ಪು ಎಂಬ ಅರ್ಥವುಳ್ಳ ಕಾಲ ಎಂಬ ಸಂಸ್ಕೃತ ಶಬ್ದದಿಂದಾಗಲಿ , ಇಲ್ಲಿಯ ಮೂಲನಿವಾಸಿಗಳನ್ನು ನಿರ್ದೇಶಿಸುವ ಕೋಲ ಎಂಬ ಪದದಿಂದಾಗಲಿ, ಒಂದು ಧಾನ್ಯದ ಹೆಸರಾದ “ ಜೋಳ” ಎಂಬುದರಿಂದಾಗಲಿ ಈ ಹೆಸರು ಬಂದಿರಬಹುದೆಂಬ ವಾದಗಳು ಸಮಂಜಸವಾಗಿ ಕಾಣಿಸವು . ಚೋಳರಿಗೆ ಕಿಳ್ಳಿ , ವಳವನ್ , ಶೆಂಬಿಯನ್ ಎಂಬ ಹೆಸರುಗಳೂ ಉಂಟು .    ಅಶೋಕನ ಶಾಸನಗಳಲ್ಲಿ ಪಾಂಡ್ಯರ ಜೊತೆಗೆ ಚೋಳರನ್ನು ಹೆಸರಿಸಿದೆ . ಪೆರಿಪ್ಲಸ್ ಮಾರಿಸ್ ಏರಿತ್ರೈ ಎಂಬ ಗ್ರೀಕ್ ಗ್ರಂಥದಲ್ಲಿ ಚೋಳರ ಹೆಸರಿಲ್ಲದಿದ್ದರೂ ಅರ್ಗರು ಅಥವಾ ಒರೆಯೂರಿನ ಹೆಸರಿದೆ . ಸೊರಂಗೇಯನ್ನು - ಎಂದರೆ ಚೋಳರ ರಾಜಧಾನಿ ಅರ್ಥುರಾ ಅಥವಾ ಒರೆಯೂರನ್ನು - ಟಾಲಮಿ ಸ್ಪಷ್ಟವಾಗಿ ತಿಳಿಸುತ್ತಾನೆ . ಎಳಾಲ ಎನ್ನುವವನು ಚೋಳರಾಷ್ಟ್ರದಿಂದ ಸಿಂಹಳಕ್ಕೆ ಹೋಗಿ 42 ವರ್ಷಗಳ ಕಾಲ ಆಳಿದನೆನ್ನುವ ವಿಷಯ ಮಹಾವಂಶದಲ್ಲಿದೆ . ಕ್ರಿ . ಶ . ಸು . 2-3 ನೆಯ ಶತಮಾ ನಗಳಲ್ಲಿ ರಚಿತವಾಗಿದ್ದಿರಬಹುದಾದ