ಸೂಫಿ ಪಂಥ ಮತ್ತು ಗುಲ್ಬರ್ಗಾದ ಖ್ವಾಜಾ ಬಂದೇನವಾಜ್.
I. ಪೀಠಿಕೆ: ಸೂಫಿ - ಸಂತರು ಸರಳಜೀವಿಗಳಾಗಿ ತಾತ್ವಿಕ ನೆಲೆಯಲ್ಲಿ ಭಾವೈಕ್ಯತೆಗಾಗಿ ಶ್ರಮಿಸಿದವರು . ಮಧ್ಯಯುಗದಲ್ಲಿ ನಡೆದ ಹಿಂದೂ ಸಮಾಜದ ಧಾರ್ಮಿಕ ಸುಧಾರಣಾ ಚಳವಳಿಯ ಪ್ರಭಾವ ಇಸ್ಲಾಂ ಧರ್ಮದ ಮೇಲೆ ಉಂಟಾಗಿ ಅದರಲ್ಲಿ ಶುದ್ದೀಕರಣ ಚಳವಳಿ ಪ್ರಾರಂಭವಾಯಿತು . ಈ ರೀತಿಯ ಚಳವಳಿಯೆ ಸೂಫಿ ಚಳವಳಿ . “ ಸೂಫಿ ” ಎಂಬುದು ಅರೇಬಿಯನ್ ಪದ , “ ಸೂಫ್ ಮತ್ತು ಸಾಫ್ ” ಎಂಬೆರಡು ಪದಗಳಿಂದ ನಿಷ್ಪನ್ನವಾಗಿದೆ . ಸೂಫ್ ಎಂದರೆ ಉಣ್ಣೆ ಬಟ್ಟೆಯ ಉದ್ದವಾದ ನಿಲುವಂಗಿ ಧರಿಸಿದ ಮುಸ್ಲಿಂ ಸಂತ ಎಂದರ್ಥ . ಸಾಫ್ ಎಂದರೆ ಪರಿಶುದ್ದ ನಡತೆಯುಳ್ಳವನು ಎಂದರ್ಥ . ಸೂಫಿ ಪಂಥ ಮೊದಲು ಅರೇಬಿಯಾದಲ್ಲಿ ಉಗಮವಾಯಿತು. ಈ ಪಂಥದ ಸಂತರು ಮೂಲಭೂತವಾದಕ್ಕೆ ವಿರುದ್ದವಾದ ಆಲೋಚನೆಯನ್ನು ಹೊಂದಿದ್ದು, ಉದಾರವಾದ ಮತ್ತು ಸಮಾನತೆಯ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ಅರೇಬಿಯಾದಲ್ಲಿ ಆರಂಭವಾದ ಈ ಚಳವಳಿಯು ಪರ್ಷಿಯಾ , ಇರಾಕ್ ಮೂಲಕ ೧೨ನೇ ಶತಮಾನದ ವೇಳೆಗೆ ಭಾರತಕ್ಕೆ ಪರಿಚಯವಾಯಿತು . ಅನಂತರ ಈ ಪಂಥದ ಸಂತರು ಇಡೀ ಭಾರತದಾದ್ಯಂತ ಮಹತ್ವ ಪೂರ್ಣ ತತ್ವಗಳೊಂದಿಗೆ ಸಂಚಲನವನ್ನುಂಟುಮಾಡಿದರು . ಆ ತತ್ವಗಳೆಂದರೆ: ಏಕೀಶ್ವರವಾದ, ಕಾಯಕಕ್ಕೆ ಮಹತ್ವ , ಸಮಾನತೆ, ಜಾತಿ ಪದ್ದತಿಯ ಖಂಡನೆ, ಹಿಂದೂ - ಮುಸ್ಲಿಂ ಭ್ರಾ ತೃತ್ವ, ಮುಕ್ತಿಗೆ ಭಕ್ತಿಯೇ ಪ್ರಧಾನ, ಧರ್ಮಗಳ ಮೂಲ ಉದ್ದೇಶ , ಸತ್ವ