ಶಿವಾಜಿಯ ಆಡಳಿತ ಪದ್ಧತಿ - Administration of Shivaji
ಶಿವಾಜಿಯ ಆಡಳಿತ ಪದ್ಧತಿ ಸ್ವತಂತ್ರ ಮರಾಠಾ ರಾಜ್ಯವನ್ನು ಕಟ್ಟಿದ ಛತ್ರಪತಿ ಶಿವಾಜಿಯು ಅದರ ಆಡಳಿತಕ್ಕಾಗಿ ಅಗತ್ಯ ಏರ್ಪಾಟುಗಳನ್ನು ಮಾಡಿದ್ದನು. ಪಾರಂಪರಿಕವಾಗಿ ಬಂದಿದ್ದ ಕೆಲವು ಪದ್ಧತಿಗಳನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಂಡರೂ ಅಗತ್ಯ ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ತನ್ನ ಕಾಲಕ್ಕೆ ತಕ್ಕಂತೆ ಬದಲಿಸಿದನು. ಆತನು ರೂಪಿಸಿದ ಆಡಳಿತ ಪದ್ಧತಿಯು ಮುಂದೆ ಪೇಶ್ವೆಗಳ ಆಡಳಿತದಲ್ಲಿ ಉತ್ತಮ ವ್ಯವಸ್ಥೆಗಳಾಗಿ ಜಾರಿಯಲ್ಲಿದ್ದವು. ಇದು ಶಿವಾಜಿಯು ರೂಪಿಸಿದ ಆಡಳಿತ ಪದ್ಧತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಪ್ರಮುಖ ಲಕ್ಷಣಗಳು ಅಧಿಕಾರಿಗಳ ನೇಮಕಾತಿಯಲ್ಲಿ ಅನುವಂಶೀಕರಣ ಇಲ್ಲ ಅದಿಕಾರಿಗಳಿಗೆ ನೀಡಿದ್ದ ಜಹಗೀರುಗಳು ರದ್ದು ಪ್ರತಿಯೊಬ್ಬ ಮಂತ್ರಿಗಳಿಗೆ ಪ್ರತ್ಯೇಕ ಜವಾಬ್ದಾರಿ ಆಡಳಿತದಲ್ಲಿ ಸೈನಿಕ ಅಧಿಕಾರಿಗಳಿಗಿಂತ ನಾಗರೀಕ ಅಧಿಕಾರಿಗಳಿಗೆ ಆದ್ಯತೆ ಕೋಟೆಗಳ ಆಡಳಿತಕ್ಕೆ ವಿಶೇಷ ಆದ್ಯತೆ ಉನ್ನತ ಹುದ್ದೆಗಳಿಗೆ ಅಧಿಕ ಹಿಂದುಗಳ ನೇಮಕ; ಹಿಂದೂಕರಣ ಪಾರಂಪರಿಕ ಕಂದಾಯ ವಸೂಲಿಗಾರರ ಅಂತಸ್ತು ಇಳಿಮುಖ ಕೇಂದ್ರಾಡಳಿತ ಛತ್ರಪತಿ, ಸರ್ವಾಧಿಕಾರಿ, ನಿರಂಕುಶನಲ್ಲ. ಅಷ್ಟಪ್ರಧಾನ ಪದ್ಧತಿ • ಪೇಶ್ವೆ – ಪ್ರಧಾನ ಮಂತ್ರಿ – ಮೋರೆ ತಿವಳಿ ಪಿಂಗ್ಳೆ • ಅಮಾತ್ಯ – ಅರ್ಥಸಚಿವ – ಕಂದಾಯ ಮಂತ್ರಿ – ರಾಮಚಂದ್ರ ನೀಲಕಂಠ • ಮಂತ್ರಿ – ಗೃಹಮಂತ್ರಿ – ಆಪ್ತ ಕಾರ್ಯದರ್ಶಿ – ದತ್ತಾಜಿ ತ್ರಿಯಂಬಕ...