ಶಿವಾಜಿಯ ಆಡಳಿತ ಪದ್ಧತಿ - Administration of Shivaji

ಶಿವಾಜಿಯ ಆಡಳಿತ ಪದ್ಧತಿ

   ಸ್ವತಂತ್ರ ಮರಾಠಾ ರಾಜ್ಯವನ್ನು ಕಟ್ಟಿದ ಛತ್ರಪತಿ ಶಿವಾಜಿಯು ಅದರ ಆಡಳಿತಕ್ಕಾಗಿ ಅಗತ್ಯ ಏರ್ಪಾಟುಗಳನ್ನು ಮಾಡಿದ್ದನು. ಪಾರಂಪರಿಕವಾಗಿ ಬಂದಿದ್ದ ಕೆಲವು ಪದ್ಧತಿಗಳನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಂಡರೂ ಅಗತ್ಯ ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ತನ್ನ ಕಾಲಕ್ಕೆ ತಕ್ಕಂತೆ ಬದಲಿಸಿದನು. ಆತನು ರೂಪಿಸಿದ ಆಡಳಿತ ಪದ್ಧತಿಯು ಮುಂದೆ ಪೇಶ್ವೆಗಳ ಆಡಳಿತದಲ್ಲಿ ಉತ್ತಮ ವ್ಯವಸ್ಥೆಗಳಾಗಿ ಜಾರಿಯಲ್ಲಿದ್ದವು. ಇದು ಶಿವಾಜಿಯು ರೂಪಿಸಿದ ಆಡಳಿತ ಪದ್ಧತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ.

ಪ್ರಮುಖ ಲಕ್ಷಣಗಳು

ಅಧಿಕಾರಿಗಳ ನೇಮಕಾತಿಯಲ್ಲಿ ಅನುವಂಶೀಕರಣ ಇಲ್ಲ

ಅದಿಕಾರಿಗಳಿಗೆ ನೀಡಿದ್ದ ಜಹಗೀರುಗಳು ರದ್ದು

ಪ್ರತಿಯೊಬ್ಬ ಮಂತ್ರಿಗಳಿಗೆ ಪ್ರತ್ಯೇಕ ಜವಾಬ್ದಾರಿ

ಆಡಳಿತದಲ್ಲಿ ಸೈನಿಕ ಅಧಿಕಾರಿಗಳಿಗಿಂತ ನಾಗರೀಕ ಅಧಿಕಾರಿಗಳಿಗೆ ಆದ್ಯತೆ

ಕೋಟೆಗಳ ಆಡಳಿತಕ್ಕೆ ವಿಶೇಷ ಆದ್ಯತೆ

ಉನ್ನತ ಹುದ್ದೆಗಳಿಗೆ ಅಧಿಕ ಹಿಂದುಗಳ ನೇಮಕ; ಹಿಂದೂಕರಣ

ಪಾರಂಪರಿಕ ಕಂದಾಯ ವಸೂಲಿಗಾರರ ಅಂತಸ್ತು ಇಳಿಮುಖ

 

ಕೇಂದ್ರಾಡಳಿತ

ಛತ್ರಪತಿ, ಸರ್ವಾಧಿಕಾರಿ, ನಿರಂಕುಶನಲ್ಲ.

 

ಅಷ್ಟಪ್ರಧಾನ ಪದ್ಧತಿ

• ಪೇಶ್ವೆ – ಪ್ರಧಾನ ಮಂತ್ರಿ – ಮೋರೆ ತಿವಳಿ ಪಿಂಗ್ಳೆ

ಅಮಾತ್ಯ – ಅರ್ಥಸಚಿವ – ಕಂದಾಯ ಮಂತ್ರಿ – ರಾಮಚಂದ್ರ ನೀಲಕಂಠ

ಮಂತ್ರಿ – ಗೃಹಮಂತ್ರಿ – ಆಪ್ತ ಕಾರ್ಯದರ್ಶಿ – ದತ್ತಾಜಿ ತ್ರಿಯಂಬಕ್

ಸಚಿವ – ಪತ್ರ ವ್ಯವಹಾರಗಳ ಮೇಲ್ವಿಚಾರಕ – ಪ್ರಾಂತ್ಯಗಳ ಪತ್ರಗಳ ಪರಿಶೀಲಕ – ಅಣ್ಣಾಜಿ ದತ್ತ

ಸುಮಂತ – ವಿದೇಶಾಂಗ ಮಂತ್ರಿ – ರಾಯಬಾರಿಗಳ ನೇಮಕ, ಯುದ್ಧಗಳ ಸಲಹೆಗಾರ – ರಾಮಚಂದ್ರ ತ್ರಿಯಂಬಕ್

ಸೇನಾಪತಿ – ಸೈನ್ಯದ ಮಹಾದಂಡನಾಯಕ – ಹಮ್ಮೀರರಾವ್ ಮೋಹಿತೆ

ಪಂಡಿತರಾವ್ – ರಾಜ ಪುರೋಹಿತ, ಧಾರ್ಮಿಕ ವ್ಯವಹಾರಗಳು – ರಘುನಾಥ ಪಂಡಿತ

ನ್ಯಾಯಾಧೀಶ – ನ್ಯಾಯಾಡಳಿತದ ಮುಖ್ಯಸ್ಥ – ರಾವಜಿ ನೀರಜ

 

ಪ್ರತಿ ಅಷ್ಟಪ್ರಧಾನರಿಗೂ ಸಹಾಯಕರು ಇದ್ದರು

ದಿವಾನ್ - ಕಾರ್ಯದರ್ಶಿ

ಕಾರ್ಕಾನಿಕ್ – ಸರಕುಗಳ ಮೇಲ್ವಿಚಾರಕ

ಮಜೂಮ್‌ದಾರ್ – ಮುಖ್ಯ ಲೆಕ್ಕಿಗ

ಚಿಟ್ನೀಸ್ – ವ್ಯವಹಾರಗಳ ಗುಮಾಸ್ತ

ಪಡ್ನೀಸ್ ಉಪ ಲೆಕ್ಕಿಗ

ಜಮಾದಾರ್ ಖಜಾಂಚಿ

ಸಬ್‌ನೀಸ್ – ಕಛೇರಿ ಮೇಲ್ವಿಚಾರಕ

ಪಟ್ನೀಸ್ – ನಗದು ಗುಮಾಸ್ತ

 

ಪ್ರಾಂತ್ಯಾಡಳಿತ

ಆಡಳಿತದಲ್ಲಿ ಸ್ವರಾಜ್ಯ – ನೇರ ಆಳ್ವಿಕೆಗೆ ಒಳಪಟ್ಟದ್ದು

ಆಶ್ರಿತ ರಾಜ್ಯಗಳು – ಎಂದು ಎರಡು ವಿಭಾಗಗಳು ಇದ್ದವು

ರಾಜ್ಯವನ್ನು:-

ಪ್ರಾಂತ್ಯ – ಜಿಲ್ಲೆ – ಪರಗಣ ಮತ್ತು ಗ್ರಾಮ – ಗಳಾಗಿ ವಿಭಜನೆ ಮಾಡಲಾಗಿತ್ತು

ಪ್ರಾಂತ್ಯಗಳಲ್ಲಿ ಕೇಂದ್ರದ ರೀತಿಯದೇ ಆಡಳಿತ ವ್ಯವಸ್ಥೆ

 

ಕಂದಾಯ ಆಡಳಿತ:-

ಮಲಿಕ್ ಅಂಬರನ ಮಾದರಿ ಅನುಸರಣೆ

ಕಂದಾಯ ನೇರವಾಗಿ ಸರ್ಕಾರಕ್ಕೆ ಸಲ್ಲಿಕೆ

ಭೂಮಾಪನ & ಫಲವತ್ತತೆಯ ಅನುಸಾರ ವರ್ಗೀಕರಣ

ಉತ್ಪನ್ನದ ಶೇ. ೩೩  ರಷ್ಟು ಪಾಲು ಕಂದಾಯ ರೂಪದಲ್ಲಿ ವಸೂಲಿ

ಧನ ಅಥವಾ ಧಾನ್ಯದ ರೂಪದಲ್ಲಿ

ಕೃಷಿಗೆ ಸಾಲ & ಸುಲಭ ಮರುಪಾವತಿಗೆ ಅವಕಾಶ

 

ಚೌತ್‌ ಮತ್ತು ಸರ್‌ದೇಶಮುಖಿ:-

ತನ್ನ ಸ್ವರಾಜ್ಯದ ಹೊರಗಿನ ಪ್ರದೇಶಗಳ ಮೇಲೆ ವಿಧಿಸುತ್ತಿದ್ದ ತೆರಿಗೆಗಳು

ಚೌತ್ ಭೂಕಂದಾಯದ 4 ನೆ 1 ಭಾಗವಾಗಿತ್ತು

ಸರದೇಶಮುಖಿ ಭೂಕಂದಾಯದ 10 ನೆ 1 ಭಾಗವಾಗಿತ್ತು

ಇವುಗಳ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ

 

ಮಹದೇವ ಗೋ. ರಾನಡೆ ಅವರ ಪ್ರಕಾರ:-

ಚೌತ್ ನೀಡಿಕೆ ಹೊಣೆಗಾರಿಕೆ ಇಲ್ಲದ ಹಣ ಪಾವತಿ ಮಾತ್ರವಲ್ಲ ಮೂರನೇ ಪಕ್ಷವೊಂದು ತನ್ನ ಮೇಲೆ ಮಾಡುವ ದಾಳಿಗಳಿಂದ ರಕ್ಷಣೆ ಪಡೆಯುವುದಾಗಿತ್ತು.

ಜಾದೂನಾಥ್ ಸರ್ಕಾರ್ ಅವರ ಪ್ರಕಾರ

ಮರಾಠಾ ಸೈನಿಕರ ಾಕ್ರಮಣದಿಂದ ಚೌತ್ ನೀಡುವ ದೇಶವನ್ನು ರಕ್ಷಿಸುವುದಾಗಿತ್ತು ಮತ್ತು ಅದು ಆಕ್ರಮಣಕಾರರಿಂದ ಆ ದೇಶವನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿರಲಿಲ್ಲಮ.

ಸರ್ ದೇಸಾಯಿ ಅವರ ಪ್ರಕಾರ:-

ಗೆದ್ದ ಅಥವಾ ಆಕ್ರಮಿತ ಪ್ರದೇಶಗಳಿಂದ ಪಡೆಯುವ ಮಿಲಿಟರಿ ಕಪ್ಪವಾಗಿತ್ತು

ಡಾ. ಸೇನ್ ಪ್ರಕಾರ:-

ಅದು ಸಾಮಂತನಿಂದ ಮತ್ತು ಅಧೀನ ಸೇನಾಧಿಕಾರಿಯಿಂದ ಸಂಗ್ರಹಿಸುವ ತೆರಿಗೆ ಆಗಿತ್ತು

 

ಸರ್‌ದೇಶಮುಖಿ:-

ಇದು ಅನುವಂಶಿಯವಾಗಿ ತೆರಿಗೆ ಸಂಗ್ರಹಿಸುವವರಿಗೆ ನೀಡುತ್ತಿದ್ದ ವೇತನ ಸ್ವರೂಪದ ಹಣವಾಗಿತ್ತು

ಒಟ್ಟು ಕಂದಾಯದ ಹತ್ತನೆ ಒಂದು ಭಾಗ

 

ಸೇನಾಡಳಿತ:

ಶಿವಾಜಿ ಸ್ಥಾಯಿ ಸೇನೆ ಕಟ್ಟಿದನು

ಪದಾತಿ, ಅಶ್ವ, ಗಜ, ಒಂಟೆ, ಫಿರಂಗಿ ಮತ್ತು ನೌಕಾಪಡೆಗಳೆಂಬ ವಿಭಾಗಗಳು ಸೈನ್ಯದಲ್ಲಿದ್ದವು

ಅಶ್ವಪಡೆಯೇ ಪ್ರಮುಖವಾದುದು

ಬಾರಗೀರುದಾರ ಮತ್ತು ಶಿಲಾದಾರರು ಎಂಬ ಎರಡು ರೀತಿಯ ಅಶ್ವಪಡೆಯ ಸೈನಿಕರಿದ್ದರು

ಬಾರಗೀರುದಾರ:- ಸರ್ಕಾರದಿಂದ ಅಶ್ವ ಮತ್ತು ಆಯುಧಗಳನ್ನು ಪಡೆದು ಕೇವಲ ವೇತನಕ್ಕಾಗಿ ದುಡಿಯುತ್ತಿದ್ದ ಸೈನಿಕ

ಶಿಲಾದಾರ:- ತನ್ನದೇ ಅಶ್ವ ಮತ್ತು ಶಸ್ತ್ರಗಳನ್ನು ಹೊಂದಿ ವೇತನಕ್ಕಾಗಿ ದುಡಿಯುತ್ತಿದ್ದ ಸೈನಿಕ.

ಅಶ್ವಪಡೆಯ ವಿನ್ಯಾಸ

25 ಬಾರಗೀರದಾರರ ಮೇಲೆ ಒಬ್ಬ ಹವಾಲ್ದಾರ

5 ಹವಾಲ್ದಾರರ ಮೇಲೆ ಒಬ್ಬ ಜುಮ್ಲಾದಾರ

10 ಜುಮ್ಲಾದಾರರ ಮೇಲೆ ಒಬ್ಬ ಹಜಾರಿ

5 ಹಜಾರಿಗಳಿಗೆ ಒಬ್ಬ ಸರ್ ನೌಬತ್

ಸರ್ ನೌಬತ್ ಅಶ್ವಪಡೆಯ ಪ್ರಧಾನ ಮುಖಂಡನಾಗಿದ್ದ

 

ಪದಾತಿ ದಳದ ವಿನ್ಯಾಸ

9 ಸೈನಿಕರಿಗೆ ಒಬ್ಬ ನಾಯಕ

5 ನಾಯಕರಿಗೆ ಒಬ್ಬ ್ಹವಾಲ್ದಾರ

3 ಹವಾಲದ್ಆರರಿಗೆ ಒಬ್ಬ ಜುಮ್ಲಾದಾರ

10 ಜುಮ್ಲಾದಾರರಿಗೆ ಒಬ್ಬ ಹಜಾರಿ

7 ಹಜಾರಿಗಳಿಗೆ ಒಬ್ಬ ಸರ್ ನೌಬತ್

ಸೇನಾಪತಿ ಕಾಲ್ದಳದ ಮುಖ್ಯಸ್ತ

 

ನೌಕಾಪಡೆ:-

ಶಿವಾಜಿಯು ಚೋಳರ ನಂತರ ವ್ಯವಸ್ಥಿತ ನೌಕಾಪಡೆ ರಚಿಸಿದ್ದ.

ನೌಕಾಪಡೆಗೆ ಬಂದರುಗಳನ್ನು ನೌಕಾನೆಲೆಗಳಾಗಿ ನಿರ್ಮಿಸಿದ್ದ

ಜಿಂಜೀರದ ಸಿದ್ಧಿಗಳು, ಯೂರೋಪಿಯನ್ನರು ಮತ್ತು ಸಮುದ್ರತೀರದ ವ್ಯಾಪಾರದ ಮೇಲಿನ ತೆರಿಗೆ ವಸೂಲಿಗೆ ನೌಕಾಪಡೆಯ ಬಳಕೆ

ದೌಲತ್ ಖಾನ್ ಇದರ ಮುಖ್ಯಸ್ಥನಾಗಿದ್ದ

160 ಕ್ಕೂ ಹೆಚ್ಚು ಯುದ್ಧ ನೌಕೆಗಳು ಇದ್ದವು.

ಸಿಂಧುದುರ್ಗ, ಸುವರ್ಣದುರ್ಗ ಮತ್ತು ವಿಜಯದುರ್ಗಗಳೆಂಬುವು ಸಮುದ್ರತೀರದ ಕೋಟೆಗಳಾಗಿದ್ದವು. ಕೊಲಾಬಾ ಪ್ರಮುಖ ನೌಕಾನೆಲೆ ಆಗಿತ್ತು

 

ಸೈನ್ಯದ ಶಿಸ್ತು:-

ಸೈನ್ಯದಲ್ಲಿ ಶಿಸ್ತಿಗೆ ಆದ್ಯತೆ

ಮಹಿಳೆಯರ ಉಪಸ್ಥಿತಿ ನಿಷೇಧ

ಮುಸ್ಲೀಂರಿಗೂ ಅವಕಾಶ

ಯುದ್ಧ ಲೂಟಿ ಸಂಪೂರ್ಣ ಸರ್ಕಾರಕ್ಕೆ

ಚಹರೆ & ಡಾಕ್ ಪದ್ಧತಿ ಮುಂದುವರಿಕೆ

ಮಹಿಳೆ & ಮಕ್ಕಳಿಗೆ ರಕ್ಷಣೆ

ನಾಗರೀಕ ಆಸ್ತಿಗಳಿಗೆ ಹಾನಿ ಮಾಡುವಂತಿಲ್ಲ

ತಪ್ಪಿದಲ್ಲಿ ಶಿರಚ್ಛೇದನ!


ಕೋಟೆಗಳ ಆಡಳಿತ:- ವಿಶೇಷ ಆದ್ಯತೆ ನೀಡಲಾಗಿತ್ತು. ಅವುಗಳು ಸೇನಾನೆಲೆಗಳಾಗಿದ್ದವು. ಜೆ. ಎನ್.‌ ಸರ್ಕಾರ್‌ರವರ ಪ್ರಕಾರ ಶಿವಾಜಿಯ ಆಡಳಿತದ ಅಂತ್ಯಕ್ಕೆ ಅವನ ರಾಜ್ಯದಲ್ಲಿ ಸು. ೨೪೦ ರಿಂದ ೨೮೦ ರಷ್ಟು ಕೋಟೆಗಳಿದ್ದ್ವು. ಪ್ರತಿಯೊಂದು ಕೋಟೆಯ ಆಡಳಿತಕ್ಕೆ ಮೂವರು ಅಧಿಕಾರಿಗಳಿದ್ದರು. ಹವಾಲ್ದಾರ್‌ ಕೋಟೆಯ ರಕ್ಷಣೆಯ ಜವಾಬ್ದಾರಿ, ಸಬ್‌ನೀಸ್‌ ಲೆಕ್ಕ-ಪತ್ರಗಳ ಮೇಲ್ವಿಚಾರಣೆ ಮತ್ತು ಕಾರ್ಕಾನವೀಸ್‌ ಅಗತ್ಯ ಸಾಮಗ್ರಿಗಳ ಪೂರೈಕೆಯ ಜವಾಬ್ದಾರಿ ಹೊಂದಿದ್ದರು. ಬೃಹತ್ತಾದ ಕೋಟೆಗಳಲ್ಲಿ ಮೂರಕ್ಕಿಂತ ಹೆಚ್ಚಿನ ಅಧಿಕಾರಿಗಳು ಇರುತ್ತಿದ್ದ್ರು. ಕೋಟೆಗಳು ವಿಶಾಲವಾದ ಬೆಳೆ ಬೆಳೆಯುವ ಜಮೀನುಗಳು ಮತ್ತು ಸಾಕಷ್ಟು ನೀರಿನ ಸಂಗ್ರಹದ ವ್ಯವಸ್ಥೆಯನ್ನು ಹೊಂದಿರುತ್ತಿದ್ದವು. ಇದರಿಂದ ಶತೃಗಳ ದಾಳಿಗಳನ್ನು ದೀರ್ಗಕಾಲದವರೆಗೆ ಎದುರಿಸಬಹುದಾಗಿತ್ತು.


ನ್ಯಾಯಾಡಳಿತ

ಛತ್ರಪತಿಯ ಆಸ್ಥಾನವೇ ಅಂತಿಮ ನ್ಯಾಯಾಲಯ

ನ್ಯಾಯಾಧ್ಯಕ್ಷ ನ್ಯಾಯ ವಿತರಣೆಗೆ ನೆರವು

ಹಜೀರ್ ಮಸ್ಲೀಜ್ ಉನ್ನತ ಮೇಲ್ಮನವಿ ನ್ಯಾಯಾಲಯವಾಗಿತ್ತು

ಹಿಂದೂ ಧರ್ಮ ಶಾಸ್ತ್ರಗಳನ್ನಾಧರಿಸಿ ನ್ಯಾಯತೀರ್ಪು

ಶಿಕ್ಷೆಗಳು ಕಠಿಣವಾಗಿದ್ದವು

ಅಪರಾಧ ಪತ್ತೆಗೆ ಕಾದ ಕಬ್ಬಿಣ ಹಿಡಿಯುವ ಪದ್ಧತಿ ಬಳಸಲಾಗುತ್ತಿತ್ತು

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources