ಪ್ರಥಮ ಕರ್ನಾಟಿಕ್ (Carnatic) ಯುದ್ಧ, ಹಿನ್ನೆಲೆ, ಕಾರಣಗಳು, ಗಟನಾವಳಿಗಳು ಮತ್ತು ಪರಿಣಾಮಗಳು
ಕರ್ನಾಟಿಕ್ ಯುದ್ಧಗಳು
•ಇವು ರಾಜಕೀಯ ಅಧಿಕಾರ
ಸ್ಥಾಪನೆಗಾಗಿ ನಡೆದ ಯುದ್ಧಗಳು.
• ಬ್ರಿಟಿಷ್
ಮತ್ತು ಫ್ರೆಂಚರ ನಡುವೆ.
• ದಕ್ಷಿಣ
ಭಾರತದಲ್ಲಿ ನಡೆದವು.
ಕರ್ನಾಟಿಕ್
ಪ್ರದೇಶ ಎಂದರೆ ಯಾವುದು?
• ಯೂರೋಪಿಯನ್ನರು
ದಕ್ಷಿಣ ಭಾರತದ ಪೂರ್ವ ಕರಾವಳಿಯ
ಕೋರಮಂಡಲ ತೀರ ಮತ್ತು ಅದರ
ಒಳನಾಡನ್ನು “ಕರ್ನಾಟಿಕ್” ಎಂದು ಕರೆಯುತ್ತಿದ್ದರು.
ಒಟ್ಟು ಮೂರು ಕರ್ನಾಟಿಕ್ ಯುದ್ಧಗಳು.
• ಮೊದಲನೆ
ಯುದ್ಧ:- 1746 – 48.
• ಎರಡನೆ ಯುದ್ಧ:- ೧೭೪೯ – ೫೪.
• ಮೂರನೆ ಯುದ್ಧ:- ೧೭೫೮ – ೧೭೬೩.
ಯುದ್ಧಗಳ ಪ್ರಮುಖ ಕಾರಣಗಳು
•ಪಾರಂಪರಿಕ
ವೈಷಮ್ಯ.
• ಆಂಗ್ಲ ಮತ್ತು ಫ್ರೆಂಚರ ಸೈನಿಕ
ಸಾಮರ್ಥ್ಯಗಳು.
• ರಾಜಕೀಯ
ಮಹತ್ವಾಕಾಂಕ್ಷೆ.
• ಸ್ಥಳೀಯ
ಅರಸರ ಒಳಜಗಳಗಳು.
• ಭೂಪ್ರದೇಶಗಳ
ಬಯಕೆ.
•
ದಕ್ಷಿಣ
ಭಾರತದಲ್ಲಿದ್ದ ಅಂದಿನ ರಾಜಕೀಯ ಸ್ಥಿತಿ.
• ಮೊಗಲರ ಸುಬೇದಾರ ’ನಿಜಾಮ್ ಉಲ್
ಮುಲ್ಕ್ ಆಸಫ್ ಜಾ’ ಹೈದ್ರಾಬಾದ್
ಸುಬಾವನ್ನು ಸ್ವತಂತ್ರವಾಗಿ ಆಳುತ್ತಿದ್ದ; ಔರಂಗಜೇಬನ ಮರಣಾನಂತರ.
• ಇವನ ಅಧೀನ ಪ್ರದೇಶ ಕರ್ನಾಟಿಕ್ ಮತ್ತು ಅದರ
ರಾಜಧಾನಿ ಅರ್ಕಾಟ್.
• ಕರ್ನಾಟಿಕ್
ಪ್ರದೇಶದ ನವಾಬ “ಅನ್ವರುದ್ದೀನ್”.
ಮೊದಲನೆ ಕರ್ನಾಟಿಕ್ ಯುದ್ಧ – ೧೭೪೬-೪೮.
• ತಕ್ಷಣದ
ಕಾರಣಗಳು:-
• ಆಸ್ಟ್ರಿಯಾ
ಉತ್ತರಾಧಿಕಾರದ ಪ್ರಶ್ನೆ ಮತ್ತು ಅದಕ್ಕಾಗಿ ಯುದ್ಧ ಆರಂಭ.
• ಯೂರೋಪಿನ
ರಾಷ್ಟ್ರಗಳ ನಡುವೆ.
• ಇಂಗ್ಲೆಂಡ್
ಮತ್ತು ಫ್ರಾನ್ಸ್ ಸಹಾ ಭಾಗಿಗಳು.
• ಭಾರತದಲ್ಲಿದ್ದ ಮಹತ್ವಾಕಾಂಕ್ಷಿ
ಅಧಿಕಾರಿಗಳು.
• ಆಂಗ್ಲ & ಫ್ರೆಂಚರ
ನಡುವಿನ ಪರಸ್ಪರ ಪೈಪೋಟಿ.
ಮೊದಲನೆ ಯುದ್ಧದ ಘಟನಾವಳಿಗಳು.
• ಬ್ರಿತಿಷರ
ಸೇನಾ ಪ್ರಾಬಲ್ಯ ಅಧಿಕವಾಗಿತ್ತು ಮತ್ತು
ಅವರು ಫ್ರೆಂಚರ ಹಡಗುಗಳ ಮೇಲೆ ನೌಕಾದಾಳಿ ನಡೆಸಿದರು
– ಪಾಂಡಿಚೇರಿ ಬಳಿ.
• ಡೂಪ್ಲೆ
ಕರ್ನಾಟಿಕ್ ಭಾಗದಲ್ಲಿ ನವಾಬ ಅನ್ವರುದ್ದೀನನಿಗೆ
ಶಾಂತಿ ಕಾಪಾಡುವಂತೆ ವಿನಂತಿಸಿದ.
• ನವಾಬನ ಆದೇಶ ಮನ್ನಿಸಿ ಬ್ರಿಟಿಷರು
ಸೇನೆ ವಾಪಾಸು ಕಳುಹಿಸಿದರು.
• ಆದರೆ, ಡೂಪ್ಲೆ ಮದರಾಸನ್ನು ಅನ್ವರುದ್ದೀನನಿಗೆ ಗೆದ್ದು ಕೊಡುವ ಭರವಸೆ ನೀಡಿದ.
* ಮದ್ರಾಸಿನ
ಮುತ್ತಿಗೆಗಾಗಿ ಮಾರಿಷಸ್ ಫ್ರೆಂಚ್ ಗವರ್ನರ್
ಲಾಬೊರ್ಡೆ ನಾಯಿಸ್ ಗೆ ನೌಕಾಸೈನ್ಯ
ತರುವಂತೆ ಡೂಪ್ಲೆ ಮನವಿ.
* ಲಾಬೊರ್ಡೆ
ನಾಯಿಸ್ ಮದರಾಸನ್ನು ಗೆದ್ದುಕೊಂಡ.
* ಆದರೆ, ಡೂಪ್ಲೆ ಮತ್ತು ಅವನ
ನಡುವೆ ಭಿನ್ನಾಭಿಪ್ರಾಯ ಉಂಟಾಯಿತು.
* ಪರಿಣಾಮ
ಲಾಬೊರ್ಡೆ ನಾಯಿಸ್ ಮದರಾಸನ್ನು ಬ್ರಿಟಿಷರಿಗೆ
೪೦ ಸಾವಿರ ಪೌಂಡುಗಳಿಗೆ
ಮಾರಿ ವಾಪಾಸು ಹೋದನು.
• ಆದರೆ ಡೂಪ್ಲೆ ಧೃತಿಗೆಡದೆ ಮತ್ತೆ
ಮದರಾಸನ್ನು ವಶಪಡಿಸಿಕೊಂಡ.
• ಮಾತಿನಂತೆ
ಅದನ್ನು ನವಾಬ ಅನ್ವರುದ್ದೀನನಿಗೆ ಒಪ್ಪಿಸಲಿಲ್ಲ.
• ಬ್ರಿಟಿಷರು
ಅದನ್ನು ತಮಗೆ ಕೊಡಿಸುವಂತೆ ನವಾಬನಲ್ಲಿ
ಮನವಿ ಮಾಡಿದರು.
• ಡೂಪ್ಲೆ
ನವಾಬನ ಸೂಚನೆಯನ್ನು ಕಡೆಗಣಿಸಿದ.
• ಕುಪಿತನಾದ
ನವಾಬ ಡೂಪ್ಲೆಯ ವಿರುದ್ಧ ಸೈನ್ಯ
ಕಳುಹಿಸಿದ.
• ಪಾಂಡಿಚೇರಿ
ಮತ್ತು ಮದ್ರಾಸ್ ನಡುವಣ ಅಡ್ಯಾರ್
ಬಳಿ ಯುದ್ಧ ನಡೆಯಿತು.
• ಯುದ್ಧದಲ್ಲಿ
ನವಾಬ ಸೋತು ಹಿಂತಿರುಗಿದ.
• ಕೇವಲ ೧೧೦೦ ಸಂಖ್ಯೆಯ ಫ್ರೆಂಚ್
ಸೈನ್ಯ ಸುಮಾರು ೧೦,೦೦೦
ದಷ್ಟು ನವಾಬನ ಸೈನ್ಯವನ್ನು ಸೋಲಿಸಿತ್ತು.
ಯುದ್ಧದ ಮುಕ್ತಾಯ ೧೭೪೮
ರಲ್ಲಿ.
• ಯೂರೋಪಿನಲ್ಲಿ
ಆಸ್ಟ್ರಿಯಾ ಉತ್ತರಾಧಿಕಾರದ ಯುದ್ಧ ಮುಕ್ತಾಯಗೊಂಡಾಗ.
• ಪರಿಣಾಮ
ಭಾರತದಲ್ಲೂ ಸಹಾ ಫ್ರೆಂಚರ ಮತ್ತು
ಬ್ರಿಟಿಷರ ನಡುವಣ ಘರ್ಷಣೆಗಳು ಅಂತ್ಯ.
• ಎಕ್ಸ್ ಲಾ ಚಾಪೆಲ್
ಒಪ್ಪಂದ – ಫ್ರಾನ್ಸ್ - ಇಂಗ್ಲೆಂಡ್.
• ಒಪ್ಪಂದದಂತೆ ಮದ್ರಾಸು ಬ್ರಿಟಿಷರಿಗೆ ವಾಪಾಸು ಮತ್ತು ಫ್ರೆಂಚರಿಗೆ ಅಮೆರಿಕಾದ ಲೂಯಿಸ್ ಬರ್ಗ್ ನೀಡಲಾಯಿತು.
Comments
Post a Comment