ಭಾರತದ ಇತಿಹಾಸ ಪುನರ್‌ರಚನೆಯಲ್ಲಿ ಶಾಸನಗಳು, ಮಹತ್ವ, ಪ್ರಮುಖ ಶಾಸನಗಳು ಮತ್ತು ಅವುಗಳ ದೋಷಗಳು.
ಶಾಸನಗಳು:- ಇವು ಪ್ರಾಚೀನ ಭಾರತದ ಇತಿಹಾಸ ಪುನರ್ ರಚನೆಗೆ ಬಹುಮುಖ್ಯ ಆಧಾರಗಳಾಗಿವೆ. ಶಾಸನಗಳ ವ್ಯ ವಸ್ಥಿತ ಅಧ್ಯಯನವನ್ನು ಶಾಸನಶಾಸ್ತ್ರ ಅಥವಾ Epigraphy ಎನ್ನುವರು. ಸುಮಾರು 75-80 ಸಾವಿರದಷ್ಟು ಶಾಸನಗಳು ಲಭ್ಯ. ವಿವಿಧ ಭಾಷೆಗಳಲ್ಲಿ ರಚಿತ. ಬ್ರಾಹ್ಮಿ, ಕರೊಷ್ಠಿ, ಅರಾಮಿಕ್ ಮತ್ತು ದೇವನಾಗರಿ ಲಿಪಿಗಳನ್ನು ಬಳಸಿ ಬರೆಯಲಾಗಿದೆ. ಬಂಡೆಗಳು, ಸ್ತಂಭಗಳು, ಭಿತ್ತಿಗಳು, ವಿಗ್ರಹಗಳ ತಳಭಾಗ, ಗುಹೆಗಳು, ಮುದ್ರೆಗಳು, ಲೋಹಪಟಗಳ ಮೇಲೆ ಬರೆಯಲ್ಪಟ್ಟಿವೆ. ಶಾಸನಗಳನ್ನು ಚಿರಸ್ಥಾಯಿ ವಸ್ತುಗಳ ಮೇಲೆ ಬರೆಯಲಾಗುತ್ತಿತ್ತು. ಸಿಂಧೂ ಮುದ್ರೆಗಳು ಅತ್ಯಂತ ಪ್ರಾಚೀನ ಬರವಣಿಗೆಗಳು; ಆದರೆ ಅವುಗಳನ್ನು ಇನ್ನೂ ನಿಖರವಾಗಿ ಓದಲಾಗಿಲ್ಲ. ಪಾಕಿಸ್ತಾನದ ಸೊಹಗರ್ ನಲ್ಲಿ ಸಿಕ್ಕಿರುವ ಶಾಸನವೇ ಭಾರತದ ಅತ್ಯಂತ ಹಳೆಯ ಶಾಸನ. ಅಶೋಕನ ಶಾಸನಗಳು ಪ್ರಾಚೀನತೆಯಲ್ಲಿ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವನು ಸ್ಥಳೀಯ ಭಾಷೆಗಳಲ್ಲಿ ಶಾಸನಗಳನ್ನು ಬರೆಯಿಸಿದ್ದಾನೆ. ಆರಂಭಿಕ ಶಾಸನಗಳಲ್ಲಿ ಅವನ ಹೆಸರು ನಿಗೂಢ. ಸಾ.ಶ.ವ. 1915ರ ಮಸ್ಕಿ ಶಾಸನದಲ್ಲಿ ಬಿರುದುಸಹಿತ ಹೆಸರು ಉಲ್ಲೇಖ; ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು. ಮಧ್ಯಪ್ರದೇಶದ ಗುಜರ್ರಾ ಶಾಸನದಲ್ಲೂ ಇದೇ ಮಾಹಿತಿ. ಅವನ ಶಾಸನಗಳಿಂದ ನಿಖರ ಮಾಹಿತಿ ಲಭ್ಯವಾಗಿ ಇತಿಹಾಸ ಪುನರ್ ರಚನೆಗೆ ಆಧಾರ ಒದಗಿಸಿವೆ. ಕಾರಣ ಆತನನ್ನು “ಶಿಲಾಶಾಸನಗಳ ಪಿತಾಮಹಾ” ಎನ್ನಲಾಗಿದೆ.
ಶಾಸನಗಳ ವರ್ಗೀಕರಣ:- ವಿಷಯಾಧಾರಿತವಾಗಿ ವರ್ಗೀಕರಣ. ೧. ಐತಿಹಾಸಿಕ.
೨. ಧಾರ್ಮಿಕ. ೩. ದಾನ ಅಥವಾ ದತ್ತಿ ಮತ್ತು ೪. ಸ್ಮರಣ ಶಾಸನಗಳು ಎಂದು ವರ್ಗೀಕರಣ. ಶಾಸನಗಳನ್ನು ರಾಜ-ಮಹಾರಾಜರು,
ಮಂತ್ರಿಗಳು, ಸೇನಾಧಿಪತಿಗಳು, ಪ್ರಾಂತೀಯ ಅಧಿಕಾರಿಗಳು, ರಾಣಿಯರು, ಶ್ರೀಮಂತರು, ವ್ಯಾಪಾರಿಗಳು, ಧರ್ಮಗುರುಗಳು,
ಹೀಗೆ ವಿವಿಧ ವ್ಯಕ್ತಿಗಳಿಂದ ಬರೆಸಲ್ಪಡುತ್ತಿದ್ದವು.
ಭಾರತದ ಕೆಲವು ಪ್ರಮುಖ ಶಾಸನಗಳು:- ಶಾಸನದ ಹೆಸರು,
ಸ್ಥಳ ಮತ್ತು ಒದಗಿಸುವ ಮಾಹಿತಿ
1. ಹಾಥಿಗುಂಫಾ ಶಾಸನ – ಒರಿಸ್ಸಾ, ಭುವನೇಶ್ವರ
ಬಳಿಯ ಉದಯಗಿರಿ ಬೆಟ್ಟದಲ್ಲಿ. ಕಾರವೇಲನ ೧೪ ವರ್ಷಗಳ ಆಡಳಿತದ ಮಾಹಿತಿ. ಸಾ.ಶ.ಪೂ. 1ನೆ ಶತಮಾನ. ಪ್ರಾಕೃತ
ಭಾಷೆ ಮತ್ತು ಬ್ರಾಹ್ಮಿ ಲಿಪಿ.
2. ಗಿರನಾರ್ ಶಾಸನ:- ಗುಜರಾತ್ ಬಳಿಯ ಜುನಾಘಡದಲ್ಲಿ.
ಶಕಕ್ಷತ್ರಪ ರುದ್ರದಾಮನನು ಮೌರ್ಯರ ಕಾಲದ ಸುದರ್ಶನ ಕೆರೆಯನ್ನು ದುರಸ್ತಿ ಮಾಡಿಸಿದ ಮಾಹಿತಿ ಮತ್ತು
ಅದೇ ಕೆರೆಯನ್ನು ಗುಪ್ತರ ಸ್ಕಂದಗುಪ್ತ ಮತ್ತೆ ಐದನೇ ಶತಮಾನದಲ್ಲಿ ದುರಸ್ತಿ ಮಾಡಿಸಿದ ಮಾಹಿತಿ. ಸುದರ್ಶನ
ತಟಾಕ ಸಂಸ್ಕಾರ ಗ್ರಂಥ ಎಂದು ವರ್ಣನೆ.
3. ಅಲಹಾಬಾದ್ ಶಾಸನ. ಉತ್ತರಪ್ರದೇಶದ ಅಲಹಾಬಾದ್
ನಲ್ಲಿದೆ. ಮೂಲಸ್ಥಳ ಕೌಶಾಂಬಿಯಲ್ಲಿ. ಅಶೋಕನ ಕಾಲದಲ್ಲಿ ಸ್ಥಾಪನೆ. ಸಮುದ್ರಗುಪ್ತನ ದಂಡನಾಯಕ ಅರಿಸೇನನಿಂದ
ಸಂಸ್ಕೃತ ಭಾಷೆಯಲ್ಲಿ ರಚನೆ. ಇದರ ಮೇಲೆ ಜಹಾಂಗೀರನೂ ಶಾಸನ ಬರೆಯಿಸಿದ್ದಾನೆ. ಸಮುದ್ರಗುಪ್ತನ ದಿಗ್ವಿಜಯಗಳ
ಮಾಹಿತಿ. ನಾಲ್ಕನೇ ಶತಮಾನ.
4. ಐಹೊಳೆ ಶಾಸನ: ಕರ್ನಾಟಕದ ಐಹೊಳೆಯಲ್ಲಿದೆ.
ಇಮ್ಮಡಿ ಪುಲಕೇಶಿಯ ಸಾಧನೆಗಳು. ಮೇಗುತಿ ದೇವಾಲಯದ ಪೂರ್ವದ ಗೋಡೆಯ ಮೇಲೆ. ಅವನ ದಂಡನಾಯಕ ರವಿಕೀರ್ತಿಯಿಂದ
ರಚಿತ. ಸಂಸ್ಕೃತದಲ್ಲಿ. ನರ್ಮದಾ ನದಿ ಯುದ್ಧದ ಮಾಹಿತಿ. ಶಾಲಿವಾಹನ ಶಕ 556 ರಿಂದ 634 ಎಂಬ ಮಾಃಇತಿ
ಕಾಲಗಣನೆಗೆ ಪೂರಕ. 7ನೆ ಶತಮಾನ.
5. ಮೆಹರೌಲಿ ಸ್ತಂಭ ಶಾಸನ. ದೆಹಲಿ ಬಳಿ. ಗುಪ್ತರ
ದೊರೆ ೆರಡನೆ ಚಂದ್ರಗುಪ್ತನ ಬಗ್ಗೆ. ಸಂಸ್ಕೃತದಲ್ಲಿದೆ. ಇದು ಕಬ್ಬಿಣದಿಂದ ನಿರ್ಮಿತ. ಬಂಗಾಳದ ಬುಡಕಟ್ಟು
ಮತ್ತು ವಹ್ಲಿಕರನ್ನು ಸೋಲಿಸಿದ ಮಾಹಿತಿ.
6. ಉತ್ತರ ಮೇರೂರು ಶಾಸನ. ತಮಿಳುನಾಡು. ಚೋಳದೊರೆ
ಒಂದನೇ ಪರಾಂತಕನ ಕಾಲ; ೧೦ನೆ ಶತಮಾನ. ಚೋಳರ ಗ್ರಾಮಾಡಳಿತದ ಬಗ್ಗೆ ವಿಫುಲ ಮಾಹಿತಿ.
7. ಕುಡಿಮಿಯಾಮಲೈ ಶಾಸನ. ತಮಿಳುನಾಡು. ಪಲ್ಲವರ
ಅರಸು ಒಂದನೇ ಮಹೇಂದ್ರವರ್ಮನಿಂದ ರಚಿತ. ದಕ್ಷಿಣ ಸಂಗೀತಕಲೆಯ ಬೆಳವಣಿಗೆ ಮತ್ತು ಮಹೇಂದ್ರವರ್ಮನ ಸಂಗೀತಾಸಕ್ತಿಯ
ಮಾಹಿತಿ.
8. ಗ್ವಾಲಿಯರ್ ಪ್ರಶಸ್ತಿ ಶಾಸನ. ಮಧ್ಯಪ್ರದೇಶ.
ಪ್ರತಿಹಾರರ ದೊರೆ ರಾಜಭೋಜನ ಬಗ್ಗೆ ಮಾಹಿತಿ. ನಾಸಿಕ್ ಗುಹಾ ಶಾಸನ. ಮಹಾರಾಷ್ಟ್ರ. ಗೌತಮಿ ಬಾಲಾಶ್ರಿಯಿಂದ
ರಚಿತ. ಗೌತಮಿಪುತ್ರ ಶಾತಕರ್ಣಿಯ ವಿಜಯಗಳ ಮಾಹಿತಿ. ಎರಡನೆ ಶತಮಾನ.
9. ಭಾರತದ ಹೊರಗೆ ಏಷ್ಯಾಮೈನರ್ ನಲ್ಲಿ ಸಿಕ್ಕಿರುವ
ಶಾಸನಗಳು; ಭೋಗಜ್ ಕಾಯ್, ಪರ್ಸೆ ಪೋಲೀಸ್ ಮತ್ತು ನಕ್ಸ್ ಎ ರುಸ್ತುಂ ಗಳಲ್ಲಿ ಸಿಕ್ಕಿರುವ ಶಾಸನಗಳಿಂದ
ವೇದಕಾಲದ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಃಇತಿ.
10. ಹಲ್ಮಿಡಿ ಶಾಸನ. ಹಾಸನ ಜಿಲ್ಲೆ. ಕನ್ನಡದ ಮೊದಲ ಶಾಸನವೆಂದು
ಪರಿಗಣನೆ. ಕದಂಬರ ಕಾಲದ ಮಾಹಿತಿ.
ಶಾಸನಗಳ ಮಹತ್ವ:- P.B. ದೇಸಾಯಿ- “ಶಾಸನಗಳಿಲ್ಲದಿದ್ದರೆ
ನಮ್ಮ ಇತಿಹಾಸದ ಅಧ್ಯಯನವು ಕತ್ತಲೆ ಗವಿಯೊಳಗಿನ ಪ್ರಯಾಣದಂತಿರುತ್ತಿತ್ತು”
1.
ಶಾಸನಗಳಿಂದ
ವಂಶಾವಳಿ ಮತ್ತು ಕಾಲಾನುಕ್ರಮಣಿಕೆ ತಿಳಿಯಲು ಸಾಧ್ಯವಿದೆ.
2.
ವಿವಿಧ
ಶಕಗಳ ಮಾಹಿತಿಯ ಕಾರಣ ಕಾಲಗಣನಾ ಶಾಸ್ತ್ರದ ಅಧ್ಯಯನಕ್ಕೆ ಇವು ಪೂರಕವಾಗಿವೆ.
3.
ಸಮಕಾಲೀನ
ಮತ್ತು ನಿರ್ದಿಷ್ಟ ಮಾಹಿತಿ ಒದಗಿಸುವ ಕಾರಣ ನಂಬಲರ್ಹ ಆಧಾರಗಳು.
4.
ದಿಗ್ವಿಜಯಗಳು,
ಯಜ್ಞ-ಯಾಗಾದಿಗಳು, ಪ್ರಮುಖ ಘಟನೆಗಳ ಮಾಹಿತಿ ಇವುಗಳಿಂದ ಲಭ್ಯ.
5.
ರಾಜರುಗಳ
ಅಭಿರುಚಿ ಮತ್ತು ವ್ಯಕ್ತಿತ್ವಗಳೂ ಸಹಾ ತಿಳಿದುಬರುತ್ತವೆ.
6.
ರಾಜ-ಮಹಾರಾಜರು
ಮಾಡಿದ ಅಭಿವೃದ್ಧಿ ಕಾರ್ಯಗಳ ಮಾಹಿತಿ ತಿಳಿದು ಬರುತ್ತದೆ.
7.
ಸಾಮ್ರಾಜ್ಯಗಳ
ಗಡಿಗಳನ್ನು ಗುರ್ತಿಸಲು ಸಾಧ್ಯವಾಗುತ್ತದೆ.
8.
ಸ್ಥಳ
ಮತ್ತು ಅವುಗಳ ಮಹತ್ವದ ಬಗ್ಗೆ ತಿಳಿಸುತ್ತವೆ. ಉದಾ: ಅಶೋಕನ ರುಮಿಂಡೈ ಶಾಸನದಿಂದ ಬುದ್ಧನ ಜನ್ಮಸ್ಥಳದ
ಮಾಃಇತಿ.
9.
ಸಾಮಾಜಿಕ,
ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಮಾಃಇತಿಗಳ ಲಭ್ಯತೆ. ಆಡಳಿತ ವ್ಯವಸ್ಥೆಗಳ ಮಾಹಿತಿಗಳೂ ಲಭ್ಯ.
10. ನಿಖರ ಮಾಹಿತಿ ಒದಗಿಸುತ್ತವೆ ಮತ್ತು ದೀರ್ಘಕಾಲ
ಉಳಿದುಬರುತ್ತವೆ. ಮಾಃಇತಿ ಬದಲಾವಣೆ ಸುಲಭವಾಗಿ ಸಾಧ್ಯವಿಲ್ಲ. V.A. ಸ್ಮಿತ್ “ಶಾಸನಗಳು ನಂಬಿಕಾರ್ಹ
ಆಧಾರಗಳು” ಎಂದಿದ್ದಾರೆ.
11. ಭಾಷಾ ಬೆಳವಣಿಗೆಯ ಅಧ್ಯಯನಕ್ಕೆ ಅವಕಾಶವಿದೆ.
12. ಕಲಾನೈಪುಣ್ಯತೆ ಮತ್ತು ವೈಜ್ಞಾನಿಕ ಬೆಳವಣಿಗೆಯ
ಅಧ್ಯಯನಕ್ಕೂ ಶಾಸನಗಳು ಪೂರಕವಾಗಿವೆ.
ಶಾಸನಗಳ ದೋಷಗಳು:- ಶಾಸನಗಳ ಕೆಲವು ದೋಷಗಳು ಇಂತಿವೆ:
1.
ಬಿರುದುಗಳ
ಪುನರಾವರ್ತನೆ.
2.
ಅಧಿಕಾರವಧಿಯ
ಗೊಂದಲಗಳು.
3.
ಅತಿಯಾದ
ಪ್ರಶಂಸೆ ಮತ್ತು ಉತ್ಪ್ರೇಕ್ಷಿತ ಮಾಃಇತಿಗಳು.
4.
ಸೋಲಿನ
ಮಾಹಿತಿಗಳ ನಿರಾಕರಣೆ.
5.
ನಕಲಿ
ಶಾಸನಗಳ ಸೃಷ್ಠಿ.
6.
ಸ್ಥಳ
ಬದಲಾವಣೆ ಗೊಂದಲಕ್ಕೆ ದಾರಿ.
7. ಶಾಸನಗಳನ್ನು ಓದುವಾಗಿನ ತೊಡಕುಗಳು.
Comments
Post a Comment