ಅಲ್ಲಾವುದ್ದೀನ್ ಖಿಲ್ಜಿಯ ದಿಗ್ವಿಜಯಗಳು & ಸಾಮ್ರಾಜ್ಯ ವಿಸ್ತರಣೆ, 3ನೆ ಸೆಮಿಸ್ಟರ್ ಗಾಗಿ, ಕ.ವಿ, ಧಾರವಾಡ
ಅಲ್ಲಾವುದ್ದೀನನ ದಿಗ್ವಿಜಯಗಳು ಅಥವಾ
ಸಾಮ್ರಾಜ್ಯ ವಿಸ್ತರಣೆ
ಸಾಮ್ರಾಜ್ಯ
ವಿಸ್ತರಣೆಯನ್ನು ಎರಡು ಹಂತಗಳಲ್ಲಿ ಅಧ್ಯಯನ
ಮಾಡಬಹುದು.
1.
ಉತ್ತರ
ಭಾರತ ಮತ್ತು 2. ದಕ್ಷಿಣ ಭಾರತದ ಮೇಲಿನ ವಿಜಯಗಳು.
ಉತ್ತರ ಭಾರತದ ಯುದ್ಧಗಳು
ಗುಜರಾತ್ ೧೨೯೯:- ಗುಜರಾತ್ ಶ್ರೀಮಂತ ಪ್ರಾಂತ್ಯ. ರಾಜಾ ಕರ್ಣದೇವನ
ಆಳ್ವಿಕೆ. ನುಸ್ರತ್ ಕಾನ್ ನೇತೃತ್ವದಲ್ಲಿ ದಾಳಿ. ಕರ್ಣದೇವನ ಪ್ರಬಲ ವಿರೋಧ, ಆದರೂ ಖಿಲ್ಜಿ ಸೈನ್ಯದ
ಗೆಲುವು. ಕರ್ಣದೇವ ಪಲಾಯನ – ದೇವಗಿರಿಗೆ – ತನ್ನ ಮಗಳು ದೇವಲ ದೇವಿಯೊಂದಿಗೆ. ಕರ್ಣನ ರಾಣಿ ಕಮಲಾದೇವಿ
ಸೆರೆ, ದೆಹಲಿಗೆ ರವಾನೆ. ಮುಂದೆ ಅಲ್ಲಾನ ರಾಣಿ. ಗುಜರಾತ್ ಲೂಟಿ, ಅಪಾರ ಸಂಪತ್ತು ವಶ. ನುಸ್ರತ್ ಖಾನ್ ಗುಜರಾತಿನ ಬಂದರು ಕ್ಯಾಂಬೆವರೆಗೆ ಮುನ್ನುಗ್ಗಿದ. ಇಲ್ಲಿಯೇ ’ಕಫೂರ್” ಎಂಬ
ಗುಲಾಮ ನಪುಂಸಕನ ಖರೀದಿ. ೧೦೦೦ ದಿನಾರಗಳಿಗೆ. ಮುಂದೆ ಖಿಲ್ಜಿಯ ಪರಮಾಪ್ತ ಮತ್ತು ದಕ್ಷಿಣದ ದಂಡಯಾತ್ರೆಗಳ ನಾಯಕ.
ರಣಥಂಬೋರ್ ೧೩೦೧:- ರಣಥಂಬೋರ್ ಬಲಿಷ್ಠ ಕೋಟೆ. ರಾಣಾ ಹಮ್ಮೀರದೇವ
ಇದರ ರಾಜ. ನುಸ್ರತ್ ನೇತೃತ್ವದಲ್ಲಿ ಮುತ್ತಿಗೆ. ಹಮ್ಮೀರದೇವನ ಪ್ರಬಲ ವಿರೋಧ. ನುಸ್ರತ್ ಖಾನ್ ಕಲ್ಲಿನ
ಏಟು ತಿಂದು ಮರಣ. ಅಲ್ಲಾ ತಾನೇ ನೇತೃತ್ವ ವಹಿಸಿಕೊಂಡ. ಕುತಂತ್ರ – ರಣಮಲ್ಲನೆಂಬ ದ್ರೋಹಿಯ ಸಹಾಯದಿಂದ
ಕೋಟೆ ಪ್ರವೇಶ. ಕೋಟೆಯ ವಶ – ರಣಮಲ್ಲನ ಕೊಲೆ. ಅಧಿಕಾರಿಯಾಗಿ ಉಲುಗ್ ಖಾನನ ನೇಮಕ.
ಚಿತ್ತೋಡ್ (ಮೇವಾಡದ
ರಾಜಧಾನಿ)
೧೩೦೩:- ರಾಣಾ ರತನ್ ಸಿಂಗ್ ಇಲ್ಲಿನ ರಜಪೂತ ದೊರೆ. ರಾಣಿ ಪದ್ಮಿನಿ ಇವನ ರಾಣಿ
– ಅತ್ಯಂತ ಸೌಂದರ್ಯವತಿ. ಇವಳನ್ನು ಪಡೆಯಲು ಖಿಲ್ಜಿ ದಾಳಿ ಮಾಡಿದ ಎಂದು ಕೆಲವು ಇತಿಹಾಸಕಾರರ ಅಭಿಪ್ರಾಯ.
ಗೋರಾ ಮತ್ತು ಬಾದಲ್ ಎಂಬ ವೀರರಿಂದ ಕೋಟೆಯ ಸಮರ್ಥ ರಕ್ಷಣೆ. ಆದರೂ, ಖಿಲ್ಜಿಗೆ ಗೆಲುವು.
ಖಿಜರ್ ಖಾನ್ ಇಲ್ಲಿನ ಅಧಿಕಾರಿಯಾದ. ಮುಂದೆ ಮಲ್ಲದೇವ ಎಂಬ ರಜಪೂತನನ್ನೇ ನೇಮಿಸಿದ.
ಮಾಳವ ೧೩೦೫:- ಹರಿನಂದನ ಇಲ್ಲಿಯ ರಾಜನಾಗಿದ್ದ. ಖಿಲ್ಜಿಯ ಸೇನಾಪತಿ
ಐನ್ ಉಲ್ ಮುಲ್ಕ್ ದಾಳಿ. ಹರಿನಂದನನ ಸೋಲು. ಮಾಳವ ಖಿಲ್ಜಿಯ ಅಧೀನ; ಉಜ್ಜಯಿನಿ, ಮಾಂಡೊ, ಚಾಂದೇರಿ
ಮತ್ತು ಧರ್ ಮೊದಲಾದ ಪ್ರದೇಶಗಳು ಖಿಲ್ಜಿ ಸಾಮ್ರಾಜ್ಯಕ್ಕೆ ಸೇರ್ಪಡೆ.
ಸಿವಾಣ ೧೩೦8:- ಸಿತಳದೇವ ಇಲ್ಲಿನ ದೊರೆ.
ಖಿಲ್ಜಿಯ ಮುತ್ತಿಗೆಯನ್ನು ಸಮರ್ಥವಾಗಿ ಎದುರಿಸಿದ. ಘೋರ
ಯುದ್ಧವೆ ನಡೆಯಿತು. ಆದರೂ, ಸಿತಳದೇವನ
ಸೋಲು. ಮಲಿಕ್ ಕಮಲುದ್ದೀನ್ ಇಲ್ಲಿನ
ಅಧಿಕಾರಿಯಾದ.
ಜಾಲೋರ್ ೧೩೧೧:- ಕನೇರದೇವ ಇಲ್ಲಿನ ದೊರೆ ಆಗಿದ್ದ. ಅಲ್ಲಾ ತನ್ನ
ಸಾರ್ವಭೌಮತ್ವ ಒಪ್ಪುವಂತೆ ಆದೇಶ. ಕನೇರದೇವನ ಶರಣಾಗತಿ; ಆದರೆ, ಮುಸ್ಲಿಂರನ್ನು ಯುದ್ದದಲ್ಲಿ ಎದುರಿಸುವುದಾಗಿ
ಘೋಷಣೆ. ಖಿಲ್ಜಿಯ ಸೈನ್ಯ ಮುತ್ತಿಗೆ ಮತ್ತು ಅವನ ಮರಣ.
ದಕ್ಷಿಣದ ದಂಡಯಾತ್ರೆಗಳು.
ದಂಡಯಾತ್ರೆಯ ಕಾರಣಗಳು
a.
ದಕ್ಷಿಣದ
ಹಿಂದೂ ಅರಸರ ಅನೈಕ್ಯತೆ.
b.
ದಕ್ಷಿಣದ
ಸಂಪತ್ತಿನ ಆಸೆ.
c.
ಸಾಮ್ರಾಜ್ಯ
ವಿಸ್ತರಣೆಯ ನೀತಿ.
d.
ಹೆಚ್ಚುತ್ತಿರುವ
ಸೈನಿಕ ವೆಚ್ಚಕ್ಕೆ ಹಣ ಕ್ರೋಢೀಕರಣ.
e.
ಇಸ್ಲಾಂ
ಪ್ರಚಾರ.
ದೇವಗಿರಿಯ ವಿಜಯ ೧೩೦೮:-
ಕಾರಣಗಳು & ಘಟನೆಗಳು: ರಾಮಚಂದ್ರದೇವ ವಾರ್ಷಿಕ ಕಪ್ಪಕಾಣಿಕೆ ನಿಲ್ಲಿಸಿದ್ದ.
ಗುಜರಾತದ ಕರ್ಣದೇವನಿಗೆ ಆಶ್ರಯ ನೀಡಿದ್ದ. ದೇವಳದೇವಿ ಮತ್ತು ಶಂಕರದೇವನ ಮದುವೆಯ ಯತ್ನ. ಮಲಿಕ್ ಕಫೂರ್ ನೇತೃತ್ವದಲ್ಲಿ ದಾಳಿ. ರಾಮಚಂದ್ರದೇವನ ವೀರೋಚಿತ ಹೋರಾಟ; ಪ್ರಬಲ ಮುಸ್ಲೀಂ ಸೈನ್ಯದಿಂದ
ಸೋಲು. ಶರಣಾಗತಿ. ಖಿಲ್ಜಿಯ ಸಾರ್ವಭೌಮತ್ವ ಸಂಪೂರ್ಣ
ಒಪ್ಪಿಕೊಂಡ. ದೇವಳದೇವಿಯನ್ನು ದೆಹಲಿಗೆ ರವಾನೆ. ಕಿಜರ್ ಖಾನನಿಗೆ ಕೊಟ್ಟು ವಿವಾಹ.
ದೇವಗಿರಿಯ ಮೇಲೆ ಎರಡನೆ ದಾಳಿ ೧೩೧೩:-
ರಾಮಚಂದ್ರದೇವನ ಮರಣಾನಂತರ ಮಗ ಶಂಕರದೇವನು ಸ್ವತಂತ್ರನಾಗಿ ವರ್ತಿಸತೊಡಗಿದ. ಕಪ್ಪಕಾಣಿಕೆ ಕೊಡುವುದನ್ನು
ನಿಲ್ಲಿಸಿದ್ದ. ಕಾರಣ, ಕಫೂರ್ ನೇತೃತ್ವದಲ್ಲಿ ದಾಳಿ. ಶಂಕರದೇವ ಯುದ್ಧದಲ್ಲಿ ಮರಣ. ದೇವಗಿರಿ ಖಿಲ್ಜಿಯ
ಸಾಮ್ರಾಜ್ಯದಲ್ಲಿ ವಿಲೀನ.
ವಾರಂಗಲ್ ವಿಜಯ ೧೩೦೯:-
ಕಾಕತೀಯರ ಪ್ರತಾಪರುದ್ರದೇವ ಇಲ್ಲಿಯ ರಾಜ. ೧೩೦೩ ರಲ್ಲಿ ಖಿಲ್ಜಿಯ ಸೈನ್ಯ ಇವನಿಂದ ಸೋತಿತ್ತು. ಸೋಲಿನ ಸೇಡು, ಸಾಮ್ರಾಜ್ಯ ವಿಸ್ತರಣೆ ಮತ್ತು ಅಲ್ಲಿನ ಸಂಪತ್ತನ್ನು
ದೋಚಲು ಮಲಿಕ್ ಕಫೂರ್ ನೇತೃತ್ವದಲ್ಲಿ ದಾಳಿ. ದಾಳಿಗೆ
ದೇವಗಿರಿಯ ರಾಮಚಂದ್ರದೇವನ ಸಹಾಯ. ಪ್ರತಾಪನ ಸೋಲು.
ಅಪಾರ ಸಂಪತ್ತು ಖಿಲ್ಜಿಯ ವಶ ಮತ್ತು ಸಾರ್ವಭೌಮತ್ವ
ಒಪ್ಪಿಕೊಂಡ.
ದ್ವಾರಸಮುದ್ರದ ವಿಜಯ ೧೩೧೦:-
೩ನೆ ವೀರ ಬಲ್ಲಾಳ ಇಲ್ಲಿನ ದೊರೆ. ದಾಳಿಯ ಕಾಲಕ್ಕೆ ಮಧುರೆಯಲ್ಲಿದ್ದ. ಪಾಂಡ್ಯ ರಾಜ್ಯದ ಅಂತಃಕಲಹ ಬಗೆಹರಿಸುವಲ್ಲಿ
ನಿರತ. ಕಫೂರನ ದಾಳಿಯ ಸುದ್ದಿ ತಿಳಿದು ರಾಜಧಾನಿಗೆ ಹಿಂತಿರುಗಿ ಯುದ್ಧ ಸಿದ್ಧತೆ. ಸಮಯಾವಕಾಶದ ಕೊರತೆಯ
ಕಾರಣ; ಕಫೂರನೊಂದಿಗೆ ಒಪ್ಪಂದ. ಅಪಾರ ಸಂಪತ್ತು ನೀಡಿ ಸಾರ್ವಭೌಮತ್ವ ಒಪ್ಪಿಕೊಂಡ.
ಮಧುರೆಯ ವಿಜಯ ೧೩೧೧:-
ಪಾಂಡ್ಯರ ಆಡಳಿತ. ವೀರ ಮತ್ತು ಸುಂದರ ಪಾಂಡ್ಯರ ನಡುವೆ
ಅಂತಃಕಲಹ. ವೀರ ಪಾಂಡ್ಯ ಅಧಿಕಾರಕ್ಕೆ. ಸುಂದರ ಪಾಂಡ್ಯ ಮಲಿಕ್ ಕಫೂರನ ನೆರವು ಯಾಚಿಸಿದ. ಕಫೂರ್ ಮಧುರೆಯನ್ನು ಮುತ್ತಿದ; ವೀರ ಪಾಂಡ್ಯ ಸೋತು ಪಲಾಯನ.
ಮಧುರೆಯ ಲೂಟಿ; ಹಿಂದೂ ಕಲೆ ಮತ್ತು ಸಂಸ್ಕೃತಿಗಳ ನಾಶ.
ಈ ದಾಳಿಯಲ್ಲಿ ಹೊಯ್ಸಳರ ಸೈನ್ಯದ ನೆರವು ಪಡೆದಿದ್ದ. ಕಫೂರನಿಗೆ ಸು. ೫೧೨ ಆನೆಗಳು, ೫೦೦೦ ಕುದುರೆಗಳು
ಮತ್ತು ೫೦೦ ಮಣಗಳಷ್ಟು ಸಂಪತ್ತು ಲಭಿಸಿತು. ಅಮೀರ್ ಖುಸ್ರೋ ಪ್ರಕಾರ ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ
ಅತಿ ಹೆಚ್ಚು ಲೂಟಿಯಾಗಿತ್ತು.
ತನ್ನ
ದಿಗ್ವಿಜಯಗಳಿಂದ ಕುತುಬುದ್ದೀನ್ ಐಬಕ್ ಸ್ಥಾಪಿಸಿದ್ದ ದೆಹಲಿ ಸುಲ್ತಾನರ ರಾಜ್ಯವನ್ನು ಇವನು “ಸಾಮ್ರಾಜ್ಯ”
ವನ್ನಾಗಿಸಿದ.
Super
ReplyDelete