ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ

ಭಾರತದ ಭೌಗೋಳಿಕ ಲಕ್ಷಣಗಳು.
Geography of India.

ಭಾರತದ ಇತಿಹಾಸದ ಮೇಲೆ ಅದರ ಪ್ರಭಾವ.

   ಯಾವುದೇ ದೇಶದ ಇತಿಹಾಸವು ಆಯಾ ದೇಶದ ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಭೌಗೋಳಿಕ ಅಂಶಗಳು ಮಾನವನ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುತ್ತವೆ.

ಭೌಗೋಳಿಕ ಅಂಶಗಳು

ಪರ್ವತಗಳು, ನದಿಗಳು, ಬೆಟ್ಟ-ಗುಡ್ಡಗಳು, ಅರಣ್ಯಗಳು, ಹವಾಗುಣ, ಭೂಗುಣ ಇತ್ಯಾದಿ.

ಇವುಗಳು ಮನುಷ್ಯನ ಮೇಲೆ ತಮ್ಮ ಪ್ರಭಾವ ಬೀರುವುದೇಕೆ?

ಮಾನವ ಪ್ರಕೃತಿಯ ಶಿಶು; ಕಾರಣ ಅವನ ಮೇಲೆ ಪ್ರಕೃತಿಯ ಪ್ರಭಾವ ಇದ್ದೇ ಇರುತ್ತದೆ. ಅಂತೆಯೇ, ಇತಿಹಾಸದ ಹುಟ್ಟು, ಬೆಳವಣಿಗೆ ಮತ್ತು ನಿರಂತರತೆಗಳು ಭೌಗೋಳಿಕ ಅಂಶಗಳಿಂದ ಪ್ರಭಾವಿತವಾಗಿರುತ್ತವೆ. ಜನರ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಅಂಶಗಳಿಂದ ಪ್ರಭಾವಿತ. ಎಲ್ಲಾ ನಾಗರೀಕತೆಗಳು ನದಿಗಳ ತೀರಗಳಲ್ಲಿಯೇ ಹುಟ್ಟಿ ಬೆಳೆದಿವೆ.
ಉದಾ:- ಈಜಿಪ್ಟ್ ನಾಗರೀಕತೆ.
ಹರಪ್ಪ ನಾಗರೀಕತೆ.
ಇಂಗ್ಲೆಂಡ್ ಸುದೀರ್ಘ ಸಮುದ್ರ ತೀರ ಹೊಂದಿರುವ ಕಾರಣ ನೌಕಾಯಾನದಲ್ಲಿ ಶ್ರೇಷ್ಠತೆ ಸಾಧಿಸಿತು; ಜಗತ್ತಿನ ಮೇಲೆ ಒಡೆತನ ಸಾಧಿಸಿತು.

ಭೂಗೋಳದ ಅಧ್ಯಯನ ಏಕೆ?

ಇತಿಹಾಸವು ಭೂಗೋಳದ ನಿರ್ಮಾಣ. ಭೂಗೋಳವನ್ನು ತಿಳಿಯದೇ ಅದರ ಇತಿಹಾಸ ಅಧ್ಯಯನ ಅಪೂರ್ಣ; ಅಸಾಧ್ಯ. ಭೂಗೋಳವಿಲ್ಲದೇ ಇತಿಹಾಸವಿಲ್ಲ. ಕಾರಣ, ಭೂಗೋಳವು ಐತಿಹಾಸಿಕ ಜ್ಞಾನದ ತಳಹದಿಯಾಗಿದೆ.

ಭೂಗೋಳದ ಮಹತ್ವ; ವಿದ್ವಾಂಸರ ಅಭಿಪ್ರಾಯಗಳು:-

ಇತಿಹಾಸವು ಎರಡು ಮಹಾನ್ ಶಕ್ತಿಗಳ ನಿರ್ಮಾಣ; ವ್ಯಕ್ತಿ ಮತ್ತು ಪರಿಸರ.” ಮಹಾನ್ ವ್ಯಕ್ತಿಗಳ ಜೀವನವು ಅವರು ಹುಟ್ಟಿ ಬೆಳೆದ ಪರಿಸರದಿಂದ ಪ್ರಭಾವಿತ.

ರಿಚರ್ಡ್ ಹಕ್ಲೂಟ್:- “ಭೂಗೋಳ ಮತ್ತು ಕಾಲಗಣನೆಗಳು ಇತಿಹಾಸದ ಎರಡು ಕಣ್ಣುಗಳಿದ್ದಂತೆ

ಡಾ. ರಾಯ್ ಚೌಧರಿ:- “ಭಾರತದ ಚರಿತ್ರೆಯು ಪ್ರಪಂಚದ ಇತರೆ ರಾಷ್ಟ್ರಗಳ ಚರಿತ್ರೆಯಂತೆ ಅದರ ಭೌಗೋಳಿಕ ಅಂಶಗಳಿಂದ ಬಹುವಾಗಿ ಪ್ರಭಾವಿಸಲ್ಪಟ್ಟಿದೆ.”

ಭಾರತದ ವಿವಿಧ ಹೆಸರುಗಳು ಮತ್ತು ಭೂಗೋಳದ ಪ್ರಭಾವ.

ಭಾರತ: ಭರತ ಚಕ್ರವರ್ತಿ ಆಳಿದ ಕಾರಣ.

ಜಂಬೂದ್ವೀಪ:- ಬೌದ್ಧ ದಾಖಲೆಗಳಲ್ಲಿ.

ಹಿಂದೂಸ್ತಾನ:- ಪರ್ಷಿಯನ್ನರು ಸಿಂಧೂ ನದಿಯನ್ನುಹಿಂದೂನದಿ ಎಂದು ಕರೆದರು; ಆದ್ದರಿಂದ, ಹಿಂದೂಸ್ಥಾನ ಎಂಬ ಹೆಸರು; ಹಿಂದೂಧರ್ಮ.

ಇಂಡಿಯಾ:- ಸಿಂಧೂ ನದಿಯನ್ನು ಗ್ರೀಕರುಇಂಡಸ್ಎಂದು ಕರೆದ ಕಾರಣ.

ಭಾರತವು ಭೂಗೋಳದ ಯಾವ ಭಾಗದಲ್ಲಿದೆ?

ಪೂರ್ವಾರ್ಧ ಗೋಳದಲ್ಲಿದೆ. ಏಷ್ಯಾದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ಹಿಮಾಲಯ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರಗಳು ಇವೆ. ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರಗಳು ಇವೆ.

ನೆರೆ ರಾಷ್ಟ್ರಗಳು:- ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ, ನೇಪಾಳ, ಬೂತಾನ್, ಬಾಂಗ್ಲಾ ಮತ್ತು ಶ್ರೀಲಂಕಾಗಳು.

ಪೂರ್ವ ರೇಖಾಂಶ:- ೬೮. ಮತ್ತು ೯೭.೨೫

ಉತ್ತರ ಅಕ್ಷಾಂಶ:- . ಮತ್ತು ೩೭.  ಡಿಗ್ರಿಗಳ ನಡುವೆ ಇದೆ.

ವಿಸ್ತೀರ್ಣ:- ೩೨,೮೭,೨೬೩ .ಕಿ.ಮೀ.

ಉತ್ತರ-ದಕ್ಷಿಣವಾಗಿ ೩೨೧೪ ಕಿ.ಮೀ. ಉದ್ದ ಪೂರ್ವ-ಪಶ್ಚಿಮವಾಗಿ ೨೯೮೦ ಕಿಮೀ. ಅಗಲ ಇದೆ

ಪ್ರಾಚೀನ ಭಾರತದ ಭೌಗೋಳಿಕ ವ್ಯಾಪ್ತಿ

ಪ್ರಾಚೀನ ಭಾರತದ ಭೌಗೋಳಿಕ ವ್ಯಾಪ್ತಿಯು ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಪ್ರಸ್ತುತ ಭಾರತ, ಬಾಂಗ್ಲಾದೇಶ ಮತ್ತು ಬರ್ಮಾಗಳನ್ನು ಒಳಗೊಂಡಿತ್ತು. ಭಾರತದ ಭೌಗೋಳಿಕ ವೈಶಾಲ್ಯತೆ ಮತ್ತು ಅದರ ವಿಭಿನ್ನ ಸಂಸ್ಕೃತಿಗಳ ಕಾರಣ ಅದಕ್ಕೆಉಪಖಂಡಎಂದು ಹೆಸರು ಬಂದಿದೆ.

ಭೌಗೋಳಿಕ ವಿಭಾಗಗಳು:-

ಅಧ್ಯಯನದ ದೃಷ್ಟಿಯಿಂದ ಐದು ಪ್ರಮುಖ ವಿಭಾಗಗಳನ್ನು ಮಾಡಲಾಗಿದೆ.

ಹಿಮಾಲಯ ಪರ್ವತ ಶ್ರೇಣಿಗಳು.

ಉತ್ತರದ ನದಿ ಬಯಲುಗಳು (ಸಿಂಧೂಗಂಗಾ ನದಿಗಳು).

ದಖನ್ ಪ್ರಸ್ಥಭೂಮಿ.

ಘಟ್ಟ ಪ್ರದೇಶಗಳುಪೂರ್ವ ಮತ್ತು ಪಶ್ಚಿಮ.

ಕರಾವಳಿ ಪ್ರದೇಶ.

. ಹಿಮಾಲಯ ಪರ್ವತ ಶ್ರೇಣಿಗಳು.

ಹಿಮಾಲಯವೆಂದರೆ ಹಿಮದಿಂದ ಆವೃತವಾಗಿರುವುದು. ಪೂರ್ವದ ಅಸ್ಸಾಂನಿಂದ ಪಶ್ಚಿಮದ ಹಿಂದೂಕುಷ್ ಬೆಟ್ಟಗಳವರೆಗೆ ಹರಡಿದೆ. ಒಟ್ಟು ೨೪೦೦ ಕಿ.ಮೀ ಉದ್ದವಿದೆ. ಉತ್ತರ-ದಕ್ಷಿಣವಾಗಿ ೨೮೦ ರಿಂದ ೩೨೦ ಕಿ.ಮೀ ಅಗಲವಿದೆ. ಉನ್ನತ ಶಿಖರಗಳಿಂದ ಕೂಡಿದ್ದು, ಶಿಖರಗಳು ಸಮುದ್ರ ಮಟ್ಟದಿಂದ ಸರಾಸರಿ  ೮೮೦೦ ಮೀ. ಗಳಷ್ಟು ಎತ್ತರ ಇವೆ.

ಹಿಮಾಲಯ ಶ್ರೇಣಿಗಳ ಮಹತ್ವ.

ಪ್ರತ್ಯೇಕತೆ- ವಿಶಿಷ್ಟ ಸಂಸ್ಕೃತಿ ಬೆಳವಣಿಗೆಗೆ ಕಾರಣ.

ರಕ್ಷಣೆಉತ್ತರದ ಆಕ್ರಮಣಗಳು ಮತ್ತು ಶೀತ ಮಾರುತಗಳಿಂದ.

ನದಿಗಳ ಉಗಮ ಸ್ಥಾನಗಂಗಾ, ಸಿಂಧೂ, ಬ್ರಹ್ಮಪುತ್ರ ನದಿಗಳಿಗೆ.

ಆದ್ಯಾತ್ಮಿಕ ಕೇಂದ್ರಪವಿತ್ರ ಕ್ಷೇತ್ರಗಳು.

ಆದರೆ, ವಾಯುವ್ಯದಿಂದ ಪರಕೀಯರ ದಾಳಿಗಳಿಗೆ ಅವಕಾಶ! ಖೈಬರ್, ಖುರ್ರಂ, ಬೋಲಾನ್, ತೋಚಿ ಮತ್ತು ಗೋಮಾಲ್ ಕಣಿವೆಗಳ ಮೂಲಕ.

. ಉತ್ತರದ ನದಿಬಯಲುಗಳು
ಸಿಂಧೂಗಂಗಾ ನದಿಗಳ ನಡುವಣ ಪ್ರದೇಶ.

ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ನಡುವಣ ಪ್ರದೇಶ. ಅತ್ಯಂತ ಫಲವತ್ತಾಗಿದೆ. ಪೂರ್ವದ ಅಸ್ಸಾಂನಿಂದ ಪಶ್ಚಿಮದ ಸುಲೇಮಾನ್ ಬೆಟ್ಟಗಳ ತನಕ ಹರಡಿದೆ. ಪೂರ್ವ-ಪಶ್ಚಿಮವಾಗಿ ಸು. ೨೫೦೦ ಕಿ.ಮೀ ಉದ್ದವಿದೆ. ಉತ್ತರ-ದಕ್ಷಿಣವಾಗಿ ೨೫೦ ರಿಂದ ೩೦೦ ಕಿ.ಮೀ. ಅಗಲವಾಗಿದೆ. ಆರ್ಯಾವರ್ತ ಎಂದೂ ಕರೆಯುವರು.

ಉತ್ತರದ ನದಿಬಯಲುಗಳ ಮಹತ್ವ.

ನಾಗರೀಕತೆ-ಸಂಸ್ಕೃತಿಗಳ ಉಗಮಸಿಂಧೂ ನಾಗರೀಕತೆ, ವೈದಿಕ ಸಂಸ್ಕೃತಿ. ಸಾಮ್ರಾಜ್ಯಗಳ ಉಗಮಮಗಧ, ಮೌರ್ಯ, ಕುಶಾಣ, ಗುಪ್ತ ಮತ್ತು ವರ್ಧನ ಇತ್ಯಾದಿ. ವಿದೇಶಿಯರ ದಾಳಿಗಳು - ಅತ್ಯಂತ ಶ್ರೀಮಂತವಾದ ಕಾರಣ. ನಿರಂತರ ಯುದ್ಧಗಳುವಿಶಾಲವಾದ ಬಯಲುಗಳಿರುವ ಕಾರಣ. ಕಲೆ-ಸಾಹಿತ್ಯಗಳ ತವರುಗಾಂಧಾರ, ಮಥುರಾ, ನಾಗರ ಕಲಾಶೈಲಿಗಳು; ಅಪಾರವೈದಿಕ ಸಾಹಿತ್ಯ.

. ದಖನ್ ಪ್ರಸ್ಥಭೂಮಿ.

ವಿಂಧ್ಯ ಮತ್ತು ಸಾತ್ಪುರ ಬೆಟ್ಟಗಳಿಂದ ಪ್ರತ್ಯೇಕಗೊಂಡ (ಉತ್ತರ ಭಾರತದಿಂದ) ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಣ ವಿಶಾಲ ಬಯಲು ಪ್ರದೇಶ. ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೆ ತ್ರಿಕೋಣಾಕಾರದಲ್ಲಿ ವಿಸ್ತರಿಸಿದೆ. ಪಶ್ಚಿಮದಿಂದ ಪೂರ್ವದ ಕಡೆಗೆ ಇಳಿಜಾರಾಗಿದೆ. ಉತ್ತರದ ಬಯಲು ಪ್ರದೇಶಗಳಿಗಿಂತ ಪ್ರಾಚೀನವಾದ ಭೂಖಂಡವಾಗಿದೆ.

ಪ್ರಭಾವ (ಮಹತ್ವ)

ಶ್ರಮಜೀವನ:- ಉತ್ತರದಷ್ಟು ಫಲವತ್ತಲ್ಲದ ಕಾರಣ ದಖನ್ ಜನರು ಹೆಚ್ಚು ಶ್ರಮಜೀವಿಗಳಾದರು. ಮಿಲಿಟರಿ ಪ್ರಾಬಲ್ಯ:- ದಟ್ಟಕಾಡು, ಬೆಟ್ಟ-ಗುಡ್ಡಗಳು, ನದಿಬಯಲುಗಳು ಮತ್ತು ವಿಶಾಲ ಬಯಲುಗಳು ಅನೇಕ ರಾಜ ಮನೆತನಗಳು ಹುಟ್ಟಿಬರಲು ಕಾರಣವಾದವು. ಸಂಪತ್ತಿನ ಶೇಖರಣೆ:- ಉತ್ತರದಂತೆ ವಿದೇಶೀ ದಾಳಿಗಳು ಇಲ್ಲದ ಕಾರಣ ಅಪಾರ ಸಂಪತ್ತು ಶೇಖರಣೆ ಆಯಿತು. ಗಟ್ಟಿ ಬೆಣಚುಕಲ್ಲು ಶಿಲಾಯುಗ ಸಂಸ್ಕೃತಿ ಮತ್ತು ಮೃದು ಕಲ್ಲು ನೂತನ ಕಲಾಶೈಲಿಗಳ ಬೆಳವಣಿಗೆಗೆ ಕಾರಣವಾಯಿತು.

. ಪೂರ್ವ ಮತ್ತು ಪಶ್ಚಿಮ ಘಟ್ಟಗಳು.

ದಖನ್ ಪ್ರಸ್ಥಭೂಮಿಯ ಎರಡೂ ಅಂಚುಗಳಲ್ಲಿ ಕರಾವಳಿ ಪ್ರದೇಶಗಳ ನಡುವೆ ಘಟ್ಟಪ್ರದೇಶಗಳು ನೆಲೆಸಿವೆ. ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳಷ್ಟು ಎತ್ತರವಾಗಿಲ್ಲ; ಸರಾಸರಿ ೭೦೦ ಮೀ. ಗಳಷ್ಟು ಮಾತ್ರ. ಪಶ್ಚಿಮ ಘಟ್ಟಗಳು ಸಮುದ್ರಮಟ್ಟಕ್ಕಿಂತ ಸರಾಸರಿ ೯೨೫ ಮೀ೨೪೫೦ ಮೀ. ಗಳಷ್ಟು ಎತ್ತರ ಇವೆ. ಪಶ್ಚಿಮ ಘಟ್ಟಗಳು ದಟ್ಟವಾದ ಕಾಡುಗಳಿಂದ ಕೂಡಿದ್ದು, ಬೆಲೆಬಾಳುವ ಅರಣ್ಯ ಸಂಪತ್ತು ಮತ್ತು ಖನಿಜ ಸಂಪತ್ತಿನಿಂದ ಕೂಡಿವೆ.

ಮಹತ್ವ:- ಭಾರತದ ಒಳಭಾಗವನ್ನು ಪ್ರವೇಶಿಸದಂತೆ ಬಹುಕಾಲದವರೆಗೆ ವಿದೇಶೀಯರಿಗೆ ತಡೆ ಒಡ್ಡಿದ್ದವು. ಪಶ್ಚಿಮ ಘಟ್ಟಗಳು ಅರಣ್ಯ ಸಂಪತ್ತು ಮತ್ತು  ಖನಿಜ ಸಂಪತ್ತುಗಳ ನೆಲೆಗಳಾಗಿವೆ. ನದಿಗಳ ಉಗಮ ಸ್ಥಾನಗಳಾಗಿದ್ದು, ದಖನ್‌ ಪ್ರಸ್ಥಭೂಮಿಗೆ ನೀರುಣಿಸುತ್ತವೆ. ಈ ನದಿಬಯಲುಗಳಲ್ಲಿ ರಾಜಮನೆತನಗಳು ಹುಟ್ಟಿ ಬೆಳೆಯಲು ಆ ಮೂಲಕ ಕಾರಣವಾದವು.

. ಕರಾವಳಿ ತೀರಗಳು.

ಭಾರತದ ಪೂರ್ವ, ದಕ್ಷಿಣ ಮತ್ತು ಪಶ್ಚಿಮದ ಗಡಿಗಳು ಜಲಗಡಿಗಳಿಂದ ಕೂಡಿದೆ. ಭಾರತವು ಸು. ೭೫೧೪ ಕಿ ಮೀ. ಗಳಷ್ಟು (ದ್ವೀಪಗಳೂ ಸೇರಿದಂತೆ) ಕರಾವಳಿ ತೀರ ಹೊಂದಿದೆ. ಪೂರ್ವದ ತೀರವನ್ನು ಕೋರಮಂಡಲ ಎನ್ನುವರು. ಪಶ್ಚಿಮದ ತೀರವನ್ನು ಮಲಬಾರ್‌ -ಕೊಂಕಣ ಎಂದು ಕರೆಯುವರು. ತೀರಗಳು ಸ್ವಾಭಾವಿಕ ಬಂದರುಗಳಿಂದ ಕೂಡಿವೆ.

ಮಹತ್ವ ಅಥವಾ ಪ್ರಭಾವ

ಪ್ರಾಚೀನ ಕಾಲದಿಂದಲೂ ಬಂದರುಗಳ ಮೂಲಕ ವಿದೇಶೀ ವ್ಯಾಪಾರ ನಡೆಯುತ್ತಿತ್ತು.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources