ಇತಿಹಾಸದ ವಿವಿಧ ನಿರೂಪಣೆಗಳು- Definitions of History.
ಇತಿಹಾಸದ ನಿರೂಪಣೆಗಳು
“ಜೀವನವೇ ಇತಿಹಾಸ”
ಎಂಬುದೊಂದು ಸರಳ ಆದರೆ ವಿಶಾಲ ವ್ಯಾಪ್ತಿಯ ಅರ್ಥವುಳ್ಳ ನಿರೂಪಣೆ.
ಸಂಸ್ಕೃತದ ನಿರೂಪಣೆಯೊಂದು
“ಧರ್ಮ ಅರ್ಥ ಕಾಮ ಮೋಕ್ಷಾಣಾಂ ಉಪದೇಶ ಸಮನ್ವಿತಾಂಪೂರ್ವವೃತ್ತಂ ಕಥಾಯುಕ್ತಂ ಇತಿಹಾಸ ಪ್ರಚಕ್ಷತೆ”
ಎಂದಿದೆ.
ಎರೊಡಟಾಸ್:
ಸಾಮಾನ್ಯ ಶಕ ಪೂರ್ವ 484-424; ಗ್ರೀಕ್. ಇತಿಹಾಸದ ಪಿತಾಮಹ. “ಮುಂದಿನ ಪೀಳಿಗೆಯು ನೆನಪಿಡಬೇಕಾದ
ಮಹಾನ್ ವೀರರ ಅಥವಾ ಮಹತ್ವಪೂರ್ಣ ಘಟನೆಗಳ ದಾಖಲೆಯೇ ಇತಿಹಾಸ”
ಡಯೋನೀಸಿಯಸ್:
ಗ್ರೀಕ್: “ನಿದರ್ಶನಗಳ ಮೂಲಕ ತತ್ವಶಾಸ್ತ್ರ ಅಥವಾ ನೀತಿಶಾಸ್ತ್ರವನ್ನು ಹೇಳಿಕೊಡುವುದೇ ಇತಿಹಾಸ”
ಅರಿಸ್ಟಾಟಲ್:
ಗ್ರೀಕ್: “ಬದಲಾಗದ ಗತಕಾಲದ ವೃತ್ತಾಂತವೇ ಇತಿಹಾಸ”
ಎಡ್ವರ್ಡ್ ಫ್ರೀಮನ್:
ಆಂಗ್ಲ: “ಭೂತಕಾಲದ ರಾಜಕೀಯವೇ ವರ್ತಮಾನದ ಇತಿಹಾಸ & ಇಂದಿನ ರಾಜಕೀಯವೇ ಮುಂದಿನ ಇತಿಹಾಸ”
Past
politics is the present history and present politics will be future history.
ಸಂಕುಚಿತವಾದ
ನಿರೂಪಣೆ ಎನಿಸಿದೆ.
ಥಾಮಸ್ ಕಾರ್ಲೈಲ್:
ಆಂಗ್ಲ: “ವ್ಯಕ್ತಿಗಳ ಜೀವನ ಚರಿತ್ರೆಯೇ ಇತಿಹಾಸ”
ಕಾರ್ಲ್ ಮಾರ್ಕ್ಸ್:
ಜರ್ಮನಿ: 1818-1883: “ಉಳ್ಳವರ ಮತ್ತು ಇಲ್ಲದವರ ನಡುವಿನ ಸಂಘರ್ಷವೇ ಇತಿಹಾಸ”
ಜಾದೂನಾಥ್ ಸರ್ಕಾರ್:
ಭಾರತ: 1870-1958: “ಇತಿಹಾಸ ಮಾನವನ ಎಲ್ಲಾ ಅನುಭವಗಳನ್ನು, ನಡವಳಿಗಳನ್ನು, ಧರ್ಮ, ನಂಬಿಕೆ, ರೀತಿ-ನೀತಿ,
ಮತ್ತು ಎಲ್ಲಾ ಉದಾತ್ತ ಚಿಂತನೆಗಳನ್ನೂ ಒಳಗೊಂಡಿರುತ್ತದೆ”
ಅರ್ನಾಳ್ಡ್
ಟಾಯನ್ಬಿ: ಆಂಗ್ಲ: “ವಿವಿಧ ದೇಶಗಳ ಇತಿಹಾಸ ಅಥವಾ
ವ್ಯಕ್ತಿಗಳ ಜೀವನ ಚರಿತ್ರೆಯಲ್ಲ; ಅದು ನಾಗರೀಕತೆಗಳ ಏಳು-ಬೀಳುಗಳ ಕಥೆ”
ಜವಾಹರಲಾಲ್
ನೆಹರು: “ಭಾರತ: ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ.” History
is the story of man from barbarism to civilization
F.G ಫಿಯರ್ಸ್:
“ಯುಗ-ಯುಗದಲ್ಲಿ ನಡೆದ ಮಾನವನ ಹೋರಾಟವೇ ಇತಿಹಾಸ” History is the struggle of man through
the ages.
ಮೈಟ್ ಲ್ಯಾಂಡ್:
“ಮಾನವ ಹೇಳಿದ್ದು, ಮಾಡಿದ್ದು ಮತ್ತು ಆಲೋಚಿಸಿದ್ದೆಲ್ಲವೂ ಇತಿಹಾಸ”
ಫಿನ್ಲೆ: “ಘಟನೆಗಳ
ನಿರಂತರ ಸರಮಾಲೆಯೇ ಇತಿಹಾಸ”
R.G. ಕಾಲಿಂಗ್
ವುಡ್: “ಇತಿಹಾಸಕಾರ ತನಗೆ ಆಸಕ್ತಿ ಇರುವ ವಿಷಯದ ಕುರಿತು ಸಾಕ್ಷ್ಯಾಧಾರಗಳ ಸಹಿತ ಅಧ್ಯಯನ ಮಾಡಿ ಬರೆದಿರುವುದೇ
ಇತಿಹಾಸ”
C.H. ಕಾರ್: “ಇತಿಹಾಸವು ದೃಡಪಡಿಸಬಲ್ಲ ವಾಸ್ತವಾಂಶಗಳ ವಿವರಣೆ”
Comments
Post a Comment