Battle of Buxar ಬಕ್ಸಾರ್ ಕದನ - 1764
ಬಕ್ಸಾರ್ ಕದನ ೧೭೬೪
• ಮೀರ್ ಖಾಸೀಂ, ಶೂಜ ಉದ್ ದೌಲ್ ಮತ್ತು ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ನಡುವೆ.
• ಕೆಲವು ಪೂರಕ ಮಾಹಿತಿಗಳು.
• ಬಕ್ಸಾರ್ - ಇದು ಪಾಟ್ನಾದಿಂದ (ಬಿಹಾರ) ಸು. ೧೮೦ ಕಿ.ಮೀ. ದೂರದಲ್ಲಿರುವ ಪ್ರದೇಶ.
• ಅಂದಿಗೆ ಇದೊಂದು ವ್ಯಾಪಾರಿ ಕೇಂದ್ರ ಮತ್ತು ಸಣ್ಣ ಕೋಟೆಯೊಂದರಿಂದ ಕೂಡಿತ್ತು.
• ಗಂಗಾನದಿಯ ದಡದಲ್ಲಿದೆ.
ಸ್ವಲ್ಪ ಹಿನ್ನೆಲೆ. . .
• ಪ್ಲಾಸಿ ಕದನಾನಂತರ ಮೀರ್ ಜಾಫರನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಗಿತ್ತು.
• ಈತ ಮತ್ತು ಕಂಪೆನಿಯ ನಡುವೆ ಆರಂಭದಲ್ಲಿ ಬಾಂಧವ್ಯ ಉತ್ತಮವಾಗಿತ್ತು.
• ಆದರೆ, ಕ್ರಮೇಣ ಬ್ರಿಟಿಷರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಜಾಫರನಿಗೆ ಆಗಲಿಲ್ಲ.
• ಬ್ರಿಟಿಷರ ಹಿಡಿತದಿಂದ ಮುಕ್ತನಾಗಲು ಬಂಗಾಳದ ಚಿನ್ಸುರದಲ್ಲಿದ್ದ ಡಚ್ಚರ ಸಹಾಯ ಕೋರಿದ.
• ಈ ವೇಳೆಗೆ ಬಂಗಾಳದ ಗವರ್ನರ್ ಆಗಿದ್ದ ರಾಬರ್ಟ್ ಕ್ಲೈವ್ ಡಚ್ಚರನ್ನು ಪುಲ್ಟಾ ಎಂಬಲ್ಲಿ ನಿರ್ಣಾಯಕವಾಗಿ ಸೋಲಿಸಿ “ಚಿನ್ಸುರ ಒಪ್ಪಂದ” ಮಾಡಿಕೊಂಡ.
• ಚಿನ್ಸುರ ಒಪ್ಪಂದ – ಬ್ರಿಟಿಷರು ಮತ್ತು ಡಚ್ಚರ ನಡುವೆ.
• ಡಚ್ಚರ ಅಧಿಕಾರ ಚಿನ್ಸುರಕ್ಕೆ ಸೀಮಿತ.
•ದೇಶೀಯ ಅರಸರ ವ್ಯವಹಾರಗಳಲ್ಲಿ ತಲೆ ಹಾಕದಿರುವುದು.
• ಇದರಿಂದ ಮೀರ್ ಜಾಫರ್ ಮತ್ತು ಬ್ರಿಟಿಷರ ನಡುವೆ ಸಂಬಂಧ ಹದಗೆಟ್ಟಿತು.
• ರಾಬರ್ಟನ ನಂತರ ಬಂದ ಗವರ್ನರ್ ಗಳು ಮೀರ್ ಜಾಫರನ ಬದಲು ಅವನ ಅಳಿಯ “ಮೀರ್ ಖಾಸಿಂನನ್ನು ಬಂಗಾಳದ ನವಾಬ ಹುದ್ದೆಗೆ ಏರಿಸಿದರು.
ಮೀರ್ ಖಾಸೀಂ ನವಾಬನಾದ ಮೇಲೆ. . .
• ಬ್ರಿಟಿಷರಿಗೆ ಮಿಡ್ನಾಪುರ, ಚಿತ್ತಗಾಂಗ್ ಮತ್ತು ಬರ್ದ್ವಾನ್ ಪ್ರದೇಶಗಳನ್ನು ಬಿಟ್ಟುಕೊಟ್ಟ.
• ಆದರೆ, ಇವನು ಮಹತ್ವಾಕಾಂಕ್ಷಿ ಆಗಿದ್ದ.
• ಆಡಳಿತದ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಂಡ.
• ರಾಜಧಾನಿಯನ್ನು ಮುರ್ಶಿದಾಬಾದ್ ದಿಂದ ಮೋಂಗೇರ್ ಗೆ ಬದಲಾಯಿಸಿದ.
ಘರ್ಷಣೆಗೆ ಕಾರಣವಾದ ಅಂಶಗಳು.
• ದಸ್ತಕ್ (ಪರವಾನಗಿ ಪತ್ರ) ಗಳ ದುರುಪಯೋಗದಿಂದ ನವಾಬನ ಖಜಾನೆಗೆ ಆರ್ತಿಕ ನಷ್ಟ.
• ಇದನ್ನು ತಡೆಯಲು ಬ್ರಿಟಿಷ್ ಅಧಿಕಾರಿಗಳಿಗೆ ಸೂಚನೆ;ಬ್ರಿಟಿಷರು ಇದಕ್ಕೆ ಯಾವುದೇ ಗಮನ ಕೊಡಲಿಲ್ಲ.
• ಕಾರಣ, ನವಾಬ ಆಂಗ್ಲರ ಕೆಲವು ವಿಶೇಷ ಸವಲತ್ತುಗಳನ್ನು ರದ್ದುಪಡಿಸಿದ.
• ಜೊತೆಗೆ, ಭಾರತೀಯ ವ್ಯಾಪಾರಿಗಳಿಗೂ “ತೆರಿಗೆ ಮುಕ್ತ ವ್ಯಾಪಾರ” ಮಾಡಲು ಅನುಮತಿ ನೀಡಿದ.
• ನವಾಬನ ಕ್ರಮದಿಂದ ಮಾರುಕಟ್ಟೆಯಲ್ಲಿ ಬ್ರಿಟಿಷರು ಮತ್ತು ಭಾರತೀಯ ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತು.
• ಬ್ರಿಟಿಷರು ನವಾಬನಿಗೆ ತನ್ನ ತೆರಿಗೆ ಮುಕ್ತ ವ್ಯಾಪಾರದ ಸೌಲಭ್ಯವನ್ನು ತಡೆಯುವಂತೆ ಸೂಚಿಸಿದರು.
• ನವಾಬ ಇದಕ್ಕೆ ಒಪ್ಪಲಿಲ್ಲ.
• ಪರಿಣಾಮ ಘರ್ಷಣೆಗಳು ಆರಂಭವಾದವು.
ಆರಂಭಿಕ ಘರ್ಷಣೆಗಳು
• ಮೋಂಗೇರ್, ಮುರ್ಶಿದಾಬಾದ್, ಕಾಟ್ವಾ, ಗಿರಿಯ, ಸೂಟಾ ಮತ್ತು ಉದಯನಾಲಾಗಳಲ್ಲಿ ನಡೆದ ಕದನಗಳಲ್ಲಿ ಮೀರ್ ಖಾಸೀಂನಿಗೆ ಸೋಲು.
• ಬ್ರಿಟೀಷರು ಪಾಟ್ನಾವನ್ನು ತಮ್ಮ ವಶಕ್ಕೆ ಪಡೆದರು.
• ನವಾಬನು ಅದನ್ನು ತನ್ನ ವಶಕ್ಕೆ ಪಡೆದು ೧೪೮ ಕ್ಕೂ ಹೆಚ್ಚು ಆಂಗ್ಲರನ್ನು ಸೆರೆ ಹಿಡಿದನು.
• ಇತ್ತ ಕಲ್ಕತ್ತಾ ಕೌನ್ಸಿಲ್ ಮೀರ್ ಖಾಸೀಂ ಬದಲಿಗೆ ಮತ್ತೆ ಮೀರ್ ಜಾಫರನನ್ನು ನವಾಬನ ಹುದ್ದೆಗೇರಿಸಿತು.
• ಕೋಪಗೊಂಡ ಮೀರ್ ಖಾಸೀಂ ಬಂಧಿತ ಆಂಗ್ಲರನ್ನು ಕೊಂದನು.
• ಮುಂದೆ ಮೀರ್ ಖಾಸೀಂ ಅವಧ್ ಪ್ರಾಂತ್ಯಕ್ಕೆ ಪಲಾಯನ.
• ಅಲ್ಲಿ ಮೀರ್ ಖಾಸೀಂ ಬ್ರಿಟಿಷರ ವಿರುದ್ಧ ಮೈತ್ರಿಕೂಟ ರಚಿಸಿದ.
ಮೈತ್ರಿಕೂಟದ ಸದಸ್ಯರು ಮತ್ತು ಯುದ್ಧದ ಘಟನೆಗಳು.
• ಅವಧ್ ನವಾಬ ಶೂಜ ಉದ್ ದೌಲ ಮತ್ತು ಮೊಗಲ್ ಚಕ್ರವರ್ತಿ ೨ನೆ ಶಾ ಆಲಂ ಉಳಿದಿಬ್ಬರು ಸದಸ್ಯರು.
• ಆಂಗ್ಲರನ್ನು ಬಂಗಾಳದಿಂದ ಓಡಿಸುವುದು ಮೈತ್ರಿಕೂಟದ ಉದ್ಧೇಶ.
• ಮೈತ್ರಿಕೂಟದಲ್ಲಿ ಸು. ೫೦ ಸಾವಿರದಷ್ಟು ಸೈನ್ಯ.
• ಬ್ರಿಟಿಷರ ಬಳಿ ೭೦೭೨ ರಷ್ಟು ಸೈನ್ಯ; ಹೆಕ್ಟೆರ್ ಮನ್ರೊ ನಾಯಕತ್ವ.
• ಯುದ್ಧ ಕೇವಲ ಅರ್ಧ ದಿನದಲ್ಲಿ ಮುಗಿದು ಹೋಯಿತು.
ಪರಿಣಾಮಗಳು.
• ಬ್ರಿಟಿಷರ ಕಡೆ ಸು. ೮೪೭ ರಷ್ಟು ಸಾವು ಮತ್ತು ಮೈತ್ರಿಕೂಟದ ಸು. ೨೦೦೦ ಸೈನಿಕರು ಸತ್ತರು. ಮೀರ್ ಖಾಸೀಂ ರಣರಂಗದಿಂದ ಪಲಾಯನ.
• ಶೂಜ ಉದ್ ದೌಲ ಮತ್ತು ಮೊಗಲ್ ಚಕ್ರವರ್ತಿ ಇಬ್ಬರೂ ಬ್ರಿಟಿಷರಿಗೆ ಶರಣಾಗತರಾದರು.
• ಅಲಹಾಬಾದ್ ಒಪ್ಪಂದದ ಮೂಲಕ ಬಕ್ಸಾರ್ ಯುದ್ಧ ಮುಕ್ತಾಯವಾಯಿತು.
ಅಲಹಾಬಾದ್ ಒಪ್ಪಂದ – ಆಗಸ್ಟ್ -೧೬-೧೭೬೫.
• ೧೭೬೫ ರಲ್ಲಿ ರಾಬರ್ಟ್ ಕ್ಲೈವ್ ೨ನೆ ಸಲ ಬಂಗಾಳದ ಗವರ್ನರ್ ಆಗಿ ಭಾರತಕ್ಕೆ ಬಂದನು.
• ಅವನು ಯುದ್ಧವನ್ನು ಮುಂದುವರಿಸಲು ಇಚ್ಛಿಸದೇ ಶೂಜ ಉರ್ದ ದೌಲ ಮತ್ತು ಶಾ ಆಲಂರೊಂದಿಗೆ ಒಪ್ಪಂದ ಮಾಡಿಕೊಂಡ.
• ಒಪ್ಪಂದ ಅಲಹಾಬಾದ್ ನಲ್ಲಿ ನಡೆಯಿತು.
• ಒಪ್ಪಂದದ ಕರಾರುಗಳೆಂದರೆ:-
• ಶೂಜ ಉದ್ ದೌಲನಿಗೆ ಕಾರಾ, ಮಾಣಿಕ್ ಪುರ ಮತ್ತು ಅಲಹಾಬಾಧ್ ಹೊರತು ಪಡಿಸಿದ ಅವಧ್ ಪ್ರಾಂತ್ಯವನ್ನು ಬಿಟ್ಟು ಕೊಡಲಾಯಿತು.
• ಇದಕ್ಕೆ ಪ್ರತಿಯಾಗಿ ಅವನು ಕಂಪೆನಿಗೆ ೫೦ ಲಕ್ಷ ಕೊಡಲು ಒಪ್ಪಿದ.
• ಅವಧ್ ನವಾಬನ ಆಸ್ಥಾನದಲ್ಲಿ ಬ್ರಿಟಿಷ್ ಸೈನ್ಯವೊಂದನ್ನು ಇಡುವುದು ಮತ್ತು ಅದರ ವೆಚ್ಚವನ್ನು ಕಂಪೆನಿಗೆ ನವಾಬ ಸಲ್ಲಿಸುವುದು; ವಾರ್ಷಿಕವಾಗಿ.
• ಕಾರಾ ಮತ್ತು ಅಲಹಾಬಾದಗಳನ್ನು ಮೊಗಲ್ ಚಕ್ರವರ್ತಿಗೆ ಕೊಡಲಾಯಿತು.
• ಬಂಗಾಳದ ’ದಿವಾನಿ ಹಕ್ಕು’ (ಕಂದಾಯ ವಸೂಲಿ ಮಾಡುವ ಅಧಿಕಾರ) ನ್ನು ಕಂಪೆನಿಗೆ ಕೊಡಲಾಯಿತು.
• ಪ್ರತಿಯಾಗಿ ಕಂಪೆನಿ ಚಕ್ರವರ್ತಿಗೆ ವಾರ್ಷಿಕ ೨೬ ಲಕ್ಷಗಳ ವಿಶ್ರಾಂತಿ ವೇತನ ಅಥವಾ ಗೌರವ ಧನ (Tribute) ಕೊಡಲು ಒಪ್ಪಿತು.
ಯುದ್ಧದ ಪ್ರಾಮುಖ್ಯತೆ.
• ಪ್ಲಾಸಿ ಕದನಕ್ಕಿಂತಲೂ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಿತು.
• ಪ್ಲಾಸಿಯ ಕದನದಂತೆ ಇದು ಮೋಸದ ಯುದ್ಧವಾಗಿರಲಿಲ್ಲ.
• ಬ್ರಿಟಿಷರು ಮೂವರು ಧೇಶಿಯ ಅರಸರನ್ನು ಸೋಲಿಸಿದ್ದರು.
• ಬ್ರೂಮನ್:- “ಭಾರತದ ಅದೃಷ್ಟವು ಬಕ್ಸಾರ್ ಕದನದ ಮೇಲೆ ನಿಂತಿತ್ತು.”
• ರಾಮ್ಸೆ ಮೈರ್:- “ಯುದ್ಧವು ಬಂಗಾಳದಲ್ಲಿಬಕ್ಸಾರ್ ಕದನ ೧೭೬೪
Comments
Post a Comment