ಮೂರನೆ ಕರ್ನಾಟಿಕ್‌ ಯುದ್ಧ; ಕಾರಣಗಳು, ಘಟನೆಗಳು & ಪರಿಣಾಮಗಳು. ಆಂಗ್ಲರ ವಿಜಯಕ್ಕೆ ಕಾರಣಗಳು.

3ನೆ ಕರ್ನಾಟಿಕ್‌ ಯುದ್ಧ 1758-63

ಕಾರಣಗಳು: ಮೂರನೆ ಕರ್ನಾಟಿಕ್‌ ಯುದ್ಧಕ್ಕೆ ಕಾರಣವಾದ ಪ್ರಮುಖ ಅಂಶಗಳು ಕೆಳಕಂಡಂತಿವೆ:-

1.     ಮೊದಲ & ಎರಡನೆ ಕರ್ನಾಟಿಕ್‌ ಯುದ್ಧದ ಪರಿಣಾಮಗಳು.

2.     ಯೂರೋಪಿನಲ್ಲಿ ಆರಂಭವಾದ ಸಪ್ತ ವಾರ್ಷಿಕ ಯುದ್ಧ 1756-63.

3.     ಬ್ರಿಟೀಷರ ರಾಜಕೀಯ & ಸೈನಿಕ ವಿಜಯಗಳು.

ಘಟನೆಗಳು: ಈ ಯುದ್ಧದ ಪ್ರಮುಖ ಘಟನೆಗಳು ಇಂತಿವೆ:-

1.     ಫ್ರಾನ್ಸಿನಿಂದ ಬಲಿಷ್ಠ ಸೈನ್ಯದೊಂದಿಗೆ ಕೌಂಟ್‌ ಡಿ ಲ್ಯಾಲಿಯ ಆಗಮನ.

2.     ಅವನಿಂದ ಬ್ರಿಟೀಷರ ನೆಲೆ ಸೇಂಟ್‌ ಫೋರ್ಟ್‌ ಡೇವಿಡ್‌ ವಶ.

3.     ಮುಂದೆ ಮದ್ರಾಸ್‌ ವಶಪಡಿಸಿಕೊಳ್ಳಲು ಬುಸ್ಸಿಗೆ ಸೈನ್ಯ ಸಮೇತ ಬರಲು ಆದೇಶ.

4.     ಮನಸ್ಸಿಲ್ಲದ ಬುಸ್ಸಿ ಹೈದ್ರಾಬಾದ್‌ ನಿಂದ ಹೊರಟನು.

5.     ಮದ್ರಾಸ್‌ ಮೇಲಿನ ದಾಳಿಯನ್ನು ಬ್ರಿಟೀಷರು ಸಫಲವಾಗಿ ಹಿಮ್ಮೆಟ್ಟಿಸಿದರು.

6.     ಇತ್ತ ಕ್ಲೈವ್‌ ಕರ್ನಲ್‌ ಫೋರ್ಡ್‌ ನಿಗೆ ಉತ್ತರ ಸರ್ಕಾರಗಳನ್ನು ವಶಪಡಿಸಿಕೊಳ್ಳಲು ಆದೇಶ.

7.     ಉತ್ತರ ಸರ್ಕಾರದ ಮೇಲೆ ಫೋರ್ಡ್‌ ವಿಜಯ; ಸಲಾಬತ್‌ ಜಂಗ್ ಪಕ್ಷ ಬದಲಾವಣೆ.

8.     ನಿರ್ಣಾಯಕ ಯುದ್ಧ ವಾಂಡಿವಾಶ್‌ (ವಂದವಾಸಿ) ಬಳಿ ನಡೆಯಿತು.

9.   ವಾಂಡಿವಾಶ್‌ ಯುದ್ಧ: ಜನವರಿ 22, 1760

10.  ಬ್ರಿಟೀಷರ ಸೇನಾಧಿಕಾರಿ ಸರ್.‌ ಐರ್‌ ಕೂಟ್‌ ಫ್ರೆಂಚರ ಬುಸ್ಸಿಯನ್ನು ಸೋಲಿಸಿ ಸೆರೆ ಹಿಡಿದನು.

11.  ಲ್ಯಾಲಿಯು ಪಾಂಡಿಚೇರಿಗೆ ಪಲಾಯನ ಮಾಡಿದನು.

12.  ಆಂಗ್ಲರು ಅದರ ಮೇಲೆ ದಾಳಿ ಮಾಡಿ ಪಾಂಡಿಚೇರಿ, ಕಾರೈಕಲ್‌ & ಜಿಂಜಿಗಳನ್ನು ವಶಪಡಿಸಿಕೊಂಡರು.

13.  ಇದರಿಂದ ಫ್ರೆಂಚರು ಸಂಪೂರ್ಣವಾಗಿ ಸೋತರು.

14.  1763 ರಲ್ಲಿ ಯೂರೋಪಿನಲ್ಲಿ ನಡೆಯುತ್ತಿದ್ದ ಸಪ್ತ ವಾರ್ಷಿಕ ಯುದ್ಧ ಕೊನೆಗೊಂಡು ಪ್ಯಾರಿಸ್‌ ಒಪ್ಪಂದ ಏರ್ಪಟ್ಟಿತು.

15.  ಇದರೊಂದಿಗೆ ಮೂರನೆ ಕರ್ನಾಟಿಕ್‌ ಯುದ್ಧವು ಕೊನೆಗೊಂಡಿತು.

ಪರಿಣಾಮಗಳು: ಈ ಯುದ್ಧವು ಮೊದಲೆರಡು ಯುದ್ಧಗಳಿಗಿಂತ ವ್ಯಾಪಕ ಪರಿಣಾಮಗಳನ್ನು ಬೀರಿತು.

a.     ಭಾರತದಲ್ಲಿನ ಆಂಗ್ಲ & ಫ್ರೆಂಚರ ನಿರಂತರ ಸಂಘರ್ಷಗಳು ಕೊನೆಗೊಂಡವು.

b.    ಪಾಂಡಿಚೇರಿಯನ್ನು ಫ್ರೆಂಚರಿಗೆ ಹಿಂತಿರುಗಿಸಲಾಯಿತು; ಆದರೆ ಅವರು ಅದನ್ನು ಸೈನಿಕ ನೆಲೆಯಾಗಿ ಮಾಡುವುದನ್ನು ನಿರ್ಬಂಧಿಸಲಾಯಿತು.

c.     ಭಾರತದಲ್ಲಿ ಫ್ರೆಂಚರ ರಾಜಕೀಯ & ಸೈನಿಕ ಪ್ರಭಾವಗಳು ಕೊನೆಗೊಂಡವು.

d.    ಹೈದ್ರಾಬಾದ್‌ & ಕರ್ನಾಟಿಕ್‌ ಗಳಲ್ಲಿ ಆಂಗ್ಲರ ಪ್ರಭಾವವು ಹೆಚ್ಚಿತು.

 

ಕರ್ನಾಟಿಕ್‌ ಯುದ್ಧಗಳಲ್ಲಿ ಬ್ರಿಟೀಷರ ಯಶಸ್ಸಿಗೆ ಕಾರಣಗಳು ಅಥವಾ

ಫ್ರೆಂಚರ ವಿಫಲತೆಗೆ ಕಾರಣಗಳು.

a.     ಆಂಗ್ಲರ ಆರ್ಥಿಕ ಸ್ಥಿತಿ.

b.    ಆಂಗ್ಲ ಕಂಪೆನಿಯ ಖಾಸಗಿ ಒಡೆತನ.

c.     ಆಂಗ್ಲರ  ಬಲಿಷ್ಠ ನೌಕಾಪಡೆ.

d.    ಆಂಗ್ಲ ದಂಡನಾಯಕರ ಸಾಮರ್ಥ್ಯ & ಐಕ್ಯತೆ.

e.     ಆಂಗ್ಲ ಸರ್ಕಾರದ ಆಸಕ್ತಿ.

f.      ಆಂಗ್ಲರ ಆಯಕಟ್ಟಿನ ವಸಾಹತುಗಳು.

g.    ಪ್ಲಾಸಿಯ ವಿಜಯ.

h.    ಕೌಂಟ್‌ ಡಿ ಲ್ಯಾಲಿಯ ತಪ್ಪು ನಿರ್ಧಾರಗಳು.

i.      ಡೂಪ್ಲೆಯನ್ನು ಸ್ವದೇಶಕ್ಕೆ ಕರೆಯಿಸಿಕೊಂಡದ್ದು.

j.      ಹಿರಿಯ ವಿಲಿಯಂ ಪಿಟ್‌ ನ ನೀತಿ.

***** 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources