ಇತಿಹಾಸಪೂರ್ವ ಕಾಲ ಅಥವಾ ಪ್ರಾಗೈತಿಹಾಸಿಕ ಕಾಲ (ಶಿಲಾಯುಗ ಸಂಸ್ಕೃತಿ)
ಇತಿಹಾಸಪೂರ್ವ ಕಾಲ ಅಥವಾ ಪ್ರಾಗೈತಿಹಾಸಿಕ ಕಾಲ.
ಇತಿಹಾಸದ ಪುನರ್ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಲ್ಲಿ
ಎರಡು ಬಗೆಗಳಿವೆ. ಲಿಖಿತ ಮತ್ತು ಅಲಿಖಿತ.
ಇತಿಹಾಸ ಪುನರ್
ರಚನೆಗೆ ಲಿಖಿತ ಆಧಾರಗಳು ಲಭ್ಯವಾಗುವ ನಂತರದ ಕಾಲವನ್ನು “ಐತಿಹಾಸಿಕ ಕಾಲ” ೆನ್ನುವರು.
ಆದರೆ, ಇತಿಹಾಸದ
ಪುನರ್ ರಚನೆಗೆ ಕೇವಲ ಅಲಿಖಿತ ಅಥವಾ ಪುರಾತತ್ವ ಆಧಾರಗಳು ಲಭ್ಯವಾಗುವ ಕಾಲವನ್ನು “ಇತಿಹಾಸಪೂರ್ವ ಕಾಲ, ಪ್ರಾಗೈತಿಹಾಸಿಕ
ಕಾಲ ಅಥವಾ ಪ್ರಾಗ್ಚಾರಿತ್ರಿಕ ಕಾಲ” ಎನ್ನುವರು.
ಸಾಮಾನ್ಯ ಶಕ
ಪೂರ್ವ 3000 ವರ್ಷಗಳ ಹಿಂದಿನ ಕಾಲವನ್ನು ಇತಿಹಾಸಪೂರ್ವ ಕಾಲ ಎಂದು ಕರೆಯುವರು. ಈ ಕಾಲದ ಆರಂಭ, ವಿಕಾಸ
& ಅಂತ್ಯಗಳು ಯಾವಾಗ ಆದವು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಅಂದಿನ ಮಾನವನು ತನ್ನ ಜೀವನೋಪಾಯಕ್ಕಾಗಿ ಬಳಸುತ್ತಿದ್ದ ಶಿಲಾಯುಧಗಳು ಅತವಾ ಶಿಲಾ ಉಪಕರಣಗಳ ಕಾರಣ ಈ ಕಾಲಘಟ್ಟವನ್ನು
“ಶಿಲಾಯುಗ ಸಂಸ್ಕೃತಿಯ ಕಾಲ” ಎಂತಲೂ ಕರೆಯುವರು.
ಪ್ರಪಂಚದ ವಿವಿಧ ಭಾಗಗಳಲ್ಲಿ ಶಿಲಾಯುಗ ಕಾಲದ ನೆಲೆಗಳು ಪತ್ತೆಯಾಗಿರುವಂತೆ ಭಾರತದಲ್ಲಿಯೂ ಸಹಾ ಆ ಕಾಲದ ನೆಲೆಗಳು ಪತ್ತೆಯಾಗಿವೆ.
ಭಾರತದಲ್ಲಿ ಪ್ರಾಗೈತಿಹಾಸಿಕ
ಕಾಲದ ಆಧಾರಗಳು ಮತ್ತು ನೆಲೆಗಳ ಸಂಶೋಧನೆ ನಡೆಸಿದ ಕೆಲವು ಪ್ರಮುಖ ಸಂಶೋಧಕರು:-
ರಾಬರ್ಟ್ ಬ್ರೂಸ್
ಫೂಟ್, ಭಾರತದ ಪ್ರಾಗೈತಿಹಾಸಿಕ ಪಿತಾಮಹಾ, ಮೆಡೋಸ್ ಟೇಲರ್, ಜಾನ್ ಮಾರ್ಷಲ್, ಡಾ. ದಯಾರಾಂ ಸಹಾನಿ,
R.D ಬ್ಯಾನರ್ಜಿ, S.R ರಾವ್, ಕನ್ನಿಂಗ್ ಹ್ಯಾಂ, ಮಾರ್ಟಿಮರ್ ವ್ಹೀಲರ್, ಡಾ. ಆಲ್ಚಿನ್, ಡಾ.
ಅನ್ಸಾರಿ, B.K ಥಾಪರ್, ಡಾ. H.D ಸಂಕಾಲಿಯ, ಮತ್ತು (ಕರ್ನಾಟಕದಲ್ಲಿ) R.S ಪಂಚಮುಖಿ, M.H ಕೃಷ್ಣ,
R.V ಜೋಶಿ, ಡಾ. M. ಶೇಷಾದ್ರಿ, ಡಾ. S. ನಾಗರಾಜ್ ಮತ್ತು ಕೃಷ್ಣಸ್ವಾಮಿ ಅಯ್ಯಂಗಾರ್ ಪ್ರಮುಖರು.
ಅಧ್ಯಯನದ ದೃಷ್ಟಿಯಿಂದ
ಈ ಕಾಲಘಟ್ಟವನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ಮಾಡಿಕೊಳ್ಳಲಾಗಿದೆ:
1.
ಶಿಲಾಯುಗದ
ಕಾಲ: ಸಾ.ಶ.ಪೂ. 50,000 ದಿಂದ 4000 ವರ್ಷಗಳ ವರೆಗೆ. ಇದರಲ್ಲಿ ಪುನಃ ಮೂರು ಉಪವಿಭಾಗ ಮಾಡಲಾಗಿದೆ:
A.ಹಳೆಶಿಲಾಯುಗ B. ಮಧ್ಯಶಿಲಾಯುಗ C. ನವಶಿಲಾಯುಗ
2. ಲೋಹಯುಗ: ಸಾ. ಶ. ಪೂ. 4000 ವರ್ಷಗಳ ಈಚಿನ ಕಾಲ. ಇದನ್ನು ಮತ್ತೆ ಮೂರು ಉಪವಿಭಾಗಗಳಾಗಿ ವಿಭಜಿಸಲಾಗಿದೆ: A. ತಾಮ್ರಯುಗ B. ಕಂಚಿನ ಯುಗ C. ಕಬ್ಬಿಣದ ಯುಗ.
ಆದರೆ ಮಾನವನು ಲೋಹದ ಉಪಯೋಗ ಕಂಡುಕೊಂಡ ನಂತರವೂ ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದನು. ಆದ ಕಾರಣ ತಾಮ್ರಯುಗವನ್ನು ತಾಮ್ರಶಿಲಾಯುಗ ಎಂತಲೂ ಕರೆಯುವರು. ಇದಕ್ಕೆ ಪೂರಕವಾಗಿ ಅನೇಕ ನೆಲೆಗಳಲ್ಲಿ ಲೋಹ ಮತ್ತು ಶಿಲಾ ಉಪಕರಣಗಳು ಒಟ್ಟಿಗೆ ಸಿಕ್ಕಿರುವುದು ಪುರಾವೆ ಒದಗಿಸುತ್ತವೆ.
Comments
Post a Comment