ವಾರನ್ ಹೇಸ್ಟಿಂಗ್ಸ್ ಮೇಲಿನ ಆಪಾದನೆಗಳ ವಿಚಾರಣೆ 1788-95.
1784 ರಲ್ಲಿ ಪಿಟ್‌ನ ಇಂಡಿಯಾ ಶಾಸನ ಜಾರಿಗೆ ಬಂದಿತು. ಅದರಲ್ಲಿನ ಗೊಂದಲಮಯ ನಿಯಮಗಳ ಕಾರಣ ವಾರನ್ ಹೇಸ್ಟಿಂಗ್ಸ್ ೧೭೮೫ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಿದ. ಅಲ್ಲಿ ಭಾರತದಲ್ಲಿ ಇವನು ಅನುಸರಿಸಿದ ನೀತಿ ಮತ್ತು ಕೈಗೊಂಡ ಕೆಲವು ಕ್ರಮಗಳ ನೈತಿಕತೆ ಬಗ್ಗೆ ವಿಚಾರಣೆ ನಡೆಯಿತು. ವಿಚಾರಣೆಯ ಅವಧಿಯು ೧೭೮೮ ರಿಂದ ೧೭೯೫ರ ವರೆಗೆ ವಿಸ್ತರಿಸಿತು. ಭಾರತದಲ್ಲಿ ಕಲ್ಕತ್ತಾ ಕೌನ್ಸಿಲ್ ಸದಸ್ಯನಾಗಿದ್ದ ಫಿಲಿಫ್ ಫ್ರಾನ್ಸಿಸ್ ಇವನ ವಿರುದ್ಧ ಪ್ರಮುಖ ದೂರುದಾರನಾಗಿದ್ದನು. ಇವನ ಮಾಹಿತಿಗಳನ್ನು ಆಧರಿಸಿ ಎಡ್ಮಂಡ್ ಬರ್ಕ್ ಎಂಬ ಖ್ಯಾತ ಬ್ರಿಟಿಷ್ ಸಂಸದ ಪಾರ್ಲಿಮೆಂಟಿನಲ್ಲಿ ಹೇಸ್ಟಿಂಗ್ಸ್ ಮೇಲಿನ ವಿಚಾರಣೆಯ ವಿಷಯ ಮಂಡಿಸಿದ.
ಪ್ರಮುಖ ಆಪಾದನೆಗಳು.
• ಹೇಸ್ಟಿಂಗ್ಸ್‌ನ ವಿರುದ್ಧ ಒಟ್ಟು ೨೦ ಆಪಾದನೆಗಳನ್ನು
ಮಾಡಲಾಗಿತ್ತು; ಅವುಗಳಲ್ಲಿ ಪ್ರಮುಖವಾದವು:
1)
ರೋಹಿಲ್ಲರ
ವಿರುದ್ಧದ ಯುದ್ಧ.
2)
ಬನಾರಸ್
ರಾಜ ಚೈತ್ ಸಿಂಗ್
ಪ್ರಕರಣ.
3)
ಅವಧ್‌ನ
ಬೇಗಂ ಪ್ರಕರಣ.
4)
ನಂದಕುಮಾರನ ಪ್ರಕರಣ.
1.
ರೋಹಿಲ್ಲರ ವಿರುದ್ಧದ ಯುದ್ಧ – 1773-74
• ಪ್ರಥಮವಾಗಿ ರೋಹಿಲ್ಲರು ಬ್ರಿಟಿಷರ
ಶತೃಗಳಾಗಿರಲಿಲ್ಲ.
• ಆಫಿಜ್ ರಹಮತ್ ಖಾನ್
ಅವಧ್‌ನ ನವಾಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ.
• ಇವರ ಮಧ್ಯೆ ವಾರನ್
ಅನಗತ್ಯವಾಗಿ ತಲೆಹಾಕಿದ.
• ಕಂಪೆನಿಗೆ ಆರ್ಥಿಕವಾಗಿ ಲಾಭ
ಮಾಡಲು ರೋಹಿಲ್ಲರ ವಿರುದ್ಧ ಯುದ್ಧ
ಮಾಡಿದುದು ನೈತಿಕ ಕ್ರಮವಾಗಿರಲಿಲ್ಲ.
2.
ಬನಾರಸ್ ರಾಜ ಚೈತ್ ಸಿಂಗ್ ಪ್ರಕರಣ 1781-82.
• ಚೈತ್ ಸಿಂಗ್ ಅಂದಿಗೆ
ಬನಾರಸ್ ರಾಜನಾಗಿದ್ದ.
• ಬನಾರಸ್ ಮೊದಲು ಅವದ್
ಪ್ರಾಂತ್ಯದ ಒಂದು ಭಾಗವಾಗಿತ್ತು.
• 1775ರ ಬನಾರಸ್ ಒಪ್ಪಂದದಂತೆ ಬನಾರಸ್ ಕಂಪೆನಿಯ ಅಧೀನಕ್ಕೆ
ಬಂದಿತು.
• ಕಂಪೆನಿಗೆ ವಾರ್ಷಿಕ ೨೨.೫ ಲಕ್ಷ
ಕಪ್ಪ ಕೊಡುವ ಕರಾರು.
• ಚೈತ್ ಸಿಂಗ್ ಮೊದಲ
ಎರಡು ವರ್ಷಗಳು ನಿಗದಿತ ಹಣ
ನೀಡಿದ.
• ಆದರೆ, ವಾರನ್ ೧೭೭೮
ರಲ್ಲಿ ಕಪ್ಪದ ಜೊತೆಗೆ ಹೆಚ್ಚುವರಿ
೫ ಲಕ್ಷ ಕೊಡುವಂತೆ
ಒತ್ತಾಯ ಹಾಕಿದ; ಚೈತ್ ಸಿಂಗ್
ನೀಡಿದ.
• ಮರುವರ್ಷವೂ ಅದೇ ಬೇಡಿಕೆ;
ಮತ್ತೆ ಈಡೇರಿಸಿದ.
• ೧೭೮೦ ರಲ್ಲಿ ವಾರನ್
೨ ಸಾವಿರ ಯುದ್ಧದ
ಕುದುರೆಗಳನ್ನು ಕೊಡಲು ಆದೇಶಿಸಿದ.
• ಆದರೆ, ಚೈತ್ ಸಿಂಗ್
೧೦೦೦ ಕುದುರೆಗಳನ್ನು ನೀಡುವುದಾಗಿ ಒಪ್ಪಿಕೊಂಡ.
• ಇದರಿಂದ ವಾರನ್ ಅವನ
ಮೇಲೆ ಅವಿಧೇಯತೆಯ ಆರೋಪ ಮಾಡಿ,
ಬನಾರಸ್ ಮುತ್ತಿಗೆ ಹಾಕಿದ.
• ಚೈತ್‌ಸಿಂಗ್‌ನನ್ನು ಅವನ ಅರಮನೆಯಲ್ಲಿ ಗೃಹಬಂಧನದಲ್ಲಿ
ಇರಿಸಲಾಯಿತು.
• ಕುಪಿತ ಬನಾರಸ್ ಸೈನಿಕರು
ಬ್ರಿಟಿಷ್ ಸೈನಿಕರನ್ನು ಕಗ್ಗೊಲೆ ಮಾಡಿದರು.
• ಈ ಗಲಭೆಯಲ್ಲಿ
ಚೈತ್ ಸಿಂಗ್ ಗ್ವಾಲಿಯರ್ ಗೆ ಪಲಾಯನ
ಮಾಡಿದ.
• ವಾರನ್ ಬಕ್ಸಾರ್ ದಿಂದ ಹೆಚ್ಚಿನ
ಸೈನ್ಯ ತಂದು ದಂಗೆ ಅಡಗಿಸಿದ.
• ಮುಂದೆ ಚೈತ್ ಸಿಂಗನ
ಸೋದರನ ಅಪ್ರಾಪ್ತ ಮಗನನ್ನು ಬನಾರಸ್
ರಾಜನನ್ನಾಗಿ ಮಾಡಿದ.
• ಅವನಿಂದ ಅಪಾರ ಹಣ
ಮತ್ತು ಉಡುಗೊರೆಗಳನ್ನು ಪಡೆದ ಮತ್ತು ವಾರ್ಷಿಕ ಪೊಗದಿಯನ್ನು 40 ಲಕ್ಷಗಳಿಗೆ
ಏರಿಸಲಾಯಿತು.
• ಇಲ್ಲಿಯೂ ಸಹಾ ವಾರನ್
ಅನಾವಶ್ಯಕವಾಗಿ ದಬ್ಬಾಳಿಕೆ ಪ್ರವೃತ್ತಿ ಪ್ರದರ್ಶಿಸಿದ್ದ.
ಚೈತ್‌ಸಿಂಗನ ಪ್ರಾಮಾಣಿಕತೆಯ ದುರುಪಯೋಗ ಮಾಡಿಕೊಂಡಿದ್ದ.
3. ಅವಧ್
ಬೇಗಂ
ಪ್ರಕರಣ.
• ಶೂಜ ಉದ್ ದೌಲನ
ಮರಣಾನಂತರ ಅವನ ಮಗ ಆಸಫ್
ಉದ್ ದೌಲ್ ನವಾಬನಾದ.
• ಶೂಜ ಉದ್ ದೌಲನು
ತನ್ನ ಆಸ್ತಿ ಮತ್ತು ಶ್ರೀಮಂತ
ಜಹಗೀರುಗಳನ್ನು ತನ್ನ ಹೆಂಡತಿ ಮತ್ತು
ಅವಳ ತಾಯಿಯ ಹೆಸರಿಗೆ
ಮರಣಶಾಸನ ಬರೆಯಿಸಿದ್ದ.
• ಆಸಫ್ ಉದ್ ದೌಲನು
ಬ್ರಿಟಿಷರಿಗೆ ಕೊಡಬೇಕಾದ ವಾರ್ಷಿಕ ಕಂತುಗಳು
ಬಾಕಿ ಉಳಿದಿದ್ದವು.
• ಅವುಗಳನ್ನು ತನ್ನ ತಾಯಿ
ಮತ್ತು ಅಜ್ಜಿಯರಿಂದ ಹಣ ಪಡೆದು
ತೀರಿಸುವುದಾಗಿ ಆಸಫ್ ಕಂಪೆನಿಗೆ ತಿಳಿಸಿದ.
• ಆದರೆ, ಬೇಗಂ ಮತ್ತು
ಅವಳ ತಾಯಿ ಹಣ
ಕೊಡಲು ಒಪ್ಪದಿದ್ದಾಗ ಆಸಫ್ ವಾರನ್ನನ ನೆರವು
ಕೇಳಿದ.
• ವಾರನ್ ಬ್ರಿಟೀಷ್ ಸೈನ್ಯ ರವಾನಿಸಿ
ಬೇಗಂಳ ಅರಮನೆ ಜಫ್ತಿ ಮಾಡಿಸಿದ
ಮತ್ತು ಬಾಕಿ ಹಣವನ್ನು ಜಮಾ
ಮಾಡಿಕೊಂಡ.
• ಈ ಪ್ರಕರಣದಲ್ಲಿ
ವಾರನ್ ಅಮಾಯಕ ಮಹಿಳೆಯರ ವಿರುದ್ಧ
ದೌರ್ಜನ್ಯ ಮಾಡಲು ಅವಧ್‌ನ ನವಾಬನಿಗೆ
ಸೈನಿಕ ನೆರವು ನೀಡಿದ್ದ.
• ಅವಧ್ ಪ್ರಾಂತ್ಯದ ಆಂತರಿಕ
ವಿಷಯದಲ್ಲಿ ಅನಾವಶ್ಯಕವಾಗಿ ತಲೆ ಹಾಕಿದ್ದ.
• ಅಲ್ಲದೇ, ಮೇಲಿನ ಪ್ರಕರಣಗಳಲ್ಲಿ
ಕಲ್ಕತ್ತಾ ಕೌನ್ಸಿಲ್‌ನ ಅನುಮತಿ ಇಲ್ಲದೇ ಏಕಪಕ್ಷೀಯವಾಗಿ
ನಿರ್ಧಾರ ಕೈಗೊಂಡಿದ್ದ.
4. ನಂದಕುಮಾರನ
ಪ್ರಕರಣ.
• ನಂದಕುಮಾರ ಅಂದಿನ ಕಾಲಕ್ಕೆ
ಬಂಗಾಳದ ಶ್ರೀಮಂತ ವ್ಯಾಪಾರಿ ಮತ್ತು
ಜಮೀನುದಾರನಾಗಿದ್ದ.
• ಇವನು ವಾರನ್ ಹೇಸ್ಟಿಂಗ್ಸ್‌ನ
ವಿರುದ್ಧ
ಕಲ್ಕತ್ತಾ ಕೌನ್ಸಿಲ್‌ಗೆ ಭ್ರಷ್ಟಾಚಾರದ ದೂರು ನೀಡಿದ್ದ.
• ದೂರು:- ವಾರನ್ ಮುರ್ಶಿದಾಬಾದ್‌ಗೆ
ಭೇಟಿ ನೀಡಿದಾಗ ಜಾಫರನ ವಿಧವೆ
ಬೇಗಂಳಿಂದ ರೂ. ೩.೫
ಲಕ್ಷ ಃಣ ಪಡೆದಿದ್ದ
ಮತ್ತು ರೂ. ೧.೫
ಲಕ್ಷಗಳನ್ನು ಗೌರವದ ಸ್ವಾಗತ ಮತ್ತು
ಮನರಂಜನೆಯ ವೆಚ್ಚಕ್ಕೆಂದು ಪಡೆದಿದ್ದ.
• ನಂದಕುಮಾರನು ಇದನ್ನು ವಿಚಾರಣೆ ಮಾಡಲು
ಕೌನ್ಸಿಲ್ ಗೆ ಕೇಳಿಕೊಂಡ.
• ಆದರೆ, ವಾರನ್ನನು ನಂದಕುಮಾರನು
ಶ್ರೀಮಂತರು ಮತ್ತು ಜಮೀನುದಾರರನ್ನು
ಕಂಪೆನಿಯ ವಿರುದ್ಧ ದಂಗೆ ಏಳಲು
ಪಿತೂರಿ ನಡೆಸುತ್ತಿದ್ದಾನೆ ಎಂದು ಆರೋಪ ಹೊರಿಸಿದ.
• ಅಲ್ಲದೇ, ಮೋಹನ್ ದಾಸ್
ಎಂಬುವನ ಮೂಲಕ ನಂದಕುಮಾರನ ವಿರುದ್ಧ
ನಕಲಿ ಸಹಿ ಮಾಡಿರುವ ದೂರು
ಕೊಡಿಸಿದ.
• ಪರಿಣಾಮ, ನಂದಕುಮಾರನನ್ನು ಆತುರಾತುರವಾಗಿ
ವಿಚಾರಣೆ ನಡೆಸಿ ಮರಣ ದಂಡನೆಯ
ಶಿಕ್ಷೆ ವಿಧಿಸಲಾಯಿತು.
• ಶಿಕ್ಷೆಯನ್ನು ಸಹಾ ಶೀಘ್ರವಾಗಿ ಜಾರಿ
ಮಾಡಿದರು.
• ಇಲ್ಲಿ ವಾರನ್ನನು ತನ್ನ
ವಿರುದ್ಧದ ದೂರುಗಳನ್ನು ಮುಚ್ಚಿ ಹಾಕಲು ನಂದಕುಮಾರನ
ವಿರುದ್ಧ ಅನಾವಶ್ಯಕ ಪಿತೂರಿ ಮಾಡಿದ್ದ.
ವಿಚಾರಣೆಯ ತೀರ್ಪು – ವಾರನ್ ಖುಲಾಸೆ!.
• ಸುಧೀರ್ಘ ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ ಪಾರ್ಲಿಮೆಂಟ್ ಕೊನೆಗೆ ವಾರನ್ನನನ್ನು ಅವನ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತ ಮಾಡಿತು. ಆದರೆ, ಅವನು ಈ ವಿಚಾರಣೆಯ ಸಮಯದಲ್ಲಿ ಸಾಕಷ್ಟು ಮಾನಸಿಕ ಒತ್ತಡ ಮತ್ತು ಆರ್ಥಿಕ ಸಮಸ್ಯೆಗಳಿಂದ ಬಳಲಿದ್ದನು.
Comments
Post a Comment