ವಾರನ್ ಹೇಸ್ಟಿಂಗ್ಸ್‌ನ ಆಂತರಿಕ ನೀತಿ - ಅಧಿಕಾರದ ಕ್ರೋಢೀಕರಣ
ಆರಂಭಿಕ ಜೀವನ.
• ಜನನ – ಡಿಸೆಂಬರ್ ೬, ೧೭೩೨.
ಸ್ಥಳ – ಚರ್ಚಿಲ್ ಟೌನ್, ಆಕ್ಸ್
ಫರ್ಡ್ ಶೈರ್. ಮರಣ – ೧೮೧೮. ೮೫ನೆ
ವಯಸ್ಸಿನಲ್ಲಿ. ತಂದೆ – ಬೈನಾಸ್ಟಿನ್. ತಾಯಿ
– ಹ್ಯಾಸ್ಟರ್ ವಾರನ್. ಶಿಕ್ಷಣ – ವೆಸ್ಟ್ ಮಿನಿಸ್ಟರ್ಸ್
ಶಾಲೆ, ಲಂಡನ್.
ಏಳಿಗೆ.
• ೧೭೫೦ ರಲ್ಲಿ ಭಾರತಕ್ಕೆ
ಕರಣಿಕನಾಗಿ ಬಂದನು.
• ದೇಶೀಯ ಭಾಷೆಗಳ ಕಲಿಕೆ
– ದುಬಾಷಿಯಾಗಿ ಕರ್ತವ್ಯ.
• ಖಾಸಿಂಬಜಾರ್ ಮತ್ತು ಬಂಗಾಳಗಳಲ್ಲಿ ರೆಸಿಡೆಂಟ್
ಅಂದರೆ ಕಂಪೆನಿಯ ಪ್ರತಿನಿಧಿಯಾಗಿ ಕರ್ತವವ್ಯ ನಿರ್ವಹಿಸಿದ.
• ೧೭೬೧ ರಲ್ಲಿ ಕಲ್ಕತ್ತಾ
ಕೌನ್ಸಿಲ್ ಸದಸ್ಯನಾಗಿ ಬಡ್ತಿ ಪಡೆದನು.
• ೧೭೬೪ ರಲ್ಲಿ ಸ್ವದೇಶಕ್ಕೆ
ಮರಳಿದ.
• ೧೭೭೧ ರಲ್ಲಿ ಮದ್ರಾಸ್
ಕೌನ್ಸಿಲ್ ಸದಸ್ಯನಾಗಿ ವಾಪಾಸು ಭಾರತಕ್ಕೆ
ಬಂದನು.
• ೧೭೭೨ ಏಪ್ರಿಲ್ ೧೩
ರಂದು ಬಂಗಾಳದ ಗವರ್ನರ್ ಆಗಿ
ನೇಮಕಗೊಂಡನು.
• ೧೭೭೪ ರಲ್ಲಿ ರೆಗ್ಯುಲೇಟಿಂಗ್
(ನಿಯಂತ್ರಣ) ಕಾಯ್ದೆಯ ಜಾರಿ; ಅದರ
ನಿಯಮಗಳಂತೆ ಭಾರತದಲ್ಲಿನ ಬ್ರಿಟೀಷ್
ಪ್ರಾಂತ್ಯಗಳಿಗೆ ಗವರ್ನರ್ ಜನರಲ್ ಆಗಿ ನೇಮಕಗೊಂಡನು.
ರಾಜಕೀಯ ಸ್ಥಿತಿ ಮತ್ತು ಸಮಸ್ಯೆಗಳು
• ಖಾಸಗಿ ವ್ಯಾಪಾರದಿಂದ ಕಂಪೆನಿಗೆ
ನಷ್ಟ ಉಂಟಾಗುತ್ತಿತ್ತು.
• ದ್ವಿ ಸರ್ಕಾರ ಪದ್ಧತಿಯಿಂದ
ಅಶಾಂತಿ, ಅರಾಜಕತೆ, ಕ್ಷಾಮಗಳಂತಹ ದುಷ್ಪರಿಣಾಮಗಳು ತಲೆದೋರಿದ್ದವು.
• ಮೂರನೇ ಪಾಣಿಪತ್ ಯುದ್ಧದ ನಂತರ ಒಂದನೇ ಮಾಧವರಾಯನ ನೇತೃತ್ವದಲ್ಲಿ ಮರಾಠರ
ಶೀಘ್ರ ಏಳಿಗೆಯಾಗಿತ್ತು ಅವರು ಹೈದರಾಬಾದ್ ಮತ್ತು ಮೈಸೂರುಗಳ
ಮೇಲೆ ದಾಳಿ ನಡೆಸಿ ತಮ್ಮ ಪ್ರಭಾವವನ್ನು ದಕ್ಷಿಣಕ್ಕೂ ವಿಸ್ತರಿಸಿದ್ದರು.
• ಉತ್ತರದಲ್ಲಿ ಮಹದಾಜಿ ಸಿಂಧ್ಯ ಪ್ರಭಾವಶಾಲಿಯಾದ ಕಾರಣ
ಮೊಗಲ್ ಚಕ್ರವರ್ತಿ ಮರಾಠರ
ಪಕ್ಷ ಸೇರುವ ಹವಣಿಕೆಯಲ್ಲಿದ್ದನು.
• ದಕ್ಷಿಣದಲ್ಲಿ ಹೈದರನ ಏಳಿಗೆ ಉಂಟಾಗಿತ್ತು
ಮತ್ತು ಮೊದಲನೆ ಆಂಗ್ಲೊ-ಮೈಸೂರು ಯುದ್ಧದಲ್ಲಿ
ಅವನು ಬ್ರಿಟಿಷರಿಗೆ ಸೋಲುಣಿಸಿದ್ದನು.
• ಅಮೆರಿಕಾ ಸ್ವಾತಂತ್ರ ಯುದ್ಧ
ಆರಂಭವಾಗಿತ್ತು.
ಸುಧಾರಣೆಗಳು: ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಂಗಾಳದ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡ ವಾರನ್
ಹೇಸ್ಟಿಂಗ್ಸ್‌ನು ದಕ್ಷನಾಗಿ ಕಾರ್ಯ ನಿರ್ವಹಿಸಿ ಕಂಪೆನಿಯ ಆಂತರಿಕ ಆಡಳಿತದಲ್ಲಿ ಹಲವಾರು ಸುಧಾರಣೆಗಳನ್ನು
ಮಾಡುವ ಮೂಲಕ ಭ್ರಷ್ಟಾಚಾರ ಮತ್ತು ಅದಕ್ಷತೆಗಳನ್ನು ತೊಡೆದುಹಾಕಿ ಕಂಪೆನಿಯ ಆರ್ಥಿಕ ಸ್ಥಿತಿಯನ್ನು
ಉತ್ತಮಗೊಳಿಸಿದ್ದಲ್ಲದೇ ಉತ್ತಮ ವಿದೇಶಾಂಗ ನೀತಿಯ ಮೂಲಕ ರಾಜಕೀಯವಾಗಿಯು ಅದರ ಸ್ಥಿತಿಯನ್ನು ಮತ್ತಷ್ಟು ಉತ್ತಮಗೊಳಿಸಿದನು. ಅವನು ಮಾಡಿದ ಆಂತರಿಕ ಸುಧಾರಣೆಗಳೆಂದರೆ,
• ಆಡಳಿತಾತ್ಮಕ ಸುಧಾರಣೆಗಳು.
• ಕಂದಾಯ ಸುಧಾರಣೆಗಳು.
• ವಾಣಿಜ್ಯ ಸುಧಾರಣೆಗಳು.
• ನ್ಯಾಯಾಂಗದ ಸುಧಾರಣೆಗಳು.
• ಇತರೆ ಸುಧಾರಣೆಗಳು.
1.
ಆಡಳಿತಾತ್ಮಕ ಸುಧಾರಣೆಗಳು.
• ದ್ವಿಸರ್ಕಾರ ಪದ್ಧತಿಯನ್ನು ರದ್ದುಗೊಳಿಸಿ ಬಂಗಾಳ ಮತ್ತು ಬಿಹಾರಗಳ
ಡೆಪ್ಯುಟಿ ನವಾಬರ ಹುದ್ದೆಗಳನ್ನು ರದ್ದುಗೊಳಿಸಿದನು.
ಕಂಪೆನಿ ಖಜಾನೆಯನ್ನು ಮುರ್ಶಿದಾಬಾದ್‌ನಿಂದ
ಕಲ್ಕತ್ತಾಕ್ಕೆ ವರ್ಗಾವಣೆ ಮಾಡಿದನು.
• ಬಂಗಾಳ ನವಾಬನ ಪಿಂಚಣಿಯನ್ನು
೩೨ ಲಕ್ಷಗಳಿಂದ ೧೬
ಲಕ್ಷಗಳಿಗೆ ಇಳಿಸಿದನು.
• ಬಂಗಾಳದ ಅಪ್ರಾಪ್ತ ನವಾಬನಾಗಿದ್ದ ನಿಜಾಮ ಉದ್ ದೌಲನ ರಕ್ಷಣೆಯನ್ನು
ಮೀರ್ ಜಾಫರನ ವಿಧವೆ ರಾಣಿ
ಮುನ್ನಿ ಬೇಗಂಳಿಗೆ ವಹಿಸಿದ.
• ಮೊಗಲ್ ಚಕ್ರವರ್ತಿ ಶಾ
ಆಲಂನ ಪಿಂಚಣಿಯನ್ನು ರದ್ದುಗೊಳಿಸಿದನು ಮತ್ತು ಅಲಹಾಬಾಧ್ ಒಪ್ಪಂದದಂತೆ
ಅವನಿಗೆ ನೀಡಿದ್ದ ಕಾರಾ ಮತ್ತು
ಅಲಹಾಬಾದ್‌ಗಳನ್ನು ವಾಪಾಸು ಪಡೆದು ಅವುಗಳನ್ನು
ಅವಧ್‌ನ ನವಾಬನಿಗೆ ೫೦ ಲಕ್ಷಗಳಿಗೆ
ಮಾರಿದನು.
2.
ಕಂದಾಯ ಸುಧಾರಣೆಗಳು.
• ಬಂಗಾಳ ಪ್ರಾಂತ್ಯವನ್ನು ೬
ಕಂದಾಯ ವಿಭಾಗಗಳಾಗಿ ವಿಭಜನೆ ಮಾಡಿದನು ಅವುಗಳೆಂದರೆ, ಕಲ್ಕತ್ತಾ, ಚೋರ್‌ದಾನಾ,
ಪಾಟ್ನಾ, ದಿನಾಜ್‌ಪುರ, ಮುರ್ಷಿದಾಬಾದ್ ಮತ್ತು ಢಾಕಾ.
• ಕಂದಾಯ ವ್ಯವಸ್ಥೆ ಮೇಲ್ವಿಚಾರಣೆಗೆ
ಪ್ರತಿ ಕಂದಾಯ ವಿಭಾಗಕ್ಕೆ ೧
ಕಂದಾಯ ಮಂಡಳಿ ನೇಮಕ ಮಾಡಿ
ಅದಕ್ಕೆ ೫ ಸ್ಥಳೀಯ ಸದಸ್ಯರು ಇರುವಂತೆ
ವ್ಯವಸ್ಥೆಗೊಳಿಸಿದನು.
• ಪ್ರತಿ ಜಿಲ್ಲೆಗೆ ಒಬ್ಬ
ರೆವಿನ್ಯು ಕಲೆಕ್ಟರ್ ನೇಮಕ ಮಾಡಿ ಅವನ ಸಹಾಯಕ್ಕೆ ಸ್ಥಳೀಯರ ನೇಮಕಕ್ಕೆ
ಅವಕಾಶ ಕಲ್ಪಿಸಿದನು.
• 1772 ರಲ್ಲಿ ಕಂದಾಯ ವಸೂಲಿಯನ್ನು ಹರಾಜು ಪದ್ಧತಿ ಮೂಲಕ ಮಾಡುವ
ವ್ಯವಸ್ಥೆ ಜಾರಿಗೊಳಿಸಿದನು; ಆರಂಭದಲ್ಲಿ ೫ ವರ್ಷಗಳ
ಹರಾಜು ನಿಗದಿ ಮಾಡಿದ್ದನು. ಆದರೆ, ೧೭೭೭ ರಲ್ಲಿ
ಅದನ್ನು ವಾರ್ಷಿಕ ಹರಾಜು ಪದ್ಧತಿಗೆ ಬದಲಿಸಿದನು.
• ಕಂದಾಯ ದಾಖಲೆಗಳ ನಿರ್ವಹಣೆಗೆ
ಪ್ರತ್ಯೇಕ ವ್ಯವಸ್ಥೆ ಮಾಡಿದನು.
• ರೈತರನ್ನು ಶೋಷಿಸುತ್ತಿದ್ದ
ಲೇವಾ-ದೇವಿಗಾರರ ನಿಯಂತ್ರಣಕ್ಕೆ ಕ್ರಮ
ಕೈಗೊಂಡನು.
3.
ವಾಣಿಜ್ಯ ಸುಧಾರಣೆಗಳು.
• ದಸ್ತಕ್ ದುರುಪಯೋಗ ತಡೆಯಲು
ಅವುಗಳನ್ನು ರದ್ದುಗೊಳಿಸಿದನು.
• ಅಸಂಖ್ಯಾತ ಸುಂಕದಕಟ್ಟೆಗಳನ್ನು ರದ್ದುಗೊಳಿಸಿ
ಕೇವಲ ೫ ಪ್ರಮುಖ
ಸುಂಕದ ಕಟ್ಟೆಗಳನ್ನು ಸ್ಥಾಪನೆ ಮಾಡಿ ವಸ್ತುಗಳ
ಸುಗಮ ಸಾಗಾಣಿಕೆಗೆ ಅನುಕೂಲ ಕಲ್ಪಿಸಿದನು. ಅವುಗಳೆಂದರೆ, ಕಲ್ಕತ್ತಾ, ಮುರ್ಶಿದಾಬಾದ್,
ಹೂಗ್ಲಿ, ಪಾಟ್ನಾ, ಮತ್ತು ಢಾಕಾ.
• ಉಪ್ಪು, ಅಡಿಕೆ ಮತ್ತು
ತಂಬಾಕುಗಳನ್ನು ಹೊರತುಪಡಿಸಿ ಇತರೆ ವಸ್ತುಗಳ ಮೇಲಿನ
ತೆರಿಗೆಯನ್ನು ಶೇ. ೨.೫ ರಷ್ಟು
ಇಳಿಸಿದನು.
• ವಾಣಿಜ್ಯ ವ್ಯವಹಾರಗಳಿಗೆ ಅನುಕೂಲವಾಗಲೆಂದು ಬ್ಯಾಂಕ್
ಆಫ್ ಕಲ್ಕತ್ತಾ ಸ್ಥಾಪನೆ
ಮಾಡಿದನು.
• ಭ್ರಷ್ಟಾಚಾರ ತಡೆಯಲು ನೌಕರರ ವೇತನ ಹೆಚ್ಚಳ ಮಾಡಿದನು.
4. ನ್ಯಾಯಾಂಗದ ಸುಧಾರಣೆಗಳು.
• ಎರಡು ವಿಭಾಗಗಳಲ್ಲಿ ನ್ಯಾಯಾಂಗದ
ಸುಧಾರಣೆಗಳನ್ನು ಮಾಡಿದನು.
A.
ಸಿವಿಲ್ ನ್ಯಾಯಾಲಯಗಳು ಮತ್ತು
B. ಕ್ರಿಮಿನಲ್ ನ್ಯಾಯಾಲಯಗಳ ಸುಧಾರಣೆಗಳು.
A. ಸಿವಿಲ್
ನ್ಯಾಯಾಲಯಗಳ
ಸುಧಾರಣೆಗಳು.
• ಜಿಲ್ಲಾ ಮಟ್ಟದಲ್ಲಿ “ಮುಫಸಿಲ್
ದಿವಾನಿ ಅದಾಲತ್”ಗಳ ಸ್ಥಾಪನೆ
ಮಾಡಿ ಜಿಲ್ಲಾ ಕಲೆಕ್ಟರುಗಳನ್ನು ಅವುಗಳ ಮುಖ್ಯಸ್ತರಾಗಿ ನೇಮಕ
ಮಾಡಿದನು.
• ೧೭೮೦ ರಲ್ಲಿ ವಿಭಾಗ
ಮಟ್ಟದಲ್ಲಿ ದಿವಾನಿ ಅದಾಲತ್ಗಳನ್ನು ಸ್ಥಾಪನೆಮಾಡಿದನು.
ಇವು
ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ಅಪೀಲು
ಅಥವಾ ಮೇಲ್ಮನವಿ ನ್ಯಾಯಾಲಯಗಳಾಗಿದ್ದವು.
• ದಿವಾನಿ ನ್ಯಾಯಾಲಯಗಳ ಅಧೀಕ್ಷಕರು
ಇವುಗಳ ಮುಖ್ಯ ನ್ಯಾಯಾಧೀಶರಾಗಿದ್ದರು.
ಇವರಿಗೆ ಇಬ್ಬರು ಸಹಾಯಕರನ್ನು ನೇಮಿಸಲಾಯಿತು.
• ಪರಗಣಗಳಲ್ಲಿ ಕೆಳ ಹಂತದ ಸ್ಥಳೀಯ
ನ್ಯಾಯಾಲಯಗಳನ್ನು ವ್ಯವಸ್ಥೆಗೊಳಿಸಿ ಅವುಗಳಿಗೆ
ಸಣ್ಣ ಪ್ರಮಾಣದ ವ್ಯಾಜ್ಯಗಳನ್ನು ವಿಚಾರಣೆ ನಡೆಸಿ ನ್ಯಾಯನಿರ್ಣಯ ನೀಡುವ ಅಧಿಕಾರ ನೀಡಿದನು.
• ನ್ಯಾಯ ತೀರ್ಮಾನಕ್ಕೆ ಹಿಂದೂ ಮತ್ತು ಮುಸ್ಲೀಂ ಕಾನೂನುಗಳನ್ನು
ಬಳಸುವಂತೆ ವ್ಯವಸ್ಥೆಗೊಳಿಸಿದನು.
• ಕ್ರೂರ ಮತ್ತು ಕಠಿಣ ಶಿಕ್ಷೆಗಳನ್ನು ರದ್ದುಗೊಳಿಸಿದನು.
B. ಕ್ರಿಮಿನಲ್
ನ್ಯಾಯಾಲಯಗಳ
ಸುಧಾರಣೆಗಳು.
• ಜಿಲ್ಲಾ ಮಟ್ಟದಲ್ಲಿ ನಿಜಾಮತ್
ಅದಾಲತ್ಗಳ ಸ್ಥಾಪನೆ ಮಾಡಿದನು.
• ೧೭೭೪ ರಲ್ಲಿ ’ಸದರ್
ನಿಜಾಮತ್ ಅದಾಲತ್’ಗಳನ್ನು ವಿಭಾಗ ಮಟ್ಟದಲ್ಲಿ ಸ್ಥಾಪನೆ
ಮಾಡಿದನು.
ಇವುಗಳಿಗೆ ಭಾರತೀಯ ಅಧಿಕಾರಿಗಳನ್ನು ನೇಮಕ
ಮಾಡಿದನು.
• ಶೀಘ್ರ ನ್ಯಾಯ ವಿತರಣೆಗೆ
ಆದ್ಯತೆ ನೀಡಿದನು.
5. ಇತರೆ ಸುಧಾರಣೆಗಳು.
• ವಿಲಿಯಂ ಜೋನ್ಸ್ ಅಧ್ಯಕ್ಷತೆಯಲ್ಲಿ ೧೭೮೪ ರಲ್ಲಿ ಬೆಂಗಾಲ್ ಏಷಿಯಾಟಿಕ್ ಸೊಸೈಟಿಯನ್ನು ಸ್ಥಾಪನೆ ಮಾಡಲು ಅನುಮತಿಸಿದನು.
Comments
Post a Comment