ಫಿರೋಜ್ ಶಾ ತುಘಲಕ್‌ನ ಸುಧಾರಣೆಗಳು.
FIROZ SHAH TUGHLUQ 1351 – 1388
ಆಂತರಿಕ ನೀತಿ
- DOMESTIC POLICY:- ಫಿರೋಜ್ ಶಾನು ಕೈಗೊಂಡ ಆಡಳಿತಾತ್ಮಕ ಸುಧಾರಣೆಗಳನ್ನು ಅವನ ಆಂತರಿಕ ನೀತಿ
ಅಥವಾ Domestic Policy ಎಂದು ಕರೆಯಲಾಗಿದೆ. ಅವನು ಮಾಡಿದ ಹಲವು ಸುಧಾರಣೆಗಳ ವಿವರಗಳು ಕೆಳಕಂಡಂತಿವೆ.
೧. ಕಂದಾಯ ಸುಧಾರಣೆ: ಅನಗತ್ಯ ೨೪ ರಿಂದ ೨೬ ರಷ್ಟು ತೆರಿಗೆಗಳ ರದ್ದು.
ಖುರಾನ್ ನಿಗದಿಪಡಿಸಿದ ೪ ತೆರಿಗೆಗಳ ಜಾರಿ. ಅಧಿಕಾರಿಗಳಿಗೆ ಕಂದಾಯ ವಸೂಲಿಗೆ ಕಟ್ಟುನಿಟ್ಟಿನ ಆದೇಶ.
ನಿಗದಿತ ಕಂದಾಯ ಮಾತ್ರ ವಸೂಲಿಗೆ ಆದೇಶ. ತಪ್ಪಿದಲ್ಲಿ ಶಿಕ್ಷೆ. ಅನಗತ್ಯ ವ್ಯಾಪಾರಿ ತೆರಿಗೆಗಳ ರದ್ದು;
ಸುಗಮ ಸರಕು ಸಂಚಾರಕ್ಕೆ ಅವಕಾಶ. ನೀರಾವರಿ ಭೂಮಿಗಳ ಮೇಲೆ ಉತ್ಪಾದನೆಯ ಶೇ. ೧೦ ರಷ್ಟು ತೆರಿಗೆ. (ಪರ್ಬ್)
ಖಾಲ್ಸಾ (ಸರ್ಕಾರಿ ಒಡೆತನದ) ಜಮೀನುಗಳ ಮೇಲೆ ಹಿಂದಿನ ದಾಖಲೆಗಳನ್ನು ಆಧರಿಸಿ ತೆರಿಗೆ ನಿಗದಿ. ಬ್ರಾಹ್ಮಣರ
ಮೇಲೂ ಜೆಸಿಯಾ ಕಂದಾಯ ಹೇರಿಕೆ. ಮೇಲಿನ ಕ್ರಮಗಳಿಂದ ರಾಜ್ಯದ ಆದಾಯ ಹೆಚ್ಚಳ; ಸಮೃದ್ಧಿ.
ಪರಿಣಾಮಗಳು: ಶಂಶಿ ಇ ಸಿರಾಜನ ಹೇಳಿಕೆ:- “ಸುಲ್ತಾನನ ಕ್ರಮಗಳಿಂದ
ರೈತರ ಮನೆಗಳು ದವಸ-ಧಾನ್ಯ, ಪೀಠೋಪಕರಣಗಳಿಂದ ಕೂಡಿದ್ದವು. ಪ್ರಜೆಗಳಲ್ಲಿ ಸಾಕಷ್ಟು ಚಿನ್ನ-ಬೆಳ್ಳಿ
ಲಭ್ಯವಿತ್ತು. ಯಾವೊಬ್ಬ ಮಹಿಳೆಯೂ ಆಭರಣಗಳಿಲ್ಲದೇ ಇರುತ್ತಿರಲಿಲ್ಲ. ಇವನ ಕಾಲದಲ್ಲಿ ಎಂದಿಗೂ ಆರ್ಥಿಕ
ದಿವಾಳಿತನ ಉಂಟಾಗಲಿಲ್ಲ. ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳು ಹೇರಳವಾಗಿ ದೊರೆಯುತ್ತಿದ್ದವು.”
೨. ಸಾರ್ವಜನಿಕ ಕಾಮಗಾರಿಗಳು: ಚಿರಸ್ಮರಣೀಯ ಕಾರ್ಯಗಳು. ಸು. ೩೦೦ ಪಟ್ಟಣಗಳ
ನಿರ್ಮಾಣ ಮಾಡಿದನೆಂಬ ಅಭಿಪ್ರಾಯ. ಸಾರ್ವಜನಿಕರ ಅನುಕೂಲಕ್ಕಾಗಿ:-
ಪ್ರಮುಖ ಪಟ್ಟಣಗಳು – ಇಸ್ಸಾರ್ ಫಿರೋಜ್, ಫತೇಬಾದ್, ಫಿರೋಜಪುರ,
ಜೌನ್ಪುರ, ಫಿರೋಜಾಬಾದ್ (ದೆಹಲಿಯ ಹೊರವಲಯ). ಫೆರಿಶ್ತಾನ ಪ್ರಕಾರ ಇವನು ಕೈಗೊಂಡ ಸಾರ್ವಜನಿಕ ಕಾಮಗಾರಿಗಳು:-
೫೦ ಅಣೆಕಟ್ಟುಗಳು, ೪೦ ಮಸೀದಿಗಳು, ೩೦ ಮದರಸಾಗಳು, ೨೦ ಅರಮನೆಗಳು, ೧೦೦ ಸರಾಯಿಗಳು, ೨೦೦ ಪಟ್ಟಣಗಳು,
೨೦ ಸರೋವರಗಳು, ೧೦೦ ದವಾಖಾನೆಗಳು, ೫ ಸಮಾಧಿಗಳು, ೧೦೦ ಸಾರ್ವಜನಿಕ ಸ್ನಾನಘಟ್ಟಗಳು, ೧೦ ಸ್ಮರಣ ಸ್ತಂಭಗಳು,
ಮತ್ತು ೧೫೦ ಸೇತುವೆಗಳು.
೩. ಇತರೆ ದುರಸ್ತಿ ಕಾಮಗಾರಿಗಳು:- ಹಳೆಯ ಸ್ಮಾರಕಗಳ ದುರಸ್ತಿ:- ಅಲ್ಲಾವುದ್ದೀನನ
ಕಾಲದ ೩೦ ಉದ್ಯಾನಗಳ ದುರಸ್ತಿ. ಅಶೋಕನ ಎರಡು ಶಾಸನಗಳನ್ನು (ತೋಪ್ರ ಮತ್ತು ಮೀರತ್) ಫಿರೋಜಾಬಾಧ್ ನಲ್ಲಿ
ಸಂರಕ್ಷಿಸಿದ. ದೆಹಲಿಯ ಜಾಮಿ ಮಸೀದಿ, ಕುತುಬ್ ಮಿನಾರ್, ಖಿಲ್ಜಿಯ ಸಮಾಧಿ, ಬಹ್ರಾಮ್ ಶಾ, ಜಲಾಲುದ್ದೀನ್
ಖಿಲ್ಜಿ, ನಿಜಾಮುದ್ದೀನ್ ಔಲಿಯಾರ ಸಮಾಧಿಗಳ ದುರಸ್ತಿ.
೪. ನೀರಾವರಿ: ರೈತರ ಅನುಕೂಲಕ್ಕಾಗಿ ೪ ನೀರಾವರಿ ಕಾಲುವೆಗಳನ್ನು
ತೋಡಿಸಿದ. ಸಟ್ಲೆಜ್ ನದಿಯಿಂದ ಘಗರ್ ವರೆಗೆ (೯೬ ಮೈಲಿಗಳು). ಮಾಂಡೋವಿಯಿಂದ ಹಂಸಿಯವರೆಗೆ. ಘಗರನಿಂದ ಹರಿನಿಖೇರ್ ಗ್ರಾಮದವರೆಗೆ. ಯಮುನಾ ನದಿಯಿಂದ ಫಿರೋಜಾಬಾದ್
ನಗರದವರೆಗೆ (೧೫೦ ಮೈಲಿಗಳು). ಕಾಲುವೆಗಳ ಪರಿಶೀಲನೆಗೆ ನೀರಾವರಿ ತಜ್ಞರ ನೇಮಕ. ಹೊಸ ತಳಿಯ ಹಣ್ಣು
ಮತ್ತು ತೋಟಗಾರಿಕೆ ಬೆಳೆಗಳ ಪರಿಚಯ. ನಗರ-ಪಟ್ಟಣಗಳಿಗೆ ಕುಡಿಯುವ ನೀರಿನ ಸೌಲಭ್ಯ. ರಾಜ್ಯದ ಒಡೆತನದಲ್ಲಿ
ಸು. ೧೨೦೦ ರಷ್ಟು ವಿವಿಧ ತೋಟಗಳು. ಪಾಳುಭೂಮಿಯನ್ನು ಕೃಷಿಗೆ ಒಳಪಡಿಸಿದ; ಆದಾಯವನ್ನು ಧಾರ್ಮಿಕ ಮತ್ತು
ಶಿಕ್ಷಣ ಕ್ಷೇತ್ರಕ್ಕೆ ಬಳಕೆ. ಈ ಕ್ರಮಗಳಿಂದ ನೀರಾವರಿ ಸೌಲಭ್ಯ ಹೆಚ್ಚಿ, ಉತ್ಪಾದನೆ ಮತ್ತು ವ್ಯಾಪಾರಗಳು
ವೃದ್ಧಿಯಾದವು.
೫. ನ್ಯಾಯಾಂಗದ ಸುಧಾರಣೆ: ನ್ಯಾಯ ವಿತರಣೆಯು ಮುಸ್ಲೀಂ ಕಾನೂನುಗಳನ್ನು
ಆಧರಿಸಿತ್ತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಧಾರ್ಮಿಕ ಮುಖಂಡರ ಪ್ರಭಾವ ಹೆಚ್ಚಿಸಿದ. ಕೇಂದ್ರದಲ್ಲಿ
ಮುಖ್ಯ ಖಾಜಿ ಮತ್ತು ಪ್ರಾಂತ್ಯಗಳಲ್ಲಿ ಖಾಜಿಗಳನ್ನು ನೇಮಿಸಿದ. ಕ್ರೂರ ಶಿಕ್ಷೆಗಳ ರದ್ದು.
ಫಿರೋಜ್:- “ಅನ್ಯಾಯದ
ಕೊಲೆ ಮತ್ತು ಕ್ರೂರ ಶಿಕ್ಷೆಗಳನ್ನು ತಡೆಯಲು ದೇವರು ನನ್ನನ್ನು ಸೃಷ್ಠಿಸಿದ್ದಾನೆ”
೬. ಮಾನವೀಯ ಕಾರ್ಯಗಳು:
ಉದ್ಯೋಗ ನೀಡಲು ಪ್ರತ್ಯೇಕ ಇಲಾಖೆಯ ಸ್ಥಾಪನೆ. ದಿವಾನ್ ಇ ಖೈರತ್ (ಅಶಕ್ತರಿಗೆ ಸಹಾಯ ಮಾಡಲು). ದಾರ್
ಉಲ್ ಶಫಾ (ಉಚಿತ ದವಾಖಾನೆ).
೭. ನಾಣ್ಯ ಸುಧಾರಣೆ: ಮಹಮ್ಮದ್ ಕಾಲದ ಕೆಲವು ನಾಣ್ಯಗಳನ್ನು ಮುಂದುವರಿಸಿದರೂ,
ಬಡವರ ಅನುಕೂಲಕ್ಕಾಗಿ “ಅರ್ಧ”, “ಬಿಕ್”
ಮತ್ತು “ಷಶ್ಟಾಣಿ” ಎಂಬ ಹೊಸ ನಾಣ್ಯಗಳನ್ನು ಜಾರಿಗೆ ತಂದನು.
೯. ಶಿಕ್ಷಣಮ ಸಾಹಿತ್ಯ ಕ್ಷೇತ್ರದ ಪೋಷಣೆ: ೩ ಕಾಲೇಜುಗಳು ಸೇರಿದಂತೆ ೩೦ ಮದರಸಾಗಳ ನಿರ್ಮಾಣ.
ಶಿಕ್ಷಕರಿಗೆ ಉತ್ತಮ ವೇತನ. ವಿದ್ಯಾರ್ಥಿ ವೇತನ. ವಿದ್ವಾಂಸರಿಗೆ ಮತ್ತು ಖುರಾನ್ ಬೋಧಕರಿಗೆ ಸು. ೩೬
ಲಕ್ಷ ಟಂಕಗಳಷ್ಟು ಹಣ ವಿನಿಯೋಗ.
ಸಾಹಿತ್ಯ:- ಜಿಯಾವುದ್ದೀನ್ ಬರೌನಿ ಫತ್ವಾ ಎ ಜಹಾಂದಾರಿ, ಶಂಶಿ ಇ ಸಿರಾಜ್ –
ತಾರಿಕ್ ಎ ಫಿರೋಜ್ ಶಾಹಿ ಮತ್ತು ಸ್ವತಃ ಸುಲ್ತಾನ – ಫತುಹತ್ ಫಿರೋಜ್ ಶಾಹಿ ಎಂಬ ಕೃತಿಗಳು. ಸಂಸ್ಕೃತ
ಭಾಷೆಯ ಕೃತಿಗಳ ಭಾಷಾಂತರ.
೧೦. ಗುಲಾಮರ ಮತ್ತು ಕಾರ್ಖಾನೆಗಳ ವ್ಯವಸ್ಥೆ: ಸು. ೧.೮ ಲಕ್ಷ ಗುಲಾಮರು. ದಾಳಿಗಳ ವೇಳೆ ಖರೀದಿ
ಮತ್ತು ಬಳುವಳಿಗಳ ರೂಪದಲ್ಲಿ. ಪ್ರತ್ಯೇಕ ಇಲಾಖೆ. ಸುಲ್ತಾನನಿಗೆ ೪೦ ಸಾವಿರ ಗುಲಾಮರ ಸೇವೆ. ಕೆಲವರಿಗೆ
ಉನ್ನತ ಹುದ್ದೆಗಳು. ಕುಶಲ ತರಬೇತಿ – ಕಾರಖಾನೆಗಳಲ್ಲಿ ನೇಮಕ. ಮುಂದೆ ಇವನ ಮರಣಾನಂತರ ರಾಜಕೀಯ ಪ್ರಭಾವಿಗಳಾದರು.
೧೧. ಸೈನಿಕ ಆಡಳಿತ: ಸೈನಿಕ ಆಡಳಿತ ದುರ್ಬಲವಾಗಿತ್ತು. ಅಧಿಕಾರಿ
ಮತ್ತು ಸೈನಿಕರ ಹುದ್ದೆಗಳನ್ನು ವಂಶಪಾರಂಪರ್ಯಗೊಳಿಸಿದ. ೨ ವಿಧದಲ್ಲಿ ವೇತನ:- ಜಹಗೀರುಗಳು ಮತ್ತು
ಖಜಾನೆಯಿಂದ ವೇತನ. ಕೇಂದ್ರದಲ್ಲಿ ಸು. ೮೦-೯೦ ಸಾವಿರದಷ್ಟು ಅಶ್ವಸೈನ್ಯ ಇತ್ತು. ಹೆಚ್ಚಿನ ಸೈನ್ಯ
ಅಮೀರರು ಮತ್ತು ಪ್ರಾಂತೀಯ ಅಧಿಕಾರಿಗಳಿಂದ ಪೂರೈಕೆ. ಸುಲ್ತಾನ ಸೇನಾಡಳಿತದಲ್ಲಿ ಶಿಸ್ತು ಮೂಡಿಸಲು
ಕ್ರಮ ವಹಿಸಲಿಲ್ಲ.
೧೨. ಧಾರ್ಮಿಕ ನೀತಿ: ಧಾರ್ಮಿಕವಾಗಿ ಮತಾಂಧ. ರಾಜ್ಯಾಡಳಿತದಲ್ಲಿ ಉಲೇಮಾಗಳ ಪ್ರಭಾವ. ಖಲೀಫನಿಗೆ ನಿಷ್ಟೆ. ಹಿಂದೂ ಮಾತ್ರವಲ್ಲ ಇತರೆ ಮುಸ್ಲೀಂ ಪಂಥದವರನ್ನೂ ದ್ವೇಷಿಸುತ್ತಿದ್ದ. ಬ್ರಾಹ್ಮಣರ ಮೇಲೆ ಜೆಸಿಯಾ. ದೇವಾಲಯಗಳ ನಾಶ. ಮತಾಂತರಕ್ಕೆ ಪ್ರೋತ್ಸಾಹ.
Comments
Post a Comment