ಲಾರ್ಡ್‌ ಕಾರ್ನವಾಲೀಸ್‌ನಆಡಳಿತಾತ್ಮಕ ಸುಧಾರಣೆಗಳು

Lord Cornwallis and his administration1786-93.

    ಇರನ್‌ ಕಾರ್ನ್‌ವಾಲೀಸ್‌ ಇವನ ತಂದೆ. ಪ್ರತಿಷ್ಠಿತ ಈಟನ್‌ ಶಾಲೆಯಲ್ಲಿ ವಿದ್ಯಾಭ್ಯಾಸ. ಸೈನಿಕ ಕ್ಷೇತ್ರದಲ್ಲಿ ಉತ್ತಮ ತರಬೇತಿ; 22ನೆ ವಯಸ್ಸಿಗೆ ಇಂಗ್ಲೆಂಡಿನ ರಾಜಕೀಯ ಪ್ರವೇಶ. ಸಂಸತ್‌ ಸದಸ್ಯನಾಗಿಯೂ ಕರ್ತವ್ಯ. ಸಪ್ತವಾರ್ಷಿಕ ಯುದ್ಧ ಮತ್ತು ಅಮೆರಿಕಾ ಸ್ವಾತಂತ್ರ್ಯ ಹೋರಾಟದ ಯುದ್ಧಗಳಲ್ಲಿ ಸೇನಾ ನೇತೃತ್ವ. 1776ರಲ್ಲಿ ಜಾರ್ಜ್‌ ವಾಷಿಂಗ್‌ಟನ್‌ನಿಂದ ಸೋಲು. ಉತ್ತಮ ಗುಣಗಳ ಕಾರಣ ಭಾರತದಲ್ಲಿ ಗವರ್ನರ್‌ ಜನರಲ್‌ ಹುದ್ದೆ.

ಸುಧಾರಣೆಗಳು: ಇವನು ಕೈಗೊಂಡ ಆಡಳಿತಾತ್ಮಕ ಸುಧಾರಣೆಗಳು ಈ ಕೆಳಗಿನಂತಿವೆ:-

೧. ಸೇವಾ ಸುಧಾರಣೆಗಳು: ಭ್ರಷ್ಟ ಅಧಿಕಾರಿಗಳ ವಜಾ. ನೌಕರರ ಖಾಸಗೀ ವ್ಯಾಪಾರ ರದ್ದು. ವೇತನ ಹೆಚ್ಚಳ. ಸೇವಾ ನಿಯಮಗಳ ರಚನೆ. ಶಿಫಾರಸ್ಸು ಆಧಾರಿತ ನೇಮಕಗಳಿಗೆ ತಡೆ. ಉನ್ನತ ಹುದ್ದೆಗಳು ಆಂಗ್ಲರಿಗೆ ಮೀಸಲು. ಭಾರತೀಯರಿಗೆ ಕೇವಲ ಕೆಳಹಂತದ ಹುದ್ದೆಗಳು.

೨. ನ್ಯಾಯಾಂಗದ ಸುಧಾರಣೆಗಳು: ಕಂದಾಯ ಇಲಾಖೆಯಿಂದ ನ್ಯಾಯಾಂಗದ ಕಾರ್ಯಗಳನ್ನು ಪ್ರತ್ಯೇಕಗೊಳಿಸಿದನು. ಕಂದಾಯ ಅಧಿಕಾರಿಗಳ ಬದಲು ಪೂರ್ಣಕಾಲಿಕ ನ್ಯಾಯಾಧೀಶರ ನೇಮಕ. ಕ್ರಿಮಿನಲ್‌ & ಸಿವಿಲ್‌ ಎರಡೂಕ್ಷೇತ್ರಗಳಲ್ಲಿ ಸುಧಾರಣೆ. ಅಮಾನವೀಯ ಕಠಿಣ ಶಿಕ್ಷೆಗಳ ರದ್ದು. ೧೭೯೩ ರಲ್ಲಿ ನ್ಯಾಯಾಲಯಗಳ ಶುಲ್ಕ ರದ್ದು. ಆದರೆ ವಕೀಲರು ತಮ್ಮ ಶುಲ್ಕ ನಿಗದಿ ಮಾಡಲು ಅವಕಾಶ.

ಅ. ಕ್ರಿಮಿನಲ್‌ ಪ್ರಕರಣಗಳಿಗೆ: ಕೆಳಹಂತದಲ್ಲಿ ದರೋಗಾ ನ್ಯಾಯಾಲಯಗಳು ಕ್ರಿಮಿನಲ್‌ ಮೊಕದ್ದಮೆಗಳ ವಿಚಾರಣೆ. ಪ್ರತೀ ಜಿಲ್ಲೆಗಳಲ್ಲಿ ಫೌಜುದಾರಿ ನ್ಯಾಯಾಲಯಗಳು. ಮೇಲ್ಮನವಿಗಾಗಿ ನಾಲ್ಕು ಸರ್ಕ್ಯೂಟ್‌ ನ್ಯಾಯಾಲಯಗಳು (ಪ್ರಾಂತೀಯ). ಸದರ್‌ ನಿಜಾಮತ್‌ ಅದಾಲತ್‌ ಸರ್ವೋಚ್ಛ ಕ್ರಿಮಿನಲ್‌ ನ್ಯಾಯಾಲಯ. ಗವರ್ನರ್‌ ಮತ್ತು ಅವನ ಮಂಡಳಿಯ ಸದಸ್ಯರು ಇದರ ಕರ್ತವ್ಯಗಳ ನಿರ್ವಹಣೆ.

ಆ. ಸಿವಿಲ್‌ ಪ್ರಕರಣಗಳಿಗೆ: ಅಮೀನ್‌ ನ್ಯಾಯಾಲಯಗಳು ಕೆಳಹಂತದ ಸಿವಿಲ್‌ ಪ್ರಕರಣಗಳ ವಿಚಾರಣೆ. ಜಿಲ್ಲಾ ಮಟ್ಟದಲ್ಲಿ ದಿವಾನಿ ಅದಾಲತ್‌ಗಳು ಇದ್ದು, ಅವುಗಳಿಗೆ ಬ್ರಿಟೀಷ್‌ ನ್ಯಾಯಾಧೀಶರ ನೇಮಕ; ಇವರ ಸಹಾಯಕ್ಕೆ ಭಾರತೀಯ ಪರಿಣಿತರ ನೆರವು. ಮುರ್ಶಿದಾಬಾದ್‌, ಪಾಟ್ನಾ, ಕಲ್ಕತ್ತಾ ಮತ್ತು ಢಾಕಾಗಳಲ್ಲಿ ನಾಲ್ಕು ಮೇಲ್ಮನವಿ ನ್ಯಾಯಾಲಯಗಳು. ಯೂರೋಪಿಯನ್‌ ನ್ಯಾಯಾಧೀಶರು ಇವುಗಳ ಮುಖ್ಯಸ್ಥರು. ಇವರಿಗೆ ಭಾರತೀಯ ನ್ಯಾಯದರ್ಶಿಗಳ ನೆರವು ಇತ್ತು. ಕಲ್ಕತ್ತಾದ ಸದರ್‌ ದಿವಾನಿ ಅದಾಲತ್‌ ಸರ್ವೋಚ್ಛ ಸಿವಿಲ್‌ ನ್ಯಾಯಾಲಯವಾಗಿತ್ತು. ಇಲ್ಲಿಯೂ ಸಹ ಗವರ್ನರ್‌ ಮತ್ತು ಅವನ ಮಂಡಳಿಯ ಸದಸ್ಯರು ಇದರ ಕರ್ತವ್ಯಗಳ ನಿರ್ವಹಣೆ.

೩. ಪೋಲೀಸ್‌ ಸುಧಾರಣೆಗಳು: ಜಮೀನುದಾರರಿಗೆ ನೀಡಿದ್ದ ರಕ್ಷಣೆಯ ಕಾರ್ಯಗಳನ್ನು ಹಿಂಪಡೆಯಲಾಯಿತು. ಅವರ ಬದಲು ಪ್ರತ್ಯೇಕ ಪೋಲೀಸ್‌ ವ್ಯವಸ್ಥೆ ಜಾರಿಗೊಳಿಸಿದನು. ಜಿಲ್ಲೆಗಳನ್ನು ಠಾಣಾಗಳನ್ನಾಗಿ ವಿಭಜಿಸಿ ಅವುಗಳಿಗೆ ಪೋಲೀಸ್ ಇನ್‌ಸ್ಪೆಕ್ಟರ್‌ಗಳ ನೇಮಕ. ಇವರ ಮೇಲೆ ಜಿಲ್ಲಾ ಕೇಂದ್ರಗಳಲ್ಲಿ ಪೋಲೀಸ್‌ ಸುಪರಿಡೆಂಡೆಂಟ್‌ಗಳ ನೇಮಕ. ಇವರುಗಳ ಸಹಾಯಕ್ಕಾಗಿ ಪೋಲೀಸ್‌ ಪೇದೆಗಳ ನೇಮಕ. ೧೭೯೧ ರಲ್ಲಿ ಕಲ್ಕತ್ತಾ ನಗರಕ್ಕೆ ಪ್ರತ್ಯೇಕ ಪೋಲೀಸ್‌ ಸುಪರಿಡೆಂಡೆಂಟ್‌ ನೇಮಕ. ಪೋಲೀಸ್‌ ಅಧಿಕಾರಿಗಳಿಗೆ ಉತ್ತಮ ವೇತನ ನಿಗದಿ. ಉತ್ತಮ ಸೇವೆಗೆ ಪ್ರಶಂಸೆ ಮತ್ತು ಪುರಸ್ಕಾರಗಳು. ಜಿಲ್ಲಾ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪೋಲೀಸರು ಕರ್ತವ್ಯ ನಿರ್ವಹಣೆ. ಶಾಂತಿ ಮತ್ತು ಸುರಕ್ಷತೆಗಳು ನೆಲೆಸಿದವು.

೪. ಕಂದಾಯ ಸುಧಾರಣೆಗಳು: ಹಿನ್ನೆಲೆ:- ಜಮೀನುದಾರರು ಸಾಂಪ್ರದಾಯಿಕ ಕಂದಾಯ ವಸೂಲಿದಾರರು. ದಿವಾನಿ ಹಕ್ಕು ಲಭಿಸಿದ ನಂತರವೂ ಜಮೀನುದಾರರು ಕಂದಾಯ ವಸೂಲಿ ಮಾಡಿ ಕಂಪೆನಿಗೆ ಸಲ್ಲಿಸುತ್ತಿದ್ದರು. ಜಮೀನುದಾರರ ಮೇಲ್ವಿಚಾರಣೆಗಾಗಿ ೧೭೬೯ ರಲ್ಲಿ ಆಂಗ್ಲ ಕಂದಾಯ ನಿರೀಕ್ಷಕರ ನೇಮಕ. ೧೭೭೨ ರಲ್ಲಿ ಐದು ವರ್ಷಗಳ ಹರಾಜು ಪದ್ಧತಿ ಜಾರಿ; ೧೭೭೭ ರಲ್ಲಿ ಅದನ್ನು ವಾರ್ಷಿಕ ಹರಾಜು ವ್ಯವಸ್ಥೆಯಾಗಿ ಬದಲಾವಣೆ. ಅವ್ಯವಸ್ಥೆ ಕಾರಣ ಹೊಸ ಪದ್ಧತಿಯ ಜಾರಿಗೆ ೧೭೮೪ ರಲ್ಲಿ ನಿರ್ದೇಶಕರ ಮಂಡಳಿಯಿಂದ ಸೂಚನೆ. ೧೭೯೩ ರಲ್ಲಿ ಜಾನ್‌ ಶೋರ್‌ ನೇತೃತ್ವದಲ್ಲಿ ಹೊಸ ಪದ್ಧತಿ ಜಾರಿ.

ಶಾಶ್ವತ ಭೂಕಂದಾಯ ಪದ್ಧತಿಯ ಸ್ವರೂಪ:

ಅ. ಜಮೀನುದಾರರಿಗೆ ಶಾಶ್ವತ ಭೂ ಒಡೆತನ.

ಆ. ಹತ್ತು ವರ್ಷಗಳವರೆಗೆ ಒಪ್ಪಂದ.

ಇ. ಮಾರುವ ಮತ್ತು ಪರಭಾರೆ ಮಾಡುವ ಅಧಿಕಾರ.

ಈ. ಅವರಿಗೆ ಕಂದಾಯ ವಸೂಲಿಯ ಹಕ್ಕು.

ಉ. ಮೊದಲ ವರ್ಷ ಅಂದರೆ ೧೭೯೩ರಲ್ಲಿ ಇದ್ದ ತೆರಿಗೆಯನ್ನು ಸ್ಥಿರಗೊಳಿಸಲಾಯಿತು.

ಊ. ಪ್ರತಿವರ್ಷ ಕಂಪೆನಿ ನಿಗದಿಪಡಿಸಿದ ಪ್ರಮಾಣದ ಕಂದಾಯ ಸಲ್ಲಿಕೆಯ ಷರತ್ತು.

ಋ. ಉಳಿದದ್ದು ಜಮೀನುದಾರರಿಗೆ. ಹೆಚ್ಚುವರಿ ಕಂದಾಯದ ಮೊತ್ತವೂ ಅವರದೇ.

ಎ. ನಿಗದಿತ ಕಂದಾಯ ಸಲ್ಲಿಸದ ಜಮೀನುದಾರರ ಭೂ ಒಡೆತನ ರದ್ದುಗೊಳಿಸುವ ಹಕ್ಕು ಕಂಪೆನಿಗೆ.

ಗುಣಗಳು:

ಅ. ಕಂಪೆನಿಗೆ ನಿಗದಿತ ಕಂದಾಯ ಸಲ್ಲಿಕೆ.

ಆ. ಕಂಪೆನಿಗೆ ನಿಶ್ಚಿತ ಆದಾಯದ ಖಾತರಿ.

ಇ. ವಾರ್ಷಿಕ ಅನಾನುಕೂಲಗಳಿಂದ ಮುಕ್ತ.

ಈ. ಕಂದಾಯ ವಸೂಲಿಗೆ ತಗುಲುತ್ತಿದ್ದ ವೆಚ್ಚದ ಉಳಿತಾಯ.

ಉ. ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ.

ಊ. ಕೃಷಿ ಭೂಮಿಯ ವಿಸ್ತರಣೆ.

ಋ. ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆ.

ಎ. ಕಂಪೆನಿಯ ದಕ್ಷತೆ ಹೆಚ್ಚಿತು. ಕಂಪೆನಿಗೆ ನಿಷ್ಠರಾದ ಜಮೀನುದಾರರ ಬೆಂಬಲ.

ದೋಷಗಳು:

ಅ. ರೈತರ ಹಿತ ಕಡೆಗಣಿಸಲಾಯಿತು.

ಆ. ಅವರು ಭೂಒಡೆತನ ಕಳೆದುಕೊಂಡರು.

ಇ. ಜಮೀನುದಾರರ ದಬ್ಬಾಳಿಕೆ ಹೆಚ್ಚಿತು.

ಈ. ಕಂಪೆನಿ ಹತ್ತು ವರ್ಷಗಳ ತನಕ ಕಂದಾಯ ಹೆಚ್ಚಿಸುವ ಹಕ್ಕು ಕಳೆದುಕೊಂಡಿತು.

ಉ. ಇತರೆ ಕ್ಷೇತ್ರಗಳ ಮೇಲೆ ತೆರಿಗೆ ಹೆಚ್ಚಳ.

ಊ. ಜಮೀನುದಾರರ ಐಷಾರಾಮಿ ಜೀವನಕ್ಕೆ ದಾರಿ.

ಋ. ಮಧ್ಯವರ್ತಿಗಳ ಹಾವಳಿ ಆರಂಭವಾಯಿತು.

೫. ವಾಣಿಜ್ಯ ಸುಧಾರಣೆಗಳು: ಆರಂಭ ಕಾಲದಿಂದಲೂ ಕಂಪೆನಿಗೆ ಭಾರತೀಯ ಮತ್ತು ಆಂಗ್ಲ ಗುತ್ತಿಗೆದಾರರು ವಾಣಿಜ್ಯ ವಸ್ತುಗಳನ್ನು ಒದಗಿಸುತ್ತಿದ್ದರು. ಆದರೆ, ಅವರು ಒದಗಿಸುತ್ತಿದ್ದ ವಸ್ತುಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತಿದ್ದವು. ಇದರಿಂದ ಕಂಪೆನಿಗೆ ವ್ಯಾಪಾರದಲ್ಲಿ ಆರ್ಥಿಕ ನಷ್ಟವುಂಟಾಗುತ್ತಿತ್ತು. ಇದನ್ನು ತಡೆಯಲು ಕಾರ್ನವಾಲೀಸನು ಗುತ್ತಿಗೆದಾರರಿಂದ ವಾಣಿಜ್ಯ ವಸ್ತುಗಳನ್ನು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಿದನು. ಅದರ ಬದಲು ಕಂಪೆನಿಯ ಪ್ರತಿನಿಧಿಗಳ ಮೂಲಕ ವಸ್ತುಗಳ ಉತ್ಪಾದಕರಿಗೆ ಮುಂಗಡ ಹಣ ನೀಡಿ ಮೊದಲೇ ವಸ್ತುಗಳ ಬೆಲೆ ನಿಗದಿಪಡಿಸುವ ಮೂಲಕ ಉತ್ತಮ ಗುಣಮಟ್ಟದ ವಾಣಿಜ್ಯ ವಸ್ತುಗಳನ್ನು ಪೂರೈಸುವ ಪದ್ಧತಿಯನ್ನು ಜಾರಿಗೊಳಿಸಿದನು. ಅಲ್ಲದೇ ಕಂಪೆನಿಯ ವಾಣಿಜ್ಯ ಮಂಡಳಿಯ ಸದಸ್ಯರ ಸಂಖ್ಯೆಯನ್ನು ೧೧ ರಿಂದ ೫ ಕ್ಕೆ ಇಳಿಸಿದನು ಮತ್ತು ವಾಣಿಜ್ಯ ಮಂಡಳಿಯನ್ನು ಗವರ್ನರ್‌ ಮಂಡಳಿಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡಿದನು. ಜೊತೆಗೆ ವ್ಯಾಪಾರಸ್ಥರಿಗೆ ಮುಕ್ತ ವಾತಾವರಣ ಕಲ್ಪಿಸಿದನು.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources