ವೆಲ್ಲೆಸ್ಲಿಯ ರಾಜ್ಯ ವಿಸ್ತರಣೆಯ ಮುಂದುವರಿಕೆ - ವಿದೇಶಾಂಗ ನೀತಿ.

 

ಯುದ್ಧಗಳ ಮೂಲಕ ಗೆದ್ದ ಪ್ರದೇಶಗಳುಮೈಸೂರು ರಾಜ್ಯ ಮತ್ತು ಮರಾಠರ ದಮನ

ನಾಲ್ಕನೆ ಆಂಗ್ಲೋ-ಮೈಸೂರು ಯುದ್ಧ - ೧೭೯೯

ಟಿಪ್ಪು ಮತ್ತು ಆಂಗ್ಲರ ನಡುವೆ.

ಕಾರಣಗಳು:- ಮೂರನೆ ಆಂಗ್ಲೋ-ಮೈಸೂರು ಯುದ್ಧದ ಸೋಲು ಮತ್ತು ಅವಮಾನಕರ ಒಪ್ಪಂದ.

ಟಿಪ್ಪುವಿನ ರಾಯಭಾರಿ ಚಟುವಟಿಕೆಗಳು.

ಸಹಾಯಕ ಸೈನ್ಯ ಪದ್ಧತಿಗೆ ಒಳಪಡಲು ನಿರಾಕರಣೆ.

ಯುದ್ಧದ ಗತಿ: ವೆಲ್ಲೆಸ್ಲಿಯು ನಿಜಾಮ ಮತ್ತು ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡು ಯುದ್ಧದ ಸಿದ್ಧತೆ.

೧೭೯೯ ಮಾರ್ಚ್-ಏಪ್ರಿಲ್ ವೇಳೆಗೆ ಯುದ್ಧ ಆರಂಭ.

ಹ್ಯಾರಿಸ್ ಮತ್ತು ಆರ್ಥರ್ ವೆಲ್ಲೆಸ್ಲಿಯವರ ನೇತೃತ್ವ.

ಮಳವಳ್ಳಿ ಮತ್ತು ಸಿದ್ದೇಶ್ವರದ ಯುದ್ಧಗಳಲ್ಲಿ ಟಿಪ್ಪುವಿಗೆ ಸೋಲು.

ಮೇ , ಶ್ರೀರಂಗಪಟ್ಟಣದ ಮುತ್ತಿಗೆ; ಟಿಪ್ಪುವಿನ ವೀರ ಮರಣ.

ಗೆದ್ದ ರಾಜ್ಯವನ್ನು ಆಂಗ್ಲರು, ಮರಾಠರು ಮತ್ತು ನಿಜಾಮರು ಹಂಚಿಕೊಂಡರು.

ಶ್ರೀರಂಗಪಟ್ಟಣ, ಕೆನರಾ ಮತ್ತು ದಿಂಡಿಗಲ್ ಪ್ರದೇಶಗಳನ್ನು ಆಂಗ್ಲರು ಪಡೆದರು.

ವಾಯುವ್ಯ ಭಾಗದ ಪ್ರದೇಶಗಳನ್ನು ಮರಾಠರಿಗೂ ಮತ್ತು ಈಶಾನ್ಯದ ಪ್ರದೇಶಗಳನ್ನು ನಿಜಾಮನಿಗೂ ಕೊಡಲಾಯಿತು.

ಇನ್ನುಳಿದ ಹಳೇ ಮೈಸೂರು ಪ್ರದೇಶಗಳನ್ನು ಒಡೆಯರ್ ಮನೆತನಕ್ಕೆ ಬಿಟ್ಟುಕೊಡಲಾಯಿತು.

ಮೈಸೂರು ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟಿತು.

 

ಎರಡನೆ ಆಂಗ್ಲೋ-ಮರಾಠಾ ಯುದ್ಧ೧೮೦೨-೦೪

ಸ್ವಲ್ಪ ಹಿನ್ನೆಲೆ:- ೨ನೆ ಮಾಧವರಾಯ ೧೭೯೫ ರಲ್ಲಿ ಮರಣ; ನಾನಾ ಫಡ್ನವೀಸ್ ರಘೋಬನ ಮಗ ೨ನೆ ಬಾಜಿರಾಯನನ್ನು ಅಧಿಕಾರಕ್ಕೆ ತಂದ; ೧೮೦೦ ರಲ್ಲಿ ನಾನಾ ಮರಣ; ಮರಾಠರಲ್ಲಿ ಅನೈಕ್ಯತೆ; ಪೇಶ್ವೆಯ ಮೇಲೆ ದೌಲತ್ ರಾವ್ ಸಿಂಧ್ಯ ಮತ್ತು ಯಶವಂತರಾವ್ ಹೋಳ್ಕರ ತಮ್ಮ ಪ್ರಭಾವ ಬೀರಲು ಯತ್ನ; ಪೇಶ್ವೆ ೨ನೆ ಬಾಜಿರಾಯ ಸಿಂಧ್ಯನ ಪಕ್ಷ ವಹಿಸಿದ; ನಡುವೆ ಯಶವಂತರಾವನ ಸೋದರನ ಕೊಲೆ೨ನೆ ಬಾಜಿರಾಯನ ಕುತಂತ್ರದಿಂದ!

ಕಾರಣ, ಹೋಳ್ಕರ್ ಸಿಂಧ್ಯ ಮತ್ತು ಬಾಜಿರಾಯನ ಮೇಲೆ ಯುದ್ಧ; ಹೋಳ್ಕರನ ಗೆಲುವು.

೨ನೆ ಬಾಜಿರಾಯ ೧೮೦೨ ರಲ್ಲಿ ಬ್ರಿಟಿಷರೊಂದಿಗೆ ಬೆಸ್ಸಿನ್ ಒಪ್ಪಂದಸಹಾಯಕ ಸೈನ್ಯ ಪದ್ಧತಿ ಸ್ವೀಕಾರ.

ಒಪ್ಪಂದವನ್ನು ಇತರೆ ಮರಾಠಾ ನಾಯಕರು ವಿರೋಧಿಸಿ ಬ್ರಿಟಿಷರ ವಿರುದ್ಧ ಯುದ್ಧಕ್ಕಿಳಿದರು.

ಸಿಂಧ್ಯ ಮತ್ತು ಬೋಂಸ್ಲೆ ಒಗ್ಗೂಡಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದರು.

ಬೋನ್ಸ್ಲೆ ಸೋತು ಬ್ರಿಟಿಷರೊಂದಿಗೆ ದೇವಗಾವ್ ಒಪ್ಪಂದಸಹಾಯಕ ಸೈನ್ಯ ಪದ್ಧತಿ ಸ್ವೀಕಾರ.

ಸಿಂಧ್ಯ ಸಹಾ ಸೋತು ಸೂರಜಿ ಅಸನಗಾವ್ ಒಪ್ಪಂದದಂತೆ ಸಹಾಯಕ ಸೈನ್ಯ ಪದ್ಧತಿ ಸ್ವೀಕಾರ.

ಮುಂದೆ ಹೋಳ್ಕರ್ ಸಹಾ ಬ್ರಿಟಿಷರಿಂದ ಸೋತು ಹಿಮ್ಮೆಟ್ಟಿದನು.

 

ಮಧ್ಯಸ್ಥಿಕೆಯ ಮೂಲಕ ಆಕ್ರಮಿಸಿದ ರಾಜ್ಯಗಳು

ತಂಜಾವೂರು: ಇಲ್ಲಿನ ಮರಾಠಾ ನಾಯಕ ತುಳಜಿ 1799 ರಲ್ಲಿ ಮರಣ.

ಅವನ ಇಬ್ಬರು ಮಕ್ಕಳಾದ  ಸರ್ಪೋಜಿ ಮತ್ತು ಅಮರಸಿಂಗರ ನಡುವೆ ಅಂತಃಕಲಹ.

ಅಮರಸಿಂಗ್ ಪ್ರಜೆಗಳ ಬೆಂಬಲದಿಂದ ರಾಜನಾದ; ಸರ್ಫೋಜಿಯು ವೆಲ್ಲೆಸ್ಲಿಯ ಸಹಾಯ ಕೋರಿದ.

ಮಧ್ಯಪ್ರವೇಶಿಸಿದ ವೆಲ್ಲೆಸ್ಲಿಯು ಸಂಧಾನ ನಡೆಸಿ ಸರ್ಫೋಜಿಯನ್ನು ರಾಜನನ್ನಾಗಿ ಮಾಡಿದ.

ಸರ್ಫೋಜಿಯು ವಾರ್ಷಿಕ 4 ಲಕ್ಷ   ರೂ.ಗಳ ಪಿಂಚಣಿ ಪಡೆದು ತಂಜಾವೂರಿನ ಆಡಳಿತವನ್ನು ಕಂಪೆನಿಗೆ ಬಿಟ್ಟುಕೊಟ್ಟ. 

ಫರೂಖಾಬಾದ್ ಮತ್ತು ಕರ್ನಾಟಿಕ್ ಪ್ರಾಂತ್ಯಗಳನ್ನೂ ಸಹಾ ಹೀಗೆಯೇ ಕಂಪೆನಿಯ ಆಡಳಿತಕ್ಕೆ ಒಳಪಡಿಸಿದ.

ಮುಂದೆ ಇವನು ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಮಾಡಲು ಬಯಸಿದ ಸುಧಾರಣೆಗಳ ಕಾರಣ ಇವನನ್ನು ಕಂಪೆನಿ ವಾಪಾಸ್ಸು ಕರೆಸಿಕೊಂಡಿತು.

ಘನತೆ: ರಾಬರ್ಟ್ಸ್ ಪಿ. ಇ.: “ಹೋಲಿಕೆಯಲ್ಲಿ ಕ್ಲೈವ್, ವಾರನ್ ಮತ್ತು ಡಾಲ್ ಹೌಸಿಗೆ ಸಮನಾಗಿದ್ದರೂ ವಾಸ್ತವಿಕವಾಗಿ ಇವನ ಸಾಧನೆ ಅವರಿಗಿಂತ ುನ್ನತವಾದದ್ದು.”

ಮಾರ್ಶ್‌ಮನ್: “ಕಂಪೆನಿ ಆಡಳಿತದ ಅಕ್ಬರ್

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ