ನಾಗರೀಕತೆಗಳ ಯುಗ: ಹರಪ್ಪಾ ನಾಗರೀಕತೆಯ ಪ್ರಮುಖ ಲಕ್ಷಣಗಳು

ಹರಪ್ಪ ನಾಗರೀಕತೆ

   ಸಾ.ಶ.ವ. 1921 ಕ್ಕೆ ಮುನ್ನ ಪ್ರಾಚೀನ ಭಾರತದ ಇತಿಹಾಸವು ಕೇವಲ ಸಾ.ಶ.ಪೂ. 1500 ಅಂದರೆ ವೈದಿಕ ಸಂಸ್ಕೃತಿಯ ಕಾಲಕ್ಕೆ ಸೀಮಿತಗೊಂಡಿತ್ತು. ಆದರೆ ಮೇಲಿನ ವರ್ಷದಲ್ಲಿ ಅವಿಭಜಿತ ಭಾರತದ ವಾಯುವ್ಯ ಭಾಗದಲ್ಲಿ ಸಾ.ಶ.ವ. 1904  ರಲ್ಲಿ ಲಾರ್ಡ್‌ ಕರ್ಜನ್‌  ಜಾರಿಗೆ ತಂದ ಪುರಾತತ್ವ ವಸ್ತುಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅಸ್ಥಿತ್ವಕ್ಕೆ ಬಂದ ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಸರ್‌ ಜಾನ್‌ ಮಾರ್ಷಲ್‌ರವರ ನೇತೃತ್ವದಲ್ಲಿ ಡಾ. ದಯಾರಾಂ ಸಹಾನಿ ಮತ್ತು ಸಾ.ಶ.ವ. 1922 ರಲ್ಲಿ ಡಾ. ಆರ್.‌ ಡಿ. ಬ್ಯಾನರ್ಜಿಯವರು ನಡೆಸಿದ ಉತ್ಖನನಗಳು ಭಾರತದ ಇತಿಹಾಸವನ್ನು ಸು. 3000 (ಸಾ.ಶ.ಪೂ.) ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಅಂದರೆ ಭಾರತದ ಇತಿಹಾಸವು ಅದುವರೆಗೂ ನಂಬಲಾಗಿದ್ದ 1500 ವರ್ಷಗಳಿಗೆ ಬದಲು ಒಟ್ಟು 5000 ವರ್ಷಗಳಷ್ಟು ಪ್ರಾಚೀನತೆಯನ್ನು ಪಡೆಯಿತು. ಭಾರತದ ನಾಗರೀಕತೆಯ ತೊಟ್ಟಿಲು ಎನಿಸಿದ ಸಿಂಧೂ ನದಿ ಮತ್ತು ಅದರ ಉಪನದಿಗಳ ವಿಶಾಲವಾದ ಬಯಲಿನಲ್ಲಿ ಬೆಳೆದುಬಂದ ಈ ನಾಗರೀಕತೆಯು ಅದುವರೆಗೂ ಭೂಮಿಯಲ್ಲಿ ಹೂತುಹೋಗಿತ್ತು. ಇದರ ಅವಶೇಷಗಳನ್ನು ಮೊದಲು ಗಮನಿಸಿದವರು ಚಾರ್ಲ್ಸ್‌ ಮೇಸನ್‌ ಎಂಬ ಬ್ರಿಟೀಷ್‌ ವ್ಯಕ್ತಿ. ನಂತರ 1856 ರಲ್ಲಿ ವಾಯುವ್ಯ ಭಾರತದ ಸಿಂಧ್‌ ಪ್ರಾಂತ್ಯದ ಮೊಹೆಂಜೊ ದಾರೊ ಬಳಿ  ರೈಲ್ವೆ ಮಾರ್ಗದ ನಿರ್ಮಾಣದಲ್ಲಿ ತೊಡಗಿದ್ದ ತಂತ್ರಜ್ಞರಿಗೆ ಮಣ್ಣಿನ ದಿಬ್ಬಗಳನ್ನು ಅಗೆಯುತ್ತಿರುವಾಗ ಸುಟ್ಟ ಇಟ್ಟಿಗೆಗಳು ದೊರೆತವು. ಮುಂದೆ 1862 ರಲ್ಲಿ ಜನರಲ್‌ ಕನ್ನಿಂಗ್‌ ಹ್ಯಾಂರವರು ಇಲ್ಲಿ ಕೆಲವು ಸುಟ್ಟ ಇಟ್ಟಿಗೆಗಳು ಮತ್ತು ಮುದ್ರೆಗಳನ್ನು ಪತ್ತೆ ಹಚ್ಚಿದರು. ನಂತರ 1921 ಮತ್ತು 1922 ರಲ್ಲಿ ಸಂಶೋಧಕರಾದ ಸಹಾನಿ ಮತ್ತು ಬ್ಯಾನರ್ಜಿಯವರ ನೇತೃತ್ವದಲ್ಲಿ ನಡೆದ ಪೂರ್ಣಪ್ರಮಾಣದ ವ್ಯವಸ್ಥಿತ ಸಂಶೋಧನೆಗಳು ಈ ಬೃಹತ್‌ ನಾಗರೀಕತೆಯನ್ನು ಜಗತ್ತಿನ ಗಮನಕ್ಕೆ ತಂದವು. ಅಂದಿನಿಂದ ಇಂದಿನವರೆಗೂ ಅಂದರೆ ಸು. 100 ವರ್ಷಗಳು ಕಳೆದರೂ ಈ ನಾಗರೀಕತೆಯು ಐತಿಹಾಸಿಕ ಸಂಶೋಧಕರ ಕುತೂಹಲದ ನೆಲೆಯಾಗಿದ್ದು, ಇಂದಿಗೂ ಅಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅವಿಭಜಿತ ಭಾರತದ ಮಹಾರಷ್ಟ್ರ, ಗುಜರಾತ್‌, ರಾಜಸ್ತಾನ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌, ಸಿಂಧ್‌, ಬಲೂಚೀಸ್ತಾನಒಳಗೊಂಡಂತೆ ಅಫ್ಘಾನೀಸ್ತಾನ ಮತ್ತು ಕಾಶ್ಮೀರದ ಗಡಿಗಳವರೆಗೆ ಇದರ ನೆಲೆಗಳು ಹರಡಿವೆ. ಪ್ರಾಚೀನ ನಾಗರೀಕತೆಗಳಲ್ಲೆಲ್ಲಾ ಅತ್ಯಂತ ವ್ಯವಸ್ಥಿತವಾದ ನಾಗರೀಕತೆ ಎಂದು ಇದನ್ನು ವಿದ್ವಾಂಸರು ಗುರ್ತಿಸಿದ್ದಾರೆ. ಇದುವರೆಗೆ ಸು. 1400 ನೆಲೆಗಳು ಪತ್ತೆಯಾಗಿದ್ದು ಅವುಗಳಲ್ಲಿ 918 ಭಾರತದಲ್ಲಿ ಉಳಿದುಕೊಂಡಿದ್ದರೆ 481 ನೆಲೆಗಳು ಪಾಕಿಸ್ತಾನಕ್ಕೆ ಸೇರಿವೆ.

ವಿವಿಧ ಹೆಸರುಗಳು: ಹರಪ್ಪಾ ಸಂಸ್ಕೃತಿ, ಹರಪ್ಪಾ ನಾಗರೀಕತೆ (ಪತ್ತೆ ಮಾಡಿದ ಮೊದಲ ನೆಲೆಯಾದ ಕಾರಣ), ಸಿಂಧೂ ನಾಗರೀಕತೆ (ಸಿಂಧೂ ನದಿಯ ಬಯಲಿನಲ್ಲಿ ಹುಟ್ಟಿ, ಬೆಳೆದು ಅವನತಿ ಹೊಂದಿದ ಕಾರಣ), ಇಂಡೋ-ಸುಮೇರಿಯನ್ ನಾಗರೀಕತೆ (ಸುಮೇರಿಯನ್‌ ನಾಗರೀಕತೆಯ ಕೆಲವು ಲಕ್ಷಣಗಳು ಕಂಡುಬಂದ ಕಾರಣ), ತಾಮ್ರಶಿಲಾಯುಗ ಸಂಸ್ಕೃತಿ (ಕಾಲಘಟ್ಟ ಮತ್ತು ಲಭ್ಯವಾದ ತಾಮ್ರದ ವಸ್ತುಗಳ ಕಾರಣ) & ಪೂರ್ವ ಆರ್ಯನ್ (ವೈದಿಕ) ಸಂಸ್ಕೃತಿ (ಅವರಿಗಿಂತ ಮೊದಲು ಅಸ್ತಿತ್ವದಲ್ಲಿದ್ದ ಕಾರಣ) ಎಂಬ ವಿವಿಧ ಹೆಸರುಗಳಿಂದ ಈ ಸಂಸ್ಕೃತಿಯನ್ನು ಕರೆಯಲಾಗಿದೆ.

ನಿರ್ಮಾಪಕರು: ಈ ಸಂಸ್ಕೃತಿಯ ನಿರ್ಮಾಪಕರ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಆದರೆ, ಉತ್ಖನನಗಳ ಕಾಲಕ್ಕೆ ದೊರೆತ ಅಸ್ಥಿಪಂಜರಗಳ ಲಕ್ಷಣಗಳನ್ನು ಆಧರಿಸಿ- ಮೆಡಿಟರೇನಿಯನ್ನರು, ಪ್ರೋಟೊ ಆಸ್ಟ್ರೋಲಾಯ್ಡ್, ಆಲ್ಫೆನಾಯ್ಡ್ & ಮಂಗೋಲಾಯ್ಡ್ ವರ್ಗಕ್ಕೆ ಸೇರಿದ ಜನರು ಇದರ ನಿರ್ಮಾಪಕರು ಎಂಬ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಆದರೆ ಬಹುಸಂಖ್ಯಾತರು ಮೊದಲೆರಡು ವರ್ಗಕ್ಕೆ ಸೇರಿದವರೆನ್ನಲಾಗಿದೆ.

ಪ್ರಮುಖ ಉತ್ಖನನಗಳು: ಈ ನಾಗರೀಕತೆಯು ಹರಡಿದ್ದ  ವಿಶಾಲ ವ್ಯಾಪ್ತಿಯಲ್ಲಿ ನಡೆಸಿದ ಉತ್ಖನನಗಳಿಂದ ಬೆಳಕಿಗೆ ಬಂದ ಪ್ರಮುಖ ನೆಲೆಗಳು, ಅವುಗಳು ಇರುವ ಸ್ಥಳ, ಸಂಶೋಧಕರು  ಮತ್ತು  ಕಂಡುಬಂದ ಅವಶೇಷಗಳ ಕೆಲವು ವಿವರಗಳನ್ನು ಮುಂದೆ ಕೊಡಲಾಗಿದೆ:-

. ಹರಪ್ಪ: ೧೯೨೧ ರಲ್ಲಿ ಸಂಶೋಧಕರು: ದಯಾರಾಂ ಸಹಾನಿ. ಮಾಂಟ್ ಗೊಮರಿ ಜಿಲ್ಲೆ. ಪಂಜಾಬ್. ಪ್ರಸ್ತುತ ಪಾಕಿಸ್ತಾನದಲ್ಲಿದೆ. ಅತೀ ದೊಡ್ಡ ನಿವೇಶನ. ಸು. ಮೈಲಿಗಳ ಸುತ್ತಳತೆ. ರಾವಿ ನದಿಯ ದಂಡೆಯಲ್ಲಿದೆ. ಉಗ್ರಾಣ, ಕಾರ್ಮಿಕ ವಸತಿಗೃಹಗಳು, ಎತ್ತಿನ ಗಾಡಿಯ ಮತ್ತು ನಾಯಿ ಜಿಂಕೆಯನ್ನು ಬೇಟೆ ಆಡುತ್ತಿರುವ ಮುದ್ರೆಗಳು.

2. ಮೊಹೆಂಜೊದಾರೊ: ಸತ್ತವರ ದಿಬ್ಬ. (ಸಿಂಧ್ ಭಾಷೆಯಲ್ಲಿ) ೧೯೨೨ – R.D ಬ್ಯಾನರ್ಜಿ. ಸಿಂದೂ ನದಿ ದಂಡೆಯಲ್ಲಿದೆ. ಏಳು ಬಾರಿ ಪುನರ್‌ನಿರ್ಮಾಣಗೊಂಡಿರುವ ಕುರುಹುಗಳು. ಪಾಕಿಸ್ತಾನದ ಲಾರ್ಕಾನ್ ಜಿಲ್ಲೆ, ಸಿಂಧ್ ಪ್ರಾಂತ್ಯ. ಬೃಹತ್ ಈಜುಕೊಳ, ಸಭಾಭವನ, ಸಾರ್ವಜನಿಕ ಉಗ್ರಾಣ, ಗಡ್ಡಧಾರಿ ಮನುಷ್ಯನ ಮೂರ್ತಿ (ಮೆದು ಕಲ್ಲಿನಿಂದ), ನೃತ್ಯಭಂಗಿಯ ಕಂಚಿನ ಶಿಲ್ಪ, ಕಂಚಿನ ಎಮ್ಮೆ, ಟಗರು, & ಪಶುಪತಿ ಮುದ್ರೆ.

3. ಕಾಲಿಬಂಗನ್: ೧೯೫೧ ರಲ್ಲಿ. ಗಂಗಾನಗರ ಜಿಲ್ಲೆ, ರಾಜಸ್ಥಾನ. ಸಂಶೋಧಕರು A. ಘೋಷ್.  ಗಗ್ಗರ್ ನದಿ ದಂಡೆಯಲ್ಲಿದೆ.  ಮಣ್ಣಿನ ಕೋಟೆ, ಯಜ್ಞಕುಂಡಗಳು, ಜಿಂಕೆ, ಒಂಟೆ & ದನಗಳ ಮೂಳೆಗಳು. ʼಕಾಲಿಬಂಗನ್ ಎಂದರೆ ಕಪ್ಪು ಬಳೆʼ ಎಂದರ್ಥ.

4. ಲೋಥಾಲ್: ಕ್ಯಾಂಬೆ ತೀರ, ಗುಜರಾತ್; ೧೯೫೯ ರಲ್ಲಿ.: S.R. ರಾವ್ ಸಂಶೋಧಕರು. ಹಡಗು ಕಟ್ಟೆ. ಅಗ್ನಿಕುಂಡಗಳು & ಸ್ತ್ರೀ-ಪುರುಷರ ಜೋಡಿ ಸಮಾಧಿಗಳು. ಮೆಸಪಟೋಮಿಯಾದೊಂದಿಗೆ ವ್ಯಾಪಾರ ಸಂಪರ್ಕ.

5. ಚಾನ್ಹುದಾರೊ: ಸಿಂಧ್ ನದಿಯ ಎಡದಂಡೆ; ಪಾಕಿಸ್ತಾನ. ಮೊಹೆಂಜೊದಾರೊದಿಂದ ೧೬೯ ಕಿ.ಮೀ ದೂರ. ಸತ್ತವರ ದಿಬ್ಬ ಎಂದೂ ಅರ್ಥ. ಸಂಶೋಧಕರು  - N.G. ಮಜೂಮ್ ದಾರ್. ಬೊಂಬೆ, ಆಟಿಕೆಗಳು, ಕಿವಿಯುಂಗುರ, ಮಾತೃದೇವತೆ, ಕಂಚು & ತಾಮ್ರದ ಉಪಕರಣಗಳು.

‌6. ಬನವಾಲಿ: ಹಿಸ್ಸಾರ್ ಜಿಲ್ಲೆ, ಹರ್ಯಾಣ. ಬೊಂಬೆ, ಜೇಡಿ ಣ್ಣಿ ಆಟಿಕೆಗಳು, ಅರಳಿ ಎಲೆ ಗಾತ್ರದ ಕಿವಿಯುಂಗುರ, ಮಾತೃದೇವತೆಯ ವಿಗ್ರಹ.

7. ಸರ್‌ಗೊಡ್ಡಾ: ಗುಜರಾತ್; ೧೯೭೯ ಸಂಶೋಧಕರು - ಡಾ. ಜೋಶಿ. ಕೋಟೆ ಅವಶೇಷಗಳು, ರಕ್ಷಣಾ ಕೊಠಡಿಗಳು & ಚೌಕಾಕಾರದ ಬುರುಜುಗಳು.

8. ರೋಜಡಿ: ರಾಜಕೋಟೆ ಬಳಿ. ಗುಜರಾತ್. ಸಂಶೋಧಕರುಪೋಸಲ್ ಮತ್ತು ಪಾಂಡ್ಯ. ೧೯೭೯ ರಲ್ಲಿ. ಗ್ರಾಮಜೀವನ ಕಂಡುಬರುವ ಏಕೈಕ ನೆಲೆ.

9. ರಾಖಿಗಿರಿ: ಹರ್ಯಾಣ; ೧೯೯೭ ರಲ್ಲಿ. ಸ್ತ್ರೀಯರ ಸಮಾಧಿ ಅವಶೇಷಗಳು.

10. ಸುಕ್ತಜೆಂಡಾರ್: ಅರಬ್ಬೀ ಸಮುದ್ರದ ತೀರ. ಬಂದರು ಪ್ರದೇಶ. ಸಂಶೋಧಕರುಡೇಲ್ಸ್. ೧೯೬೨ ರಲ್ಲಿ. ಕಲ್ಲು & ಜೇಡಿ ಮಣ್ಣಿನಿಂದ ಕಟ್ಟಿದ ಬೃಹತ್ ಕೋಟೆಗೋಡೆ.

11. ಬಾಲ್ ಕೋಟ್: ಬಂದರು ನೆಲೆ. ಕರಾಚಿ ಬಳಿ, ಪಾಕಿಸ್ತಾನ. ಸಂಶೋಧಕರು – G.F. ಡೇಲ್ಸ್. ೧೯೬೩ ರಲ್ಲಿ. ಸುಟ್ಟ ಇಟ್ಟಿಗೆಗಳು.

12. ಕೋಟ್ ಡಿಜಿ: ಕರಾಚಿ ಬಳಿ; ಪಾಕಿಸ್ತಾನ. ಸಂಶೋಧಕರು – F.A. ಖಾನ್; ೧೯೫೪-೫೫ ರಲ್ಲಿ. ಹರಪ್ಪಾ ಪೂರ್ವದ ಅವಶೇಷಗಳು.

13. ರೂಪರ್: ಅಂಬಾಲ ಜಿಲ್ಲೆ; ಪಂಜಾಬ್. ಸಂಶೋಧಕರು – Y/D. ಶರ್ಮ; ೧೯೫೩. ಮಡಕೆ ಅವಶೇಷಗಳು.

14. ರಂಗಪುರ: ಗುಜರಾತ್.‌ ಕಾಥೇವಾಡ ಜಿಲ್ಲೆ. ಸಂಶೋಧಕರು ಎಸ್.‌ ಆರ್.‌ ರಾವ್.‌ ವರ್ಷ: 1953-54.

ಪ್ರಮುಖ ಲಕ್ಷಣಗಳು: ಈ ನಾಗರೀಕತೆಯ ನೆಲೆಗಳಲ್ಲಿ ಕಂಡುಬಂದ ವಸ್ತುಗಳು ಮತ್ತು ಅವಶೇಷಗಳನ್ನು ಆಧರಿಸಿ ಇದರ ಕೆಲವು ಲಕ್ಷಣಗಳನ್ನು ವಿದ್ವಾಂಸರು ಕೆಳಕಂಡಂತೆ ಗುರ್ತಿಸಿದ್ದಾರೆ.

. ನಗರ ಯೋಜನೆ; . ಮುದ್ರೆಗಳು; . ರಾಜಕೀಯ ವ್ಯವಸ್ಥೆ ; . ಕಲೆ & ಮೂರ್ತಿಶಿಲ್ಪ; . ಸಾಮಾಜಿಕ ಜೀವನ; . ಆರ್ಥಿಕ ಜೀವನ; . ಧಾರ್ಮಿಕ ಜೀವನ; . ಶವಸಂಸ್ಕಾರ; . ವಿಜ್ಞಾನ.

ನಗರ ಯೋಜನೆ: ಕಟ್ಟಡಗಳು; ಸಾರ್ವಜನಿಕ ಕಟ್ಟಡಗಳು; ಕಾರ್ಮಿಕರ ಮನೆಗಳು; ಬೃಹತ್ ಈಜುಕೊಳ; ಸಾರ್ವಜನಿಕ ಉಗ್ರಾಣಗಳು; ಒಳಚರಂಡಿ ವ್ಯವಸ್ಥೆ.

ುಗ್ರಾಣಗಳು: ಬಹುತೇಕ ೆಲ್ಲ ನೆಲೆಗಳಲ್ಲಿ ಪತ್ತೆ ಬೃಹತ್ ಗಾತ್ರದಲ್ಲಿವೆ ಧಾನ್ಯ ಸಂಗ್ರಹಣೆಗೆ ಬಳಕೆ; ಯೋಜಿತ ಆರ್ಥಿಕತೆಯ ಲಕ್ಷಣ ಖಜಾನೆಗಳಂತೆ ಬಳಕೆ ಗಾಳಿ-ಬೆಳಕಿಗೆ ಅವಕಾಶ ಹರಪ್ಪಾದಲ್ಲಿ ಸು. 12 ಉಗ್ರಾಣಗಳು ಕಣಜಗಳೂ ಕಂಡುಬಂದಿವೆ ಪಕ್ಕದಲ್ಲಿ ಕಾರ್ಮಿಕರ ವಸತಿಗಳು

ಮನೆಗಳು: ಸಣ್ಣ ಮತ್ತು ದೊಡ್ಡ ಮನೆಗಳು ಸುಟ್ಟ ಿಟ್ಟಿಗೆಗಳಿಂದ ನಿರ್ಮಾಣ 4 ರಿಂದ 24 ಮತ್ತು 30 ಕೋಣೆಗಳುಳ್ಳ ಮನೆಗಳು ಬಡವ ಮತ್ತು ಶ್ರೀಮಂತರಿಗಾಗಿ ನಿರ್ಮಿತ ಮಹಡಿ ಮನೆಗಳೂ ಇದ್ದವು; 2-3 ಅಂತಸ್ತುಗಳು
ಗಾಳಿ-ಬೆಳಕಿಗೆ ಉತ್ತಮ ವ್ಯವಸ್ಥೆ ನೀರಿನ ಬಾವಿ, ಶೌಚಗೃಹ, ಮಲಗುವ ಕೋಣೆ, ಅಡಿಗೆಮನೆ, ಹಜಾರ – ಹೀಗೆ ವಿವಿಧ ಕೋಣೆಗಳು

ಈಜುಕೊಳ: ಮೊಹೆಂಜೊದಾರೊದಲ್ಲಿದೆ ಬೃಹತ್ ರಚನೆ ಕಲ್ಲು& ಸುಟ್ಟ ಿಟ್ಟಿಗೆಗಳಿಂದ ನಿರ್ಮಾಣ. 12 ಮೀಟರ್‌ (40 ಅಡಿ) ಉದ್ದ X 7 ಮೀಟರ್‌ (23 ಅಡಿ),  ಅಗಲ ಮತ್ತು 2.4 ಮೀಟರುಗಳಷ್ಟು ಆಳ. ಒಟ್ಟು 897 ಚದರ ಅಡಿ ವಿಸ್ತೀರ್ಣ ಅಥವಾ 83 ಚ.ಮೀ ಇದೆ.  ನೀರು ಪೂರೈಕೆಗೆ ವ್ಯವಸ್ಥೆ ಧಾರ್ಮಿಕ ಆಚರಣೆಗಳಿಗೆ ಬಳಕೆ ಮೇಲಿನ ಕೋಣೆಗಳಲ್ಲಿ ಬಿಸಿನೀರಿನ ಸ್ನಾನಕ್ಕೆ ಅನುಕೂಲ ಹರಪ್ಪ ಜನರ ನೈರ್ಮಲ್ಯದ ಪ್ರಜ್ಞೆಗೆ ಸಾಕ್ಷಿ

ಮುದ್ರೆಗಳು: ವಿಶಿಷ್ಟ ರಚನೆಗಳು ವಿವಿಧ ಗಾತ್ರದಲ್ಲಿವೆ ಚಿತ್ರಲಿಪಿಗಳಿಂದ ಕೂಡಿವೆ ಧಾರ್ಮಿಕ ಮತ್ತು ವ್ಯಾಪಾರಿ ಉದ್ದೇಶಗಳಿಗೆ ಬಳಕೆ ಜೇಡಿಮಣ್ಣು, ಮೆದುಕಲ್ಲು ಮತ್ತು ದಂತಗಳಿಂದ ಮಾಡಲ್ಪಟ್ಟಿವೆ ಮೆಸಪಟೋಮಿಯಾದ ನೆಲೆಗಳಲ್ಲಿ ಪತ್ತೆ; ವ್ಯಾಪಾರ ಸಂಬಂಧ

ರಾಜಕೀಯ ವ್ಯವಸ್ಥೆ: ವ್ಯವಸ್ಥಿತ ನಗರಾಡಳಿತದ ಕಾರಣ ರಾಜಕೀಯ ವ್ಯವಸ್ಥೆ ಇತ್ತು. ಹರಪ್ಪ ಅಥವಾ ಮೊಹೆಂಜೊದಾರೊ ರಾಜಧಾನಿ. ಪುರೋಹಿತ ರಾಜರು ವರ್ತಕ ಪ್ರಭುಗಳು ಮೌರ್ಯ ಅಥವಾ ಗುಪ್ತರ ನಗರಾಡಳಿತ ಪದ್ಧತಿ.

ಅವನತಿ: ಜಲ-ವೈಜ್ಞಾನಿಕ ಬದಲಾವಣೆಗಳು; ಅಮಲಾನಂದ ಘೋಷ್. ಭೂಕಂಪಗಳು. ಪರಕೀಯರ ದಾಳಿಗಳು; ಮಾರ್ಟಿಮರ್ ವೀಲರ್. ನೆರೆ ಹಾವಳಿಗಳು; ಸಿಂಧೂ ನದಿ. ಸಮುದ್ರ ಪ್ರವಾಹಗಳು.


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources