ವಾರನ್‌ ಹೇಸ್ಟಿಂಗ್ಸ್‌ನ ವಿದೇಶಾಂಗ (Foreign Policy) ನೀತಿ - ದೇಶೀಯ ಅರಸರೊಂದಿಗಿನ ಸಂಬಂಧಗಳು

ವಿದೇಶಾಂಗ ನೀತಿ - ವಾರನ್ ಮತ್ತು ದೇಶೀಯ                  ಸಂಸ್ಥಾನಗಳು.

ಅಂದಿಗೆ ಕಂಪೆನಿಯ ವಿದೇಶಾಂಗ ನೀತಿಯ ಅರ್ಥ!!!

•  ಈಸ್ಟ್ ಇಂಡಿಯ ಕಂಪೆನಿಯು ದೇಶೀಯ ಸಂಸ್ಥಾನಗಳೊಂದಿಗೆ ವ್ಯವಹರಿಸಲು ಅನುಸರಿಸಿದ ನೀತಿಯನ್ನೇ ವಿದೇಶಾಂಗ ನೀತಿ ಎನ್ನುವರು. ಉದಾಹರಣೆಗೆ, ವಾರನ್ ಹೇಸ್ಟಿಂಗ್ಸ್ ಮತ್ತು ದೇಶೀಯ ಸಂಸ್ಥಾನಗಳಾದ ಅವಧ್, ಬನಾರಸ್, ಮರಾಠರು ಮತ್ತು ಮೈಸೂರಿನ ಹೈದರಾಲಿಯವರ ನಡುವಣದ ರಾಜಕೀಯ ವ್ಯವಹಾರಗಳನ್ನೇ ಅಂದಿನ ಕಾಲಕ್ಕೆ ವಿದೇಶಾಂಗ ನೀತಿ ಎನ್ನುವರು.

ವಿದೇಶಾಂಗ ನೀತಿಯ ಪ್ರಮುಖ ಉದ್ದೇಶ:- ರಾಬರ್ಟ್ ಕ್ಲೈವ್‌ನ ಕಾಲದಲ್ಲಿ ಕಂಪೆನಿ ಗಳಿಸಿದ್ದ ಪ್ರದೇಶಗಳ ಸಂಘಟನೆಯೆ ಪ್ರಮುಖ ಉದ್ದೇಶ.

ಅವಧ್ ನವಾಬನೊಂದಿಗೆ ಅನುಸರಿಸಿದ ನೀತಿ.

•  ೧೭೭೪ ರಲ್ಲಿ ಅವಧ್ ನವಾಬನೊಂದಿಗೆಬನಾರಸ್ಒಪ್ಪಂದ. ಕಾರಾ ಮತ್ತು ಅಲಹಾಬಾದ್ ಗಳನ್ನು ಅವನಿಗೆ ಕೊಡಲಾಯಿತು. ಇದಕ್ಕೆ ಪ್ರತಿಯಾಗಿ ೫೦ ಲಕ್ಷಗಳನ್ನು ಪಡೆದನು. ನವಾಬನ ರಕ್ಷಣೆಗೆ ಸೈನ್ಯದ ನೆರವು. ಪ್ರತಿಯಾಗಿ ನವಾಬ ಸಹಾಯಧನ ಕೊಡಲು ಒಪ್ಪಿಕೊಂಡನು.

ರೋಹಿಲೆಯರೊಡನೆ ಯುದ್ಧ:- ರೋಹಿಲರು ಅಫ್ಘನ್ ಬುಡಕಟ್ಟಿನ ಜನಾಂಗದವರು. ಅವರು ಅವಧ್‌ನ ಗಡಿಭಾಗದಲ್ಲಿ ನೆಲೆಸಿದ್ದರು. ಇವರ ಅಂದಿನ ನಾಯಕ ಆಫೀಜ್ ರಹಮತ್ ಖಾನ್ ಆಗಿದ್ದನು.  ಇವರು ಮೂರನೆ ಪಾಣಿಪತ್ ಯುದ್ಧದಲ್ಲಿಅಹಮದ್ ಶಾ ಅಬ್ದಾಲಿಗೆ ನೆರವು ನೀಡಿದ ಕಾರಣ ಮರಾಠರ ವಿರೋಧ ಕಟ್ಟಿಕೊಂಡಿದ್ದರು. ಪಾಣಿಪತ್ ಯುದ್ಧದ ನಂತರ ಚೇತರಿಸಿಕೊಂಡ ಮರಾಠರು ರೋಹಿಲೆಯರ ವಿರುದ್ಧ ದಾಳಿ ಆರಂಭ ಮಾಡಿದರು. ಮರಾಠರ ದಾಳಿಗಳ ತಡೆಗೆ ರಹಮತ್ ಅವಧ್‌ನ ನವಾಬನೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡನು. ಅದರಂತೆ ರಕ್ಷಣೆ ನೀಡಿದರೆ ೪೦ ಲಕ್ಷ ಹಣ ನೀಡುವ ಒಪ್ಪಂದ ಏರ್ಪಟ್ಟಿತು. ೧೭೭೩ ರಲ್ಲಿ ಮರಾಠರು ರೋಹಿಲ್ ಖಂಡದ ಮೇಲೆ ದಾಳಿ ಮಾಡಿದಾಗ ಅವಧ್ ನವಾಬ ಬ್ರಿಟಿಷ್ ಪಡೆಗಳೊಂದಿಗೆ ರೋಹಿಲ್ಲರ ರಕ್ಷಣೆಗೆ ಬಂದನು. ನವಾಬ ಮತ್ತು ಬ್ರಿಟಿಷರ ಸೇನೆಯ ಆಗಮನದ ಕಾರಣ ಮರಾಠರು ವಾಪಾಸು ಹೋದರು. ಅವಧ್‌ನ ನವಾಬ ಒಪ್ಪಂದದ ಹಣ ನೀಡುವಂತೆ ರಹಮತ್ ಖಾನನಿಗೆ ಒತ್ತಾಯ ಮಾಡಿದನು. ಆದರೆ, ಯುದ್ಧವೇ ನಡೆಯದ ಕಾರಣ ಯುದ್ಧ ಪರಿಹಾರ ನೀಡಲು ರಹಮತ್ ನಿರಾಕರಿಸಿದನು.

ಇದರಿಂದ ಕುಪಿತಗೊಂಡ  ಅವಧ್‌ನ  ನವಾಬ ರೋಹಿಲ್ಲರಿಂದ ಹಣ ವಸೂಲು ಮಾಡಲು  ಬ್ರಿಟಿಷರ ನೆರವು ಕೇಳಿದ. ಹೇಸ್ಟಿಂಗ್ಸ್‌ನು ಕರ್ನಲ್ ಚಾಂಪಿಯನ್ ನೇತೃತ್ವದಲ್ಲಿ ಬ್ರಿಟೀಷ್‌ ಸೇನೆ ರವಾನೆ ಮಾಡಿದನು. ೧೭೭೪ ರಲ್ಲಿ ಎರಡೂ ಪಕ್ಷಗಳ ನಡುವೆ ಯುದ್ಧ ನಡೆಯಿತು. ಮಿರಾನಪುಕತ್ತ ಬಳಿ ನಡೆದ ಯುದ್ಧದಲ್ಲಿ ಆಫೀಜ್ ರಹಮತ್ ಖಾನ್ ವೀರಾವೇಶದ ಹೋರಾಟ ಮಾಡಿ ಮರಣ ಹೊಂದಿದನು. ರೋಹಿಲ್ ಖಂಡ ಅವಧ್ ಪ್ರಾಂತ್ಯದಲ್ಲಿ ವಿಲೀನಗೊಂಡಿತು. ಅವಧ್ ನವಾಬ ಬ್ರಿಟಿಷರಿಗೆ ೪೦ ಲಕ್ಷ ಪರಿಹಾರ ನೀಡಿದ.

ವಿಶ್ಲೇಷಣೆ:-  ಕಂಪೆನಿಗೆ ಆರ್ಥಿಕ ಲಾಭ ಮಾಡುವುದು ಮತ್ತು ಅಪ್ರತ್ಯಕ್ಷವಾಗಿ ಕಂಪೆನಿಯ ಪ್ರಭಾವ ವಿಸ್ತರಣೆ ಮಾಡುವುದು ವಾರನ್ನನ ಉದ್ಧೇಶವಾಗಿತ್ತು. ಆದರೆ, ಮೆಕಾಲೆ ಮತ್ತು ಮಿಲ್ಲರ್‌ ಈ ನೀತಿಯನ್ನು ಖಂಡಿಸಿದ್ದಾರೆ. ಏಕೆಂದರೆ, ರೋಹಿಲರು ಕಂಪೆನಿಯ ಶತೃಗಳಾಗಿರಲಿಲ್ಲ ಎಂಬುದು ಅವರ ವಾದ.

ಮೊದಲನೆ ಆಂಗ್ಲೋ-ಮರಾಠಾ ಯುದ್ಧ೧೭೭೫-೧೭೮೨.

ಹಿನ್ನೆಲೆ.: ೩ನೆ ಪಾಣಿಪತ್ ಯುದ್ಧದ ನಂತರ ೧ನೆ ಮಾಧವರಾಯನ ಮುಖಂಡತ್ವದಲ್ಲಿ ಮರಾಠರ ಶೀಘ್ರ ಏಳಿಗೆ ಆಯಿತು. ಮುಂದೆ ಅವರಿಗೆ ೧ನೆ ಮಾಧವರಾಯ ಮತ್ತು ನಾನಾ ಫಡ್ನವೀಸರ ಸಮರ್ಥ ಮುಖಂಡತ್ವ ದೊರೆಯಿತು. ಆದರೆ, ೧೭೭೨ ರಲ್ಲಿ ಮಾಧವರಾಯನ ಅಕಾಲಿಕ ಮರಣವಾಯಿತು. ಇದರಿಂದ ಪೇಶ್ವೆ  ಹುದ್ದೆಗೆ ಮಾಧವರಾಯನ ಸೋದರ ನಾರಾಯಣರಾಯನ ನೇಮಕ ಮಾಡಲಾಯಿತು. ನಾರಾಯಣರಾಯನಿಗೆ ನಾನಾನ ಬೆಂಬಲವಿತ್ತು. ಆದರೆ, ಮಾಧವರಾಯ ಮತ್ತು ನಾರಾಯಣರ ಚಿಕ್ಕಪ್ಪ ರಘೋಬನು ತಾನು ಪೇಶ್ವೆಯಾಗಲು ಬಯಸಿದ. ಪರಿಣಾಮವಾಗಿ ರಘೋಬನ ಕುತಂತ್ರದಿಂದ ನಾರಾಯಣರಾಯನ ಕೊಲೆ ಆಯಿತು. ಇದರಿಂದ ನಾನಾನು ನಾರಾಯಣನ ಮರಣಾನಂತರ ಜನಿಸಿದ ಅವನ ಮಗುವನ್ನು (೨ನೆ ಮಾಧವರಾಯ) ಪೇಶ್ವೆಯಾಗಿ ನೇಮಿಸಿದ. ಕೋಪಗೊಂಡ ರಘೋಬನು ಪೇಶ್ವೆ ಹುದ್ದೆಗೇರಲು ಮುಂಬೈನಲ್ಲಿದ್ದ ಬ್ರಿಟಿಷರ ನೆರವು ಯಾಚಿಸಿದ. ೧೭೭೫ ರಲ್ಲಿ ಬಾಂಬೆ ಸರ್ಕಾರ ಮತ್ತು ರಘೋಬನ ನಡುವೆ ಸೂರತ್ ಒಪ್ಪಂದ ಏರ್ಪಟ್ಟಿತು. ಒಪ್ಪಂದದಂತೆ,

•  ರಘೋಬನಿಗೆ ಪೇಶ್ವೆ ಹುದ್ದೆಗೇರಲು ಬ್ರಿಟಿಷರು ನೆರವು ನೀಡಲು ಮತ್ತು ಇದಕ್ಕೆ ಪ್ರತಿಯಾಗಿ ಬೆಸ್ಸಿನ್ ಮತ್ತು ಸಾಲ್ಸೆಟ್ ದ್ವೀಪಗಳನ್ನು ಬ್ರಿಟಿಷರಿಗೆ ಕೊಡಲು ಪರಸ್ಪರ ಒಪ್ಪಲಾಯಿತು.

•  ಪರಿಣಾಮವಾಗಿ ಬ್ರಿಟಿಷರು ಮರಾಠರ ಮೇಲೆ ದಾಳಿ ಮಾಡಿದರು. ಅರಸ್ಸಾ ಎಂಬಲ್ಲಿ ನಡೆದ ಯುದ್ಧದಲ್ಲಿ ಮರಾಠರಿಗೆ ಸೋಲುಂಟಾಯಿತು.

•  ವಿವರಗಳು ಬಂಗಾಳದಲ್ಲಿದ್ದ ಗವರ್ನರ್‌ ಜನರಲ್‌ ವಾರನ್‌ ಹೇಸ್ಟಿಂಗ್ಸ್‌ನಿಗೆ ತಿಳಿದವು.

ನಾನಾ ಮತ್ತು ವಾರನ್ ನಡುವೆ ಹೊಸ ಒಪ್ಪಂದ.

•  ಗವರ್ನರ್‌ ಜನರಲ್ ಮತ್ತು ಆಡಳಿತ ಮಂಡಳಿಯ ಒಪ್ಪಂದ ಪಡೆಯದ ಕಾರಣ ವಾರನ್‌  ಮುಂಬೈ ಸರ್ಕಾರದ ಸೂರತ್ ಒಪ್ಪಂದವನ್ನು ಅಮಾನ್ಯ ಮಾಡಿದನು. ನಾನಾ ಯುದ್ಧವನ್ನು ನಿಲ್ಲಿಸಲು ವಾರನ್ನನಿಗೆ ಮನವಿ ಸಲ್ಲಿಸಿದನು. ಇದರಿಂದ ನಾನಾ ಮತ್ತು ವಾರನ್ ನಡುವೆ ಪುರಂದರ ಒಪ್ಪಂದ ಏರ್ಪಟ್ಟಿತು.

ಪುರಂದರ ಒಪ್ಪಂದ ೧೭೭೬:-  ವಾರನ್ ಪ್ರತಿನಿಧಿ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡನು. ಒಪ್ಪಂದದ ಕರಾರುಗಳೆಂದರೆ,

•  ಬ್ರಿಟಿಷರು ರಘೋಬನಿಗೆ ನೀಡಿದ್ದ ನೆರವು ನಿಲ್ಲಿಸುವುದು. ಪ್ರತಿಯಾಗಿ ನಾನಾ ಅವರಿಗೆ ಸಾಲ್ಸೆಟ್ ಕೊಡಲು ಒಪ್ಪಿದ.

•  ಹೀಗೆ, ಮುಂಬೈ ಮತ್ತು ಬಂಗಾಳ ಸರ್ಕಾರಗಳು ಮತ್ತು ಮರಾಠರ ಕೂಟಗಳ ನಡುವೆ ಪ್ರತ್ಯೇಕ ಒಪ್ಪಂದಗಳು ಆದವು.

ಘರ್ಷಣೆ ಮುಂದುವರಿಕೆ.

•  ಮುಂಬೈ ಸರ್ಕಾರವು ಕಂಪೆನಿಯ ನಿರ್ದೇಶಕರ ಮಂಡಳಿಗೆ ಮನವಿ ಸಲ್ಲಿಸಲಾಗಿ ಮಂಡಳಿಯುಸೂರತ್ ಒಪ್ಪಂದವನ್ನು ಮಾನ್ಯ ಮಾಡಿತು ಮತ್ತು ಮರಾಠರ ವಿರುದ್ಧ ಯುದ್ಧ ಮುಂದುವರಿಸಲು ಅನುಮತಿ ನೀಡಿತು.

•  ಇತ್ತ ಬ್ರಿಟಿಷರು ಪುರಂದರ ಒಪ್ಪಂದ ಮಾನ್ಯ ಮಾಡದ ಕಾರಣ ನಾನಾ ಬ್ರಿಟಿಷರ ವಿರುದ್ಧ ಯುದ್ಧ ಹೂಡಿದ. ಮುಂಬೈ ಸರ್ಕಾರ ಮತ್ತು ನಾನಾರ ಕೂಟಗಳ ನಡುವೆ ನಡೆದ ಯುದ್ಧದಲ್ಲಿ ಬ್ರಿಟಿಷರಿಗೆ ಸೋಲು ಉಂಟಾಯಿತು. ಪರಿಣಾಮವಾಗಿ ಮುಂಬೈ ಬ್ರಿಟೀಷ್‌ ಸರ್ಕಾರ ಮತ್ತು ನಾನಾನ ಪಕ್ಷಗಳ ನಡುವೆ ವಡಗಾವ್ ಒಪ್ಪಂದ ಏರ್ಪಟ್ಟಿತು. ಒಪ್ಪಂದದ ಕರಾರುಗಳಂತೆ ಮುಂಬೈ ಸರ್ಕಾರವು ರಘೋಬನಿಗೆ ಸಹಾಯ ಮಾಡುವುದನ್ನು ನಿಲ್ಲಿಸಲು ಮತ್ತು ಮರಾಠರಿಂದ ಗೆದ್ದ ಪ್ರದೇಶಗಳನ್ನು ಹಿಂತಿರುಗಿಸಲು ಒಪ್ಪಿಗೆ ಸೂಚಿಸಿತು.

•  ಆದರೆ, ಅಪಮಾನಕರ ವಡಗಾವ್ ಒಪ್ಪಂದ ವಿರೋಧಿಸಿ ವಾರನ್  ಮರಾಠಾ ಒಕ್ಕೂಟದ  ವಿರುದ್ಧ ಯುದ್ಧ ಸಾರಿದ. ಗೊಡಾರ್ಟನ್ ಅಹಮದ್ ನಗರ ವಶಪಡಿಸಿಕೊಂಡು ಗಾಯಕವಾಡನೊಂದಿಗೆ ಒಪ್ಪಂದ ಮಾಡಿಕೊಂಡನು. ಆದರೆ ಬ್ರಿಟೀಷರ ಪುಣೆ ವಶ ಯತ್ನ ವಿಫಲವಾಯಿತು.

•  ಇತ್ತ ನಾನಾನು ಬ್ರಿಟಿಷರ ವಿರುದ್ಧ ದೇಶೀಯ ಅರಸರ ಒಕ್ಕೂಟ ರಚನೆ ಮಾಡಿದ. ಮರಾಠರು, ಹೈದರಾಲಿ ಮತ್ತು ನಿಜಾಮ ಒಕ್ಕೂಟದ ಸದಸ್ಯರಾಗಿದ್ದರು. ಆದರೆ, ಚಾಣಾಕ್ಷನಾದ ವಾರನ್ ಮರಾಠರ ಒಕ್ಕೂಟದಲ್ಲಿ ಬಿರುಕು ಮೂಡಿಸಿ ಬರೋಡಾದ ಗಾಯಕವಾಡ ಮತ್ತು ನಾಗ್ಪುರದ ಬೋನ್ಸ್ಲೆಯರನ್ನು ತಟಸ್ಥಗೊಳಿಸಿದ. ನಿಜಾಮನನ್ನು ಒಕ್ಕೂಟದಿಂದ ಹೊರಗುಳಿಯುವಂತೆ ಮಾಡಿದ.

•  ಮುಂದೆ ನಡೆದ ಯುದ್ಧಗಳಲ್ಲಿ ಅಹಮದ್ ನಗರ, ಗ್ವಾಲಿಯರ್‌ ಮೊದಲಾದ ಮರಾಠಾ ಪ್ರದೇಶಗಳು ಬ್ರಿಟಿಷರ ವಶವಾದವು. ಆದರೂ ನಾನಾ ಯುದ್ಧ ಮುಂದುವರಿಸಿದ.   ಯುದ್ಧ ಯಾವುದೇ ನಿರ್ಣಾಯಕ ಹಂತ ಮುಟ್ಟಲಿಲ್ಲ.

ಯುದ್ಧದ ನಿಲುಗಡೆ ಮತ್ತು ಸಾಲ್ಬಾಯ್ ಒಪ್ಪಂದ.

•  ಆಂಗ್ಲರು ಮತ್ತು ಮರಾಠರ ನಡುವೆ  ೧೭೮೨, ಮೇ ೧೭ ರಂದು ಸಾಲ್ಬಾಯ್‌ ಒಪ್ಪಂದ ಏರ್ಪಟ್ಟಿತು.

•  ಒಪ್ಪಂದದ ಕರಾರುಗಳು:- ಬ್ರಿಟೀಷರು ೨ನೆ ಮಾಧವರಾಯನನ್ನು ಪೇಶ್ವೆ ಎಂದು ಒಪ್ಪಿಕೊಂಡರು. ಬ್ರಿಟಿಷರಿಗೆ ಸಾಲ್‌ಸೆಟ್ ದ್ವೀಪ ಕೊಡಲಾಯಿತು. ಮಹದಾಜಿಗೆ ಯಮುನಾ ನದಿಯ ಪಶ್ಚಿಮದ ಪ್ರದೇಶಗಳನ್ನು ಬಿಟ್ಟುಕೊಡಲಾಯಿತು. ರಘೋಬನಿಗೆ ಪಿಂಚಣಿ ನೀಡಲಾಯಿತು.

ವಾರನ್ ಮತ್ತು ಮೈಸೂರು        ಸಂಬಂಧಗಳು - ೨ನೆ ಆಂಗ್ಲೋ-ಮೈಸೂರು ಯುದ್ದ.

•  ಮೊದಲನೆ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರಿಗೆ ಸೋಲುಂಟಾಗಿ ಅವರು ಅವಮಾನಕರ ಮದ್ರಾಸ್ ಒಪ್ಪಂದಕ್ಕೆ ಒಳಗಾಗಿದ್ದರು.

•  ಆದರೆ ಅವರು ಹೈದರಾಲಿಯ ವಿರುದ್ಧ ಮರಾಠರು ದಾಳಿ ಮಾಡಿದಾಗ ಒಪ್ಪಂದದ ಕರಾರುಗಳನ್ನು ಪಾಲಿಸಲಿಲ್ಲ.

•  ಇದರಿಂದ ಹೈದರಾಲಿ ಬ್ರಿಟಿಷರ ಕಡುವೈರಿಯಾದ.

ಯುದ್ಧದ ತಕ್ಷಣದ ಕಾರಣ.

•  ೧೭೮೦ ರಲ್ಲಿ ಯೂರೋಪಿನಲ್ಲಿ ಆರಂಭವಾದ ಯುದ್ಧದ ಕಾರಣ ಭಾರತದಲ್ಲೂ ಘರ್ಷಣೆಗಳು ಆರಂಭವಾದವು. ಇದರಿಂದ ಫ್ರೆಂಚರ ಮಾಹೆ ನೆಲೆಯನ್ನು ಬ್ರಿಟಿಷರು ವಶಪಡಿಸಿಕೊಂಡರು.

•  ಮಾಹೆ ಹೈದರಾಲಿಗೆ ವಿದೇಶಗಳಿಂದ ಯುದ್ಧ ಸಾಮಗ್ರಿಗಳನ್ನು ತರಿಸಿಕೊಳ್ಳಲು ಇದ್ದ ಏಕೈಕ ಮಾರ್ಗವಾಗಿತ್ತು. ಕಾರಣ ಅವನು ಮಾಹೆಯನ್ನು ತೆರವುಗೊಳಿಸಲು ಬ್ರಿಟೀಷರಿಗೆ ತಿಳಿಸಿದನು.   ಅದನ್ನು ಫ್ರೆಂಚರಿಗೆ ಬಿಟ್ಟುಕೊಡಲು ಬ್ರಿಟಿಷರು ನಿರಾಕರಿಸಿದರು.

•  ವೇಳೆಗೆ ಬ್ರಿಟಿಷರ ವಿರುದ್ಧದ ದೇಶೀಯ ರಾಜರುಗಳ ಒಕ್ಕೂಟ ಛಿದ್ರವಾಗಿತ್ತು. ಆದರೂ ಹೈದರಾಲಿ ಏಕಾಂಗಿಯಾಗಿ ಬ್ರಿಟೀಷರ ವಿರುದ್ಧ ಯುದ್ಧ ಆರಂಭಿಸಿದ. ಅವನು ಬ್ರಿಟೀಷರಿಂದ ಆರ್ಕಾಟ್ ವಶಪಡಿಸಿಕೊಂಡ. ಟಿಪ್ಪು ಸಹಾ ತಂದೆಯ ಬೆಂಬಲಕ್ಕೆ ನಿಂತು ಅನೇಕ ಯುದ್ಧಗಳಲ್ಲಿ ಆಂಗ್ಲರನ್ನು ಸೋಲಿಸಿದನು.

ಆದರೆ ಸರ್‌ ಐರ್‌ ಕೂಟ್‌ನ ಯುದ್ಧರಂಗ ಪ್ರವೇಶದಿಂದ ಯುದ್ಧದ ಗತಿ ಬದಲಾಯಿತು.

•  ಮಧ್ಯಂತರದಲ್ಲಿ ಹೈದರಾಲಿಯು ೧೭೮೨, ಡಿಸೆಂಬರ್‌ ೭ ರಂದು ಚಂಗಲ್‌ಪೇಟೆಯ ಬಳಿ ಬೆನ್ನುಫಣಿ ರೋಗದಿಂದ ಮರಣ ಹೊಂದಿದನು. ಅವನ ಮಗ  ಟಿಪ್ಪು ಯುದ್ಧ ಮುಂದುವರಿಸಿದ.

•  ಎರಡೂ ಕಡೆ ಅಪಾರ ಸೈನ್ಯ ಮತ್ತು ಧನ ಹಾನಿ ಆದ ಕಾರಣ ಯುದ್ಧ ನಿಲುಗಡೆಯ ಹಂತ ತಲುಪಿತು.

•  ಟಿಪ್ಪು ಮತ್ತು ಆಂಗ್ಲರ ನಡುವೆ ೧೭೮೪  ರಲ್ಲಿ ಮಂಗಳೂರು ಒಪ್ಪಂದ  ಏರ್ಪಟ್ಟಿತು.

•  ಪರಸ್ಪರ ಗೆದ್ದ ಪ್ರದೇಶಗಳನ್ನು ಹಿಂತಿರುಗಿಸುವುದು ಮತ್ತು   ಯುದ್ಧಖೈದಿಗಳ ವಿನಿಮಯ ಇತ್ಯಾದಿ ಕರಾರುಗಳು ಒಪ್ಪಂದದಲ್ಲಿದ್ದವು

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧