Lord Wellesley and his Subsidiary System 1798-1805
ಲಾರ್ಡ್ ವೆಲ್ಲೆಸ್ಲಿ ಮತ್ತು ಅವನ ಸಹಾಯಕ ಸೈನ್ಯ ಪದ್ಧತಿ – ೧೭೯೮-೧೮೦೫
Full Name:- Richard Colley Wellesley
Born:- 20 June 1760
Place:- Dangan Castle , County Meath
Died:- 26 September 1842
( aged 82 ) Knightsbridge , London
ಪೀಠಿಕೆ:
ಇವನು ಕ್ಲೈವ್, ವಾರನ್ ಮತ್ತು ಡಾಲ್ ಹೌಸಿಯರಂತೆ ಪರಾಕ್ರಮಿ.
ಕಂಪೆನಿಯನ್ನು ಒಂದು ಸಾರ್ವಭೌಮ ಶಕ್ತಿಯನ್ನಾಗಿಸಿದ.
ಸಹಾಯಕ ಸೈನ್ಯ ಪದ್ಧತಿ, ಆಕ್ರಮಣ ಮತ್ತು ಮಧ್ಯಸ್ಥಿಕೆ ನೀತಿಗಳ ಮೂಲಕ ವಿದೇಶೀಯರ ಪ್ರಭಾವ ಕುಂಠಿತಗೊಳಿಸಿ ದೇಶೀಯ ಅರಸರ ಮೇಲೆ ಹಿಡಿತ
ಸಾಧಿಸಿದ. ಉತ್ತಮ ಆಡಳಿತಗಾರನೂ ಆಗಿದ್ದ.
ಭಾರತದ ವಿದ್ಯಮಾನಗಳು.: ಪೂರ್ವಿಕರಾದ
ಕಾರ್ನವಾಲೀಸ್ ಮತ್ತು ಜಾನ್ ಶೋರ್ ಅವರ
ತಟಸ್ಥ ನೀತಿಯ ಕಾರಣ ದೇಶೀಯ ಅರಸರ
ಪ್ರಾಬಲ್ಯ.
ಮರಾಠರ
ಸಿಂಧ್ಯ, ಗಾಯಕವಾಡ್ ಮತ್ತು ಹೋಳ್ಕರ್ ಮಧ್ಯಭಾರತದಲ್ಲಿ ಪ್ರಭಾವಶಾಲಿಗಳಾಗಿದ್ದರು. ಹೈದ್ರಾಬಾದಿನ ನಿಜಾಮ ೧೪,೦೦೦ ಮತ್ತು
ಸಿಂಧ್ಯ ೪೦,೦೦೦ ಸೈನಿಕರಿಗೆ
ಫ್ರೆಂಚರಿಂದ ಸೇನಾ ತರಬೇತಿ ನೀಡಿಸುತ್ತಿದ್ದರು.
ವಿದೇಶಿಯರ ನೆರವಿನೊಂದಿಗೆ ಟಿಪ್ಪು ೩ನೆ ಮೈಸೂರು ಯುದ್ಧದ
ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ.
ವಿದೇಶಾಂಗ ನೀತಿ (ದೇಶೀಯ
ಅರಸರೊಂದಿಗೆ): “ಭಾರತದಲ್ಲಿ ಕಂಪೆನಿಯನ್ನು ಒಂದು ಸಾರ್ವಭೌಮ ಶಕ್ತಿಯನ್ನಾಗಿ
ಮಾಡುವುದು ಮತ್ತು ಬ್ರಿಟಿಷರಿಗೆ ಮುಳುವಾಗಿದ್ದ ಫ್ರೆಂಚರ ಪ್ರಭಾವವನ್ನು ಕುಗ್ಗಿಸುವುದು ಇವನ ವಿದೇಶಾಂಗ ನೀತಿಯ
ಉದ್ದೇಶ” ಉದ್ದೇಶ ಸಾಧನೆಗಾಗಿ “ಸಹಾಯಕ ಸೈನ್ಯ ಪದ್ಧತಿ, ಯುದ್ಧ ಮತ್ತು ಮಧ್ಯಸ್ಥಿಕೆ”ಯ ನೀತಿ ಅನುಸರಣೆ.
ಸಹಾಯಕ
ಸೈನ್ಯ ಪದ್ಧತಿ: ಈ ಪದ್ಧತಿಯನ್ನು ಮೊದಲು ಭಾರತದಲ್ಲಿ ಅಳವಡಿಸಿದವರು ಯಾರು?
ಸಹಾಯಕ ಸೈನ್ಯ ಪದ್ಧತಿಯ ಅರ್ಥ ಮತ್ತು ಲಕ್ಷಣಗಳು: ಭಾರತದಲ್ಲಿ
ಕಂಪೆನಿಯ ಸಾರ್ವಭೌಮತ್ವ ಸ್ಥಾಪಿಸುವುದು ಮತ್ತು ದೇಶೀಯ ಅರಸರ ಆಸ್ಥಾನದಲ್ಲಿ ಇತರೆ
ಯೂರೋಪಿಯನ್ನರ ಪ್ರಭಾವ ತಗ್ಗಿಸಲು ಈ ಪದ್ಧತಿಯ ಬಳಕೆ.
“ದೇಶೀಯ
ಅರಸರ ರಕ್ಷಣೆಗೆ ಅವರ ರಾಜ್ಯದಲ್ಲಿ ಆಂಗ್ಲ
ಸೈನ್ಯದ ತುಕಡಿಯೊಂದನ್ನು ಇಟ್ಟುಕೊಳ್ಳುವುದು ಮತ್ತು ಆ ಸೈನ್ಯದ ವೆಚ್ಚವನ್ನು
ದೇಶೀಯ ಅರಸರು ಕೊಡುವುದೇ ಸಹಾಯಕ ಸೈನ್ಯ ಪದ್ಧತಿ”.
ನಿರ್ಬಂಧಗಳು:- ದೇಶೀಯ
ಅರಸರು ಆಂಗ್ಲ ಸೈನ್ಯದ ವೆಚ್ಚವನ್ನು ಭರಿಸುವುದು (ಹಣ ಅಥವಾ ಭೂಮಿಗಳ
ರೂಪದಲ್ಲಿ). ಆಂಗ್ಲ ಪ್ರತಿನಿಧಿಯೊಬ್ಬನನ್ನು ತಮ್ಮ ಆಸ್ಥಾನದಲ್ಲಿ ಇಟ್ಟುಕೊಳ್ಳುವುದು.
ತಮ್ಮ ಬಾಹ್ಯ ಮತ್ತು ಆಂತರಿಕ ವ್ಯವಹಾರಗಳ ಸಮಯದಲ್ಲಿ ಕಂಪೆನಿಯ ಅನುಮತಿ ಪಡೆಯುವುದು. ಬಾಹ್ಯ ದಾಳಿಗಳು ಮತ್ತು ಆಂತರಿಕ ಗಲಭೆಗಳ ಸಮಯದಲ್ಲಿ ಆಂಗ್ಲ ಸೈನ್ಯ ದೇಶೀಯ ಅರಸರಿಗೆ ರಕ್ಷಣೆ ನೀಡುವುದು. ಇತರೆ ಯೂರೋಪಿಯನ್ನರನ್ನು ತಮ್ಮ
ಆಸ್ಥಾನಗಳಿಂದ ಹೊರಹಾಕುವುದು.
ಆರಂಭದಲ್ಲಿ ಹಣ ಪಡೆಯುತ್ತಿದ್ದ
ಆಂಗ್ಲರು ನಂತರ ಫಲವತ್ತಾದ ಭೂಮಿಗಳನ್ನು
ಪಡೆಯತೊಡಗಿದರು.
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ದೇಶೀಯ ಅರಸರು ಮತ್ತು ಅವರು ಬ್ರಿಟೀಷರಿಗೆ
ಬಿಟ್ಟುಕೊಟ್ಟ ಪ್ರದೇಶಗಳ ವಿವರಗಳು:
ಹೈದರಾಬಾದಿನ
ನಿಜಾಮ – ೧೭೯೮ – ಅನಂತಪುರ, ಬಳ್ಳಾರಿ, ಕಡಪ ಮತ್ತು ಕರ್ನೂಲು
ಜಿಲ್ಲೆಗಳು.
ಮೈಸೂರು
– ೧೭೯೯ – ೪ನೆ ಮೈಸೂರು ಯುದ್ಧದ
ನಂತರ.
ಅವಧ್
– ೧೮೦೧ – ರೋಹಿಲ್ ಖಂಡ, ದೊ-ಅಬ್ ಪ್ರದೇಶ ಮತ್ತು
ಗೋರಕ್ ಪುರ.
ಮರಾಠರ
೨ನೆ ಬಾಜಿರಾಯ – ೧೮೦೨ – ಬೆಸ್ಸಿನ್ ಒಪ್ಪಂದದಂತೆ.
ಸಿಂಧ್ಯ
ಮತ್ತು ಹೋಳ್ಕರ್ – ೨ನೆ ಮರಾಠಾ ಯುದ್ಧದ
ನಂತರ.
ತಂಜಾವೂರು
(ಸರ್ಫೋಜಿ), ಜೋಧಪುರ, ಜೈಪುರ, ಭರತಪುರ ಮತ್ತು ಆರ್ಕಾಟ್ ನವಾಬರು ಸಹಾ ಅನುಸರಿಸಿದರು.
ಇದರಿಂದ ಭಾರತದ
ಅನೇಕ ಫಲವತ್ತಾದ ಮತ್ತು ಆಯಕಟ್ಟಿನ ಪ್ರದೇಶಗಳು ಆಂಗ್ಲರ ವಶವಾದವು. ರಾಜಕೀಯ ಮತ್ತು ಪ್ರಾದೇಶಿಕ ವಿಸ್ತರಣೆ ಸಾಧ್ಯವಾಯಿತು.
ಸಹಾಯಕ ಸೈನ್ಯ ಪದ್ಧತಿಯಿಂದ ಕಂಪೆನಿಗೆ ಉಂಟಾದ ಲಾಭಗಳು:
ವೆಚ್ಚವಿಲ್ಲದೇ
ಕಂಪೆನಿಯ ಸೈನಿಕ ಸಂಪನ್ಮೂಲಗಳ ಹೆಚ್ಚಳ! ಕಂಪೆನಿಯ ಪ್ರಭಾವಕ್ಕೆ ಒಳಪಟ್ಟ ಪ್ರದೇಶಗಳ ಹೆಚ್ಚಳ. ಕಂಪೆನಿಯ ಸಾರ್ವಭೌಮತೆಗೆ ಮನ್ನಣೆ. ಸ್ಥಳೀಯ ಅರಸರು ಕಂಪೆನಿಯ ಅವಲಂಬಿತರಾದರು. ಇತರೆ ಯೂರೋಪಿಯನ್ನರ ನಿರ್ಗಮನ.
ಬ್ರಿಟಿಷ್ ಪ್ರದೇಶಗಳಲ್ಲಿ ಯುದ್ಧಗಳು ಸ್ಥಗಿತ. ಹೀಗೆ,
ಕಂಪೆನಿಯ ರಾಜಕೀಯ ಅಧಿಕಾರದ ಹೆಚ್ಚಳ, ಆರ್ಥಿಕ ಪ್ರಾಬಲ್ಯ, ಮತ್ತು ಪ್ರಾದೇಶಿಕ ವಿಸ್ತರಣೆ ಸುಲಭವಾಗಿ ಆಯಿತು.
ದೇಶೀಯ ಅರಸರಿಗೆ ಆದ ನಷ್ಟಗಳು: ತಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಕಳೆದುಕೊಂಡರು. ಫಲವತ್ತಾದ ಮತ್ತು ಆಯಕಟ್ಟಿನ ಪ್ರದೇಶಗಳನ್ನು ಕಳೆದುಕೊಂಡರು. ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು. ಆಡಳಿತದಲ್ಲಿ ಅದಕ್ಷತೆ ಹೆಚ್ಚಿತು. ಸೈನ್ಯದ ವಿಸರ್ಜನೆಯ ಕಾರಣ ಕಾನೂನು ಸುವ್ಯವಸ್ಥೆ ಹಾಳಾಯಿತು.
Comments
Post a Comment