ಪೂರ್ವ ವೈದಿಕ ಕಾಲ ಅಥವಾ ಋಗ್ವೇದದ ಕಾಲ.

ಪೂರ್ವ ವೇದ ಕಾಲ ಅಥವಾ ಋಗ್ವೇದ ಕಾಲ (ಸಾ.ಶ.ಪೂ. ೨೦೦೦-೧೫೦೦): ಋಗ್ವೇದ ಕಾಲದ ಜನಜೀವನದ ಪ್ರಮುಖ ಅಂಶಗಳು ಕೆಳಕಂಡಂತಿವೆ.

ರಾಜಕೀಯ ಜೀವನ: ಕುಟುಂಬವು ಒಂದು ಘಟಕವಾಗಿತ್ತು. ಹಲವು ಕುಟುಂಬಗಳ ಗುಂಪನ್ನು ಗ್ರಾಮ ಎನ್ನುತ್ತಿದ್ದರು. ಗ್ರಾಮವು ಮೊದಲ ಆಡಳಿತ ಘಟಕವಾಗಿತ್ತು. ಗ್ರಾಮಿಣಿ ಇದರ ಮುಖ್ಯಸ್ಥ. ರಾಜನ ಆದೇಶಗಳ ಪಾಲನೆ, ನ್ಯಾಯ, ರಕ್ಷಣೆಯ ಕಾರ್ಯಗಳು ಗ್ರಾಮಿಣಿಗೆ ಸೇರಿದ್ದವು.

ಗ್ರಾಮಗಳ ಗುಂಪನ್ನು ವಿಸ್‌ ಎನ್ನುತ್ತಿದ್ದರು. ವಿಸ್ಪತಿ ಇದರ ಮುಖ್ಯಸ್ತ. ಹಲವು ವಿಸ್‌ಗಳ ಗುಂಪನ್ನು ಜನಪದ ಎನ್ನುತ್ತಿದ್ದರು. ಗೋಪ ಇದರ ಮುಖ್ಯಸ್ಥ. ಬುಡಕಟ್ಟು ರಾಜ್ಯಗಳು ಅಸ್ಥಿತ್ವದಲ್ಲಿದ್ದವು. ಉದಾ: ಭರತರು, ಪುರುಗಳು, ಯದುಗಳು, ಅನುಗಳು, ತೂರ್ವಾಸರು, ಗಾಂಧಾರರು ಇತ್ಯಾದಿ. ಇವುಗಳ ಮುಖ್ಯಸ್ಥನನ್ನು ರಾಜನ್‌ ಎಂದು ಕರೆಯುತ್ತಿದ್ದರು.

ರಾಜಪ್ರಭುತ್ವ: ವಂಶಪಾರಂಪರ್ಯವಾಗಿತ್ತು. ಆಯ್ಕೆ ಪದ್ಧತಿಯೂ ಇತ್ತು. ಧರ್ಮಪಾಲನೆ, ಗೋರಕ್ಷಣೆ ರಾಜನ ಪ್ರಮುಖ ಕಾರ್ಯಗಳು. ರಾಜನಿಗೆ ಗೌರವದ ಸ್ಥಾನ-ಮಾನಗಳಿದ್ದವು. ವಿಶ್ವಾಧಿಪತಿ ಎಂದೂ ಕರೆಯಲಾಗುತ್ತಿತ್ತು.

   ರಾಜನು ನಿರಂಕುಶನಲ್ಲ. ಶಾಸ್ತ್ರಾನುಸಾರ ಪ್ರಜಾಪಾಲನೆ. ರಾಜ ರಂಜಯತೆ ಪ್ರಜಾ; ಪ್ರಜೆಗಳ ಪರಿಪಾಲನೆ. ಜೀವ, ಆಸ್ತಿ, ಪಶುಗಳ ರಕ್ಷಣೆ. ಕಳ್ಳಕಾಕರ ದಮನ. ಯುದ್ಧಗಳು. ಯಜ್ಞ-ಯಾಗಾದಿಗಳ ಆಚರಣೆ. ಪುರೋಹಿತನ ನೇಮಕ, ದಂಡನಾಯಕತ್ವ, ನ್ಯಾಯದಾನ ರಾಜನ ಕರ್ತವ್ಯಗಳು. ಗೋರಕ್ಷಣೆ ಅತೀ ಪ್ರಮುಖ ಕರ್ತವ್ಯ. ಪ್ರಜಾರಕ್ಷಣೆಯ ಕಾರ್ಯಕ್ಕೆ ಬಲಿ ಎಂಬ ತೆರಿಗೆ ಪಡೆಯುತ್ತಿದ್ದನು.

ಸಹಾಯಕರು:

ಅ. ಪುರೋಹಿತ ಅಥವಾ ರಾಜಗುರು. ಆ. ಗ್ರಾಮಿಣಿ. ಇ. ದಂಡನಾಯಕ. ಈ. ಧಶಪತಿ-ಹತ್ತು ಗ್ರಾಮಗಳ ಮುಖಂಡ. ಉ. ಗೋಪ-ಜನಪದಗಳ ಮುಕ್ಯಸ್ಥ. ಊ. ಮಹಿಷಿ-ಪಟ್ಟದ ರಾಣಿ. ಋ. ಸೂತ-ಕಾಗದ ಪತ್ರಗಳ ರಕ್ಷಕ. ಎ. ಭಾಗದುಗ-ಕಂದಾಯ ವಸೂಲಿ ಅಧಿಕಾರಿ. ಏ. ರಥಕಾರ-ರಥಗಳ ನಿರ್ಮಾಪಕ. ಐ. ಕ್ಷತ್ರಿ-ಮನೆವಾರ್ತೆಕಾರ. ಒ. ಗೋವಿಕರ್ತ-ಬೇಟೆಯಲ್ಲಿ ರಾಜನ ಸಹಾಯಕ. ಓ. ಅಕ್ಷವಾಪ-ಮೇಲ್ವಿಚಾರಕ. ಔ. ಸಂಗಹಿತ್ರಿ-ಬೊಕ್ಕಸದ ಅಧಿಕಾರಿ. ಅಂ. ಉಗ್ರ-ರಕ್ಷಣಾಧಿಕಾರಿ. ಅಃ. ಸ್ಥಪತಿ-ಗಡಿರಕ್ಷಕ. ಗೂಢಾಚಾರಿ, ದೂತ,

ವೈದಿಕ ಸಂಘಟನೆಗಳು: ಸಭಾ ಮತ್ತು ಸಮಿತಿಗಳು. ಜನಾದರಣೀಯವಾದ ಜನರ ಪ್ರತಿನಿಧಿ ಸಭೆಗಳು. ಇವುಗಳ ಬೆಂಬಲದಿಂದ ರಾಜರು ಆಡಳಿತ ನಿರ್ವಹಣೆ.

ಸಭಾ: ಹಿರಿಯರ ಸಭೆ. ಪುರೋಹಿತ, ಶ್ರೀಮಂತರು ಮತ್ತು ಭೂಮಾಲಿಕರು ಇದರ ಸದಸ್ಯರು. ಸದಸ್ಯರಿಗೆ ಸಭಾಸದರು ಎಂಬ ಹೆಸರು. ಅಧ್ಯಕ್ಷನಿಗೆ ಸಭಾಪತಿ ಎಂದು ಹೆಸರು. ರಾಜನೇ ಸಭಾಪತಿ. ಅವನ ಸಮ್ಮುಖದಲ್ಲಿ ಸಭೆ ಮತ್ತು ನಿರ್ಣಯಗಳು. ರಾಜನು ಸಭಾದ ವಿಶ್ವಾಸ ಪಡೆದಿರಬೇಕಾಗಿತ್ತು. ಮಹಿಳೆಯರಿಗೆ ಪ್ರವೇಶ. ಅಲ್ಪ ಸದಸ್ಯರ ಸಬೆ.

ಸಮಿತಿ: ಜನಸಾಮಾನ್ಯರ ಸಭೆ. ಎಲ್ಲಾ ಪ್ರಜೆಗಳು ಇದರ ಸದಸ್ಯರು. ರಾಜನೇ ಅಧ್ಯಕ್ಷ. ಸಮಸ್ಯೆಗಳ ಚರ್ಚೆ ಮತ್ತು ತೀರ್ಮಾನ. ಕೆ.ಪಿ. ಜೇಸ್ವಾಲ್-‌ ಇದೊಂದು ರಾಷ್ಟ್ರೀಯ ಸಭೆ. ರಾಜನ ನೇಮಕ ಮತ್ತು ಉಚ್ಛಾಟನೆಯ ಅಧಿಕಾರ. ಅವನು ನಿರಂಕುಶನಾದರೆ ಉಚ್ಛಾಟನೆ. ಕಡೆಗಣಿಸುವಂತಿರಲಿಲ್ಲ. ರಾಜನ ಅಧಿಕಾರವು ಸಮಿತಿಯ ಬೆಂಬಲದ ಮೇಲೆ ನಿಂತಿತ್ತು.

ವಿಧಾತ್:‌ ಧಾರ್ಮಿಕ ಸಭೆ. ಸ್ತ್ರೀ-ಪುರುಷರಿಬ್ಬರೂ ಭಾಗವಹಿಸುತ್ತಿದ್ದರು.

ಸೈನಿಕ ಆಡಳಿತ: ಯುದ್ಧಪ್ರಿಯರಾದ ಕಾರಣ ಸೇನಾಡಳಿತವಿತ್ತು. ಪದಾತಿ, ಅಶ್ವಪಡೆ ಮತ್ತು ರಥಪಡೆಗಳಿದ್ದವು. ಬಿಲ್ಲು-ಬಾಣ, ಖಡ್ಗ, ಈಟಿ, ಬಾಕು, ಕೊಡಲಿ, ಶಿರಸ್ತ್ರಾಣ, ಯುದ್ಧಗಳ ಜಯಕ್ಕೆ ಪುರೋಹಿತರು ಪ್ರಾರ್ಥನೆ. ಋಗ್ವೇದದಲ್ಲಿ ಪುರ್‌ಚರಿಷ್ಣು ಎಂಬ ಕೋಟೆಗಳ ಉಲ್ಲೇಖ. ಯುದ್ಧದಲ್ಲಿ ಆದರ್ಶಗಳ ಪಾಲನೆ.

ನ್ಯಾಯಾಡಳಿತ: ರಾಜನೇ ಅಂತಿಮ ನ್ಯಾಯಾಧೀಶ. ರೂಢಿ-ಸಂಪ್ರದಾಯಗಳೆ ಕಾನೂನುಗಳು. ರಸ್ತೆ ದರೋಡೆ, ಕೊಲೆ, ಗೋವುಗಳ ಅಪಹರಣಗಳು ಸಾಮಾನ್ಯ ಅಪರಾಧಗಳಾಗಿದ್ದವು. ದಂಡ, ಚಡಿ ಏಟು ಶಿಕ್ಷೆಗಳಾಗಿದ್ದವು. ಕೊಲೆಗಾರ ೧೦೦ ಹಸುಗಳ ಇಲ್ಲವೇ ನಾಣ್ಯಗಳ ದಂಡ. ಇದನ್ನು ಶತಾದಾಯ ಎನ್ನುತ್ತಿದ್ದರು. ಸಾಲ ತೀರಿಸದಿದ್ದರೆ ಗುಲಾಮಗಿರಿಯ ಶಿಕ್ಷೆ. ಅಪರಾಧ ಪತ್ತೆಗೆ ದಿವ್ಯ ಪರೀಕ್ಷೆ ಇತ್ತು.

ಸಾಮಾಜಿಕ ಜೀವನ: ಕುಟುಂಬ ವ್ಯವಸ್ಥೆ: ಪಿತೃಪ್ರಧಾನ ಕುಟುಂಬ. ಗೃಹಪತಿ ಅಥವಾ ದಂಪತಿ. ಮನೆಯ ಸದಸ್ಯರ ಮೇಲೆ ಒಡೆತನ. ಕುಟುಂಬದ ಧಾರ್ಮಿಕ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ. ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಗ್ರಾಮೀಣ ಜೀವನ ಪ್ರಧಾನವಾಗಿತ್ತು. ಮರ-ಹುಲ್ಲುಗಳಿಂದ ಮನೆಗಳ ನಿರ್ಮಾಣ. ವಿವಿಧ ಕೋಣೆಗಳು. ಅಗ್ನಿಶಾಲೆ, ಪಾಕಶಾಲೆ, ಅತಿಥಿಗಳ ಕೊಠಡಿ, ವಿಶ್ರಾಂತಿ ಕೊಠಡಿ ಇತ್ಯಾದಿ. ಆಸ್ತಿ ಗಂಡು ಮಕ್ಕಳಲ್ಲಿ ಹಂಚಿಕೆ. ಜಾತಿಪದ್ಧತಿ ರೂಢಿಯಲ್ಲಿರಲಿಲ್ಲ.

ವಿವಾಹ ಪದ್ಧತಿ: ಏಕಪತ್ನಿತ್ವ ಜನಸಾಮಾನ್ಯರಲ್ಲಿ ರೂಢಿ. ಬಹುಪತ್ನಿತ್ವ ಅರಸರು/ಶ್ರೀಮಂತರಲ್ಲಿ ರೂಢಿ. ವಿವಾಹ ಪವಿತ್ರವಾದ ಧಾರ್ಮಿಕ ಬಂಧನ. ಕರಾರು ಅಥವಾ ವ್ಯವಹಾರವಾಗಿರಲಿಲ್ಲ. ವಿವಾಹ ವಿಚ್ಛೇದನ ಇರಲಿಲ್ಲ. ವಧುವಿನ ಮನೆಯ ಮುಂದೆ ಶುಭಕಾರ್ಯ. ಪತ್ನಿ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ. ವಯಸ್ಕ ವಿವಾಹ ಪದ್ಧತಿ ರೂಢಿಯಲ್ಲಿತ್ತು. ಸತಿ ಮತ್ತು ಪರದಾ ಪದ್ಧತಿಗಳು ಇರಲಿಲ್ಲ. ವಿಧವಾ ವಿವಾಹಕ್ಕೆ ಅವಕಾಶ. ನಿಯೋಗ ಎಂಬ ನಿರ್ಬಂಧದ ಪದ್ಧತಿ ರೂಢಿಯಲ್ಲಿತ್ತು. ಗಂಡುಸಂತಾನಾಪೇಕ್ಷೆಗಾಗಿ. ವರದಕ್ಷಿಣೆ ಮ ತೆರ ಪದ್ಧತಿಗಳು ಇದ್ದವು. ಗಂಡುಸಾಂತಾನಕ್ಕೆ ಆದ್ಯತೆ; ಮೋಕ್ಷದ ಕಾರಣ. ಹೆಣ್ಣು ಸಂತಾನ ಕೀಳಾಗಿರಲಿಲ್ಲ. ಮಹಿಳೆಗೆ ವಿವಾಹ ಕಡ್ಡಾಯವಾಗಿರಲಿಲ್ಲ. ಪಾಣಿಗ್ರಹಣ ಜನಪ್ರಿಯ ಸಂಸ್ಕಾರವಾಗಿತ್ತು. ಸೋಮ, ಸೂರ್ಯ ಮತ್ತು ಕನ್ಯಾದಾನ ಎಂಬ ವಿವಾಹ ಪದ್ಧತಿಗಳು. ಸ್ವಗೋತ್ರ ವಿವಾಹ ನಿಷಿದ್ಧ.

ಸ್ತ್ರೀಯರ ಸ್ಥಾನಮಾನಗಳು: ಗೌರವಾನ್ವಿತ ಸ್ಥಾನ-ಮಾನಗಳು. ಉನ್ನತ ಶಿಕ್ಷಣದ ಹಕ್ಕು. ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ. ಸಭೆ-ಸಮಿತಿಗಳಲ್ಲಿ ಭಾಗವಹಿಸುತ್ತಿದ್ದರು. ಅನೇಕ ಸ್ತ್ರೀಯರು ವೇದಪಾಂಡಿತ್ಯ ಹೊಂದಿದ್ದರು. ವಿಶ್ವಾವರ, ಅಪಾಲ, ಗಾರ್ಗಿ, ಲೋಪಾಮುದ್ರೆ, ಮೈತ್ರೆಯಿ, ಮುದ್ಗಾಲಿನಿ ಮೊದಲಾದವರು. ಮೈತ್ರೆಯಿ, ಕಾತ್ಯಾಯಿನಿ ಮತ್ತು ಗಾರ್ಗಿಯರು ಯಾಜ್ಞವಲ್ಕ್ಯನೊಂದಿಗೆ ಚರ್ಚೆ. ವರನ ಆಯ್ಕೆ ಸ್ವಾತಂತ್ರ್ಯ. ವಿಧಾವಾ ವಿವಾಹಕ್ಕೆ ಅವಕಾಶ. ಪುರುಷನಿಗೆ ಸಮಾನವಾದ ಸ್ಥಾನ-ಮಾನಗಳು ಇದ್ದವು.

ಆಹಾರ/ಪಾನೀಯ: ಸ್ಸಯಾಹಾರ ಮತ್ತು ಮಾಂಸಾಹಾರಗಳೆರಡೂ ಇದ್ದವು. ಗೋಜ್ಞ ಎಂಬ ಅತಿಥಿ. ಮುಂದೆ ನಿಷೇಧ. ಹಾಲಿನ ಉತ್ಪನ್ನಗಳು ಪ್ರಮುಖ ಆಹಾರ. ಸುರ ಮತ್ತು ಸೋಮ ಎಂಬ ಪಾನೀಯಗಳ ಸೇವನೆ.

ಉಡುಪುಗಳು: ನೀವಿ ಎಂಬ ಒಳ ಉಡುಪುಗಳು. ಪರಿಧಾನ ಅಥವಾ ವಾಸ ಎಂಬ ಮೇಲುಡುಗೆ. ಅಧಿವಾಸ ಎಂಬ ಕೆಳ ಉಡುಪು. ಹತ್ತಿ, ಉಣ್ಣೆ ಮತ್ತು ರೇಷ್ಮೆಯ ಬಳಕೆ. ಬಣ್ಣಗಳ ಬಳಕೆ. ಚಿನ್ನದ ಕಸೂತಿ ಬಳಕೆ.

ಆಭರಣಗಳು: ಕಂಠಹಾರ, ಓಲೆ, ಬಳೆ, ಕರ್ಣಶೋಧನ, ತೋಳುಬಂಧಿ, ಕಾಲಂದಿಗೆ, ನಿಷ್ಕ, ರುಕ್ಮ, ಕೇಶಾಲಂಕಾರ ರೂಢಿಯಲ್ಲಿತ್ತು. ಕ್ಷೌರ ಮತ್ತು ಗಡ್ಡ ಬೆಳೆಸುವ ಪದ್ಧತಿಗಳಿದ್ದವು. ವ್ಯಾಪ್ತ ಎಂದರೆ ಕ್ಷೌರಿಕ.

ಮನರಂಜನೆ: ರಥಗಳ ಓಟ, ಕುದುರೆ ಓಟ, ಜೂಜಾಟ, ಪಗಡೆ, ಚದುರಂಗ, ಬೇಟೆ, ಸಂಗೀತ, ನೃತ್ಯ, ನಾಟಕಾಭಿನಯಗಳು ಇದ್ದವು. ಹೊರಾಂಗಣ ಕ್ರೀಡೆಗಳು ಬಹು ಜನಪ್ರಿಯ.

ವರ್ಣ ವ್ಯವಸ್ಥೆ: ನಾಲ್ಕು ವರ್ಣಗಳಿದ್ದವು. ಆಯ್ಕೆಯ ಸ್ವಾತಂತ್ರ್ಯವಿತ್ತು. ವೃತ್ತಿಗನುಸಾರವಾಗಿ ವರ್ಣ ನಿರ್ಣಯ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಅಜ್ಜೇಷ್ಠಾಸೊ ಅಕನಿಷ್ಠಾಸಹ, ಸಂಬ್ರಾತರೊ ವಾವೃದೊ ಸೌಭಾಗಾಯ – ಋಗ್ವೇದದ ಮಂತ್ರ.

ವಿಜ್ಞಾನ: ಆಯುರ್ವೇದ, ಜೋತಿಷ್ಯಗಳು ತಿಳಿದಿದ್ದವು. ಲೋಹಶಾಸ್ತ್ರವೂ ತಿಳಿದಿತ್ತು.

ನೈತಿಕ ಮಟ್ಟ: ಪರಿಶುದ್ಧ ಜೀವನ ಕ್ರಮ. ಸದ್ಭಾವನೆ ಕೊಡುವಂತೆ ಪ್ರಾರ್ಥನೆ. ಗಾಯತ್ರಿ ಮಂತ್ರ.

ಆರ್ಥಿಕ ಜೀವನ: ಕೃಷಿ ಪ್ರಧಾನ ಕಸುಬು. ಆರ್‌ ಎಂದರೆ ಕೃಷಿ ಎಂದರ್ಥ. ಆರ್ಯ ಎಂದರೆ ಕೃಷಿಕ ಎನ್ನುವ ಅರ್ಥವೂ ಇದೆ. ಮರದ ನೇಗಿಲು ಬಳಕೆ. ಉರುವರ – ಕ್ಷೇತ್ರ. ಗೋದಮ, ಜವ, ವ್ರಿಹಿಸ್‌, ಹತ್ತಿ, ಎಣ್ಣೆಕಾಳುಗಳು, ಹಣ್ಣುಗಳು ಪ್ರಮುಖ ಬೆಳೆಗಳು. ನದಿ, ಕಾಲುವೆ ಮತ್ತು ಬಾವಿ/ಅವತಸ್‌ಗಳಿಂದ ನೀರಿನ ವ್ಯವಸ್ಥೆ. ಉಳುಮೆಗೆ ಪ್ರಾಣಿಗಳ ಬಳಕೆ.

ಪಶುಪಾಲನೆ: ಪಶುಗಳು ಅಂದಿನ ಸಂಪತ್ತು. ಗೋಮತ್‌ ಅಂದರೆ ಶ್ರೀಮಂತ. ಋಗ್ವೇದದಲ್ಲಿ ೧೭೬ ಕಡೆ ಗೋ ಪದದ ಉಲ್ಲೇಖ. ಗವಸ್ತಿ ಅಥವಾ ಗೋಗ್ರಹಣ ಯುದ್ಧಗಳು. ಹಸು, ಕುದುರೆ, ಕುರಿ, ಆಡು, ಎತ್ತು, ಎಮ್ಮೆ  ಇತ್ಯಾದಿಗಳು ಪ್ರಮುಖ ಪ್ರಾಣಿವರ್ಗ. ಯಜುರ್ವೇದದಲ್ಲಿ ೬೦೯ ಪ್ರಾಣಿಗಳ ಹೆಸರುಗಳು. ಬೃಹದಾರಣ್ಯಕದಲ್ಲಿ ಪಶುಪಾಲನೆ ಬಗ್ಗೆ ಮಾಹಿತಿ. ಹಾಲು, ಗೊಬ್ಬರ, ಮಾಂಸ ಮತ್ತು ಚರ್ಮಗಳ ಉಪಯೋಗ. ಗೋವು ಪೂಜನೀಯ; ಹತ್ಯೆ ನಿಷೇಧ. ಆಜ್ಞ ಎಂದರೆ ಕೊಲ್ಲಬಾರದು. ಗೋವು ವಿನಿಮಯ ರೂಪದಲ್ಲಿ ಬಳಕೆ. ಕಿವಿಗಳ ಮೇಲೆ ಮುದ್ರೆಗಳು. ವಿದ್ವತ್‌ ಸಭೆಗಳಲ್ಲಿ ಗೆದ್ದವರಿಗೆ ಗೋವುಗಳ ಬಹುಮಾನ. ಯಾಜ್ಞವಲ್ಕ್ಯರ ಪ್ರಕರಣ. ಗೋಮಾಳ ಅಥವಾ ಗೋಚಾರ ಎಂಬ ಭೂಮಿಗಳು. ಕ್ರಮೇಣ ಗಂಗಾ ಬಯಲಿನಲ್ಲಿ ಸ್ಥಿರ ಜೀವನ ಆರಂಭ. ಇದರಿಂದ ವಿವಿಧ ವೃತ್ತಿಗಳು ಆರಂಬಗೊಂಡವು; ರಥಕಾರ, ಕಮ್ಮಾರ, ಕುಂಬಾರ, ಬಡಗಿ, ನೇಕಾರರು ಇತ್ಯಾದಿ.

ವೃತ್ತಿಗಳು: ನೂಲುವುದು, ನೇಯುವುದು, ಕುಂಬಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ಲೋಹಗಾರಿಕೆ, ಅಕ್ಕಸಾಲಿಗರು, ಬಡಗಿಗಳು, ಚಾಪೆ ನೇಯುವವರು, ಕ್ಷೌರಿಕರು ಮೊದಲಾದ ವೃತ್ತಿಗಳು. ವೃತ್ತಿ ವಿಭಜನೆ ಇತ್ತು. ಕಬ್ಬಿಣ, ಕಂಚು, ಚಿನ್ನ, ತಾಮ್ರಗಳು ತಿಳಿದಿದ್ದವು. ವಿವಿಧ ಬಣ್ಣಗಳ ಮಡಕೆಗಳ ತಯಾರಿಕೆ ತಿಳಿದಿತ್ತು.

ವ್ಯಾಪಾರ/ವಾಣಿಜ್ಯ:- ಅಂತರ್ದೇಶೀಯ ವ್ಯಾಪಾರ ರೂಢಿಯಲ್ಲಿತ್ತು. ವಿನಿಮಯ ಪದ್ಧತಿಯ ಮೂಲಕ ವ್ಯಾಪಾರ. ಫಣಿಗಳು ಎಂಬ ವಣಿಕ ವರ್ಗ. ನಿಷ್ಕ, ಹಸುಗಳು ವಿನಿಮಯಕ್ಕೆ ಬಳಕೆ. ನಿಷ್ಕ, ಸುವರ್ಣ, ಶತಮಾನ, ಕೃಷ್ಣವಲ, ಹಿರಣ್ಯ, ಪದಾಸ್ ಎಂಬ ನಾಣ್ಯಗಳು ಚಲಾವಣೆಗೆ. ಸಮುದ್ರ ವ್ಯಾಪಾರ ತಿಳಿದಿರಲಿಲ್ಲ.

ಸಾರಿಗೆ-ಸಂಪರ್ಕ: ಗಾಡಿಗಳು, ರಥಗಳು, ಕುದುರೆಗಳ ಬಳಕೆ. ದೋಣಿ ಮತ್ತು ನೌಕೆಗಳನ್ನು ಬಳಸುತ್ತಿದ್ದರು.

ಧಾರ್ಮಿಕ ಜೀವನ: ವೈದಿಕ ಆಚರಣೆಗಳಿಂದ ಹಿಂದೂ ಧರ್ಮದ ಆಚರಣೆಗಳು. ಪ್ರಕೃತಿ ಆರಾಧಕರು. ೩೩ ಪ್ರಧಾನ ದೇವತೆಗಳ ಆರಾಧನೆ. ಇಂದ್ರ, ವರುಣ, ಸೂರ್ಯ, ಉಷಸ್‌, ಅಶ್ವಿನಿ, ಸಾವಿತ್ರಿ, ಪರ್ಜನ್ಯ, ಅಗ್ನಿ, ಸೋಮ, ಸರಸ್ವತಿ, ಬೃಹಸ್ಪತಿ ಮೊದಲಾದವರು. ಯಜ್ಞ-ಯಾಗಗಳ ಆಚರಣೆ. ಹವಿಸ್ಸು ಅರ್ಪಣೆ. ಹೋತ್ರಿ, ಅಧ್ವರ್ಯು, ಉದ್ಗಾತ್ರಿಗಳೆಂಬ ಪುರೋಹಿತರು. ಕರ್ಮ ಸಿದ್ಧಾಂತದಲ್ಲಿ ನಂಬಿಕೆ. ವಿಗ್ರಹಾರಾಧನೆ ಇರಲಿಲ್ಲ. ದೇವಾಲಯಗಳು ಇರಲಿಲ್ಲ. ಅಮೂರ್ತ ಆರಾಧನೆ. ಪ್ರಾರ್ಥನೆ ಮೂಲಕ.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources