ವಿಜಯನಗರ ಸಾಮ್ರಾಜ್ಯದ ಮೂಲ, ಆಧಾರಗಳು ಮತ್ತು ಮನೆತನಗಳ ಅರಸರು.

ವಿಜಯನಗರ ಸಾಮ್ರಾಜ್ಯದ ಮನೆತನಗಳು ಮತ್ತು ಆಳಿದ ಅರಸರುಗಳು

The dynasties of Vijayanagara Empire and list of kings

   ವಿಜಯನಗರದ ಸಾಮ್ರಾಜ್ಯವನ್ನು ಕೆಳಗಿನ ನಾಲ್ಕು ಮನೆತನಗಳು ಸುಮಾರು ೩೧೦ ವರ್ಷಗಳ ಕಾಲ ಆಳಿದವು.

 ಸ್ಥಾಪನಾ ವರ್ಷ ಸಾ.ಶ.ವ. ೧೩೩೬ ಮತ್ತು ಕೊನೆಯ ಅರಸನ ಅಂತ್ಯವಾದುದು ಸಾ.ಶ.ವ. ೧೬೪೬.

I. ಸಂಗಮ ಮನೆತನ - Sangama dynasty – 1336-1485

II. ಸಾಳುವ ಮನೆತನ - Saluva dynasty – 1485-1505

III. ತುಳುವ ಮನೆತನ - Tuluva dynasty – 1505-1571

IV. ಅರವೀಡು ಮನೆತನ - Aravidu dynasty – 1571-1646

 

I. ಸಂಗಮ ಮನೆತನ - Sangama dynasty – 1336-1485

1. ಒಂದನೆ ಹರಿಹರ:  1336–1356

2. ಒಂದನೆ ಬುಕ್ಕರಾಯ:  1356–1377

3. ಎರಡನೆ ಹರಿಹರ: 1377–1404

4. ವಿರೂಪಾಕ್ಷರಾಯ: 1404–1405

5. ಎರಡನೆ ಬುಕ್ಕರಾಯ: 1405–1406

6. ಒಂದನೆ ದೇವರಾಯ: 1406–1422

7. ರಾಮಚಂದ್ರರಾಯ: 1422

8. ವಿಜಯರಾಯ ಅಥವಾ ವೀರ ವಿಜಯ ಬುಕ್ಕರಾಯ: 1422–1424

9. ಇಮ್ಮಡಿ ದೇವರಾಯ ಅಥವಾ ಪ್ರೌಢದೇವರಾಯ: 1424–1446

10. ಮಲ್ಲಿಕಾರ್ಜುನ ರಾಯ: 1446–1465

11. ಎರಡನೆ ವಿರೂಪಾಕ್ಷರಾಯ: 1465–1485

12. ಪ್ರೌಢರಾಯ: 1485

II. ಸಾಳುವ ಮನೆತನ - Saluva dynasty – 1485-1505

1. ಸಾಳುವ ನರಸಿಂಹ (ದೇವರಾಯ): 1485–1491

2. ತಿಮ್ಮ ಭೂಪಾಲ: 1491

3. ಎರಡನೆ ಸಾಳುವ ನರಸಿಂಹರಾಯ: 1491–1505

III. ತುಳುವ ಮನೆತನ - Tuluva dynasty – 1505-1571

1. ತುಳುವ ನರಸನಾಯಕ: 1491–1503

2. ವೀರ ನರಸಿಂಹರಾಯ: 1503–1509

3. ಕೃಷ್ಣದೇವರಾಯ: 1509–1529

4. ಅಚ್ಯುತರಾಯ: 1529–1542

5. ಒಂದನೆ ವೆಂಕಟರಾಯ: 1542

6. ಸದಾಶಿವರಾಯ: 1542–1570

IV. ಅರವೀಡು ಮನೆತನ - Aravidu dynasty – 1571-1646

1. ಅಳಿಯ ರಾಮರಾಯ: 1542–1565

2. ತಿರುಮಲರಾಯ: 1565–1572

3. ಒಂದನೆ ಶ್ರೀರಂಗ: 1572–1586

4. ಎರಡನೆ ವೆಂಕಟರಾಯ: 1586–1614

5. ೆರಡನೆ ಶ್ರೀರಂಗರಾಯ: 1614

6. ರಾಮದೇವರಾಯ: 1617–1632

7. ಮೂರನೆ ವೆಂಕಟರಾಯ: 1632–1642

8. ಮೂರನೆ ಶ್ರೀರಂಗರಾಯ: 1642–1646

 

ಆಧಾರಗಳು – Sources:- ವಿಜಯನಗರದ ಇತಿಹಾಸ ರಚನೆಗೆ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳಲ್ಲಿ ಕೃತಿಗಳು ಲಭ್ಯ.

ವಿವಿಧ ಭಾಷೆಗಳ ಏಳು ಸಾವಿರಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ಅವುಗಳಲ್ಲಿ ಅರ್ಧದಷ್ಟು ಕನ್ನಡ, ೨ ಸಾವಿರದಷ್ಟು ತೆಲುಗು ಮತ್ತು ೧,೫೦೦ ರಷ್ಟು ಸಂಸ್ಕೃತ ಭಾಷೆಯವು.

ವಿಜಯನಗರ ಕಾಲದ ಸಾಹಿತ್ಯಾಧಾರಗಳು:-

1 ಮಧುರಾವಿಜಯಂ ಅಥವಾ ಕಂಪಣರಾಯ ವಿಜಯ- ಗಂಗಾದೇವಿ. ಒಂದನೆ ಬುಕ್ಕನ ಮಗ ಕಂಪಣರಾಯನು ೧೩೭೧ ರಲ್ಲಿ ಮಧುರೈ ಜಯಿಸಿ ಅಲ್ಲಿನ ಮಹಮ್ಮದೀಯರ ಆಡಳಿತ ಅಂತ್ಯಗೊಳಿಸಿದ ವಿವರಗಳು.

2 ಸಾಳುವಾಭ್ಯುದಯಂಒಂದನೆ ರಾಜನಾಥ ಡಿಂಡಿಮ; ಸಾಳುವ ವಂಶದ ನರಸಿಂಹನ ಸಾಧನೆಗಳ ಮಾಹಿತಿ.

3 ಗಂಗಾಧರ ಪ್ರತಾಪ ವಿಲಾಸಂಗಂಗಾಧರ; ವಿಜಯನಗರ ಮತ್ತು ಒರಿಸ್ಸಾದ ಗಜಪತಿಗಳ ನಡುವಣ ಯುದ್ಧಗಳು.

4 ರಾಮಾಭ್ಯುದಯಂ: ಸಾಳುವ ನರಸಿಂಹ.

5 ಅಚ್ಯುತಾಭ್ಯುದಯಂ: ಎರಡನೆ ರಾಜನಾಥ ಡಿಂಡಿಮ. ಅಚ್ಯುತರಾಯನ ಕಾಲದ ಮಾಹಿತಿ.

6 ವರದಾಂಬಿಕಾ ಪರಿಣಯಂತಿರುಮಲಾಂಬಿಕೆ

7 ಮಾದಲಸಾ ಚರಿತಂ, ರಸಮಂಜರಿ, ಉಷಾಪರಿಣಯ, ಜಾಂಬವತಿ ಕಲ್ಯಾಣ ಮತ್ತು ಅಮುಕ್ತ ಮಾಲ್ಯದಕೃಷ್ಣದೇವರಾಯ; ಅಮುಕ್ತ ಮಾಲ್ಯದದಲ್ಲಿ ಆಡಳಿತ ಪದ್ಧತಿಯ ಮಾಹಿತಿಗಳು.

8 ಪರಾಶರ ಮಾಧವಿಯ, ಶಂಕರ ವಿಜಯ, ಕಾಲನಿರ್ಣಯ, ವೇದಭಾಷ್ಯ ಮತ್ತು ಸಂಗೀತಸಾರ  - ವಿದ್ಯಾರಣ್ಯ

9 ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಯಜ್ಞತಂತ್ರ ಸುಧಾನಿಧಿ ಮತ್ತು ಪುರುಷಾರ್ಥ ಸುಧಾನಿಧಿಸಾಯಣಾಚಾರ್ಯ

10 ಕುಮಾರರಾಮ ಚರಿತೆನಂಜುಂಡ ಕವಿ; ಆನೆಗುಂದಿಯ ಕಂಪಿಲರಾಯ ಮತ್ತು ಅವನ ಮಗ ಕುಮಾರರಾಮನ ಮಾಹಿತಿ

11 ಸ್ವರಮೇಳಕಲಾನಿಧಿಸಂಗೀತ ಕಲೆ ಮತ್ತು ಅಳಿಯ ರಾಮರಾಯನ ಬಗ್ಗೆ ಮಾಹಿತಿ.

12 ಶಿವತತ್ವ ಚಿಂತಾಮಣಿಲಕ್ಕಣ ದಂಡೇಶ; ಎರಡನೆ ದೇವರಾಯನ ಯುದ್ಧಗಳು

13 ಪ್ರಭುಲಿಂಗ ಲೀಲೆಚಾಮರಸ

14 ಮೋಹನ ತರಂಗಿಣಿ: ಕನಕದಾಸರು.

15 ಕೆಳದಿ ನೃಪವಿಜಯಂ: ಲಿಂಗಣ್ಣ ಕವಿ.

16 ರಾಯ ವಾಚಕಮು: ವಿಶ್ವನಾಥ ನಾಯಿನಿ.

17 ಪಾರಿಜಾತಾಪಹರಣಮು - ನಂದಿ ತಿಮ್ಮಣ್ಣ; ಒರಿಸ್ಸಾದ ಮೇಲಿನ ಕೃಷ್ಣದೇವರಾಯನ ದಿಗ್ವಿಜಯಗಳು

18 ಮನುಚರಿತಮುಪೆದ್ದಣ್ಣ; ಕೃಷ್ಣದೇವರಾಯನ ಕಾಲದ ಆಳ್ವಿಕೆಯ ಮಾಹಿತಿ

19 ಮಲ್ಲಯ್ಯ ಮತ್ತು ಸಿದ್ದಯ್ಯ: ವರಾಹ ಪುರಾಣಮು.

20 ಕಾಶಿಕಂಡ: ಶ್ರೀನಾಥ.

21 ಕೃಷ್ಣರಾಜ ವಿಜಯಮು: ಕುಮಾರ ದೂರ್ಜಟಿ; ಕೃಷ್ಣದೇವರಾಯನ ದಿಗ್ವಿಜಯಗಳು.

22. ಅಮುಕ್ತ ಮಾಲ್ಯದ: ಕೃಷ್ಣದೇವರಾಯ.

ವಿದೇಶಿ ಬರವಣಿಗೆಗಳು – Foreign Accounts

1 ಅಬ್ದುಲ್ರಜಾಕ್: ವಿಜಯನಗರಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಪ್ರವಾಸಿಗ. 1442-43 ರಲ್ಲಿ ಭೇಟಿ. ರಾಜಕೀಯ, ಆರ್ಥಿಕ & ಸಾಂಸ್ಕೃತಿಕ ವಿವರಗಳನ್ನು ನೀಡಿದ್ದಾನೆ.

2 ನಿಕೊಲೋ ಕೋಂಟಿ; ಇಟಲಿ. 1520 ರಲ್ಲಿ. ಇದೇ ಕಾಲಕ್ಕೆ ಇಟಲಿಯವನೇ ಆದ ಫೇಸ್ಸಹಾ ಭೇಟಿ ನೀಡಿದ್ದ.

3 ನ್ಯೂನಿಜ್; ಕುದುರೆ ವ್ಯಾಪಾರಿ. ವಿಜಯನಗರಕ್ಕೆ ಭೇಟಿ, 1537 ರಲ್ಲಿ. ವೃತ್ತಾಂತ ಅಥವಾ Chronicles ವಿಜಯನಗರ ಕುರಿತು ಹೆಚ್ಚಿನ ಮಾಹಿತಿ.

 

ಪುರಾತತ್ವ ಆಧಾರಗಳು – Archaeological Sources

   ಹಂಪಿ, ಆನೆಗುಂದಿ, ಪೆನುಗೊಂಡ, ಲೇಪಾಕ್ಷಿ, ತಿರುಪತಿ, ಬೇಲೂರು, ಚಂದ್ರಗಿರಿ, ತಾಡಪತ್ರಿ, ವೆಲ್ಲೂಉರುಗಳಲ್ಲಿನ ಸ್ಮಾರಕಗಳು ಮತ್ತು ಅಸಂಖ್ಯ ಸಂಖ್ಯೆಯ ನಾಣ್ಯಗಳು.

ಸ್ಥಾಪಕರು:- ಸಂಗಮನೆಂಬುವನ ಮಕ್ಕಳಾದ ಹಕ್ಕ ಅಥವಾ ಹರಿಹರ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಣ್ಣ.

ಸ್ಥಾಪನಾ ವರ್ಷ:- 1336.

ಸ್ಥಾಪಕರು: ಸಂಗಮನ ಐವರು ಮಕ್ಕಳಾದ ಹಕ್ಕ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪರಲ್ಲಿ ಹಕ್ಕ ಮತ್ತು ಬುಕ್ಕರು ಈ ಮನೆತನದ ಸ್ಥಾಪಕರೆಂದು ನಂಬಲಾಗಿದೆ. ಹಕ್ಕನಿಗೆ ಹರಿಹರನೆಂಬ ಮತ್ತೊಂದು ಹೆಸರೂ ಇದೆ. ಮೂಲ: ಸ್ಥಾಪಕರಾದ ಸಂಗಮ ಸೋದರರ ಮೂಲದ ಬಗ್ಗೆ ಎರಡು ವಾದಗಳಿವೆ.

1 ತೆಲುಗು ಮೂಲ ಅಥವಾ ವಾರಂಗಲ್‌ ಮೂಲ. ಪ್ರತಿಪಾದಕರು: ಡಾ. A. ವೆಂಕಟರಮಣಯ್ಯ, ಶ್ರೀ B. ಸೂರ್ಯನಾರಾಯಣರಾವ್‌, ಮತ್ತು ಪ್ರೊ. K.A. ನೀಲಕಂಠಶಾಸ್ತ್ರಿ. ಮುಸ್ಲೀಂ ಬರವಣಿಗೆಗಳು ಮತ್ತು ವಿದ್ಯಾರಣ್ಯ ಕಾಲಜ್ಞಾನಗಳು ಇವರ ವಾದಕ್ಕೆ ಆಧಾರಗಳು.

   ಇವರ ಪ್ರಕಾರ ಹಕ್ಕ ಮತ್ತು ಬುಕ್ಕರು ವಾರಂಗಲ್ಲಿನ ಕಾಕತೀಯರ ಬಳಿ ಉನ್ನತ ಹುದ್ದೆಗಳಲ್ಲಿದ್ದರು. ದೆಹಲಿ ಸುಲ್ತಾನರ ದಾಳಿಗಳಿಂದ ಕಾಕತೀಯರ ಪತನಾನಂತರ ಕಂಪಿಲೆಯ ಆಸ್ಥಾನದಲ್ಲಿ ಊಳಿಗದವರಾದರು. ಮುಂದೆ ಮಹಮದ್‌ ಬಿನ್‌ ತುಘಲಕ್‌ನ ಕಂಪಿಲೆ ಮೇಲಿನ ದಾಳಿಯ ಕಾಲಕ್ಕೆ ಸೆರೆ ಸಿಕ್ಕು ದೆಹಲಿಗೆ ರವಾನೆಯಾಗಿ  ಇಸ್ಲಾಂಗೆ ಮತಾಂತರ ಆದರು. ನಂತರ ದಕ್ಷಿಣದ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿ ಮರಳಿ ಬಂದರು. ಇಲ್ಲಿ ವಿದ್ಯಾರಣ್ಯರ ಪ್ರಭಾವಕ್ಕೆ ಒಳಗಾಗಿ ಮರಳಿ ಹಿಂದೂ ಧರ್ಮ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಕಟ್ಟಿದರು. ಇದಕ್ಕೆ ಸಮಕಾಲೀನ ಆಧಾರಗಳ ಕೊರತೆ ಇದೆ. ಈ ವಾದಕ್ಕೆ ಪೂರಕವಾದ ಇಸ್ಲಾಂ ಬರವಣಿಗೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿವೆ. ಅಂದಿನ ಸಾಮಾಜಿಕ ಸ್ಥಿತಿಯಲ್ಲಿ ಮರು ಮತಾಂತರ ಮತ್ತು ಅದಕ್ಕೆ ಮನ್ಣಣೆ ಸಿಕ್ಕಿರುವುದು ನಂಬಲು ಅಸಾಧ್ಯವಾದ ಸಂಗತಿ. ಜೊತೆಗೆ ಜನಬೆಂಬಲ ದೊರೆತ ಸಂಗತಿಯೂ ನಂಬಲಸಾಧ್ಯ.

೨ ಕನ್ನಡ ಮೂಲ ಅಥವಾ ಹೊಯ್ಸಳ ಮೂಲ. ಪ್ರತಿಪಾದಕರು: ಫಾದರ್‌ ಹೆರಾಸ್‌, P.B. ದೇಸಾಯಿ, ಮತ್ತು B.A. ಸಾಲತೊರೆ.

   ಹೊಯ್ಸಳ ಮೂರನೆ ಬಲ್ಲಾಳನ ಸೋದರಳಿಯ ಬಲ್ಲಪ್ಪ ನಾಯಕನು ಹರಿಹರ ಅಥವಾ ಹಕ್ಕನ ಮಗಳನ್ನು ವಿವಾಹವಾಗಿದ್ದ ಮಾಹಿತಿಯನ್ನು ಫಾ. ಹೆರಾಸ್‌ ಸಾಬೀತುಪಡಿಸಿದ್ದಾರೆ. ಡಾ. ಸಾಲತೊರೆಯವರು ತೆಲುಗು ಕವಿಗಳಾದ ವಲ್ಲಭಾಚಾರ್ಯ ಮತ್ತು ಶ್ರೀನಾಥರು ಸಂಗಮ ಸೋದರರನ್ನು ಕರ್ನಾಟಕ ಕ್ಷಿತಿನಾಥರೆಂದು ಉಲ್ಲೇಕಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇಮ್ಮಡಿ ಹರಿಹರನು “ಆಂಧ್ರರಾಜಮದಗಳಿಗೆ ಸಿಂಹಪ್ರಾಯ” ಎಂದು ಶಾಸನೋಕ್ತವಾಗಿರುವುದು ಅವರ ತೆಲುಗು ವಿರೋಧಿ ನೀತಿಯನ್ನು ತಿಳಿಸುತ್ತದೆ. ವಿರೂಪಾಕ್ಷ ಮತ್ತು ಬೇಲೂರಿನ ಕೇಶವನ ಆರಾಧಕರಾಗಿದ್ದುದು ಅವರ ಕನ್ನಡ ಮೂಲಕ್ಕೆ ಮತ್ತಷ್ಟು ಬೆಂಬಲ ನೀಡುತ್ತದೆ. ಭಾಷೆಗೆ ತಪ್ಪುವ ರಾಯರ ಗಂಡ, ಮೂರುರಾಯರ ಗಂಡ, ಅರಿರಾಯದಂಡ ಎಂಬ ಬಿರುದುಗಳು ಕನ್ನಡದಲ್ಲಿದ್ದು ಇತರೆ ಭಾಷೆಯ ಶಾಸನಗಳಲ್ಲೂ ಬಳಕೆಯಾಗಿವೆ. ಕೃಷ್ಣದೇವರಾಯನ “ಕನ್ನಡರಾಜ್ಯ ರಮಾರಮಣ” ಎಂಬ ಬಿರುದು ಸಹಾ ಕನ್ನಡದ್ದೇ. ಕಂಪಿಲೆಯ ಕುಮಾರರಾಮನ ಆದರ್ಶಗಳನ್ನು ಮುಂದುವರಿಸುವವರಾಗಿ ಸಂಗಮ ಸೋದರರು ಜನಪ್ರಿಯತೆ ಗಳಿಸಿರಬಹುದು. ಅಲ್ಲದೇ ಇವರ ಶ್ರೀ ವಿರೂಪಾಕ್ಷ ಎಂಬ ಶಾಸನಗಳಲ್ಲಿನ ಅಂಕಿತವು ಬಹುತೇಕ ಕನ್ನಡದಲ್ಲಿದೆ. ಹೊಯ್ಸಳರ ಉತ್ತರದ ಗಡಿಗಳ ರಕ್ಷಕರಾಗಿದ್ದ ಹರಿಹರ ಮತ್ತು ಬುಕ್ಕರು ಸು. 1343 ರಲ್ಲಿ ಮೂರನೆ ವೀರ ಬಲ್ಲಾಳನ ಮರಣಾನಂತರ  ಹೊಯ್ಸಳರ ಮನೆತನ ದುರ್ಬಲಗೊಂಡ ವೇಳೆ ಅವರ ಪತನಾನಂತರ ಪ್ರವರ್ಧಮಾನಕ್ಕೆ ಬಂದಿದ್ದಾರೆ.

Comments

Post a Comment

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources