ಬುದ್ಧನ ಬೋಧನೆಗಳು; ನಾಲ್ಕು ಸತ್ಯಗಳು, ದುಃಖದ ವಿಧಗಳು, ಅಷ್ಟಾಂಗ ಮಾರ್ಗಗಳು
ಕ್ರಿಸ್ತ
ಪೂರ್ವ ಆರನೆಯ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥನು ಕಠೋರ ತಪಸ್ಸು ಮಾಡಿ,
ಬುದ್ಧನಾಗಿ (ಜಾಗ್ರತಿ ಪಡೆದವನು) ಎಂಭತ್ತು ವರ್ಷಗಳ ಕಾಲ ಧರ್ಮೋಪದೇಶ ಮಾಡುತ್ತಾ
ನಿರ್ವಾಣ ಹೊಂದಿದ ಇವನಿಗೆ ಗೌತಮ ಬುದ್ಧ ನೆಂಬ
ಹೆಸರೂ ಇದೆ. ಅವನ ಉಪದೇಶಗಳು
ಸಂಭಾಷಣೆಯ ರೂಪದಲ್ಲಿದ್ದು ಅವನ ಶಿಷ್ಯರಾದ, ಮಹಾಕಶ್ಯಪ,
ಉಪಾಲಿಗಳು ಸಂಗ್ರಹಿಸಿದ ಉಪದೇಶಗಳು ಪಿಟಿಕ ಗಳೆಂದು ಪ್ರಸಿದ್ಧವಾಗಿವೆ. ಅದರಲ್ಲಿ ವಿನಯ ಪಿಟಿಕ ಆಚಾರ
ಸಂಬಂಧ ಗ್ರಂಥ ; ಅಭಿದಮ್ಮ ಪಿಟಿಕ ತಾತ್ವಿಕ ವಿಚಾರ ಸಂಬಂಧಗ್ರಂಥ. ಪ್ರಸಿದ್ಧವಾದ ದಮ್ಮಪದ (ಗ್ರಂಥ) ಅದರಲ್ಲೇ ಇದೆ. ಮಿಲಿಂದ ಪನ್ಹಾ
ಈ ಧರ್ಮದ ಇನ್ನೊಂದು ಗ್ರಂಥ.
ನಾಲ್ಕು ಆರ್ಯ
ಸತ್ಯಗಳು ಅಥವಾ ಬುದ್ಧನು ಸಾಕ್ಷಾತ್ಕರಿಸಿಕೊಂಡ ಸತ್ಯಗಳು :
೧. ದುಃಖಮ್ : ಈ ಪ್ರಪಂಚದ ಜೀವನವು
ದುಃಖಮಯವಾಗಿದೆ. ಸುಖಗಳು ತೋರಿಕೆಯವು ; ಆದ್ದರಿಂದ ದುಃಖದಿಂದ ತಪ್ಪಿಸಿಕೊಳ್ಳುವುದೇ ಮಾನವನ ಗುರಿ.
೨. ದುಃಖ ಸಮುದಾಯ :ದುಃಖದ
ಸಂ + ಉದಯ -ಹುಟ್ಟು (ಸಮುದಾಯ ?)
ಈ ದುಃಖದ ಸಮುದಾಯಗಳೇ ದುಃಖಕ್ಕೆ ಕಾರಣವಾಗಿವೆ.
ಮುಖ್ಯವಾಗಿ
ಹನ್ನೆರಡುಬಗೆಯ ದುಃಖಗಳು: ಅವುಗಳೆಂದರೆ,
ಜರಾ-ಮರಣ
ಜಾತಿ
ಭವ
ಉಪಾದಾನ
ತೃಷ್ಣಾ
ವೇದನಾ
ಸ್ಪರ್ಶ
ಷಡಾಯತನ
ನಾಮ
ರೂಪ
ವಿಜ್ಞಾನ
ಸಂಸ್ಕಾರ
ಅವಿದ್ಯಾ
( ಭವ :
ಕರ್ಮ
ಉಪಾದಾನ:
ಆಸಕ್ತಿ
ವೇದನಾ:
ಇಂದ್ರಿಯಾನುಭವ
ಷಡಾಯತನ:
ಮನಸ್ಸು -ಶರೀರೇಂದ್ರಿಯಗಳ ಸಂಬಂಧ
Dukkha samudaya; Samudaya means "origin" or
"source".
ಕೊನೆಯಲ್ಲಿರುವ
ಅವಿದ್ಯೆ (ಅಜ್ಞಾನ) ಸಮಸ್ತ ದುಃಖಗಳಿಗೂ ಕಾರಣ.
೩. ದುಃಖ ನಿರೋಧ : ದುಃಖ
ನಿರೋಧ ಸಾಧ್ಯ ಎನ್ನುವುದು ಮೂರನೆಯ ಸತ್ಯ. ಕಾರಣವನ್ನು ನಿರೋಧಿಸಿದರೆ -ಕಾರ್ಯವು ನಾಶವಾಗಿ ಅವಿದ್ಯೆಯ ನಾಶದಿಂದ ದುಃಖ ನಿವಾರಣೆಯಾಗುವುದು.
(ಕಾರಣವಿಲ್ಲದೆ
ಕಾರ್ಯವಿಲ್ಲ -ತರ್ಕ ಸಿದ್ಧಾಂತ)
೪. ದುಃಖವನ್ನು ನಿರೋಧಿಸಲು ಮಾರ್ಗವಿದೆ-ಎಂಬ ಸತ್ಯ.
ಸುಖ
ಲೋಲುಪತೆ ,- ಅತಿ ದೇಹ ದಂಡನೆ,
ಈ ಎರಡರ ಬದಲು ಮಧ್ಯಮಾರ್ಗ
ಉತ್ತಮವಾದುದು. ಅದಕ್ಕೆ ಎಂಟು ಮೆಟ್ಟಿಲು.
ಅಷ್ಟಾಂಗಿಕ
ಮಾರ್ಗಗಳು
ಸಮ್ಯಕ್
ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು)
ಸಮ್ಯಕ್
ಸಂಕಲ್ಪ (ದೃಢ ನಿಶ್ಚಯ)
ಸಮ್ಯಕ್
ವಚನ (ಸತ್ಯ ವಚನ)
ಸಮ್ಯಕ್
ಕರ್ಮಾಂತ (ಅಹಿಂಸೆ - ಸತ್ಕರ್ಮ)
ಸಮ್ಯಕ್
ಆಜೀವ (ನ್ಯಾಯ ಜೀವನ)
ಸಮ್ಯಕ್
ವ್ಯಾಯಾಮ (ಸತತ ಪ್ರಯತ್ನ)
ಸಮ್ಯಕ್
ಸ್ಮ ತಿ (ಸತ್ ಚಿಂತನೆ)
ಸಮ್ಯಕ್
ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ).
ಇದರಿಂದ ಮೋಕ್ಷ.
ಬೌದ್ಧ ಧರ್ಮದ ಪ್ರಚಾರ
ಕಾರಣಗಳು: ೧.
ಬುದ್ಧನ ಆಕರ್ಷಕ ವ್ಯಕ್ತಿತ್ವ. ೨. ಸರಳ ಧರ್ಮ. ೩. ಸರಳ ಭಾಷೆ. ೪. ಸರ್ವಸಮಾನತೆಯ ತತ್ವ. ೫. ಪ್ರತಿ
ಧರ್ಮವಿಲ್ಲದ್ದು. ೬. ಸ್ಥಿತಿ ಸ್ಥಾಪಕತ್ವ. ೭. ಪ್ರಜಾಪ್ರಭುತ್ವ ಸಿದ್ಧಾಂತ. ೮. ತಾರ್ಕಿಕ ಧರ್ಮ.
೯. ವರ್ತಕ ವರ್ಗದ ಬೆಂಬಲ. ೧೦. ಪ್ರಾಣಿಬಲಿಯ ನಿಷೇಧ. ೧೧. ವಿದ್ಯಾಕೇಂದ್ರಗಳು. ೧೨. ಸಮ್ಮೇಳನಗಳು.
೧೩. ಭಿಕ್ಷುಗಳ ಪಾತ್ರ. ೧೪. ಬೌದ್ಧ ಸಾಹಿತ್ಯ. ೧೫. ರಾಜಾಶ್ರಯ.
ಬೌದ್ಧ ಸಮ್ಮೇಳನಗಳು
೧. ಶ.ಪೂ. ೪೮೭.
ಅಜಾತಶತೃ. ಅಧ್ಯಕ್ಷ – ಮಹಾಕಶ್ಯಪ. ೫೦೦ ಪ್ರತಿನಿಧಿಗಳು. ತತ್ವಗಳ ಸಂಗ್ರಹ ಮತ್ತು ತ್ರಿಪಿಠಕಗಳ ರಚನೆ.
೨. ಶ.ಪು. ೩೮೭.
ವೈಶಾಲಿ. ಕಾಕವರ್ಮನ ಆಶ್ರಯ. ಅಧ್ಯಕ್ಷ – ಸಭಾಕಾಮಿ. ಬೌದ್ಧ ಬಿಕ್ಷುಗಳ ನಡುವಣ ಅಂತರ ನಿವಾರಣೆ.
೩. ಶ.ಪೂ. ೨೫೧.
ಅಶೋಕನ ಆಶ್ರಯ. ಪಾಟಲೀಪುತ್ರ. ಅಧ್ಯಕ್ಷ – ಮುಗ್ಗಲಿಪುತ್ರ ತಿಸ್ಸ. ಕಥಾವಸ್ತು ರಚನೆ. ಭಿಕ್ಷುಗಳಲ್ಲಿ
ಐಕ್ಯತೆ ಮೂಡಿಸಲು ಪ್ರಯತ್ನ.
೪. ಶ.ಪೂ. ೧೦೦.
ಕಾಶ್ಮೀರದ ಕುಂಡಲವನ. ಕನಿಷ್ಕನ ಆಶ್ರಯ. ಅಧ್ಯಕ್ಷ – ವಸುಮಿತ್ರ. ಮಹಾವಿಭಾಷ್ಯ ರಚನೆ. ಹೀನಾಯಾನ ಮತ್ತು
ಮಹಾಯಾನ.
೫. ಶ.ಪೂ. ೬೪೩. ಹರ್ಷವರ್ಧನನ ಆಶ್ರಯ. ಕನೋಜ್. ಅಧ್ಯಕ್ಷ – ಹು-ಎನ್-ತ್ಸಾಂಗ್.
ಬೌದ್ಧ ಧರ್ಮದ ಅವನತಿ
೧. ರಾಜಾಶ್ರಯ
ಕಳೆದುಕೊಂಡುದು.
2. ಭಾಷೆಯ ಬದಲಾವಣೆ.
೩. ವೈದಿಕ ಧರ್ಮದ
ಪುನರುಜ್ಜೀವನ.
೪. ಬೌದ್ಧ ಧರ್ಮದಲ್ಲಿನ
ಒಡಕುಗಳು.
೫. ಬೌದ್ಧ ಸಂಘಗಳಲ್ಲಿನ
ಅನೈತಿಕತೆ ಅಥವಾ ಅಧೋಗತಿ.
೬. ಬುದ್ಧನಂಥಹ
ವ್ಯಕ್ತಿತ್ವಗಳ ಕೊರತೆ.
೭. ಹಿಂದೂ ಧರ್ಮದ
ಸೇರ್ಪಡೆ ಶಕ್ತಿ.
೮. ಅಹಿಂಸೆಯ
ಪ್ರಭಾವ.
೯. ರಜಪೂತರ ಏಳಿಗೆ.
೧೦. ಮೂರ್ತಿಪೂಜೆಯ
ಆರಂಭ.
೧೧. ವಿದೇಶೀಯರ
ದಾಳಿಗಳು.
೧೨. ಸಂಘಗಳಿಗೆ
ಮಹಿಳೆಯರ ಪ್ರವೇಶ.
Reasons of Decline of Buddhism in
India
* Degradation
of Buddhist Sanghas
* Revival
of Brahmanism
* Division
among Buddhists
* Use of
Sanskrit Language
* Image
Worship
* Loss of
Royal Patronage
*
Emergence of Rajput's
* Muslim
Invasion
* No other
personalities like Buddha.
* Assimilation
power of Hinduism
* Principle
of non-violation
* Entry of
women into Sanghas
Comments
Post a Comment