ದೆಹಲಿ ಸುಲ್ತಾನರ ಕಾಲದ ಆಡಳಿತ ಪದ್ಧತಿ
ADMINISTRATION
OF DELHI SULTANATE.
5 ಹಂತಗಳಲ್ಲಿ ವಿಭಜಿಸಬಹುದು:-
ಅವುಗಳೆಂದರೆ,
ಅ. ಕೇಂದ್ರಾಡಳಿತ.
ಆ. ಪ್ರಾಂತ್ಯಾಡಳಿತ.
ಇ. ಹಣಕಾಸು ಆಡಳಿತ.
ಈ. ಸೇನಾಡಳಿತ.
ಉ. ನ್ಯಾಯಾಡಳಿತ.
ಅ. ಕೇಂದ್ರಾಡಳಿತ: ಸುಲ್ತಾನ:- ಸ್ಥಾನ-ಮಾನಗಳು
ಮತ್ತು ಅವನ ಜವಾಬ್ದಾರಿಗಳು.
ಮಂತ್ರಿಮಂಡಲ:
ಸುಲ್ತಾನನ ಸಹಾಯಕ್ಕಾಗಿ ವಿವಿಧ ಮಂತ್ರಿಗಳು ಇರುತ್ತಿದ್ದರು. ಆರಂಭ ಕಾಲದಲ್ಲಿ ಕೇವಲ ೪ ಪ್ರಮುಖ ಮಂತ್ರಿಗಳು
ಇದ್ದು ನಂತರದ ಕಾಲದಲ್ಲಿ ಅವರ ಸಂಖ್ಯೆ ೬ ಕ್ಕೆ ಏರಿತು.
ಅವರುಗಳೆಂದರೆ,,
೧. ವಜ಼ೀರ್ – ಪ್ರಧಾನ ಮಂತ್ರಿ:
ದಿವಾನ್ ಇ ವಜ಼ೀರತ್
ಇವನ ಕಛೇರಿಯ ಹೆಸರು.
ಎಲ್ಲಾ ಇಲಾಖೆಗಳ ಮೇಲ್ವಿಚಾರಣೆ. ಇವನಿಗೆ
ನಾಯಿಬ್ ವಜ಼ೀರ್ ಮತ್ತು ಮುಶ್ರಫ್
ಇ ಮುಮಲಿಕ್ ಎಂಬ
ಸಹಾಯಕರು ಇದ್ದರು.
2. ದಿವಾನ್
ಇ ಮುಮಲಿಕ್: ದಿವಾನ್ ಇ ಆರಿಜ್ ಇವನ ಇಲಾಖೆಯ ಹೆಸರು. ಸೇನಾ ವಿಭಾಗದ ಮುಖ್ಯಸ್ಥ – ಯುದ್ಧ ಮಂತ್ರಿ.
ಸೇನೆಯ ಸಮಸ್ತ ಆಡಳಿತದ ಜವಾಬ್ದಾರಿಗಳು.
೩. ದಬೀರ್ ಇ
ಮುಮಲಿಕ್ –
ಪತ್ರ ವ್ಯವಹಾರಗಳ ಮುಖ್ಯಸ್ಥ: ಇವನ ಕಛೇರಿಯ ಹೆಸರು ದಿವಾನ್ ಇ ಇನ್ಶಾ. ರಾಜಾಜ್ಞೆಗಳ ಸಂಗ್ರಹಣೆ ಮತ್ತು
ರವಾನೆ. ಇವನಿಗೆ ಸಹಾಯಕರು ದಬೀರ್‌ಗಳು ಆಗಿದ್ದರು.
೪. ದಿವಾನ್ ಇ
ರಿಸಾಲತ್: ವಿದೇಶಾಂಗ ಮಂತ್ರಿ; ರಾಯಭಾರಿಗಳ ನೇಮಕ, ವಿದೇಶೀ ರಾಯಭಾರಿಗಳ ಸ್ವಾಗತ ಮತ್ತು ಪತ್ರ ವ್ಯವಹಾರಗಳು
ಇತ್ಯಾದಿ ಇವನ ಕರ್ತವ್ಯಗಳು.
೫. ಸದರ್ ಉಸ್
ಸದರ್: ಧಾರ್ಮಿಕ ವ್ಯವಹಾರಗಳ ಮಂತ್ರಿ. ದಾನ-ದತ್ತಿಗಳ ಮೇಲ್ವಿಚಾರಣೆ. ಇಸ್ಲಾಂ ಆಚರಣೆಗಳ ಮೇಲ್ವಿಚಾರಣೆ.
ಪ್ರಜೆಗಳ ನೈತಿಕ ಜೀವನದ ಮೇಲ್ವಿಚಾರಣೆ.
೬. ಖಾಜ಼ಿ ಉಲ್
ಖ್ವಾಜ಼ಾತ್
ಮುಖ್ಯ ನ್ಯಾಯಾಧೀಶ: ಇವನ ಕಛೇರಿಯ ಹೆಸರು ದಿವಾನ್
ಇ ಖ್ವಾಜ಼ಾತ್. ಸುಲ್ತಾನನಿಗೆ ನ್ಯಾಯತೀರ್ಪು ನೀಡಲು ಸಹಾಯ ಮಾಡುವುದು.
ಮೇಲಿನ ಪ್ರಮುಖ ಮಂತ್ರಿಗಳಲ್ಲದೇ ಕೆಳಕಂಡ ಇತರೆ ಮಂತ್ರಿಗಳೂ
ಸಹ ಸುಲ್ತಾನನ ಆಡಳಿತ ಕಾರ್ಯಗಳಲ್ಲಿ ಸಹಾಯಕರಾಗಿರುತ್ತಿದ್ದರು.
೭. ಬರೀದ್ ಇ
ಮುಮಲಿಕ್: ಅಂಚೆ ಮತ್ತು ಗೂಢಾಚಾರ ವಿಭಾಗದ ಮುಖ್ಯಸ್ಥ. ಇವನು ಮುಖ್ಯ ಗೂಢಾಚಾರನೂ ಆಗಿದ್ದ.
೮. ದಿವಾನ್ ಇ
ಅಮೀರ್ ಕೋಹಿ: ಮಹಮ್ಮದ್ ಬಿನ್ ತುಘಲಕ್ ಕಾಲದ ಕೃಷಿ ಮಂತ್ರಿ.
೯. ದಿವಾನ್ ಇ
ಮಸ್ತಕ್ ರಾಜ಼್: ಸಾಲ ವಸೂಲಿಗಾರ. ಅಲ್ಲಾವುದ್ದೀನನ ಕಾಲದಲ್ಲಿ ಈ ವಿಭಾಗ ಆರಂಭವಾಗಿತ್ತು.
೧೦. ಸಾರ್ ಇ
ಜ಼ಾಂದಾರ್: ಸುಲ್ತಾನನ ಅಂಗರಕ್ಷಕ ಪಡೆಯ ಮುಖ್ಯಸ್ಥ.
೧೧. ನಾಯಿಬ್
ಉಲ್ ಮುಲ್ಕ್: ಸೇನಾಡಳಿತದ ಮೇಲ್ವಿಚಾರಕ. ಆರಿಜ಼್ ಇ ಮುಮಲಿಕ್ ನಿಗೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು.
೧೨. ದಿವಾನ್
ಇ ಇಸ್ತೆಕಾರ್: ಟಂಕಸಾಲೆ ಮತ್ತು ಧರ್ಮಚತ್ರಗಳ ಮೇಲ್ವಿಚಾರಕ.
೧೩. ಬಕ್ಷಿ ಇ
ಫೌಜ಼್: ಸೇನಾಪಡೆಗಳ ವೇತನ ವಿತರಣಾಧಿಕಾರಿ.
೧೪. ದಿವಾನ್
ಇ ಖೈರತ್: ಬಡವರು ಮತ್ತು ಅಶಕ್ತರಿಗೆ ದಾನ-ಧರ್ಮ ಇಲಾಖೆ. ಇದು ಫಿರೋಜ಼್ ಶಾ ತುಘಲಕ್ ಕಾಲದಲ್ಲಿ ಆರಂಭವಾದ
ಇಲಾಖೆ.
೧೫. ದಿವಾನ್
ಇ ಬಂದಗಾನ್: ಗುಲಾಮರ ಮೇಲ್ವಿಚಾರಣೆಯ ಇಲಾಖೆ. ಇದೂ ಸಹ ಫಿರೋಜ಼್ ಶಾ ತುಘಲಕ್ ಕಾಲದಲ್ಲಿ ಆರಂಭವಾದ
ಇಲಾಖೆ.
೧೬. ಮುಶ್ರಫ್
ಎ ಮುಮಲಿಕ್: ರಾಜ್ಯದ ಖರ್ಚು-ವೆಚ್ಚಗಳ ಮೇಲ್ವಿಚಾರಕ.
೧೭. ಅಮೀರ್ ಇ
ಆಕರ್: ಅರಮನೆಗಳ ಮೇಲ್ವಿಚಾರಕ.
೧೮. ಅಮೀರ್ ಎ
ಬೆಹ್ರಾ: ಸುಲ್ತಾನನ ಹಡಗುಗಳ ಮೇಲ್ವಿಚಾರಕ.
ಆ. ಪ್ರಾಂತ್ಯಾಡಳಿತ: ಇಕ್ತಾ-ಇಕ್ತೆದಾರ್. ಶಿಕ್-ಶಿಕ್‌ದಾರ್. ಪರಗಣ-ಅಮೀಲ್.
ಗ್ರಾಮ-ಚೌಧರಿ, ಪಟ್ವಾರಿ, ಮುಕ್ದಮ್‌ರು.
ಇ. ಹಣಕಾಸು ಆಡಳಿತ: ಭೂಕಂದಾಯ
ಪ್ರಮುಖ ಆದಾಯ. ಎರಡು ವಿಧ. ಕರಜ್- ಹಿಂದೂಗಳ ಮೇಲಿನ ಭೂಕಂದಾಯ. ಉಶರ್-ಮುಸ್ಲೀಂರ ಮೇಲಿನ ಭೂಕಂದಾಯ.
ಕಂಸ್-ಯುದ್ಧ ಲೂಟಿ. ಜಕಾತ್- ಆದಾಯ ತೆರಿಗೆ. ಜೆಸಿಯಾ-ತಲೆಗಂದಾಯ. ಘರಿ, ಚರಾಯಿ, ಕಪ್ಪಕಾಣಿಕೆಗಳು,
ವೃತ್ತಿ ತೆರಿಗೆ, ಗಣಿತೆರಿಗೆ, ವ್ಯಾಪಾರ ತೆರಿಗೆ, ನೀರಾವರಿ ತೆರಿಗೆ, ದಂಡ, ರಫ್ತು ತೆರಿಗೆಗಳು.
ಈ. ಸೇನಾಡಳಿತ: ಸುಲ್ತಾನರ ಅಸ್ಥಿತ್ವ ಸೇನೆಯ ಮೇಲೆ ನಿಂತಿತ್ತು. ಸ್ಥಾಯಿ ಸೈನ್ಯ ಸ್ಥಾಪಿಸಿದ್ದರು.
ಪದಾತಿ, ಅಶ್ವ ಮತ್ತು ಗಜ ಪಡೆಗಳೆಂಬ ಮೂರು ಪಡೆಗಳು ಇದ್ದವು. ಅಶ್ವಪಡೆ ಬಹುಮುಖ್ಯ ಪಡೆಯಾಗಿತ್ತು.
ಪ್ರಾಂತ್ಯಗಳ ಗವರ್ನರ್‌ಗಳು ಯುದ್ಧಕಾಲದಲ್ಲಿ ಸೇನೆ ಒದಗಿಸುತ್ತಿದ್ದರು. ನಾಲ್ಕು ರೀತಿಯ ಸೈನ್ಯವಿತ್ತು;
ಸ್ಥಾಯಿ, ಪ್ರಾಂತ್ಯಗಳಿಂದ ಬರುತ್ತಿದ್ದ ಸೈನ್ಯ, ಯುದ್ಧಕಾಲದಲ್ಲ್ನೇಮಿಸಿಕೊಳ್ಳುತ್ತಿದ್ದ ಸೈನ್ಯ ಮತ್ತು
ಸ್ವಯಂ ಸೇವಕರಿಂದ ಕೂಡಿದ್ದ ಧಾರ್ಮಿಕ ಸೈನ್ಯ. ವಿವಿಧ ಜನಾಂಗಗಳಿಂದ ಕೂಡಿತ್ತು. ಅಫ್ಘನ್ನರು, ತುರ್ಕರು,
ಪರ್ಷಿಯನ್ನರು ಮತ್ತು ಮಂಗೋಲರು. ಸೈನ್ಯದಲ್ಲಿ ವಿವಿಧ ದರ್ಜೆಯ ಅಧಿಕಾರಿಗಳಿದ್ದರು. ಅವರುಗಳೆಂದರೆ,
೧. ಸರ್ ಇ ಕೈಲ್
- ೧೦ ಸವಾರರು – ೧೦,೦೦೦ ಟಂಕ
೨. ಸಿಪಾಹ್ ಸಲಾರ್
- ೧೦ ಸರ್ ಇ ಕೈಲ್‌ಗಳು – ೨೦,೦೦೦ ಟಂಕಗಳು
೩. ಅಮೀರ್ - ೧೦ ಸಿಪಾಹ್
ಸಲಾರ್‌ಗಳು – ೪೦,೦೦೦ ಟಂಕಗಳು
೪. ಮಲಿಕ್ - ೧೦ ಅಮೀರರು
– ೬೦,೦೦೦ ಟಂಕಗಳು
೫. ಖಾನ್ - ೧೦ ಮಲಿಕ್‌ಗಳು
– ೧ ಲಕ್ಷ ಟಂಕಗಳು
ಕುದುರೆಗಳು ಅರೇಬಿಯಾದಿಂದ ಆಮದಾಗುತ್ತಿದ್ದವು. ಕೋಟೆಗಳು
ಪ್ರಾಮುಖ್ಯತೆ ಪಡೆದಿದ್ದವು. ಗಡಿಗಳಲ್ಲಿ ಸ್ಥಾಯಿ ಸೇನೆ ಇರುತ್ತಿತ್ತು. ಡಾಕ್, ಚಹರಾ ಮತ್ತು ಇಕ್ತಾ
ಎಂಬ ಪದ್ಧತಿಗಳಿದ್ದವು. ನೌಕಾಪಡೆ ಮತ್ತು ಫಿರಂಗಿ ಪಡೆಗಳು ಕಡಿಮೆ ಇತ್ತು.
ಉ. ನ್ಯಾಯಾಡಳಿತ: ಸುಲ್ತಾನನೆ ಅಂತಿಮ ನ್ಯಾಯಾಧೀಶ. ಅವನ ಆಸ್ಥಾನವೇ ಅಂತಿಮ
ನ್ಯಾಯಾಲಯ. ವಾರದಲ್ಲಿ ಎರಡು ದಿನ ನ್ಯಾಯತೀರ್ಪು. ನಿಸ್ಪಕ್ಷಪಾತ ನ್ಯಾಯದಾನ. ಶಿಕ್ಷೆಗಳು ಕಠಿಣ. ಸದರ್
ಇ ಸದರ್, ಖಾಜಿ, ಮುಫ್ತಿಗಳು ಸಹಾಯಕ್ಕೆ. ಪಟ್ಟಣಗಳಲ್ಲಿ ಖಾಜಿ ನ್ಯಾಯಾಲಯಗಳು. ನಗರಗಳ ನ್ಯಾಯಾಡಳಿತವನ್ನು
ಅಮೀರ್ ಇ ದಾದ್ ನಡೆಸುತ್ತಿದ್ದನು. ಇಸ್ಲಾಂ ಕಾನೂನಿನಂತೆ ನ್ಯಾಯದಾನ. ಖಿಲ್ಜಿ ಕಾಲದಲ್ಲಿ ಮಹತಾಶಿಬ್
ಎಂಬ ಅಧಿಕಾರಿ ತೂಕ-ಅಳತೆಗಳ ಮೋಸ ಪರಿಶೀಲಿಸುತ್ತಿದ್ದನು.
Comments
Post a Comment