I. ಸಂಗಮ ಮನೆತನ - Sangama dynasty – 1336-1485

ಸಂಗಮ ಮನೆತನದ ರಾಜಕೀಯ ಇತಿಹಾಸದ ಪ್ರಮುಖ ಅಂಶಗಳು

1. ಒಂದನೆ ಹರಿಹರ:  1336–1356: ಸಂಗಮನ ಹಿರಿಯ ಮಗ. ಹೊಯ್ಸಳರಲ್ಲಿ ಸೇನಾನಿ. ಅವರೊಂದಿಗೆ ವೈವಾಹಿಕ ಸಂಬಂಧ. ಅವರ ರಾಜ್ಯದ ಉತ್ತರದ ಗಡಿಗಳ ರಕ್ಷಣೆಗೆ ನೇಮಕ. ಇವನ ಆರಂಭದ ಶಾಸನಗಳಲ್ಲಿ ಮಾಂಡಲೀಕನೆಂಬ ಉಲ್ಲೇಖ. ೩ನೆ ವೀರ ಬಲ್ಲಾಳನ ಮರಣಾನಂತರ ಸ್ವತಂತ್ರನಾಗಿ ಆಳ್ವಿಕೆ ಆರಂಭ. ೧೩೩೬ ರಲ್ಲಿ ಬಾರಕೂರಿನಲ್ಲಿ ಕೋಟೆ ನಿರ್ಮಾಣ. ೧೩೩೯ರ ಶಾಸನದಂತೆ ಅನಂತಪುರ ಜಿಲ್ಲೆಯ ಗುತ್ತಿ ಇವನ ಅಧೀನವಾಗಿತ್ತು. ೧೩೪೦ ರಲ್ಲಿ ಬಾದಾಮಿಯಲ್ಲೂ ಕೋಟೆ. ಪೂರ್ವ-ಪಶ್ಚಿಮ ಸಮುದ್ರಾಧೀಶ್ವರ, ಅರಿರಾಯ ವಿಭಾಡ, ಭಾಷೆಗೆ ತಪ್ಪುವ ರಾಯರ ಗಂಡ ಬಿರುದುಗಳು. ಕಂಪಣ-ನೆಲ್ಲೂರು, ಮಾರಪ್ಪ-ಚಂದ್ರಗುತ್ತಿ, ಮುದ್ದಪ್ಪ-ಮುಳಬಾಗಿಲು. ಬುಕ್ಕನು ದ್ವಾರಸಮುದ್ರದಲ್ಲಿದ್ದು, ೧೩೪೫ ರಿಂದಲೆ ಜಂಟಿ ಅರಸನಾಗಿದ್ದ. ೧೩೪೦ ರ ಶಾಸನದಂತೆ ಈ ಸೋದರರು ಶೃಂಗೇರಿಯ ಶಾರಾದಾ ಪೀಠಕ್ಕೆ ದಾನ ನೀಡಿದ ಮಾಹಿತಿ. ಕೆಳಭಾಗದಲ್ಲಿ ಬಲ್ಲಾಳನ ರಾಣಿ ಕೃಷ್ಣಾಯಿ ತಾಯಿಯ ಶಾಸನ. ಇದು ಹೊಯ್ಸಳರ ಬೆಂಬಲದ ದ್ಯೋತಕವೆಂದು ಸಾಲತೊರೆ. ತೊಂಡೈಮಂಡಲ ಗೆದ್ದು ಕಂಚಿಯಲ್ಲಿ ಶಂಬುವರಾಯನ ನೇಮಕ. ಬಹುಮನಿಗಳೊಂದಿಗೆ ಸಂಘರ್ಷ. ಉತ್ತರದಲ್ಲಿ ರಾಜ್ಯ ವಿಸ್ತರಣೆ ಕಠಿಣ. ಸಮರ್ಥ ಸೇನಾನಿ. ದಕ್ಷ ಆಡಳಿತಗಾರ. ಹೊಯ್ಸಳರ ಆಡಳಿತ ಪದ್ಧತಿಯ ಮುಂದುವರಿಕೆ. ಶ್ರೀ ವಿರೂಪಾಕ್ಷ ಎಂಬ ಕನ್ನಡದ ಅಂಕಿತ ಶಾಸನಗಳಲ್ಲಿ ಬಳಕೆ. ೧೩೫೬ ರಲ್ಲಿ ಪುತ್ರರಹಿತನಾಗಿ ಮರಣ.

2. ಒಂದನೆ ಬುಕ್ಕರಾಯ:  1356–1377: ಅಣ್ಣನ ಕಾಲದಲ್ಲಿ ಹೊಯ್ಸಳ ದೇಶದ ಅಧಿಪತಿ. ೧೩೪೫ ರಿಂದ ಜಂಟಿ ಅರಸ. ದಕ್ಷಿಣ ಭಾಗವನ್ನು ಶತೃಮುಕ್ತ ಮತ್ತು ರಾಮೇಶ್ವರದವರೆಗೆ ವಿಸ್ತರಣೆ. ಕೊಂಡವೀಡಿನ ರೆಡ್ಡಿಗಳಿಂದ ಪೆನುಗೊಂಡೆ ವಶ. ೧೩೬೦ ರಲ್ಲಿ ಶಂಬುವರಾಯನಿಂದ ಆರ್ಕಾಟ್‌ ವಶ. ೧೩೭೧ ರಲ್ಲಿ ಮಧುರೈ ವಶ-ಸುಲ್ತಾನರ ಅಂತ್ಯ. ಮಧುರಾವಿಜಯಂ ಕೃತಿಯ ಸ್ಪೂರ್ತಿ ಇದೆ. ವೀರ ಕಂಪಣರಾಯ ಚರಿತೆ. ೧೩೬೭ ರಲ್ಲಿ ದೊ-ಅಬ್‌ ಮೇಲೆ ಹಿಡಿತ. ಕೃಷ್ಣಾನದಿ ಉತ್ತರದ ಗಡಿ ಎಂದು ಮಹಮದ್‌ ಶಾ ಮಾನ್ಯ. ರಾಯಚೂರು ಮತ್ತು ಮುದಗಲ್‌ಗಳು ಇವನ ಅಧೀನ. ೧೩೭೫-೭೬ ರಲ್ಲಿ ದೊ-ಅಬ್‌ ಗೆಲ್ಲಲು ಮುಜಾಹಿದ್‌ ಶಾ ಸಹಾ ವಿಫಲ ಯತ್ನ. ೨೦ ವರ್ಷಗಳ ಶಾಂತಿ ಸ್ಥಾಪನೆ. ಗೋವಾ ಇವನ ವಶದಲ್ಲಿತ್ತು. ಮಲಬಾರ್‌ ಮತ್ತು ಸಿಂಹಳಗಳಿಂದ ಕಪ್ಪಕಾಣಿಕೆಗಳು. ಕಂಪಣನ ೧೩೭೪ ರಲ್ಲಿ ಅಕಾಲಿಕ ಮರಣದ  ಕಾರಣ ೨ನೆ ಹರಿಹರ ಯುವರಾಜನಾದ. ವೇದಾಂತ ಪ್ರಕಾಶ - ವೇದಗಳ ಭಾಷ್ಯದ ಕಾರ್ಯ ಆರಂಭವಾದ ಕಾರಣ ʼವೈದಿಕ ಮಾರ್ಗ ಪ್ರವರ್ತಕʼ. ಶ್ರವಣಬೆಳಗೊಳದ ಧಾರ್ಮಿಕ ಕಲಹ ಪರಿಹಾರ. ಜೈನರ ಪರವಾಗಿ ತೀರ್ಮಾನ ಮತ್ತು ಶ್ರವಣಬೆಳಗೊಳ ಮತ್ತು ಕಲ್ಲೇಹಗಳಲ್ಲಿ ಶಾಸನಗಳು. ತೆಲುಗು ಕವಿ ನಾಚನ ಸೋಮನಾಥನಿಗೆ ಆಶ್ರಯ. ಸಾಮ್ರಾಜ್ಯ ಸುಭದ್ರವಾಗಿದ್ದ ಕಾರಣ ಸಾಂಸ್ಕೃತಿಕ ಕೊಡುಗೆಗಳು ಆರಂಭ.

3. ಎರಡನೆ ಹರಿಹರ: 1377–1404: ೧೩೭೮ರ ಮುಜಾಹಿದ್‌ ಶಾನ ಮರಣದ ನಂತರ ಗೋವೆಯ ಉತ್ತರಕ್ಕೆ ಚಾವೋಲ್‌ ಮತ್ತು ಕಾರೆಪಟ್ಟಣಗಳವರೆಗೆ ರಾಜ್ಯ ವಿಸ್ತಾರ. ವೆಳಮ ಅರಸರಿಂದ ಉದಯಗಿರಿ ಮತ್ತು ಪಂಗಳ ಕೋಟೆಗಳನ್ನು ಗೆದ್ದನು. ವೇದಾಂತ ಪ್ರಕಾಶ ಕಾರ್ಯ ಪೂರ್ಣ – ವೈದಿಕ ಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು. ರಾಜಾಧಿರಾಜ ಎಂದು ಕರೆಸಿಕೊಂಡ ಮೊದಲ ಅರಸು.

4. ವಿರೂಪಾಕ್ಷರಾಯ: 1404–1405: ಕೆಲವು ತಿಂಗಳುಗಳ ಕಾಲ ಮಾತ್ರ ಆಳ್ವಿಕೆ.

5. ಎರಡನೆ ಬುಕ್ಕರಾಯ: 1405–1406: ಒಂದು ವರ್ಷದ ಆಡಳಿತ ಮಾತ್ರ.

6. ಒಂದನೆ ದೇವರಾಯ: 1406–1422: ಹರಿಹರನ ಮೂರನೆ ಮಗ. ಕೃಷ್ಣೆಯ ಮುಖಜ ಭೂಮಿಯಲ್ಲಿ ರಾಜ್ಯ ವಿಸ್ತಾರದ ಸಲುವಾಗಿ ಕಳಿಂಗದ ಗಜಪತಿಗಳೊಂದಿಗೆ ಘರ್ಷಣೆ ಆರಂಭ. ಇದು ಮುಂದೆ ಪರಂಪರಾಗತ.  ಮುದಗಲ್‌ನ ಅಕ್ಕಸಾಲಿಗನ ಮಗಳ ಪ್ರಕರಣ. ಫೆರಿಶ್ತಾನೊಬ್ಬನೆ ಇದರ ಉಲ್ಲೇಖ. ಇತರೆ ಮುಸ್ಲೀಂ ಮೂಲಗಳು ಮೌನ. ಅಂದಿನ ಬಹಮನಿ ಸುಲ್ತಾನ ಫಿರೋಜ್‌ ಶಾ ಪಂಗಳ ಕೋಟೆ ಗೆಲ್ಲಲು ವಿಫಲ ಯತ್ನ. ಸೋತ ಇವನು ನಿರಾಸೆಯಿಂದ ಮರಣ. ನಿಕೋಲೊ ಕೋಂಟಿಯ ಭೇಟಿ. ರಾಜಧಾನಿಯ ಸುತ್ತಳತೆ ೬೦ ಮೈಲಿಗಳೆಂದು ದಾಖಲು. ಲಕ್ಷ್ಮೇಶ್ವರದಲ್ಲಿ ಧಾರ್ಮಿಕ ಕಲಹ ಬಗೆಹರಿಸಲು ರಾಜಪುರೋಹಿತ ಸಂಗಮದೇವನ ರವಾನೆ. ಶಂಕ ಜಿನಾಲಯ ಮತ್ತು ಸೋಮೇಶ್ವರ ದೇವಾಲಯಗಳ ನಡುವೆ. ತೀರ್ಮಾನ ಜೈನರ ಪರವಾಗಿ. ಸೈನ್ಯದಲ್ಲಿ ಮುಸ್ಲೀಂ ಅಶ್ವಪಡೆಗೆ ಅವಕಾಶ; ಮುಸ್ಲೀಂ ಸೈನಿಕನೊಬ್ಬನಿಂದ ಅನ್ನಛತ್ರದ ಸ್ಥಾಪನೆ. ಸಾಮರಸ್ಯದ ದ್ಯೋತಕ.

7. ರಾಮಚಂದ್ರರಾಯ: 1422: ಕೆಲವು ಕಾಲ ಮಾತ್ರ ಆಳ್ವಿಕೆ; ಸೋದರನಿಂದ ಪದಚ್ಯುತ.

8. ವಿಜಯರಾಯ ಅಥವಾ ವೀರ ವಿಜಯ ಬುಕ್ಕರಾಯ: 1422–1424; ಎರಡು ವರ್ಷಗಳ ಆಡಳಿತ ಮಾತ್ರ.

9. ಇಮ್ಮಡಿ ದೇವರಾಯ ಅಥವಾ ಪ್ರೌಢದೇವರಾಯ: 1424–1446: ಗಜಬೇಂಟೆಕಾರ ಬಿರುದಾಂಕಿತ. ಸಂಗಮರಲ್ಲೇ ಶ್ರೇಷ್ಠ ಅರಸ. ತಂದೆಯ ಕಾಲದಲ್ಲಿಯೇ ಆಡಳಿತ ಕಾರ್ಯಗಳ ನಿರ್ವಹಣೆ. ೧೪೨೩ ರಲ್ಲಿಯೇ ಬಹುಮನಿಗಳ ವಿರುದ್ಧ ಗೆಲುವು. ಗುಲ್ಬರ್ಗಾದಿಂದ ಬೀದರ್‌ಗೆ ರಾಜಧಾನಿ ವರ್ಗಾವಣೆ. ಗಜಪತಿಗಳೊಂದಿಗೆ ೩ ಬಾರಿ ಯುದ್ಧ. ೧೪೨೭ ರಲ್ಲಿ ಕೊಂ ಡವೀಡನ್ನು ಗೆಲ್ಲಲು ಬಂದ ಭಾನುದೇವ ಸೋತು ಹಿಮ್ಮೆಟ್ಟಿದ. ೧೪೩೬ ರಲ್ಲಿ ಕಪಿಲೇಂದ್ರನು ರಾಜಮಹೇಂದ್ರಿಯ ಗೆಲ್ಲಲು ನಡೆಸಿದ ಯತ್ನ ವಿಫಲ. ೧೪೪೧ ರ ಸಮ್ರಾಜ್ಯದ ಮೇಲಿನ ಗಜಪತಿಗಳ ದಾಳಿಯನ್ನು ಸಹಾ ಹಿಮ್ಮೆಟ್ಟಿಸಲಾಯಿತು. ೧೪೪೩ ರಲ್ಲಿ ದೊ-ಅಬ್‌ ನಲ್ಲಿ ಕೆಲವು ಪ್ರದೇಶಗಳನ್ನು ಕಳೆದುಕೊಂಡನು. ಕೇರಳದ ಕೊಲ್ಲಂ ಇವನ ವಶವಾಯಿತು. ಜಾಮೊರಿನ್‌ ಇವನ ಅಧೀನ. ಲಕ್ಕಣ್ಣ ದಂಡನಾಯಕನಿಂದ ಸಿಂಹಳದ ಮೇಲೆ ವಿಜಯ ಮತ್ತು ಕಪ್ಪ ಸಂಗ್ರಹ. ೧೪೪೩ ರಲ್ಲಿ ಅಬ್ದುಲ್‌ ರಜಾಕ್‌ ಭೇಟಿ. ದೇವರಾಯ ಮತ್ತು ಅವನ ರಾಜ್ಯದ ವೈಭವವನ್ನು ಮುಕ್ತ ಕಂಠದಿಂದ ಹೊಗಳಿದ್ದಾನೆ. ವಿದ್ವಾಂಸ ಮತ್ತು ವಿದ್ವದ್‌ಜನಾಶ್ರಯ. ಮಹಾನಾಟಕ ಸುಧಾನಿಧಿ ಮತ್ತು ಬ್ರಹ್ಮಸೂತ್ರ ವೃತ್ತಿ ಇವನ ಕೃತಿಗಳು. ಶ್ರೀನಾಥನಿಗೆ ಕನಕಾಭಿಷೇಕ. ಗುಂಡ ಡಿಂಡಿಮ ಇವನ ಆಶ್ರಿತ. ಕನ್ನಡ ಕವಿಗಳಾದ ಲಕ್ಕಣ್ಣ ದಂಡೇಶ ಮತ್ತು ಜಕ್ಕಣ್ಣ ಇವನ ಅಧಿಕಾರಿಗಳಾಗಿದ್ದರು. ಇವನ ಕಾಲದಲ್ಲಿ ವೀರಶೈವ ಧರ್ಮ ಪುನರುತ್ಥಾನ ಕಂಡಿತು. ಇವನು ಕೊನೆಗಾಲದಲ್ಲಿ ಅನಾರೋಗ್ಯ ಪೀಡಿತನಾದನು. ಇವನ ನಂತರ ಬಂದ ಅರಸರು ದುರ್ಬಲರು ಮತ್ತು ವ್ಯಸನಿಗಳೂ ಆಗಿದ್ದರು.

10. ಮಲ್ಲಿಕಾರ್ಜುನ ರಾಯ: 1446–1465: ೧೪೫೦ ರಲ್ಲಿ ಬಹಮನಿ ಸೇನೆ ರಾಜಧಾನಿಯವರೆಗೆ ಮುನ್ನುಗ್ಗಿತ್ತು. ಒರಿಸ್ಸಾದ ಗಜಪತಿಗಳು ೧೪೫೪ ರಲ್ಲಿ ರಾಜಮಹೇಂದ್ರಿಯನ್ನು, ೧೪೬೩ ರಲ್ಲಿ ಉದಯಗಿರಿ ಮತ್ತು ಚಂದ್ರಗಿರಿಗಳನ್ನು ಗೆದ್ದುಕೊಂಡರು. ಕಾರಣ ದೇವರಾಯನ ಸೋದರನ ಮಗ ವಿರೂಪಾಕ್ಷನು ಮಲ್ಲಿಕಾರ್ಜುನರಾಯನನ್ನು ಪದಚ್ಯುತಗೊಳಿಸಿ ತಾನೇ ರಾಜನಾದನು.

11. ಎರಡನೆ ವಿರೂಪಾಕ್ಷರಾಯ: 1465–1485: ಬಹಮನಿಗಳು ೧೪೭೦ ರಲ್ಲಿ ಕೊಂಕಣ ಮತ್ತು ಗೋವೆಯ ಪ್ರದೇಶಗಳನ್ನು ಗೆದಕೊಂಡರು. ರಾಜ್ಯ ವಿಸ್ತಾರದಲ್ಲಿ ಕುಗ್ಗಿತು. ಇವನ ದೌರ್ಬಲ್ಯದ ಕಾರಣ ಮಾಂಡಲೀಕರು ಮತ್ತು ಸೇನಾನಿಗಳು ಅವಿಧೇಯರಾಗಿ ವರ್ತಿಸತೊಡಗಿದರು. ಇವನು ತನ್ನ ಮಗನಿಂದಲೇ ಕೊಲೆಗೀಡಾದ.

12. ಪ್ರೌಢರಾಯ: 1485: ವಿರೂಪಾಕ್ಷನ ಮಗ. ಅಸಮರ್ಥ. ಪ್ರಾಂತ್ಯಾಧಿಕಾರಿ ಸಾಳುವ ನರಸಿಂಹನು ರಾಜಧಾನಿಯನ್ನು ವಶಪಡಿಸಿಕೊಂಡು ಸಂಗಮ ಮನೆತನವನ್ನು ಅಂತ್ಯಗೊಳಿಸಿದನು.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources