ಲಾರ್ಡ್‌ ವಿಲಿಯಂ ಬೆಂಟಿಂಕ್‌ನ ಸುಧಾರಣೆಗಳು ಮತ್ತು ಅವನ ವಿದೇಶಾಂಗ ನೀತಿ.

ಅಧಿಕಾರವಧಿ: ೧೮೨೮-೩೫. ಬಂಗಾಳದ ಗವರ್ನರ್‌ ಜನರಲ್‌ ಆಗಿ. ನಂತರ ಭಾರತದ ಮೊದಲ ಗವರ್ನರ್‌ ಜನರಲ್‌ ಎಂದು ನೇಮಕ.

ಜನನ: ೧೭೭೪, ಸೆಪ್ಟಂಬರ್‌ ೧೪. ಇಂಗ್ಲೆಂಡ್.‌ ಪ್ರತಿಷ್ಠಿತ ವಿಗ್‌ ಕುಟುಂಬ.

ತಂದೆ: ವಿಲಿಯಂ ಹೆನ್ರಿ. ತಾಯಿ: ಡೊರತಿ ಕ್ಯಾವೆಂಡಿಶ್.‌

   ಆರಂಭದಲ್ಲಿ ಸೈನಿಕ ಸೇವೆ. ೧೭೯೬ ರಲ್ಲಿ ಬ್ರಿಟನ್‌ ಸಂಸತ್‌ ಸದಸ್ಯತ್ವ. ನೆಪೋಲಿಯನ್‌ ವಿರುದ್ಧದ ಯುದ್ಧಗಳಲ್ಲಿ ಭಾಗವಹಿಸಿದ್ದನು. ಭಾರತದಲ್ಲಿ ಮದ್ರಾಸಿನ ಗವರ್ನರ್‌ ಆಗಿದ್ದಾಗ ೧೮೦೫ ರಲ್ಲಿ ರಲ್ಲಿ ನಡೆದ ವೆಲ್ಲೂರು ಸೈನಿಕ ದಂಗೆ ಇವನ ಕಾಲದ ಪ್ರಮುಖ ಘಟನೆ. ದಂಗೆ ಅಡಗಿಸಿದರೂ ಸ್ವದೇಶಕ್ಕೆ ವಾಪಾಸ್ಸು ಕರೆಯಿಸಿಕೊಳ್ಳಲಾಯಿತು. ೧೮೨೮ ರಲ್ಲಿ ಎರಡನೆ ಅವಧಿಯಲ್ಲಿ ಬಂಗಾಳದ ಗವರ್ನರ ಜನರಲ್‌ ಆಗಿ ನೇಮಕಗೊಂಡನು.

ಭಾರತದ ವಿದ್ಯಮಾನಗಳು: ಕಂಪೆನಿ ಆರ್ಥಿಕ ಸಂಕಷ್ಟದಲ್ಲಿತ್ತು. ವಿದೇಶ ಮತ್ತು ಭಾರತದಲ್ಲಿನ ಯುದ್ಧಗಳು ಇದಕ್ಕೆ ಕಾರಣ. ಉದಾತ್ತ ಗುಣಗಳಿಂದ ಕೂಡಿದ ಇವನು ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತಂದನು.

   ಇವನು ಕೈಗೊಂಡ ಸುಧಾರಣಾ ಕಾರ್ಯಗಳನ್ನು ಕೆಳಕಂಡಂತೆ ಅಧ್ಯಯನ ಮಾಡಬಹುದು.

೧. ಆರ್ತಿಕ ಸುಧಾರಣೆಗಳು: ಆದಾಯ ಹೆಚ್ಚಿಸುವುದು ಮತ್ತು ಉಳಿತಾಯ ಮಾಡುವುದು ಈ ಸುಧಾರಣೆಗಳ ಪ್ರಮುಖ ಉದ್ಧೇಶಗಳು. ಚಾರ್ಟರ್‌ ನವೀಕರಣದ ದೃಷ್ಟಿಯಿಂದ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ನಿರ್ದೇಶಕರ ಮಂಡಳಿಯಿಂದ ಸೂಚನೆ. ಕಾರಣ ಕೆಳಗಿನ ಸುಧಾರಣಾ ಕ್ರಮಗಳನ್ನು ಕೈಗೊಂಡನು:-

ಅ. ಅನವಶ್ಯಕ ಹುದ್ದೆಗಳ ರದ್ದು.

ಆ. ನೌಕರರ ವೇತನದಲ್ಲಿ ಕಡಿತ ಮತ್ತು ವಿಶೇಷ ಭತ್ಯೆಗಳ ರದ್ದು.

ಇ. ಸೈನಿಕರ ವಿಶೇಷ ಭತ್ಯೆಗಳನ್ನು ರದ್ದುಗೊಳಿಸಿದನು.

ಈ.  ೧೭೬೮ ರಿಂದ ತೆರಿಗೆ ವಿನಾಯಿತಿ ಪಡೆದಿದ್ದ ಕೆಲವು ಜಮೀನುಗಳ ಮಾಲೀಕರ ಮೇಲೆ ಮತ್ತೆ ತೆರಿಗೆ ವಿಧಿಸಿದನು.

ಉ. ಅಫೀಮು ವ್ಯಾಪಾರಕ್ಕೆ ಅನುಮತಿ: ಮಾಳವ ಮತ್ತು ಮಹಾರಾಷ್ಟ್ರಗಳ ನಡುವೆ. ಇದರಿಂದ ತೆರಿಗೆ ಹೆಚ್ಚಳ.

ಊ. ಅರ್ಹ ಮತ್ತು ದಕ್ಷ ಭಾರತೀಯರಿಗೆ ಆಡಳಿತಾತ್ಮಕ ಹುದ್ದೆಗಳು.

೨. ನ್ಯಾಯಾಲಯಗಳ ಸುಧಾರಣೆಗಳು: ಸರ್.‌ ಚಾರ್ಲ್ಸ್‌ ಮೆಟ್ಕಾಫ್‌ನ ನೇತೃತ್ವದಲ್ಲಿ ಅನೇಕ ಸುಧಾರಣೆಗಳು ಜಾರಿಗೊಂಡವು. ಅವುಗಳೆಂದರೆ:-

ಅ. ೧೮೨೯ ರಲ್ಲಿ ಪ್ರಾಂತೀಯ (ಸರ್ಕ್ಯೂಟ್) ನ್ಯಾಯಾಲಯಗಳ ರದ್ದು.

ಆ. ೧೮೩೧ ರಲ್ಲಿ ಅರ್ಹ ಭಾರತೀಯರನ್ನು ಮುನ್ಸೀಫ್‌ ಮತ್ತು ಸದರ್‌ ಅಮೀನ್‌ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಾಸನ.

ಇ. ಕಲ್ಕತ್ತಾ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ೧೮೩೨ ರಲ್ಲಿ ಅಲಹಾಬಾದ್‌ನಲ್ಲಿ ಪ್ರತ್ಯೇಕ ಸದರ್‌ ದಿವಾನಿ ಮತ್ತು ಸದರ್‌ ನಿಜಾಮತ್‌ ಅದಾಲತ್ಗಳ ಸ್ತಾಪನೆ.

ಈ. ನ್ಯಾಯಾಲಯಗಳಲ್ಲಿ ಪರ್ಷಿಯನ್‌ ಬದಲು ದೇಶೀಯ ಭಾಷೆಗಳ ಬಳಕೆಗೆ ಆದೇಶ.

೩. ಆಡಳಿತಾತ್ಮಕ ಸುಧಾರಣೆಗಳು: ಕಂಪೆನಿಯ ಪ್ರಾದೇಶಿಕ ವಿಸ್ತರಣೆಯ ಕಾರಣ ಮತ್ತು ಆಡಳಿತ ವೆಚ್ಚದ ಕಡಿತದ ಕಾರಣ ಕೆಲವು ಸುಧಾರಣೆಗಳು ಜಾರಿಗೆ: ಅವುಗಳೆಂದರೆ,

ಅ. ಉನ್ನತ ಹುದ್ದೆಗಳಿಗೆ ಭಾರತೀಯರ ನೇಮಕಕ್ಕೆ ಅವಕಾಶ.

ಆ. ಕಲ್ಕತ್ತಾ ಕಂದಾಯ ಮಂಡಳಿಯ ಮೇಲಿನ ಕಾರ್ಯಭಾರ ಕಡಿತಗೊಳಿಸಲು ಮತ್ತು ಆಡಳಿತದ ದಕ್ಷತೆಗಾಗಿ ವಾಯುವ್ಯ ಭಾರತದ ಕಂದಾಯ ಆಡಳಿತಕ್ಕೆ ಅಲಹಾಬಾದಿನಲ್ಲಿ ಪ್ರತ್ಯೇಕ ಕಂದಾಯ ಆಡಳಿತ ಮಂಡಳಿಯ ನೇಮಕ.

೪. ಸಾಮಾಜಿಕ ಸುಧಾರಣೆಗಳು: ಈ ಕ್ಷೇತ್ರದ ಸುಧಾರಣೆಗಳು ಗಮನಾರ್ಹವಾದವುಗಳು. ಅವುಗಳೆಂದರೆ:-

ಅ. ಸತಿಸಹಗಮನ ಪದ್ಧತಿಯ ರದ್ಧತಿ: ಭಾರತೀಯ ಸಮಾಜದಲ್ಲಿದ್ದ ಅಮಾನವೀಯ ಮತ್ತು ಅತಾರ್ಕಿಕ ಸತಿ ಪದ್ಧತಿಯನ್ನು ೧೮೨೯, ಡಿಸೆಂಬರ್‌ ೪ ರಂದು ಕಾಯ್ದೆ ಜಾರಿ ಮೂಲಕ ರದ್ದು. ೧೮೧೮ ರಲ್ಲಿ ಸು. ೮೩೯ ಸತಿ ಪ್ರಕರಣಗಳು ದಾಖಲು. ರಾಜ  ರಾಮ್‌ಮೋಹನ್‌ ರಾಯ್‌ ಇದಕ್ಕೆ ಬೆಂಬಲ. ಪ್ರಚಾರ, ಒತ್ತಾಯಗಳು ಶಿಕ್ಷಾರ್ಹ ಅಪರಾಧಗಳೆಂದು, ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ವಿಧಿಸಲಾಯಿತು.

ಆ. ರಾಜಸ್ಥಾನದ ಕೆಲವು ಭಾಗಗಳಲ್ಲಿ ರೂಢಿಯಲ್ಲಿದ್ದ ಸ್ತ್ರೀ ಶಿಶುಹತ್ಯೆಯ ನಿಷೇಧ. ಅಂತೆಯೇ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನರಬಲಿಯ ರದ್ದು.

ಇ. ೧೮೩೩ ರಲ್ಲಿ ಶಾಸನದ ಮೂಲಕ ಗುಲಾಮಗಿರಿಯ (ಜೀತ) ಪದ್ಧತಿಯ ರದ್ದು.

೫. ಶೈಕ್ಷಣಿಕ ಸುಧಾರಣೆಗಳು: ೧೮೧೩ ರಲ್ಲಿನ ಚಾರ್ಟರ್‌ ಕಾಯ್ದೆಯಲ್ಲಿ ಶಿಕ್ಷಣಕ್ಕೆ ೧ ಲಕ್ಷ ಖರ್ಚು ಮಾಡಲು ಅವಕಾಶ.ಗೊಂದಲದ ಕಾರಣ ಜಾರಿಗೆ ಬರಲಿಲ್ಲ. ೧೮೨೩ ರಲ್ಲಿ ಹಾಮ್ಹರ್ಸ್ಟ್ಟ್‌ನಿಂದ ಮೀಸಲು ಹಣದ ಉಪಯೋಗಕ್ಕಾಗಿ ಸಮಿತಿಯೊಂದರ ನೇಮಕ. H.H. ವಿಲಿಯಂಸ್‌ ಭಾರತೀಯ ಶಿಕ್ಷಣ ಪದ್ಧತಿಯ ಪರವಾಗಿಯು ಮತ್ತು ಸರ್‌. ಚಾರ್ಲ್ಸ್‌ ಟೈವಿಲಿಯನ್ನನು ಆಂಗ್ಲ ಪದ್ಧತಿಯ ಪರವಾಗಿ ವಾದಿಸಿದರು. ಆದರೂ ಗೊಂದಲ ಬಗೆಹರಿಯಲಿಲ್ಲ. ಮುಂದೆ ಸರ್.‌ ಥಾಮಸ್‌ ಮೆಕಾಲೆ ಬೆಂಟಿಂಕ್‌ ಕಾಲದಲ್ಲಿ ಕಲ್ಕತ್ತಾ ಕಾನೂನು ಮಂಡಳಿ ಸದಸ್ಯನಾಗಿ ಬಂದನು. ಅವನ ನೇತೃತ್ವದಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿ ಜಾರಿಗೊಳಿಸಲಾಯಿತು. ಪ್ರಸಿದ್ಧ “ಮೆಕಾಲೆ ವರದಿ” ಮೂಲಕ. ೧೮೩೫ ರಲ್ಲಿ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಂಗ್ಲ ಭಾಷೆಯಲ್ಲಿ ಪಾಶ್ಚಿಮಾತ್ಯ ಶಿಕ್ಷಣದ ಬೋಧನೆ ಆರಂಭ.

೬. ಥಗ್ಗರ ದಮನ: ದರೋಡೆಕೋರರ ಗುಂಪು. ಪ್ರಜಾಪೀಡಕರು. ಹಾವಳಿ ತಡೆಯಲು ಸರ್. ವಿಲಿಯಂ ಸ್ಲೀಮನ್‌   ನೇತೃತ್ವದಲ್ಲಿ ಪಡೆ ರಚನೆ. ೬ ವರ್ಷಗಳಲ್ಲಿ ೨,೦೦೦ ದಷ್ಟು ಥಗ್ಗಿಗಳ ದಮನ.

೭. ಸಾರ್ವಜನಿಕ ಕಾಮಗಾರಿಗಳು: ವಾಯುವ್ಯ ಗಡಿಭಾಗದಲ್ಲಿ ನೀರಾವರಿ ಕಾಲುವೆಗಳ ನಿರ್ಮಾಣ. ಗ್ರ್ಯಾಂಡ್‌ ಟ್ರಂಕ್‌ ರಸ್ತೆಯ ದುರಸ್ತಿ. ಮುಂಬೈ ಮತ್ತು ಆಗ್ರಾಗಳ ನಡುವೆ ಹೆದ್ದಾರಿ ಕಾಮಗಾರಿ ಆರಂಭ. ಉಗಿಯಂತ್ರಚಾಲಿತ ನೌಕೆಗಳ ಸೇವೆ ಆರಂಭ.

ವಿದೇಶಾಂಗ ನೀತಿ: ಇವನು ದೇಶೀಯ ಅರಸರೊಂದಿಗೆ ಅನುಸರಿಸಿದ ವಿದೇಶಾಂಗ ನೀತಿಯ ಮುಖ್ಯಾಂಶಗಳು ಕೆಳಕಂಡಂತಿವೆ:-

ಅ. ಮೈಸೂರಿನಲ್ಲಿ ಕಂಪೆನಿಯ ನೇರ ಆಡಳಿತ ಆರಂಭ ೧೮೩೧: ಮೈಸೂರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಸಂದರ್ಭದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರು. ಅವರು ಪ್ರಾಪ್ತವಯಸ್ಕರಾದ ನಂತರ ನೇರ ಆಡಳಿತ ಆರಂಭ. ಆದರೆ ೧೮೩೧ ರಲ್ಲಿ ನಗರದಂಗೆ ಮತ್ತು ಅದಕ್ಷ ಆಡಳಿತ ಕಾರಣದ ನೆಪವೊಡ್ಡಿಮೈಸೂರಿನಲ್ಲಿ ಕಂಪೆನಿಯ ನೇರ ಆಡಳಿತಕ್ಕೆ ಆದೇಶಿಸಿದನು. ಮುಂದೆ ೧೮೮೧ರ ವರೆಗೆ ಮೈಸೂರು ಕಮೀಷನರುಗಳ ಆಡಳಿತಕ್ಕೆ ಒಳಪಟ್ಟಿತ್ತು.

ಆ. ಮಹಾರಾಜ ರಣಜಿತ್‌ ಸಿಂಗ್‌ನೊಡನೆ ಭೇಟಿ ೧೮೩೧: ಬ್ರಿಟೀಷ್‌ ಭಾರತದ ಮೇಲೆ ರಷ್ಯಾದ ಆಕ್ರಮಣವನ್ನು ತಡೆಯಲು ಸಿಖ್ಖರ ರಾಜ್ಯವನ್ನು ತಡೆರಾಜ್ಯವನ್ನಾಗಿ ಮಾಡಲು ಸಿಖ್ಖರ ನಾಯಕ ಮಹಾರಾಜ ರಣಜಿತ್‌ ಸಿಂಗನೊಂದಿಗೆ ರೂಪಾರ ಎಂಬಲ್ಲಿ ಸಭೆ ನಡೆಸಿ ಸ್ನೇಹ ಸಂಬಂಧ ವೃದ್ಧಿಸಿದನು.

ಇ. ಸಿಂಧ್‌ದ ವ್ಯಾಪಾರಿಗಳೊಂದಿಗೆ ಒಪ್ಪಂದ: ಇವರೊಂದಿಗೆ  ವ್ಯಾಪಾರದ ಒಪ್ಪಂದಗಳನ್ನು ಮಾಡಿಕೊಂಡು ಕಂಪೆನಿಯ ವ್ಯಾಪಾರದ ಅಭಿವೃದ್ಧಿಗೆ ಗಮನ ಹರಿಸಿದನು.

ಈ. ಕಚಾರ್‌ ವಶ ೧೮೩೨: ಮೊದಲನೆ ಬರ್ಮಾ ಯುದ್ಧ ನಂತರ ಕಚಾರ್‌ನ ಪ್ರಜೆಗಳ ಬೇಡಿಕೆಯ ಮೇರೆಗೆ ಬರ್ಮಾ ಮತ್ತು ಭಾರತದ ಗಡಿಯಲ್ಲಿದ್ದ ಇಳಿಜಾರು ಪ್ರದೇಶವಾದ ಕಚಾರ್‌ನ್ನು ವಶಪಡಿಸಿಕೊಂಡು ಅಲ್ಲಿ ಚಹಾ ತೋಟಗಳನ್ನು ಬೆಳೆಸಲಾಯಿತು.

ಉ. ಕೊಡಗು ವಶ ೧೮೩೪: ಕೊಡಗಿನ ರಾಜ ಚಿಕ್ಕವೀರರಾಜೇಂದ್ರನ ಮೇಲೆ ಅದಕ್ಷ ಆಡಳಿತ ಮತ್ತು ಪ್ರಜೆಗಳ ಮೇಲೆ ದೌರ್ಜನ್ಯದ ನೆಪವೊಡ್ಡಿ ಅದನ್ನು ವಶಪಡಿಸಿಕೊಂಡು ಮತ್ತು ಕಮೀಷನರ್‌ ಆಡಳಿತಕ್ಕೆ ಒಳಪಡಿಸಲಾಯಿತು.

ಊ. ಮೊಗಲ್‌ ಬಾದಶಹಾನ ಪಿಂಚಣಿ ಹೆಚ್ಚಳಕ್ಕೆ ನಿಯೋಗ: ೨ನೆ ಅಕ್ಬರ್‌ನ ಪಿಂಚಣಿ ಹೆಚ್ಚಳದ ಮನವಿಯ ಪರಿಶೀಲನೆಗೆ ಇಂಗ್ಲೆಂಡಿಗೆ ರಾಯಭಾರಿಯಾಗಿ ರಾಜಾ ರಾಂಮೋಹನ್‌ ರಾಯ್‌ ಅವರನ್ನು ಕಳುಹಿಸಲಾಯಿತು.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧