ತಲಕಾಡಿನ ಗಂಗರು, ಮೂಲ, ರಾಜಕೀಯ ಇತಿಹಾಸ.
ಪೀಠಿಕೆ
ಗಂಗರು
ಕೋಲಾರ,ಬೆಂಗಳೂರು,ತುಮಕೂರು,ಮೈಸೂರು,ಚಾಮರಾಜನಗರ,ಮಂಡ್ಯ,ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ
ದಕ್ಷಿಣ ಕರ್ನಾಟಕದಲ್ಲಿ ಶಾತವಾಹನರ ನಂತರ ಅಧಿಕಾರಕ್ಕೆ ಬಂದರು.
ಇವರ
ಮೊದಲ ರಾಜಧಾನಿ ಕೋಲಾರ; ನಂತರ ತಲಕಾಡಿನಿಂದ ಬಹುಕಾಲ ಆಳಿದರು.
ಚನ್ನಪಟ್ಟಣದ
ಬಳಿಯ ಮಾಕುಂದ ಮತ್ತು ನೆಲಮಂಗಲದ ಬಳಿಯ ಮಣ್ಣೆ ಇವರ
ಉಪ ರಾಜಧಾನಿಗಳಾಗಿದ್ದವು.
ಇವರು
ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು.
ರಾಚಮಲ್ಲನ
ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಸು. ಕ್ರಿ.ಶ.
೯೮೦ರಲ್ಲಿ ಗೊಮ್ಮಟೇಶ್ವರನ ಏಕಶಿಲಾ ಮಹಾಮೂರ್ತಿಯನ್ನು ಕೆತ್ತಿಸಿದನು.
ಮೂಲಾಧಾರಗಳು:
ಶಾಸನಗಳೇ ಮುಖ್ಯ ಆಧಾರಗಳು. ೮೦೦ ಕ್ಕೂ ಹೆಚ್ಚು ಶಾಸನಗಳು ಲಭ್ಯ. ತಾಮ್ರಪಟಗಳೇ ಹೆಚ್ಚು. ಪ್ರಾಕೃತ,
ಸಂಸ್ಕೃತ & ಕನ್ನಡ ಭಾಷೆಗಳಲ್ಲಿವೆ. ಶಾಸನಗಳು ಅಸ್ಪಷ್ಟತೆಯಿಂದ ಕೂಡಿವೆ. ನಾಗಾರ್ಜುನಕೊಂಡದ ಪ್ರಾಕೃತ
ಶಾಸನಗಳಲ್ಲಿ ಇವರ ಮೂಲದ ಬಗ್ಗೆ ಉಲ್ಲೇಖ.
ಚಾವುಂಡರಾಯ ಪುರಾಣ,
ಕಿರಾತಾರ್ಜುನೀಯ & ಶಬ್ದಾವತಾರಗಳಲ್ಲಿಯೂ ಮಾಹಿತಿ.
ದೇವಾಲಯಗಳು,
ಬಸದಿಗಳು & ಶಿಲ್ಪಗಳಿಂದ ಪುರಾತತ್ವ ಮಾಹಿತಿ; ಸಾಮಾಜಿಕ & ಧಾರ್ಮಿಕ ಸ್ತಿತಿಗತಿ ಅರಿಯಲು
ಸಹಾಯಕ.
ಗಂಗರ ಮೂಲ: ಏಕಾಭಿಪ್ರಾಯವಿಲ್ಲ
೧. ಇಕ್ಷ್ವಾಕು
ಮೂಲ: ಉತ್ತರದ ಇಕ್ಷ್ವಾಕು ರಾಜ ಧನಂಜಯನ ಮಗ ಹರಿಶ್ಚಂದ್ರ
ಅವನ ಮಕ್ಕಳೇ
ದಡಿಗ & ಮಾಧವರು
ಇವರಿಂದಲೇ ಗಂಗರ
ಮನೆತನದ ಸ್ಥಾಪನೆ ಎಂದು ೧೦೨೨ರ ಕಲ್ಲೂರುಗುಡ್ಡ ಶಿಲಾಶಾಸನದಿಂದ ಮಾಹಿತಿ
ಮತ್ತೊಂದು ಮೂಲದ
ಪ್ರಕಾರ ಗಂಗವಂಶದ ದಡಿಗ & ಮಾಧವರು ರಾಜ್ಯ ಸ್ಥಾಪಿಸಲು ದಕ್ಷಿಣಕ್ಕೆ ಬಂದು ಆಂಧ್ರದ ಕಡಪ ಜಿಲ್ಲೆಯ
ಗಂಗಪೆರೂರುನಲ್ಲಿ ರಾಜ್ಯ ಕಟ್ಟಿದರು
ಸಿಂಹನಂದಿಯಿಂದ
ನೆರವು ದೊರೆಯಿತು
ದೇವಿ ಪದ್ಮಾವತಿಯ
ಆಶಿರ್ವಾದದಿಂದ ಖಡ್ಗ ನೀಡಿ, ಪುಷ್ಪ ಕಿರೀಟ ನೀಡಿದರು
“ಕೊಟ್ಟ ಮಾತಿಗೆ
ತಪ್ಪಿ ನಡೆದರೆ, ಜಿನ ಶಾಸನವನ್ನು ಉಲ್ಲಂಘಿಸಿದರೆ, ಪರನಾರಿಯನ್ನು ಆಶಿಸಿದರೆ, ಮದ್ಯ-ಮಾಂಸವನ್ನು ಸೇವಿಸಿದರೆ,
ನೀಚ ಕುಲದವರ ಸಂಪರ್ಕ ಇಟ್ಟುಕೊಂಡರೆ, ಬೇಡಿದವರಿಗೆ ದಾನ ಕೊಡದಿದ್ದರೆ, ರಣರಂಗದಿಂದ ಓಡಿ ಹೋದರೆ ನಿನ್ನ
ಕುಲ ನಾಶವಾಗುತ್ತದೆ”
(ಮಾರಸಿಂಹನ ೯೬೩ರ
ಕೊಡಲೂರು ಶಾಸನದಿಂದ)
ಔತ್ತರೇಯ ಮೂಲದ
ಈ ಮಾಹಿತಿ ಕೇವಲ ದಂತಕಥೆಗಳಿಂದ ಕೂಡಿದ್ದು, ಇವುಗಳಿಗೆ ಐತಿಹಾಸಿಕ ಆಧಾರಗಳು ಅಲಭ್ಯ.
೨. ಕಣ್ವ ಮೂಲ:
ಗಂಗರು ಜಾಹ್ನವೀಯ ಕುಲ & ಕಣ್ವಾಯನ ಗೋತ್ರಕ್ಕೆ ಸೇರಿದವರೆಂದು ಹೇಳಿಕೊಂಡಿದ್ದು, K.P ಜೇಸ್ವಾಲ್
ಗಂಗರು ಕಣ್ವ ಮೂಲದವರೆಂದು ಹೇಳಿದ್ದಾರೆ.
೩. ತಮಿಳು
ಮೂಲ: ಇವರು ಮೂಲತಃ ಕೊಯಮತ್ತೂರು
ಬಳಿಯ “ಗಂಗಪೆರೂರು”
ಎಂಬಲ್ಲಿ ರಾಜ್ಯ ಸ್ಥಾಪನೆ ಮಾಡಿ ನಂತರ
ಕೋಲಾರಕ್ಕೆ ಬಂದು ಆಳಲು ತೊಡಗಿದರು ಎಂದು ಡಾ. ಆರೋಕ್ಯಸ್ವಾಮಿ ಅವರು ಕೊಂಗುದೇಶ ರಾಜಕ್ಕಳ್ ಚರಿತಂ
ಎಂಬ ಕೃತಿಯಲ್ಲಿ ಹೇಳಿದ್ದಾರೆ
ಇದಕ್ಕೆ ಐತಿಹಾಸಿಕ
ಆಧಾರಗಳಿಲ್ಲ.
೪. ಕನ್ನಡ
ಮೂಲ: ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು
ಇವರ ರಾಜಧಾನಿ
ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ
ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ
” ಎಂದು ಹೆಸರು ಬಂದಿದೆ.
ಗಂಗಟಿಕರು:
ಇವರು ಗಂಗ ಸಾಮ್ರಾಜ್ಯದ ಕೇಂದ್ರ ಭಾಗದಲ್ಲಿ ವಾಸಿಸುತ್ತಿದ್ದ, ಬಹುಸಂಖ್ಯಾತ ರೈತಾಪಿ ವರ್ಗ ( ಒಕ್ಕಲಿಗರು).
ಎಡ್ಗರ್
ಥರ್ಸ್ಟನ್ ರವರು ತಮ್ಮ "ದಕ್ಷಿಣ
ಭಾರತದ ಜಾತಿ ಮತ್ತು ಬುಡಕಟ್ಟುಗಳು"
ಕೃತಿಯಲ್ಲಿ 'ದಕ್ಷಿಣ ಗಂಗೆ' ಎಂದು ಹೆಸರಾದ ಕಾವೇರಿ
ನದಿಯ ತಟದಲ್ಲಿ ವಾಸಿಸುತ್ತಿದ್ದರಿಂದ ಇವರಿಗೆ ಗಂಗಟಕಾರ ಎಂಬ ಹೆಸರು ಬಂದಿರುವುದಾಗಿ
ಸ್ಪಷ್ಟಪಡಿಸಿದ್ದಾರೆ.
ಲೆವಿಸ್ ರೈಸ್,
R.S. ಪಂಚಮುಖಿ, ಶೇಖ್ ಅಲಿ & M.H. ಕೃಷ್ಣರಾವ್ ಅವರು ಇದನ್ನು ಬೆಂಬಲಿಸಿದ್ದಾರೆ
ತಲಕಾಡಿಗೆ ಗಜಾರಣ್ಯ
ಎಂಬ ಹೆಸರಿದ್ದು, ಮದಗಜ ಇವರ ರಾಜಲಾಂಛನವಾಯಿತು
ಆರಂಭಿಕ ಗಂಗರು
ಶೈವರಾಗಿದ್ದು, ಶಿವನ ಪತ್ನಿ ಗಂಗೆಯ ಪೂಜಕರಾದ ಕಾರಣ “ಗಂಗರು” ಎಂಬ ಹೆಸರು ಬಂದಿರಬಹುದು
ಗಂಗ ಅರಸರು
ಗಂಗರ ರಾಜಕೀಯ
ಇತಿಹಾಸ
ದಡಿಗ
ಅಥವಾ ಕೊಂಗುಣಿ ವರ್ಮ ೩೫೦-೪೦೦
ಗಂಗ
ವಂಶದ ಸ್ಥಾಪಕ
“ಕುವಲಾಲ
ಅಥವಾ ಕೋಲಾರ” ಇವನ ರಾಜಧಾನಿ.
ಬಾಣರನ್ನು
ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ
ಹಾಕಿದ
ಕರಾವಳಿ ಗೆದ್ದು,
ಕೋಲಾರದಲ್ಲಿದ್ದ ಚೋಳರನ್ನು ಹೊರಗಟ್ಟಿದನು
ಸೋದರ ಮಾಧವನ
ನೆರವು ಇತ್ತು
ಧರ್ಮ
ಮಹಾರಾಜ & ಬಾಣ ವಂಶ ದಾವಾನಲ -
ಬಿರುದುಗಳು.
ಗುರುವಿನ
ಹೆಸರು - ಸಿಂಹ ನಂದಿ ( ಜೈನಗುರು
)
ಸಿಂಹ
ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ ಬಳಿ
ಚೈತ್ಯಾಲಯವನ್ನು ನಿರ್ಮಿಸಿದನು
ಒಂದನೇ
ಮಾಧವ: ೪೦೦-೩೫
ದಡಿಗನ
ನಂತರ ಅಧಿಕಾರಕ್ಕೆ ಬಂದವನು
ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ
ನೀಡಿದ್ದನು
ಈತ ರಚಿಸಿದ ಕೃತಿ - “ ದತ್ತ ಸೂತ್ರ ”
ಹರಿವರ್ಮ
೪೩೫-೬೦
ಕೋಲಾರದಿಂದ ತಲಕಾಡಿಗೆ
ರಾಜಧಾನಿ ಬದಲಾವಣೆ
ಧನುರ್ವಿದ್ಯಾ
ಪಾರಂಗತ
ಇವನ ನಂತರ ಸಿಂಹವರ್ಮ
ಕೆಲಕಾಲ ಆಳಿದನು
ವಿಷ್ಣುಗೋಪ:
ವೈದಿಕ ಮತಾವಲಂಬಿ. ಬೃಹಸ್ಪತಿಗೆ ಸಮನಾದ ಬುದ್ಧಿಶಕ್ತಿ ಉಳ್ಳವನು. ಗೋ-ಬ್ರಾಹ್ಮಣ ರಕ್ಷಕನೆಂದು ಖ್ಯಾತಿ
ಮೂರನೇ
ಮಾಧವ: ೪೬೦-೫೦೦
ಇವನು
ತಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ
ಮಲ್ಲಯುದ್ಧ ಪ್ರವೀಣ;
೩೨ ಆಯುಧಗಳ ಪ್ರಯೋಗ ಬಲ್ಲವನು
ಕದಂಬ
ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
ವಿಜಯ
ಕೀರ್ತಿ -ಅವನ ದೀಕ್ಷಾ ಗುರು
ಅವನೀತ:
೫೦೦-೫೪೦
ಈತ ಮೂರನೇ ಮಾಧವನ ಮಗ
ಈತ ಶಿವನ ಆರಾಧಕನಾಗಿದ್ದನು
ಈತ ಸರ್ವಧರ್ಮ ಸಮನ್ವಯಿಯಾಗಿದ್ದನು
ಪಟ್ಟಕ್ಕೆ ಬಂದಾಗ
ಅಪ್ರಾಪ್ತ; ಸಾಮಂತರು ಸ್ವತಂತ್ರರಾದರು
ಪ್ರಾಪ್ತನಾದಾಗ
ಅವರನ್ನು ಸದೆಬಡಿದ
ಈತನನ್ನು
ಶಾಸನಗಳು “ ಹರ ಚರಣಾರವಿಂದ ಪ್ರಣಿಪಾತ
” ಎಂದು ಉಲ್ಲೇಕಿಸಿದೆ.
ಪುನ್ನಾಟದ ಜೇಷ್ಠಾದೇವಿ
ಇವನ ರಾಣಿ
ದುರ್ವಿನೀತ: ೫೪೦-೬೦೦
Comments
Post a Comment