ಸಾಮ್ರಾಟ ಅಶೋಕ
ತಂದೆ: ಬಿಂದುಸಾರ. ತಾಯಿ: ಚಂಪಾ ನಾಡಿನ ಸುಭದ್ರಾಂಗಿ.
ಉಜ್ಜಯಿನಿ ಮತ್ತು ತಕ್ಷಶಿಲಾಗಳಲ್ಲಿ
ಪ್ರಾಂತ್ಯಾಧಿಕಾರಿ. ಬಿಂದುಸಾರನ ಮರಣಾನಂತರ ಅಧಿಕಾರಕ್ಕೆ. ಪಟ್ಟಾಭಿಷೇಕ ೨೬೯ ರಲ್ಲಿ. ೪ ವರ್ಷಗಳ ಅಂತರದ
ಬಗ್ಗೆ ಅನೇಕ ಅಭಿಪ್ರಾಯಗಳಿವೆ.
೧. ಬೌದ್ಧ ದಾಖಲೆಗಳು: ದೀಪವಂಶ,
ಮಹಾವಂಶ, ದಿವ್ಯಾವದಾನ ಮೊದಲಾದವು. ಬಿಂದುಸಾರನಿಗೆ ೧೬ ಪತ್ನಿಯರು ಮತ್ತು ೧೦೧ ಮಕ್ಕಳು. ಅಶೋಕನು ೧೦೦
ಸೋದರರನ್ನು ಕೊಂದು ಅಧಿಕಾರಕ್ಕೆ. ಆರಂಭದಲ್ಲಿ ಅವನು ಚಂಡಾಶೋಕನಾಗಿದ್ದು ನಂತರ ಧರ್ಮಾಶೋಕನಾದನೆಂದು
ಈ ದಾಖಲೆಗಳು ಹೇಳುತ್ತವೆ. ಆದರೆ ಆಧುನಿಕ ವಿದ್ವಾಂಸರು ಇದನ್ನು ಒಪ್ಪುವುದಿಲ್ಲ.
ಎಲ್ಲಿಯೂ ಈ ಬಗ್ಗೆ ಉಲ್ಲೇಖಗಳಿಲ್ಲ.
ಶಾಸನವೊಂದರಲ್ಲಿ ಸೋದರರೊಂದಿಗೆ ಸೌಹಾರ್ದವಾಗಿ ಜೀವಿಸಿದ್ದ ಮಾಹಿತಿ. ನೀಲಕಂಠಶಾಸ್ತ್ರಿ ಅವರಿಂದ.
K.P. ಜೆಸ್ವಾಲ್: ಅಶೋಕನಿಗೆ ಕೇವಲ
೨೧ ವರ್ಷವಾದ್ದರಿಂದ ೪ ವರ್ಷಗಳ ನಂತರ ಪಟ್ಟಾಭಿಷೇಕ. ವೈದಿಕ ಪರಂಪರೆಗಳ ಪ್ರಕಾರ.
ಕಳಿಂಗ ಯುದ್ಧ ಶ.ಪೂ. ೨೬೧: ಇಂದಿನ
ಒರಿಸ್ಸಾದ ಭಾಗ. ಶುದ್ಧಧರ್ಮ ಅದರ ರಾಜನೆಂದು ನಂಬಿಕೆ. ಅಪಾರ ಸೈನ್ಯ; ೬೦,೦೦೦ ಪದಾತಿ, ೧೦,೦೦೦ ಅಶ್ವಪಡೆ
ಮತ್ತು ೭೦೦ ಆನೆಗಳು. ಧೌಲಿ ಬಳಿ ಭೀಕರ ಕದನ. ಅಪಾರ ರಕ್ತಪಾತ. ಕಳಿಂಗದವರಿಗೆ ಸೋಲು.
ಪರಿಣಾಮಗಳು:
೧ ಲಕ್ಷ ಜನರ ಸಾವು. ೧.೫ ಲಕ್ಷ ಜನರ ಸೆರೆ. ಇದು ಅಶೋಕನ ಮನ ಕಲಕಿತು. ಮೊದಲ ಮತ್ತು ಕೊನೆಯ ಯುದ್ಧ.
ಖಡ್ಗದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಧರ್ಮ ಮತ್ತು ಸತ್ಯದ ವಿಜಯವೇ ಶಾಶ್ವತ. ಉಪಗುಪ್ತನ ನೆರವಿನಿಂದ
ಬೌದ್ಧ ಧರ್ಮದತ್ತ ಒಲವು. ಸಾಂಸ್ಕೃತಿಕ ವಿಜೇತನಾದನು. ೧೩ನೆ ಬಂಡೆಗಲ್ಲು ಶಾಸನದಲ್ಲಿ ಯುದ್ಧದ ವಿವರಗಳು.
ಡಾ. ರಾಯ್‌ಚೌಧರಿ: ದಿಗ್ವಿಜಯವು
ಧರ್ಮವಿಜಯವಾಯಿತು. ರಣಭೇರಿಯು ಧರ್ಮಭೇರಿಯಾಯಿತು.
ಯುದ್ಧದ ನಿರರ್ಥಕತೆ ಸಾರಿದ ಪ್ರಪಂಚದ
ಮೊದಲ ಅರಸು; ಭಾರತೀಯ.
ಅಶೋಕನ ಶಾಸನಗಳು
ಶಾಸನಗಳ ಪಿತಾಮಹ; ಶಿಲಾಶಾಸನಗಳ
ರಾಜ; ಸ್ವಕಥನಗಾರ ಎಂದು ಕರೆಯಲಾಗಿದೆ
ಶಾಸನಗಳ ಮೂಲಕ ಪ್ರಜೆಗಳೊಂದಿಗೆ
ಸಂಭಾಷಿಸಿದವನು
ನಂಬಿದ್ದ ಧ್ಯೇಯ, ಆದರ್ಶ
& ಧರ್ಮಗಳಿಗೆ ಶಾಶ್ವತ ರೂಪ ಕೊಡಲು ಶಾಸನಗಳ ಕೆತ್ತನೆ
ಶ್ರೇಷ್ಠ ಐತಿಹಾಸಿಕ ದಾಖಲೆಗಳು
ಬ್ರಾಃಮಿ & ಕರೋಷ್ಠಿ ಲಿಪಿಯಲ್ಲಿವೆ
ಶಬಾಷ್‌ಗಿರಿ ಮತ್ತು ಮನ್‌ಶೇರಾ
ಗಳಲ್ಲಿನ ಶಾಸನಗಳು ಕರೋಷ್ಠಿ ಲಿಪಿಯಲ್ಲಿ
ಕರೋಷ್ಠಿ ಲಿಪಿ ಬಲದಿಂದ ಎಡಕ್ಕೆ
ಸಾಗುತ್ತದೆ
ಬ್ರಾಹ್ಮಿ ಇದಕ್ಕೆ ವಿರುದ್ಧವಾಗಿರುತ್ತದೆ
ಬಹುತೇಕ ಶಾಸನಗಳು ಪಾಳಿ ಭಾಷೆಯಲ್ಲಿವೆ
೧೮೩೭ ರಲ್ಲಿ “ಜೇಮ್ಸ್ ಪ್ರಿನ್ಸೆಫ್”
ಮೊದಲ ಬಾರಿಗೆ ಓದಿದರು
ಶಾಸನಗಳ ವರ್ಗೀಕರಣ
ಪ್ರಮುಖವಾಗಿ ಆರು ವಿಧಗಳಾಗಿ ವಿಂಗಡಿಸಿದೆ.
ಅವುಗಳೆಂದರೆ,
೧. ೧೪ ಶಿಲಾಶಾಸನಗಳು
೨. ೭ ಸ್ತಂಭ ಶಾಸನಗಳು
೩. ೩ ಗುಹಾ ಶಾಸನಗಳು
೪. ೪ ಲಘು ಶಾಸನಗಳು
೫. ೨ ಸ್ಮರಣಾರ್ಥ ಶಾಸನಗಳು
೬. ೨ ಕಳಿಂಗ ಶಾಸನಗಳು
೧೩ನೆ ಶಿಲಾ ಶಾಸನವು ಕಳಿಂಗ ಯುದ್ಧದ
ಮಾಹಿತಿ ಹೊಂದಿದೆ
ಕರ್ನಾಟಕದಲ್ಲಿ ಅಶೋಕನ ಶಾಸನಗಳು
ಚಿತ್ರದುರ್ಗ – ಬ್ರಹ್ಮಗಿರಿ, ಅಶೋಕ
ಸಿದ್ಧಾಪುರ ಮತ್ತು ಜಟಿಂಗರಾಮೇಶ್ವರ
ಕೊಪ್ಪಳ – ಗವಿಮಠ ಮತ್ತು ಪಾಲ್ಕಿಗೊಂಡು
ಬಳ್ಳಾರಿ – ಉದೇಗೊಳ ಮತ್ತು ನಿಟ್ಟೂರು
ರಾಯಚೂರು – ಮಸ್ಕಿ
ಗುಲ್ಬರ್ಗಾ – ಸನ್ನತಿ
ದಕ್ಷಿಣದಲ್ಲಿ ಅಶೋಕನ ಪ್ರಾಂತ್ಯಗಳು
ಸುವರ್ಣಗಿರಿ, ಇಸಿಲ, ತೋಸಿಲ ಮತ್ತು
ಸಂಪ
ಶಾಸನಗಳ ಸಾರ
ನೈತಿಕ ಮತ್ತು ಆಧ್ಯಾತ್ಮಿಕ ಆದರ್ಶಗಳಿಂದ
ಕೂಡಿವೆ
ಮುಖ್ಯ ಬೋಧನೆಗಳು:
೧. ತಂದೆ-ತಾಯಿಯರ ನುಡಿ ಪಾಲನೆ
೨. ಗುರು-ಹಿರಿಯರಿಗೆ ಗೌರವ ತೋರುವುದು
೩. ಸತ್ಯವಾಕ್ಯ ನುಡಿಯುವುದು
೪. ಪ್ರಾಣಿಗಳ ಬಗ್ಗೆ ದಯೆ ತೋರುವುದು
೫. ಅಹಿಂಸೆಯನ್ನು ಪಾಲಿಸುವುದು
೬. ಸಹನೆ, ಸೋದರತೆ, ಅನುಕಂಪ ಮತ್ತು
ಉದಾರತೆಗಳನ್ನು ಬೆಳೆಸಿಕೊಳ್ಳುವುದು
೭. ನೆರೆ-ಹೊರೆಯವರನ್ನು ಪ್ರೀತಿಯಿಂದಿ
ಕಾಣುವುದು
ಶಾಸನಗಳ ಮಹತ್ವ
೧. ಸಾಮ್ರಾಜ್ಯದ ವಿಸ್ತಾರ ತಿಳಿಸುತ್ತವೆ.
೨. ಧರ್ಮದ ಸಾರ ತಿಳಿಯಲು ನೆರವಾಗುತ್ತವೆ.
೩. ವಿದೇಶಗಳ ಸಂಬಂಧ ತಿಳಿಯಲು ನೆರವಾಗುತ್ತವೆ.
೪. ಆಡಳಿತದ ಬಗ್ಗೆ ಮಾಹಿತಿ ನೀಡುತ್ತವೆ.
೫. ಅಶೋಕನ ವ್ಯಕ್ತಿತ್ವ ತಿಳಿಯಲು
ನೆರವಾಗುತ್ತವೆ.
೬. ಮೌರ್ಯರ ಕಲೆ-ಸಾಹಿತಯ ತಿಳಿಯಲು ನೆರವಾಗುತ್ತವೆ.
Comments
Post a Comment