ತಲಕಾಡಿನ ಗಂಗರ ರಾಜಕೀಯ ಇತಿಹಾಸ ಭಾಗ ೨
ದುರ್ವಿನೀತ: ೫೪೦-೬೦೦
ಗಂಗರ
ಅತ್ಯಂತ ಪ್ರಸಿದ್ದ ದೊರೆಗಳಲ್ಲೊಬ್ಬ
ತಾಯಿ
ಜೇಷ್ಠಾದೇವಿ ಹಾಗೂ ತಂದೆ ಅವನೀತ.
ಮಲಸೋದರನ ವಿರುದ್ಧ
ಹೋರಾಡಿ ಪಟ್ಟ ಸ್ವೀಕಾರ
ಚಾಲುಕ್ಯರೊಂದಿಗೆ
ವೈವಾಹಿಕ ಸಂಬಂಧ (ವಿಜಯಾದಿತ್ಯನಿಗೆ ಮಗಳನ್ನು ಕೊಟ್ಟಿದ್ದ).
ಪಲ್ಲವರಿಂದ ಅನೇಕ
ಪ್ರದೇಶಗಳ ವಶ – ಗುಮ್ಮರೆಡ್ಡಿಪುರದ ಶಾಸನ
ಪುನ್ನಾಟ ಇವನ
ರಾಜ್ಯದಲ್ಲಿ ವಿಲೀನ
ವೈಷ್ಣವ
ಮತಾವಲಂಬಿ, ಆದರೂ ಸರ್ವಧರ್ಮ ಸಮನ್ವಯಕಾರ
ಕಮಲೋದರ; ಹಿರಣ್ಯಗರ್ಭ
ದಾನ ಯಾಗ
ಬಾರವಿಯ
ಕಿರಾತಾರ್ಜುನೀಯ ಎಂಬ ಕೃತಿಯ 15ನೇ ಸರ್ಗಕ್ಕೆ ಭಾಷ್ಯ
“ಗುಣಾಡ್ಯನ ” “ ವಡ್ಡ ಕಥಾವನ್ನು ” ಪೈಶಾಚಿ
ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ
ಗುರು
- ಪೂಜ್ಯಪಾದ ಅಥವಾ ದೇವಾನಂದೀ
ಅವರಿಂದ ಸಂಸ್ಕೃತ
ವ್ಯಾಕರಣ ಶಬ್ದಾವತಾರ ರಚನೆ
ಗದ್ಯಲೇಖನದಲ್ಲಿ
ನಿಪುಣ; ಕವಿರಾಜಮಾರ್ಗದಲ್ಲೂ ಉಲ್ಲೇಖ!
ಚಾಣಕ್ಯನಿಗೆ
ಸಮ; ನಾರದ, ತುಂಬುರರಿಗೆ ಸಮಾನ; ಪರಶುರಾಮನಂತೆ ಶಸ್ತ್ರ ಪ್ರವೀಣ; ಆಯುರ್ವೇದ & ಹಸ್ತಸಾಮುದ್ರಿಕೆಯಲ್ಲೂ
ಪರಿಣತಿ!
ಬಿರುದುಗಳು
- ಅವನೀತ ಸ್ತರಪ್ರಜಾಲಯ, ನಿರ್ವಿನೀತ, ಅರಿನೃಪ ದುರ್ವಿನೀತಿ, ಅಹೀತ ವಿನೀತ ಹಾಗೂ
ಧರ್ಮ ಮಹಾರಾಜ
ದುರ್ವಿನೀತನ
ನಂತರ ಅವನ ಮಕ್ಕಳು ಮುಶ್ಕರ (೬೦೦-೨೦) ಮತ್ತು ಪೊಲವೀರರು (೬೨೦-೬೪೪) ವರೆಗೆ ಆಳಿದರು
ನಂತರ ಶ್ರೀವಿಕ್ರಮನು
೬೪೪-೬೬೯ರ ವರೆಗೆ ಆಳಿದನು
ಭೂವಿಕ್ರಮ ೬೬೯-೬೭೯:
ಚಾಳುಕ್ಯರ ೧ನೆ ವಿಕ್ರಮಾದಿತ್ಯನ ಪರವಾಗಿ ಪಲ್ಲವರ ಪರಮೇಶ್ವರವರ್ಮನನ್ನು ವಿಳಂದೆಯಲ್ಲಿ ಕೊಂದು ಉಗ್ರೋದಯವೆಂಬ
ರಾಜಹಾರವನ್ನು ಗಳಿಸಿದನು
ರಾಜಧಾನಿ ಮಾಕುಂದಕ್ಕೆ
ಬದಲಾವಣೆ
೧ನೆ ಶಿವಮಾರ
೬೭೯-೭೨೬: ಪಲ್ಲವರ ವಿರುದ್ಧ ಸೆಣಸಾಟ; ತಂದೆಯ ಕಾಲದ ಘರ್ಷಣೆ ಮುಂದುವರಿಕೆ
ಚಾಲುಕ್ಯರ ವಿನಯಾದಿತ್ಯನ
ಕಾಲದಲ್ಲಿ ಗಂಗರ ಮೇಲೆ ಅಧಿಕಾರ ಸ್ಥಾಪಿಸಿದ ಮಾಹಿತಿ ಚಾಲುಕ್ಯಯರ ಶಾಸನಗಳಲ್ಲಿ
ಶಿಷ್ಟಪ್ರಭು,
ಅವನೀಮಹೇಂದ್ರ & ಸ್ಥಿರವಿನೀತ – ಬಿರುದುಗಳು
ಎರೆಗಂಗ ಎಂಬ
ಮಗನಿದ್ದು ತಂದೆಗೂ ಮೊದಲೇ ಮರಣ
ಶ್ರೀಪುರುಷ:
೭೨೬-೭೮೮
೬೩ ವರ್ಷಗಳ ದೀರ್ಘ
ಆಳ್ವಿಕೆ; ಶಕಪುರುಷನೆಂದು ಖ್ಯಾತಿ
ಇವನ ಕಾಲದಲ್ಲಿ
ಪ್ರಮುಖ ರಾಜಕೀಯ ಘಟನೆಗಳು; ಚಾಲುಕ್ಯ & ಪಲ್ಲವರ ಪತನ
ಪಲ್ಲವರ ನಂದಿವರ್ಮ
ಕೋಲಾರ ಗೆದ್ದು ಉಗ್ರೋದಯ ವನ್ನು ಮರಳಿ ಪಡೆದನು
ವಿಳಂದೆ ಬಳಿ
ಅವರನ್ನು ಸೋಲಿಸಿ ಪಲ್ಲವರ ಪೆರ್ಮನಾಡಿ ಎಂಬ ಬಿರುದು ಧರಿಸಿದ
ರಣಭಾಜನ
& ಭೀಮಕೋಪ ಎಂಬ ಬಿರುದುಗಳು
“ತುಂಡಕ
ಕದನ ” ದಲ್ಲಿ ೨ನೆ ವಿಕ್ರಮಾದಿತ್ಯನೊಂದಿಗೆ ಪಲ್ಲವರನ್ನು
ಸೋಲಿಸಿದ
ಪಾಂಡ್ಯರೊಂದಿಗೆ
ವೈವಾಹಿಕ ಸಂಬಂಧದಿಂದ ಪಲ್ಲವರ ಬಲ ಕುಗ್ಗಿಸಿದ
ನೊಳಂಬರು ಇವನ
ಸಾಮಂತರಾದರು
ರಾಷ್ಟ್ರಕೂಟರೊಂದಿಗೆ
ಹೋರಾಟ
೧ನೆ ಕೃಷ್ಣನ
ಸೈನ್ಯವನ್ನು ಬಾಗೆಯೂರು & ಪಿಂಚನೂರು ಕದನಗಳಲ್ಲಿ ಗೆದ್ದು, ಕಂಪಿಲೆ ವರೆಗೆ ಹಿಮ್ಮೆಟ್ಟಿಸಿದ್ದನು
ಯುದ್ಧಗಳಲ್ಲಿ
ಮಗ ಸಿಯಗೆಲ್ಲ ನನ್ನು ಕಳೆದುಕೊಂಡ
೩ನೆ ಗೋವಿಂದನ
ಕಾಲದಲ್ಲೂ ಸಂಘರ್ಷಗಳು ಮುಂದುವರಿದವು
ಕಡೆಯವರೆಗೂ ಸ್ವತಂತ್ರನಾಗಿಯೇ
ಉಳಿದನೆಂಬ ಮಾಹಿತಿ ಶಾಸನಗಳಲ್ಲಿ
“ಗಜಶಾಸ್ತ್ರ” ಎಂಬ ಕೃತಿಯ ರಚನೆ
ರಾಜಧಾನಿಯನ್ನು
ಮಾಕುಂದದಿಂದ ಮಾನ್ಯಪುರಕ್ಕೆ ವರ್ಗಾವಣೆ
ಗಂಗರಾಜ್ಯ
“ಶ್ರೀರಾಜ್ಯ ” ವಾಯಿತು
ಬಿರುದುಗಳು
- ರಾಜಕೇಸರಿ , ಪೆರ್ಮಾಡಿ , ಬೀಮಕೋಪ, ರಣಭಾಜನ, ರಾಜಾಧಿರಾಜ
ಎರಡನೇ
ಶಿವಮಾರ: ೭೮೮-೮೧೨
ಇನ್ನೊಂದು
ಹೆಸರು – ಸೈಗೊಟ್ಟ
ದುರಂತಗಳ ಸರಮಾಲೆ;
ಸೋದರ ದುಗ್ಗಮಾರನ ಬಂಡಾಯ
ನೊಳಂಬರ ನೆರವಿನಿಂದ
ಅಡಗಿಸಿದ
ಉತ್ತರದಲ್ಲಿ
೨ನೆ ಗೋವಿಂದ & ದೃವರ ನಡುವೆ ಅಂತಃಕಲಹ; ದೃವನು ಗೆದ್ದು ಶಿವಮಾರನನ್ನು ಸೆರೆಯಲ್ಲಿಟ್ಟನು
ಗಂಗವಾಡಿಗೆ ಕಂಬರಸನನ್ನು
ನೇಮಿಸಿದನು
೩ನೆ ಗೋವಿಂದನ
ಕಾಲದಲ್ಲಿ ಬಿಡುಗಡೆ ಹೊಂದಿದರೂ ಕಂಬನ ಪರ ವಹಿಸಿದ್ದರಿಂದ ಮತ್ತೆ ಸೆರೆಗೆ.
ಅಮೋಘವರ್ಷನ ಕಾಲದಲ್ಲಿ
ಕಾಗೆಮೊಗ್ಗೆಯೂರು ಕದನದಲ್ಲಿ ವೀರಮರಣ
ಕೃತಿಗಳು
– ಗಜಾಷ್ಟಕ (ವನಕೆವಾಡು), ಸೇತುಬಂಧ ಹಾಗೂ ಶಿವಮಾರ ತರ್ಕ
ಶ್ರವಣಬೆಳಗೊಳದಲ್ಲಿ
ಚಂದ್ರಪ್ರಭ ಜೈನ ಬಸದಿಯ ನಿರ್ಮಾಣ
“ಎವೆಳ್ವದೋ ಶಿವಮಾರ
ಮಹಿವಳಯಾದಿಪನ ಸುಭಗ ಕವಿತಾಗುಣಮಂ”
ಒಂದನೆ ರಾಚಮಲ್ಲ
೮೧೬-೪೩:- ರಾಜ್ಯಕ್ಕೆ ಅನೇಕ ವಿಪತ್ತುಗಳು. ಬಾಣರ ಅರಸ ವಿದ್ಯಾಧರನ ದಾಳಿ. ರಾಷ್ಟ್ರಕೂಟರ ದಾಳಿಗಳೂ
ಸಹಾ.ಕಾರಣ ನೊಳಂಬರೊಂದಿಗೆ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿದನು. ಬಂಕೇಶನಿಂದ ಕೈದಾಳದುರ್ಗದ ವಶ.
ಕಾವೇರಿ ನದಿಯವರೆಗೂ ಮುನ್ನಡೆ. ಆದರೆ ಅವನು ರಾಜಧಾನಿಗೆ ಹಿಂತಿರುಗಬೇಕಾಯಿತು. ನಂತರ ರಾಚಮಲ್ಲನು ತನ್ನ
ಪ್ರದೇಶಗಳನ್ನು ಮರಳಿ ಗೆದ್ದನು.
ಎರೆಗಂಗ ೮೪೩-೭೦:-
ನೀತಿಮಾರ್ಗ & ರಣವಿಕ್ರಮ ಎಂಬ ಬಿರುದುಗಳು. ನೊಳಂಬರ ನೆರವಿನಿಂದ ಬಾಣರ ರಾಜ್ಯ ವಶ. ಅಮೋಘವರ್ಷನು
ಗಂಗರನ್ನು ಗೆಲ್ಲಲು ಬೃಹತ್ ಸೈನ್ಯದ ರವಾನೆ. ರಾಜರಮಡು (೮೬೮) ಎಂಬಲ್ಲಿ ಅವರಿಗೆ ಸೋಲು. ನಂತರ ಎರೆಗಂಗನ
ಮಗ ಬೂತುಗನಿಗೆ ಚಂದ್ರೋಬಲಬ್ಬೆಯನ್ನು ಕೊಟ್ಟು ವಿವಾಹ. ಪಾರಂಪರಿಕ ಕಲಹದ ಮುಕ್ತಾಯ.
೨ನೆ ರಾಚಮಲ್ಲ
೮೭೦-೯೦೨:- ಸತ್ಯವಾಕ್ಯ ಎಂಬ ಬಿರುದು. ಬಾನ, ನೊಳಂಬ, ಚೋಳ ಮತ್ತು ವೆಂಗಿಯ ಚಾಳುಕ್ಯರೊಂದಿಗೆ ಹೋರಾಟಗಳು.
ಯುವರಾಜ ಬೂತುಗನು ಹಿರಿಯೂರು & ಸೂರೂರು ಬಳಿ ನೊಳಂಬ ಮಹೇಂದ್ರನನ್ನು ಸೋಲಿಸಿದನು. ವೆಂಗಿಯ ವಿಜಯಾದಿತ್ಯನೊಂದಿಗೂ
ಭೀಕರ ಹೋರಾಟಗಳು ನಡೆದವು. ಬೂತುಗನ ನಂತರ ಅವನ ಮಗ ಎರೆಗಂಗನು ನೊಳಂಬರ ಮಹೆಂದ್ರನನ್ನು ಕೊಂದು “ಮಹೇಂದ್ರಾಂತಕ”
ನೆಂಬ ಬಿರುದು ಪಡೆದನು.
ಎರೆಯಪ್ಪ ೯೦೨-೨೧.
ಇವನ ಕಾಲದಲ್ಲಿ ನೊಳಂಬ ರಾಜ್ಯದ ಮೇಲೆ ವೆಂಗಿಯ ಚಾಳುಕ್ಯರ ದಾಳಿ ನಡೆದು, ಅಲ್ಲಿನ ಅರಸ ಅಯ್ಯಪ್ಪನು
ಎರೆಗಂಗನ ನೆರವಿನಿಂದ ಅವರನ್ನು ಹಿಮ್ಮೆಟ್ಟಿಸಿದನು.
ಇವನ ನಂತರ ನರಸಿಂಹನು
ಸು. ೧೨ ವರ್ಷಗಳ ಕಾಲ ಆಳಿದನು.
೩ನೆ ರಾಚಮಲ್ಲ
೯೩೩-೩೫:- ಸೋದರ ೨ನೆ ಬೂತುಗನು ರಾಷ್ಟ್ರಕೂಟರ ನೆರವಿನಿಂದ ಅಧಿಕಾರಕ್ಕೆ ಬಂದನು.
೨ನೆ ಬೂತುಗ ೯೩೫-೬೧.
ಪ್ರಸಿದ್ಧ ರಾಜರಲ್ಲಿ ಒಬ್ಬನು. ರಾಷ್ಟ್ರಕೂಟರ ಆಪ್ತ. ಅವರ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದ್ದನು.
ಕೃಷ್ಣನ ಉತ್ತರದ ದಾಳಿಯ ಕಾಲದಲ್ಲಿ ದಂಗೆಯೆದ್ದ ಲಲ್ಲಯ್ಯನನ್ನು ಸೋಲಿಸಿ ಅವರ ಸಾರ್ವಭೌಮತ್ವ ರಕ್ಷಿಸಿದನು.
ಬೆಳುವಲ, ಕಿಸುನಾಡು, ಪುಲಿಗೆರೆಗಳ ಕೊಡುಗೆ. ಚೋಳರ ವಿರುದ್ಧದ ತಕ್ಕೊಳಂ ಯುದ್ಧದಲ್ಲಿ (೯೪೮-೪೯) ಪರಾಂತಕನ
ಮಗ ರಾಜಾದಿತ್ಯನನ್ನು ಕೊಂದನು. ಬನವಾಸಿ ೧೨,೦೦೦ ಪ್ರಾಂತ್ಯ ನೀಡಿದನು.
ಬಿರುದು
– ಮಹಾರಾಜಾದಿರಾಜ, ಗಂಗ ನಾರಾಯಣ, ಗಂಗಗಾಂಗೇಯ.
ಮರಳದೇವನ ಕೆಲಕಾಲದ
ಆಳ್ವಿಕೆಯ ನಂತರ ೨ನೆ ಮಾರಸಿಂಹನು ಅಧಿಕಾರಕ್ಕೆ ಬಂದನು.
೨ನೆ ಮಾರಸಿಂಹ
೯೬೩-೭೫:- ಕೊನೆಯ ಶ್ರೇಷ್ಠ ಅರಸು. ರಾಷ್ಟ್ರಕೂಟರೊಂದಿಗೆ ಉತ್ತಮ ಬಾಂಧವ್ಯ. ಉತ್ತರ ಭಾರತದಲ್ಲಿ ಅವರ
ಪರವಾಗಿ ದಿಗ್ವಿಜಯಗಳನ್ನು ಮೆರೆದನು. ಗುಜರಾತಿನ ಮೂಲರಾಜ ಮತ್ತು ಪರಮಾರರ ಸಿಯೂಕ ಹರ್ಷನನ್ನು ಸದೆ
ಬಡಿದಿದ್ದನು. ಗೂರ್ಜ ರಾಜಾಧಿರಾಜನೆಂಬ ಬಿರುದು. ನೊಳಂಬಾಂತಕ ಎಂಬ ಬಿರುದು; ಗೋಣೂರು ಕದನದಲ್ಲಿ ಅವರನ್ನು
ಸೋಲಿಸಿದ್ದಕ್ಕೆ. ಕೊಟ್ಟಿಗನ ಕಾಲದಲ್ಲಿ ಮಾನ್ಯಕೇಟದ ರಕ್ಷಣೆ – ಪರಮಾರರ ಸಿಯೂಕ ಹರ್ಷನ ವಿರುದ್ಧ.
ಕೊಟ್ಟಿಗನ ನಂತರ ೪ನೆ ಇಂದ್ರನನ್ನು ಬಂಕಾಪುರದಲ್ಲಿ ರಾಷ್ಟ್ರಕೂಟರ ಅರಸನೆಂದು ನೇಮಕ. ಆದರೂ ಅವರ ಪತನ
ತಡೆಯಲಾಗಲಿಲ್ಲ. ಕೊನೆಗೆ ಸಿಂಹಾಸನವನ್ನು ಮಗನಿಗೆ ಬಿಟ್ಟು ಸಲ್ಲೇಖನ ಕೈಗೊಂಡನು.
ಬಿರುದುಗಳು:
ಗಂಗವಜ್ರ, ಗಂಗ ಚೂಡಾಮಣಿ, ಗಂಗಸಿಂಹ.
೪ನೆ ರಾಚಮಲ್ಲ
೯೭೫-೯೯:- ಸಿಂಹಾಸನಕ್ಕೆ ಅಂತಃಕಲಹಗಳು ಮಾರಸಿಂಹನ ಸೋದರ ಗೋವಿಂದರಸನು ದಂಗೆ ಎದ್ದನು. ಸಾಮಂತ ಪಾಂಚಾಲದೇವನ
ದಂಗೆ ನಡೆಯಿತು. ೩ನೆ ತೈಲಪನು ಇವರ ಉತ್ತರದ ಪ್ರಧೇಶಗಳನ್ನು ಗೆದ್ದನು. ರಾಚಮಲ್ಲನು ದಕ್ಷಿಣದ ಉಳಿದ
ಭಾಗಗಳಿಗೆ ಸೀಮಿತನಾದನು.
ಇವನ ನಂತರ ರಕ್ಕಸಗಂಗನು
ಅಧಿಕಾರಕ್ಕೆ ಬಂದನು. ಚೋಳರ ದಾಳಿಗಳು ಗಂಗರ ಅಸ್ಥಿತ್ವಕ್ಕೆ ಪೆಟ್ಟು ಕೊಟ್ಟವು. ರಾಜೇಂದ್ರ ಚೋಳನು
೧೦೦೪ ರಲ್ಲಿ ತಲಕಾಡನ್ನು ಗೆದ್ದಾಗ ಇವರ ಆಳ್ವಿಕೆ ಅಂತ್ಯಗೊಂಡಿತು. ನಂತರ ಮುಂದೆ ಸಣ್ಣ ರಾಜ್ಯದ ಒಡೆಯರಾಗಿ
ಕಲ್ಯಾಣಿ ಚಾಳುಕ್ಯರು ಮತ್ತು ಹೊಯ್ಸಳರ ಕಾಲದಲ್ಲಿ ಆಳಿದರು.
ಮಂತ್ರಿ ಚಾವುಂಡರಾಯ
Comments
Post a Comment