ಪುರಾತತ್ವ ಆಧಾರಗಳು; ಉತ್ಖನನಗಳು ಮತ್ತು ವಿಧಗಳು. ೨ನೆ ಚತುರ್ಮಾಸಕ್ಕಾಗಿ; ಕರ್ನಾಟಕ ವಿ.ವಿ., ಧಾರವಾಡ ವ್ಯಾಪ್ತಿ.
೧. ಪುರಾತತ್ವ ಆಧಾರಗಳು ಅಥವಾ Archaeological Sources:- ಲಿಖಿತ
ರೂಪದಲ್ಲಿರದ ಅಂದರೆ, ಭೂಮಿಯಲ್ಲಿ ಹೂತುಹೋಗಿರುವ ಪ್ರಾಚೀನ ಅವಶೇಷಗಳು, ಪಳೆಯುಳಿಕೆಗಳು, ಆದಿಮಾನವನ
ಉಪಕರಣಗಳು, ಆಯುಧಗಳು, ಶಾಸನಗಳು, ನಾಣ್ಯಗಳು ಮತ್ತು ದೇವಾಲಯಗಳು, ಕೋಟೆಗಳ ಅವಶೇಷಗಳು, ಅರಮನೆಗಳು,
ಸಾಗರಗಳ ಅಡಿಯಲ್ಲಿ ಮುಳುಗಿರುವ ಪ್ರಾಚೀನ ಅವಶೇಷಗಳನ್ನು ಪುರಾತತ್ವ ಆಧಾರಗಳು ಎಂದು ಕರೆಯುವರು. ಇವುಗಳ
ವ್ಯವಸ್ಥಿತ ಅದ್ಯಯನವನ್ನು ಪುರಾತತ್ವಶಾಸ್ತ್ರ ಅಥವಾ Archaeology ಎಂದು ಕರೆಯುವರು. ಪುರಾತತ್ವ ಆಧಾರಗಳನ್ನು ಅಧ್ಯಯನದ ಅನುಕೂಲಕ್ಕಾಗಿ ಉಪವಿಭಾಗಗಳಾಗಿ ವಿಭಜಿಸಲಾಗಿದೆ. ಅವುಗಳೆಂದರೆ,
A. ಉತ್ಖನನಗಳು ಅಥವಾ Excavations:- ಭೂಮಿಯೊಳಗೆ ಹೂತು ಹೋಗಿರುವ ಪ್ರಾಚೀನ ಅವಶೇಷಗಳನ್ನು ವ್ಯವಸ್ಥಿತವಾಗಿ
ಅಗೆಯುವ, ದಾಖಲಿಸುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಉತ್ಖನನ
ಎನ್ನುವರು. ಇದರಲ್ಲಿ ಮತ್ತೆ ಮೂರು ವಿಧಗಳಿವೆ. ಅವುಗಳೆಂದರೆ:
ಅ. ಸಮತಲ ಉತ್ಖನನ – Harizantal Excavation: ಭೂಮಿಯನ್ನು ನಿರ್ದಿಷ್ಟ
ಆಳಕ್ಕೆ ಅಗೆದ ನಂತರ ನಿವೇಶನದ ವೈಶಾಲ್ಯತೆಯನ್ನು ಅರಿಯುವ ಸಲುವಾಗಿ ಉದ್ದ ಮತ್ತು ಅಗಲವಾಗಿ ಅಗೆಯುವರು.
ಇದರಿಂದ ಪ್ರಾಚೀನ ನಿವೇಶನದ ವಿಸ್ತಾರ ತಿಳಿಯಲು ಅನುಕೂಲವಾಗುತ್ತದೆ.
ಆ. ಲಂಬ ಉತ್ಖನನ – Vertical Excavations: ನಿವೇಶನವೊಂದನ್ನು ನಿರ್ದಿಷ್ಟ
ಆಳ, ಅಗಲ ಮತ್ತು ಉದ್ದಕ್ಕೆ ಅಗೆತ ಮಾಡಿದ ನಂತರ ಅದೇ ನಿವೇಶನವನ್ನು ಮತ್ತಷ್ಟು ಆಳಕ್ಕೆ ಭೂಮೇಲ್ಮೈಗೆ
ಲಂಬವಾಗಿ ಹೆಚ್ಚು ಆಳಕ್ಕೆ ಉತ್ಖನನ ಮಾಡುವುದೇ ಲಂಬ ಉತ್ಖನನ. ಇದರಿಂದ ಭೂಮಿಯಲ್ಲಿ ಹೂತುಹೋಗಿರುವ ವಿವಿಧ
ಕಾಲಘಟ್ಟಗಳ ಅವಶೇಷಗಳು ಮತ್ತು ಅವುಗಳ ಪ್ರಾಚೀನತೆಯನ್ನು ಅರಿಯಲು ಅನುಕೂಲವಾಗುತ್ತದೆ.
ಇ. ಸಾಗರ ಉತ್ಖನನ (ಸಾಗರ ಪುರಾತತ್ವ ಅಧ್ಯಯನ) - Marine Excavations:
ಸಮುದ್ರ ಮತ್ತು ಸಾಗರಗಳ ನೀರಿನಡಿಯಲ್ಲಿ ಮುಳುಗಿರುವ ಪ್ರಾಚೀನ ಬಂದರು ನಗರಗಳು ಮತ್ತು ಅವುಗಳ ಅವಶೇಷಗಳನ್ನು
ಪತ್ತೆ ಹಚ್ಚಿ ಬೆಳಕಿಗೆ ತರುವ ವಿಧಾನವೇ ಸಾಗರ ಉತ್ಖನನ ಅಥವಾ Marine Archaeology ಎಂದು ಕರೆಯುವರು.
ಪ್ರಸ್ತುತ ಈ ವಿಧಾನವು ಇನ್ನೂ ಶೈಶವಾವಸ್ಥೆಯಲ್ಲಿದ್ದು ಹೆಚ್ಚಿನ ಬೆಳವಣಿಗೆಗಳು ಆಗಬೇಕಾಗಿದೆ. ಪ್ರಸ್ತುತ
ಭಾರತದ ಗುಜರಾತ್ ಸಮುದ್ರ ತೀರದಲ್ಲಿ S.R. ರಾವ್ ಅವರು ಮುಳುಗಿ ಹೋಗಿರುವ ಪ್ರಾಚೀನ ದ್ವಾರಕೆ ಪಟ್ಟಣವನ್ನು
ಪತ್ತೆ ಹಚ್ಚಿರುವುದು ಇದಕ್ಕೊಂದು ಉತ್ತಮ ನಿದರ್ಶನ. ಅಲ್ಲದೇ ಬೆಟ್‌ದ್ವಾರಕಾ, ಪೂಂಪುಹಾರ್ (ತಮಿಳುನಾಡು)
ಮತ್ತು ಮಹಾಬಲಿಪುರಂಗಳಲ್ಲೂ ಸಹಾ ಸಾಗರ ಪುರಾತತ್ವ ಸಂಶೋದನೆಗಳು ನಡೆದಿವೆ.
ಭಾರತದಲ್ಲಿನ ಕೆಲವು ಪ್ರಮುಖ ಉತ್ಖನನಗಳು ಮತ್ತು ಅವುಗಳ ಸಂಶೋಧಕರ ವಿವರಗಳು
ಈ ಕೆಳಗಿನಂತಿವೆ:-
1. ಹರಪ್ಪಾ - ಡಾ. ದಯಾರಾಂ ಸಹಾನಿ - 1921
2. ಮೊಹೆಂಜೊದಾರೊ - R.D. ಬ್ಯಾನರ್ಜಿ - 1922
3. ತಕ್ಷಶಿಲೆ, ನಳಂದಾ ಮತ್ತು ಪಾಟಲೀಪುತ್ರಗಳು - ಡಾ. ಸ್ಪೂನರ್
- 1934
4. ನರ್ಮದಾ ನದಿ ತೀರ - H.D. ಸಂಕಾಲಿಯ
5. ದಕ್ಷಿಣ ಭಾರತದ ಪ್ರದೇಶಗಳು - ರಾಬರ್ಟ್ ಬ್ರೂಸ್ ಫೂಟ್
Comments
Post a Comment