ಭಾರತದ ರಾಷ್ಟ್ರೀಯತೆಯ ಉಗಮದ ಕಾರಣಗಳು, ಮಂದಗಾಮಿಗಳ ಯುಗ, ಹೋರಾಟದ ಸ್ವರೂಪ ಮತ್ತು ಅವರ ಸಾಧನೆಗಳು
ಭಾರತದ ರಾಷ್ಟ್ರೀಯ ಚಳವಳಿಯ ಉಗಮ
ರಾಷ್ಟ್ರೀಯತೆಯ ಉಗಮದ
ಕಾರಣಗಳು
- ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆ
- ಭಾರತದ ರಾಜಕೀಯ ಐಕ್ಯತೆ ಮತ್ತು ಏಕರೂಪದ ಆಡಳಿತ
- ಸಾರಿಗೆ ಸಂಪರ್ಕಗಳ ಅಭಿವೃದ್ಧಿ
- ಐತಿಹಾಸಿಕ ಪುನರುಜ್ಜೀವನ
- ಆರ್ಥಿಕ ಕಾರಣಗಳು
- ಜನಾಂಗ ತಾರತಮ್ಯ ನೀತಿ
- ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳ ಪ್ರಭಾವ
- ಆಂಗ್ಲ ಶಿಕ್ಷಣದ ಪ್ರಭಾವ ಮತ್ತು ಪಾಶ್ಚಾತ್ಯೀಕರಣ
- ಸಮಕಾಲೀನ ಜಾಗತಿಕ ಘಟನೆಗಳು
- ಮಧ್ಯಮವರ್ಗದ ಉದಯ
- ವೃತ್ತಪತ್ರಿಕೆಗಳ ಪ್ರಭಾವ
ಆರಂಭದ ರಾಷ್ಟ್ರೀಯವಾದಿಗಳು ಸೌಮ್ಯ ಸ್ವರೂಪದ ಹೋರಾಟದ ಮಾರ್ಗಗಳನ್ನು ಅನುಸರಿಸಿದ ಕಾರಣ ಅವರಿಗೆ ಮಂದಗಾಮಿಗಳು ಎಂಬ ಹೆಸರು ಬಂದಿದೆ. ಅವರು ವಿದೇಶಗಳಲ್ಲಿ
ಶಿಕ್ಷಣ ಪಡೆದವರಾಗಿದ್ದು, ಬ್ರಿಟೀಷ್
ಆಡಳಿತದಲ್ಲಿ ನಂಬಿಕೆ ಇಟ್ಟಿದ್ದರು. ಆಂಗ್ಲರು ಭಾರತದಲ್ಲಿರುವುದು ಎರಡೂ ದೇಶಗಳಿಗೆ ಒಳಿತೆಂಬುದು ಅವರ
ಭಾವನೆಯಾಗಿತ್ತು. ಅವರು ತೀವ್ರ ಸ್ವರೂಪದ ಬೇಡಿಕೆಗಳನ್ನು ಹೊಂದಿರದೇ ಆಂಗ್ಲರ ಆಡಳಿತದಲ್ಲಿ ಕೆಲವು
ಬದಲಾವಣೆಗಳನ್ನು ಮಾತ್ರ ಬಯಸಿದರು. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗಗಳು ಸಂವಿಧಾನಿಕವಾಗಿದ್ದವು.
Methodology:-
The Early Nationalists believed in patience and conciliation
rather than confrontation, adopting orderly progress and constitutional means
to realise their aims. To educate the people, to arouse political
consciousness, and to create powerful public opinion in favour of their demands
they organised annual sessions. Processions and meetings were held, speeches
delivered and discussions held on various economic, social and political
questions. Following these discussions, resolutions were adopted. They also
drafted petitions and memorandums before submitting them to the government. The
Early Nationalists wanted to convey their feelings to the government, so as to
gradually bring the authorities around to their viewpoint. To influence the
British government and to enlighten the British public and its political
leaders, the Early Nationalists sent deputations of leading Indian leaders to
England. In 1889, a British Committee of the Indian National Congress was
founded and followed by a journal called India started by the Committee in
1890.[10]
ಮನವಿಗಳನ್ನು ಸಲ್ಲಿಸುವುದು, ಭಾಷಣಗಳನ್ನು ಮಾಡುವುದು, ವಾರ್ಷಿಕ ಸಭೆಗಳನ್ನು
ನಡೆಸುವುದು, ಬೇಡಿಕೆಗಳ ಪತ್ರಗಳನ್ನು ಅರ್ಪಿಸುವುದು ಇವೇ ಮಂದಗಾಮಿಗಳ ಮಾರ್ಗಗಳಾಗಿದ್ದವು. ಅವರು ಅದಕ್ಕಾಗಿ
ಲಂಡನ್ನಿನಲ್ಲಿ ಇಂಡಿಯಾ ಎಂಬ ಪತ್ರಿಕೆಯನ್ನೂ ಆರಂಭಿಸಿದರು. ಅಲ್ಲಿನ ಕೆಲವು ಬ್ರಿಟೀಷ್ ಪ್ರಜೆಗಳಿಂದ
ಕೂಡಿದ ಸಮಿತಿಯೊಂದನ್ನು ರಚಿಸಿಕೊಂಡರು ಮತ್ತು ಲಂಡನ್ನಿಗೆ ಭಾರತದ ಪ್ರತಿನಿಧಿಗಳನ್ನೂ ಸಹಾ ಕಳುಹಿಸಿ
ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ನಡೆಸಿದರು.
Wishes to complete:-
The Early Nationalists wanted certain political and economic
reforms with the view to unify the people of India.
Constitutional reforms:-
Believing that India should eventually move towards
democratic self-government, the Early Nationalists wanted a larger share in the
governing of India. They did not seek immediate attainment of their goal as
they feared that the government would suppress their activities. Instead they
aimed at winning freedom through a gradual process.[15]
ಭಾರತವು ಕ್ರಮೇಣ ಸ್ವಾತಂತ್ರ್ಯದ ಕಡೆಗೆ
ಸಾಗಬೇಕೆಂಬುದು ಮಂದಗಾಮಿಗಳ ನಂಬಿಕೆಯಾಗಿತ್ತು. ಅದಕ್ಕಾಗಿ ಅವರು ಸ್ವರಾಜ್ಯದ ಬೇಡಿಕೆಯ ಬದಲು ಸರ್ಕಾರದ
ಚಟುವಟಿಕೆಗಳಲ್ಲಿ ಭಾರತೀಯರಿಗೆ ಅವಕಾಶ ಕಲ್ಪಿಸಲು ಮತ್ತು ಜಾರಿಯಲ್ಲಿದ್ದ ಆಡಳಿತಾತ್ಮಕ ಅಂಶಗಳಲ್ಲಿ
ಕೆಲವು ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿದರು.
Their constitutional demands were:
1. Abolition of the India Council Act.
ಭಾರತದ ಮಂಡಳಿ ಕಾಯ್ದೆಯನ್ನು ರದ್ದುಪಡಿಸುವುದು.
2. Expansion of the legislative council and Legislative
Assemblies, both Central and Provincial.
ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗಗಳ
ವಿಸ್ತರಣೆ.
3. Increase in the membership of Indians by including some
members elected by local bodies like chambers of commerce, universities, etc.
in these councils and by giving greater powers to them. They demanded Indian
control over the public purse and raised the slogan "No taxation without
representation".
ಸ್ಥಳೀಯ ಸಂಸ್ಥೆಗಳಲ್ಲಿ ಭಾರತೀಯರ ಪ್ರಾತಿನಿಧ್ಯವನ್ನು
ಚುನಾವಣೆಗಳ ಮೂಲಕ ಹೆಚ್ಚಿಸುವುದು ಮತ್ತು ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಡುವುದು. ಅಲ್ಲದೇ ಭಾರತೀಯ
ಖಜಾನೆಯ ಖರ್ಚು-ವೆಚ್ಚಗಳ ಮೇಲೆ ಭಾರತೀಯರ ನಿಯಂತ್ರಣ ಏರ್ಪಡಿಸುವುದು. ಅದಕ್ಕಾಗಿ “ಪ್ರಾತಿನಿಧ್ಯವಿಲ್ಲದೇ
ತೆರಿಗೆ ಇಲ್ಲ” ಎಂಬ ಘೋಷಣೆಯನ್ನು ಜನಪ್ರಿಯಗೊಳಿಸಿದರು.
4. By the beginning of the 20th century, they demanded for
Swaraj (self-rule) within the British Empire similar to the self-governing
colonies in Canada and Australia.
೨೦ನೆ ಶತಮಾನದ ಆರಂಭದ ವೇಳೆಗೆ ಕೆನಡಾ
ಮತ್ತು ಆಸ್ಟ್ರೇಲಿಯಾಗಳಲ್ಲಿರುವಂತೆ ಸ್ವಯಂ ಆಡಳಿತದ ಬೇಡಿಕೆಯನ್ನು ಮುಂದಿಟ್ಟರು.
5. Adequate representation of Indians in the executive
council of the Viceroy and those of the governors.[11]
ವೈಸರಾಯ್ ಮತ್ತು ಪ್ರಾಂತೀಯ ಗವರ್ನರ್
ಮಂಡಳಿಗಳಲ್ಲಿನ ಸದಸ್ಯರಲ್ಲಿ ಭಾರತೀಯರನ್ನು ಸೇರ್ಪಡೆಗೊಳಿಸುವುದು
6. The members of the legislative councils to be directly
elected by the people of India.
ಶಾಸಕಾಂಗಗಳ ಸದಸ್ಯರು ನೇರವಾಗಿ ಭಾರತೀಯರಿಂದಲೇ
ಚುನಾಯಿಸಲ್ಪಡುವುದು.
7. A complete separation of the executive and judicial
branches of administration.
ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರಗಳನ್ನು
ಪ್ರತ್ಯೇಕಗೊಳಿಸುವುದು.
Administrative reforms:-
The Moderates made the following demands in the
administrative sphere:
1. Demand for simultaneous Indian Civil Service examinations
in England and India.
ಭಾರತ ಮತ್ತು ಲಂಡನ್ನಿನಲ್ಲಿ ಏಕಕಾಲಕ್ಕೆ
ಭಾರತೀಯ ನಾಗರೀಕ ಸೇವೆಗಳ ಪರೀಕ್ಷೆಗಳನ್ನು ನಡೆಸುವುದು.
2. Increase in the powers of the municipal bodies and
reduction of official control over them.
ಸ್ಥಳೀಯ ಆಡಳಿತ ಘಟಕಗಳ ಅಧಿಕಾರವನ್ನು
ಹೆಚ್ಚಿಸುವುದು ಮತ್ತು ಅವುಗಳ ಮೇಲೆ ಅಧಿಕಾರಿಗಳ ನಿಯಂತ್ರಣವನ್ನು ಕಡಿಮೆಮಾಡುವುದು.
3. Repeal of the Arms Act and License Act.
ಶಸ್ತ್ರಾಸ್ತ್ರ ಮತ್ತು ಪರವಾನಗಿಗಳ ಕಾಯ್ದೆಗಳನ್ನು
ರದ್ದುಗೊಳಿಸುವುದು.
4. Wider employment of Indians in the higher grades of
administrative services.
ಆಡಳಿತದ ಉನ್ನತ ಹುದ್ದೆಗಳಿಗೆ ಅಧಿಕ ಭಾರತೀಯರ
ನೇಮಕ.
5. Spread of primary education among the masses.
ಪ್ರಾಥಮಿಕ ಶಿಕ್ಷಣದ ಪ್ರಸಾರ.
6. Improvement of the police system to make it honest,
efficient and popular.[11]
ಪೋಲೀಸ್ ಆಡಳಿತದಲ್ಲಿ ಸುಧಾರಣೆ ಮಾಡುವುದು
ಮತ್ತು ಅದನ್ನು ಹೆಚ್ಚು ಜನಪರಗೊಳಿಸುವುದು.
Defence of civil rights:-
The Early Nationalists defended civil rights whenever the
British government tried to curtail them. Their struggle for freedom became an
integral part of the national movement from the very beginning. In 1897, Tilak
and many other leaders were arrested and tried for making provocative
speeches.[8][11] The Early Nationalists demanded the Abolition of the
Preventive Detention Act and restoration of individual liberties and right to assemble
and to form associations. They also wanted the Removal of the restrictions
imposed by the British Government on the freedom of speech, and the freedom of
the press.[8]
ನಾಗರೀಕ ಹಕ್ಕುಗಳ ರಕ್ಷಣೆಗೆ ಆದ್ಯತೆ
ನೀಡಿದರು. ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಗಳಿಗಾಗಿ ಹಕ್ಕೊತ್ತಾಯ ಮಂಡಿಸಿದರು.
೧೮೯೭ ರಲ್ಲಿ ತಿಲಕರು ಮತ್ತಿತರರನ್ನು ಸರ್ಕಾರದ ವಿರುದ್ಧ ಭಾಷಣ ಮಾಡಿದ ಕಾರಣ ರಾಜದ್ರೋಹದ ಆಪಾದನೆಯ
ಮೇಲೆ ಬಂಧನಕ್ಕೊಳಪಡಿಸಿದಾಗ ಮುಂಜಾಗ್ರತಾ ಬಂಧನಗಳ ವಿರುದ್ಧವೂ ಅವರು ಧ್ವನಿ ಎತ್ತಿದರು.
Achievements:-
In spite of their role as the most progressive force of the
time, the Early Nationalists received widespread criticism over their lack of
success. They were treated with contempt by their British rulers and their
demands were not fulfilled.[12]
ಆರಂಭದ ರಾಷ್ಟ್ರೀಯವಾದಿಗಳು ತಮ್ಮ ಹೋರಾಟದಲ್ಲಿ
ಹೆಚ್ಚು ಯಶಸ್ಸನ್ನು ಗಳಿಸಲಿಲ್ಲದ ಕಾರಣ ಅವರು ಟೀಕೆಗೆ ಗುರಿಯಾದರು. ಅಲ್ಲದೇ ಬ್ರಿಟೀಷರೂ ಸಹಾ ಅವರ
ಬೇಡಿಕೆಗಳಿಗೆ ಹೆಚ್ಚಿನ ಮನ್ನಣೆ ನೀಡಲಿಲ್ಲ. ಆದರೆ ಆ ಕಾಲಕ್ಕೆ ಹೋರಾಟವನ್ನು ಸಂಘಟಿಸಿದವರಲ್ಲಿ ಅವರೇ
ಮೊದಲಿಗರು ಎನ್ನುವುದು ಗಮನಾರ್ಹ.
In spite of such criticism, the Early Nationalists did
achieve some of their goals.
ಇಂತಹ ಟೀಕೆಗಳ ನಡುವೆಯೂ ಮಂದಗಾಮಿಗಳು
ತಮ್ಮ ಕೆಲವು ಗುರಿಗಳನ್ನು ಸಾದಿಸುವಲ್ಲಿ ಯಶಸ್ವೀಯಾದರು
They created a national awakening among the people that made
Indians conscious of the bonds of common political, economic, and cultural
interests that united them.
ಅವರು ಭಾರತೀಯರಲ್ಲಿ ರಾಜಕೀಯ, ಆರ್ಥಿಕ
ಮತ್ತು ಸಾಂಸ್ಕೃತಿಕ ಒಗ್ಗಟ್ಟನ್ನು ಮೂಡಿಸುವಲ್ಲಿ ಯಶಸ್ವಿಯಾದರು ಮತ್ತು ಆ ಮೂಲಕ ರಾಷ್ಟ್ರೀಯ ಜಾಗೃತಿಯನ್ನು
ಮೂಡಿಸಿದರು.
They also trained people in politics by popularising the
ideas of democracy, civil liberties, secularism and nationalism .
ಅಲ್ಲದೇ ಅವರು ಜನತೆಗೆ ಪ್ರಜಾಪ್ರಭುತ್ವ,
ನಾಗರೀಕ ಹಕ್ಕುಗಳು, ರಾಷ್ಟ್ರೀಯತೆ ಮತ್ತು ಜಾತ್ಯಾತೀತತೆಯ ಕಲ್ಪನೆ ಮೂಡಿಸಿ ಆ ವಿಷಯಗಳಲ್ಲಿ ಅವರಿಗೆ
ಅಗತ್ಯ ತರಬೇತಿ ನೀಡಿದರು.
The Early Nationalists did pioneering work by exposing the
true nature of British rule in India. They made the people realise the economic
content and character of British imperialism. In doing so, they weakened the
foundations of British rule in India.
ಮಂದಗಾಮಿಗಳು ಬ್ರಿಟೀಷರ ಆಡಳಿತದ ನಿಜಸ್ವರೂಪದ
ಪರಿಚಯವನ್ನು ಭಾರತೀಯರಿಗೆ ಮಾಡಿಸಿದರು. ಅವರ ಆರ್ಥಿಕ ಶೋಷಣೆಯ ಸ್ವರೂಪವನ್ನೂ ಸಹ ಭಾರತೀಯರಿಗೆ ಪರಿಚಯಿಸಿದರು.
ಆ ಮೂಲಕವಾಗಿ ಬ್ರಿಟೀಷರ ಆಡಳಿತದ ಬುನಾದಿಯನ್ನು ಅವರು ಸ್ವಲ್ಪವಾದರೂ ಅಲುಗಿಸಿದರು.
Their political and economic programmes established the idea
that India must be ruled in the interest of the Indians.
ಅವರ ರಾಜಕೀಯ ಮತ್ತು ಆರ್ಥಿಕ ಜಾಗೃತಿಗಳು
ಭಾರತವು ಭಾರತೀಯರ ಒಳಿತಿಗಾಗಿ ಆಳಲ್ಪಡಬೇಕು ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿದವು.
The efforts of the Early Nationalists also led to the
implementation of various social reforms such as the appointment of a Public
Service Commission. A resolution of the House of Commons (1893) allowing for
simultaneous examination for the Indian Civil Service in London and India.
ಅವರ ನಿರಂತರ ಪ್ರಯತ್ನಗಳ ಫಲವಾಗಿ ನಾಗರೀಕ
ಸೇವಾ ಪರೀಕ್ಷೆಗಳು ಭಾರತ ಮತ್ತು ಲಂಡನ್ನಿನಲ್ಲಿ ಏಕಕಾಲಕ್ಕೆ ನಡೆಯುವಂತೆ ಬ್ರಿಟನ್ ಸಂಸತ್ತು ೧೮೯೩ರಲ್ಲಿ
ನಿರ್ಣಯವೊಂದನ್ನು ಜಾರಿಗೊಳಿಸಿತು.
Appointment of the Welby Commission on Indian Expenditure
(1895). They also passed The Indian Councils Act of 1892.[13] These
achievements served as the basis for nationalist movements in later years by
extremist leaders.[14]
ಭಾರತದ ಆಡಳಿತ ವೆಚ್ಚಗಳ ಕಡಿತಕ್ಕಾಗಿ
ವೆಲ್ಬಿ ಕಮಿಷನ್ ರಚನೆಗೊಂಡಿತು ಮತ್ತು ೧೮೯೨ರ ಭಾರತದ ಮಂಡಳಿ ಕಾಯ್ದೆಯು ಜಾರಿಗೊಂಡಿತು.
Criticism:-
The methods used by the Early Nationalists of passing
resolutions and sending petitions were seen as inadequate by critics who argued
that they depended on the generosity of the British instead of relying on their
own strength and challenging the imperialist might. They failed to realise that
British and Indian interests clashed with each other and that Britain was using
India's resources to increase its wealth.[6][8] The Early Nationalists failed
to draw the masses into the mainstream of the national movement such that their
area of influence remained limited to urban educated Indians. In particular,
their leadership comprised only members of professional groups such as
lawyers,[16] doctors, journalists and teachers.
ಮಂದಗಾಮಿಗಳು ಅನುಸರಿಸಿದ ನಿರ್ಣಯ ಕೈಗೊಳ್ಳುವ
ಮತ್ತು ಮನವಿಗಳನ್ನು ಸಲ್ಲಿಸುವ ಕ್ರಮಗಳು ದಬ್ಬಾಳಿಕೆಯ ಆಂಗ್ಲ ಸರ್ಕಾರದ ವಿರುದ್ಧ ಹೋರಾಟ ನಡೆಸಲು
ಸೂಕ್ತ ಕ್ರಮಗಳಲ್ಲ ಎಂಬುದು ಅವರ ವಿರುದ್ಧದ ಪ್ರಮುಖ ಟೀಕೆಯಾಗಿತ್ತು. ಅಲ್ಲದೇ ಅವರು ಬ್ರಿಟೀಷರ ಕೃಪೆಗೊಳಗಾಗಿ
ತಮ್ಮ ಹೋರಾಟವನ್ನು ನಡೆಸಿದರು ಎನ್ನುವ ಆರೋಪವೂ ಇದೆ. ಭಾರತ ಮತ್ತು ಬ್ರಿಟನ್ನಿನ ಆಸಕ್ತಿಗಳು ಬೇರೆ-ಬೇರೆಯಾಗಿದ್ದು,
ಬ್ರಿಟೀಷರು ಭಾರತದ ಸಂಪತ್ತನ್ನು ತಮ್ಮ ಒಳಿತಿಗಾಗಿ ಬಳಸುತ್ತಿದ್ದಾರೆ ಎಂಬ ವಿಷಯವನ್ನು ಅರಿಯುವಲ್ಲಿ
ಮಂದಗಾಮಿಗಳು ವಿಫಲರಾಗಿದ್ದಾರೆ ಎನ್ನಲಾಗಿದೆ. ಮಂದಗಾಮಿಗಳು ಬಹುಸಂಖ್ಯಾತ ಭಾರತೀಯರನ್ನು ತಮ್ಮ ಹೋರಾಟಗಳಿಗೆ
ಒಗ್ಗೂಡಿಸುವಲ್ಲಿ ವಿಫಲರಾದರು ಮತ್ತು ಕೇವಲ ವಿದ್ಯಾವಂತ ಮತ್ತು ವೃತ್ತಿನಿರತ ವರ್ಗದವರನ್ನು ಮಾತ್ರವೇ
ತಮ್ಮತ್ತ ಸೆಳೆಯುವಲ್ಲಿ ಅವರು ಯಶಸ್ವಿಯಾದರು.
British Government's attitude:-
In the beginning, the British Government looked upon the
actions of the Early Nationalists favourably, and expressed no animosity
towards them. Furthermore, a few government officials attended the first
session of the Early Nationalists and took part in its deliberations. The
Nationalists were invited to a garden party held by the Viceroy, Lord Dufferin
in Calcutta in 1886 and another hosted by the Governor of Chennai in 1887.[17]
Official attitudes soon changed; Lord Dufferin tried to divert the National
Movement by suggesting to Hume that the Early Nationalists should devote
themselves to social rather than political affairs. In 1887, Dufferin attacked
the Early Nationalists in a speech and ridiculed it as representing only a
microscopic minority of the people. British officials criticised the
Nationalists and branded its leader as "disloyal babus" and
"violent villains".[17]
ಆರಂಭದಲ್ಲಿ ಕಾಂಗ್ರೆಸ್ಸಿನ ಅಂದರೆ ಮಂದಗಾಮಿಗಳ
ಚಟುವಟಿಕೆಗಳನ್ನು ಆಂಗ್ಲರು ಪ್ರೋತ್ಸಾಹಿಸಿದರು ಮತ್ತು ಅವರ ವಿರುದ್ಧ ಯಾವುದೇ ಪ್ರತಿರೋಧದ ಕ್ರಮಗಳನ್ನು
ಅನುಸರಿಸಲಿಲ್ಲ. ೧೮೮೬ ರಲ್ಲಿ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಡಫರಿನ್ನನು ಮಂದಗಾಮಿಗಳ ಮುಖಂಡರನ್ನು
ಕಲ್ಕತ್ತದಲ್ಲಿನ ಸಂತೋಷ ಕೂಟವೊಂದಕ್ಕೆ ಆಹ್ವಾನ ನೀಡಿದ್ದನು. ಅಂತೆಯೇ ಮದ್ರಾಸ್ ಪ್ರಾಂತ್ಯದ ಗವರ್ನರ್
ಸಹ ಮಾಡಿದ್ದನು. ಆದರೆ ೧೮೮೭ರ ವೇಳೆಗೆ ವೈಸರಾಯ್ ಡಫರಿನ್ ತನ್ನ ನೀತಿಯನ್ನು ಬದಲಿಸಿ ರಾಷ್ಟ್ರೀಯವಾದಿಗಳು
ಕೇವಲ ಸಾಮಾಜಿಕ ಸುಧಾರಣೆಯ ಅಂಶಗಳಿಗೆ ಮಾತ್ರ ಗಮನಕೊಡಲಿ, ರಾಜಕೀಯ ವಿಷಯಗಳಿಗಲ್ಲ ಎಂದು ಹ್ಯೂಂನಿಗೆ
ತಿಳಿಸಿದ್ದನು. ಅಲ್ಲದೇ ತನ್ನ ಭಾಷಣವೊಂದರಲ್ಲಿ ಮಂದಗಾಮಿಗಳನ್ನು ಬಹುಸಂಖ್ಯಾತರ ಸಣ್ಣಸಂಖ್ಯೆಯ ಪ್ರತಿನಿಧಿಗಳು
ಎಂದು ಟೀಕಿಸಿದ್ದನು. ೧೮೯೦ ರಲ್ಲಿ ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ಸಿನ ಚಟುವಟಿಕೆಗಳಲ್ಲಿ ಭಾಗವಹಿಸದಿರುವಂತೆ
ನಿರ್ಬಂಧಿಸಲಾಯಿತು.
In 1890, Government employees were forbidden to participate
in deliberations with the Early Nationalists or attend their meetings.
Realising that the growing unity of the Indians posed a major threat to their
rule, the British pushed their policy of divide and rule further. They
encouraged Sayyid Ahmed Khan, Raja Shiva Prasad of Benaras (now Varanasi), and
other pro-British individuals to start an anti-Early Nationalist movement. They
sowed seeds of communalism between the Hindus and the Muslims on the one hand
and between the Indian masses and their leaders on the other. They followed a
policy of granting minor concessions to put down the growth of nationalism.
However, their policy of repression and hostility only served to make the Early
Nationalists more powerful. And rather than emerging as a tool in the hands of
the authorities, the Early Nationalists gradually became the focus of Indian
nationalism.[6]
ಮಂದಗಾಮಿಗಳ ಹೋರಾಟವು ಬಲಗೊಳ್ಳುವುದನ್ನು
ಗಮನಿಸಿದ ಆಂಗ್ಲರು ಅವರ ಹೋರಾಟಗಳು ತಮ್ಮ ಅಧಿಕಾರಕ್ಕೆ ಕುಂದುಂಟುಮಾಡಬಹುದು ಎಂಬ ಕಾರಣಕ್ಕೆ ತಮ್ಮ
ಒಡೆದು ಆಳುವ ನೀತಿಯನ್ನು ಅನುಸರಿಸತೊಡಗಿದರು. ಸರ್ ಸೈಯದ್ ಅಹಮದ್‌ರ ಮೂಲಕ ಮುಸ್ಲೀಂರನ್ನು ಕಾಂಗ್ರೆಸ್ಸಿನಿಂದ
ದೂರವಿಡುವ ಪ್ರಯತ್ನ ನಡೆಸಿದರು. ಅಲ್ಲದೇ ಹಿಂದೂ-ಮುಸ್ಲೀಮರ ನಡುವೆ ಕೋಮುವಾದವನ್ನೂ ಬೆಳೆಸಲು ಪ್ರಯತ್ನಿಸಿದರು.
ಜೊತೆಗೆ ಬನಾರಸ್ಸಿನ ರಾಜಾ ಶಿವಪ್ರಸಾದರಂತಹ ಬ್ರಿಟೀಷ್‌ಪರ ವ್ಯಕ್ತಿಗಳ ಮೂಲಕ ರಾಷ್ಟ್ರೀಯವಾದಿ ನಾಯಕರು
ಮತ್ತು ಜನಸಾಮಾನ್ಯರ ನಡುವೆ ಅಂತರ ಉಂಟುಮಾಡಲು ಪ್ರಯತ್ನಿಸಿದರು. ಆದರೆ ಬ್ರಿಟೀಷರ ಇಂತಹ ಕ್ರಮಗಳು
ಮಂದಗಾಮಿಗಳನ್ನು ಮತ್ತಷ್ಟು ಹೋರಾಟಪರರನ್ನಾಗಿ ಮಾಡಿದವೇ ಹೊರತು ಅವರು ತಮ್ಮ ಧ್ಯೇಯ ಮತ್ತು ಉದ್ಧೇಶಗಳಿಂದ
ಹಿಂದೆ ಸರಿಯಲಿಲ್ಲ.
Some of the younger elements within the Indian National
Congress were dissatisfied with the achievements of the Early Nationalists and
vociferous critics of the methods of peaceful constitutional agitation that
they promulgated.[9] Young members advocated the adoption of European revolutionary
methods to counter British imperialism while mainstream Early Nationalists
remained loyal to the crown, with their desire to regain self-government
lacking conviction. The Early Nationalists failed to attain their objectives,
giving rise to another group of leaders known as Assertive or Extremist
Nationalists.[6][8] The most prominent leaders of the Assertive Nationalists
were Bal Gangadhar Tilak, Lala Lajpat Rai and Bipin Chandra Pal, who are known
collectively as the Lal-Bal-Pal trio.[18]
ಮಂದಗಾಮಿಗಳ ಸಂವಿಧಾನಾತ್ಮಕ ಹೋರಾಟದ ಕ್ರಮಗಳು
ಕಾಂಗ್ರೆಸ್ಸಿನ ಕೆಲವು ಯುವ ಸದಸ್ಯರಿಗೆ ಹಿಡಿಸದ ಕಾರಣ ಅವರು ಯೂರೋಪಿನ ಮಾದರಿಯಲ್ಲಿ ಆಂಗ್ಲರ ವಿರುದ್ಧ
ಹೋರಾಟದ ಕ್ರಮಗಳನ್ನು ರೂಪಿಸಲು ಒತ್ತಾಯ ಮಾಡತೊಡಗಿದರು. ಅವರೇ ತೀವ್ರಗಾಮಿಗಳು. ಮಂದಗಾಮಿಗಳ ಸೌಮ್ಯ
ಸ್ವರೂಪದ ಹೋರಾಟವು ತೀವ್ರಾಗಾಮಿಗಳ ಏಳಿಗೆಗೆ ಕಾರಣವಾಯಿತು. ಲಾಲ್, ಬಾಲ್ ಪಾಲ್ ರು ತೀವ್ರಗಾಮಿಗಳ
ಪ್ರಮುಖ ನಾಯಕರಾದರು.
Prominent leaders who fought for independence:-
Surendranath Banerjee
To create an all-India political organisation, Banerjee
convened the Indian National Conference in 1883 at Kolkata. Banerjee merged the
Indian National Conference with the Indian National Congress in 1886 as both
organisations had similar objectives. He presided over two sessions of the
Congress in 1895 and 1902.[6]
Gopal Krishna Gokhale:-
Gopal Krishna Gokhale, known as "The Political Guru of
Gandhi" as he was the one who guided Mahatma Gandhi to travel around India
in order to fight against the British, was one of the social and political
leaders during the Indian Independence Movement against the British Empire in
India. Gokhale was a senior leader of the Indian National Congress and founder
of the Servants of India Society. Through the Society as well as the Congress
and other legislative bodies he served in, Gokhale campaigned for Indian
self-rule and also social reform. He was the leader of the moderate faction of
the Congress party that advocated reforms by working with existing government
institutions.
A. O. Hume:-
While the Early Nationalists moved towards the formation of
an all-India political body, Englishman A. O. Hume, a retiree from the Indian
Civil Service, saw the need for an organisation that would draw the
government's attention to current administrative drawbacks and suggest the
means to rectify them. In 1884 Hume, in consultation with the Indian leaders,
laid the foundations of Indian National Union but it was postponed due to an
outbreak of plague in Pune. Later on, at the suggestion of Dadabhai Naoroji,
the name was changed to "Indian National Congress" and the foundation
of the organisation laid on 28 December 1885.[17]
Dadabhai Naoroji:-
Dadabhai Naoroji, popularly known as the "Grand Old Man
of India",[19] took an active part in the foundation of the Indian
National Congress and was elected its President thrice, in 1886, 1893 and after
the Moderate phase in 1906.[6][20] He spent a major part of his life in
Britain.He founded the London Indian Society which he used to create the
awareness among the British people about the plight of the Indians.His book
"Poverty and UnBritish Rule in India" pointed out how India was
exploited and economically drained by the British Government.
Congress Sessions:- held
during age of moderates:-
Session – Place - Name of the president
1885 1st Mumbai W. C. Banerjee[21]
1886 2nd Kolkata Dadabhai Naoroji[19]
1887 3rd Chennai Justice Badruddin Tyabji[22]
1888 4th Allahabad George Yule[22]
1889 5th Mumbai Sir William Wedderburn[23]
1890 6th Kolkata Mr. Pherozeshah Mehta[24]
1891 7th Nagpur P Ananda Charlu[25]
1892 8th Allahabad W. C. Banerjee
1893 9th Lahore Mr. Dadabhai Naoroji
1894 10th Chennai Alfred Webb[26]
1895 11th Poona Surendranath Banerjee[27]
1896 12th Kolkata Rahmatullah Sayani[28]
1897 13th Amraoti M. C. Shankaran Nair[29]
1898 14th Chennai A. M. Bose[30]
1899 15th Lucknow Romesh Chunder Dutt
1900 16th Lahore N. G. Chandarverkar[31]
1901 17th Kolkata D. E. Wacha[citation needed]
1902 18th Ahmedabad Surendranath Banerjee
1903 19th Chennai Lalmohan Ghosh
1904 20th Mumbai Sir Henry Cotton
1905 21st Banaras Gopal Krishna Gokhale[15]
1906 22nd Kolkata Dadabhai Naoroji
ಸೂಚನೆ: ಮೇಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳನ್ನು ಅವಲೋಕಿಸಿ ಸಂಗ್ರಹಿಸಲಾಗಿದೆ ಮತ್ತು ಅದರ ಕನ್ನಡ ಅನುವಾದವನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
Comments
Post a Comment