ಮೂಲಾಧಾರಗಳ ಸಮೀಕ್ಷೆ - SURVEY OF SOURCES: ಮಧ್ಯಕಾಲೀನ ಭಾರತದ ಇತಿಹಾಸ ಬರವಣಿಗೆಯ ಲಕ್ಷಣಗಳು, ಪ್ರಮುಖ ಕೃತಿಗಳು. ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ.
ಇತಿಹಾಸ ರಚನೆಗೆ ಮೂಲಾಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್ ರಚನೆಗೆ ಬಳಸುವ ಆಧಾರಗಳು ಐತಿಹಾಸಿಕ ಮೌಲ್ಯವನ್ನು ಹೊಂದಿರಬೇಕು.
ಮೂಲಾಧಾರಗಳಲ್ಲಿ ಎರಡು ವಿಧಗಳು:-
1.
ಸಾಹಿತ್ಯದ
ಆಧಾರಗಳು (Literary Sources) ಅಥವಾ ಲಿಖಿತ ಆಧಾರಗಳು.
2.
ಪುರಾತತ್ವ
(ಪ್ರಾಚ್ಯ ಅಥವಾ ಪ್ರಾಕ್ತನಾ) ಆಧಾರಗಳು (Archaeological Sources). ಇವುಗಳಿಗೆ ಅಲಿಖಿತ ಆಧಾರಗಳು
ಎಂದೂ ಹೆಸರು.
ಸಾಹಿತ್ಯಾಧಾರಗಳಲ್ಲಿ: ದೇಶೀಯ (Indigenous
Sources) ಮತ್ತು ವಿದೇಶೀಯ ಬರವಣಿಗೆಗಳು (Foreign Sources or accounts) ಎಂದು ಎರಡು ವಿಧಗಳಿವೆ.
ಪುರಾತತ್ವ ಆಧಾರಗಳು: ಶಾಸನಗಳು, ನಾಣ್ಯಗಳು
& ಸ್ಮಾರಕಗಳು ಒಳಗೊಳ್ಳುತ್ತವೆ.
ಮಧ್ಯಕಾಲೀನ ಇತಿಹಾಸ ಕೃತಿಗಳ ರಚನೆಯಲ್ಲಿ ಅರಬ್ ಇತಿಹಾಸ ರಚನಾ ಕಲೆಯ ಪ್ರಭಾವ ಕಂಡು ಬರುತ್ತದೆ.
ಸತ್ಯ ಘಟನೆಗಳ ವರದಿ, ಕಾಲಾನುಕ್ರಮಣಿಕೆ ಈ ಲೇಖಕರ ಪ್ರಮುಖ ಲಕ್ಷಣಗಳು.
ಅರಬ್ ಇತಿಹಾಸಕಾರರು ಕೃತಿಗಳ ರಚನೆ ಮಾಡಲು
ಕಾಗದದ ಬಳಕೆ ಮತ್ತು ಬರವಣಿಗೆಯ ಜ್ಞಾನ ಪ್ರೇರಣೆ.
ರಾಜ ಮನೆತನಗಳಿಂದ ಪ್ರೋತ್ಸಾಹ & ಆಶ್ರಯ.
ಅರಬ್ ಇತಿಹಾಸ ರಚನಾ ಕಲೆಯು ಉತ್ತಮ ಲಕ್ಷಣಗಳಿಂದ
ಕೂಡಿದ್ದರೂ ಆಧಾರಗಳಾಗಿ ಬಳಸುವಾಗ ಪರಿಶೀಲನೆ ಅಗತ್ಯ; ಕಾರಣ ಆಶ್ರಯದಾತರ ಬಗ್ಗೆ ಅತಿ ಹೊಗಳಿಕೆ ಮತ್ತು
ಘಟನೆಗಳ ಮರೆಮಾಚುವಿಕೆ ಕೆಲವು ಇತಿಹಾಸಕಾರರಲ್ಲಿ ಕಂಡು ಬರುತ್ತದೆ.
ಘಟನೆಗಳ ಸತ್ಯಾಸತ್ಯತೆ ತಿಳಿಯಲು ಇತರೆ ಮೂಲಗಳಿಂದ
ಮಾಹಿತಿ ಸಂಗ್ರಹ ಅಗತ್ಯ.
ಐತಿಹಾಸಿಕ ಕೃತಿಗಳು, ರಾಜ ವಂಶಾವಳಿಗಳು, ಪತ್ರ
ವ್ಯವಹಾರಗಳು, ವರದಿಗಳು, ಸೇನಾಧಿಕಾರಿಗಳ & ಅಧಿಕಾರಿಗಳ ಪತ್ರಗಳು, ರಾಜರುಗಳ ಆತ್ಮಕಥನಗಳು
& ವಿದೇಶಿಯರ ಬರವಣಿಗೆಗಳು ಆ ಕಾಲದ ಇತಿಹಾಸ ಪುನರ್‌ರಚನೆಗೆ ಮಾಹಿತಿ ಒದಗಿಸುತ್ತವೆ.
ಇಸ್ಲಾಂ ಲೇಖಕರು ಅರಬ್, ಪರ್ಷಿಯಾ & ಟರ್ಕಿ
ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದಾರೆ.
ಭಾರತೀಯ ರಾಜರುಗಳ ಕುರಿತಂತೆ ದೇಶೀಯ ಬರವಣಿಗೆಗಳು
ಮಾಹಿತಿ ನೀಡುತ್ತವೆ.
ವಿಜಯನಗರದ ಕುರಿತು ಸಂಸ್ಕೃತ, ಕನ್ನಡ, ತೆಲುಗು
ಭಾಷೆಗಳಲ್ಲಿ ಕೃತಿಗಳು ಲಭ್ಯ.
ವಿವಿಧ ಭಾಷೆಗಳ ಏಳು ಸಾವಿರಕ್ಕೂ ಹೆಚ್ಚು ಶಾಸನಗಳು
ಲಭ್ಯವಾಗಿವೆ.
ಮಧ್ಯಕಾಲೀನ ಭಾರತದ ಇತಿಹಾಸ ಪುನರ್‌ರಚನೆಗೆ
ಆಧಾರ ಒದಗಿಸುವ ಪ್ರಮುಖ ಕೃತಿಗಳು ಕೆಳಕಂಡಂತಿವೆ:-
ಮುಸ್ಲೀಂ ಇತಿಹಾಸಕಾರರು ರಚಿಸಿದ ಕೃತಿಗಳು ಅರಬ್,
ಪರ್ಷಿಯಾ ಮತ್ತು ಟರ್ಕಿ ಭಾಷೆಗಳಲ್ಲಿದ್ದರೂ ಆ ಕೃತಿಗಳು ಭಾರತದಲ್ಲಿ ರಚನೆಯಾಗಿದ್ದಲ್ಲಿ ಅವುಗಳನ್ನು
ದೇಶೀಯ ಕೃತಿಗಳು ಎಂದು ಪರಿಗಣಿಸಲಾಗುತ್ತದೆ.
1.
ಅಬು
ರಿಹಾನ್ ಅಲ್ಬೆರೂನಿ: ತಹಕಿಕ್ ಇ ಹಿಂದ್: ಘಸ್ನಿಯ ಕಾಲಕ್ಕೆ ಭಾರತ ಪ್ರವೇಶ. ಸಂಸ್ಕೃಥ ಭಾಷೆ ಕಲಿತು
ಇಲ್ಲಿನ ಸಂಸ್ಕೃತಿ ಕುರಿತು ಉದ್ಗ್ರಂಥ ರಚನೆ. ಆದರೆ ರಾಜಕೀಯ ಮಾಹಿತಿಗಳು ಕಡಿಮೆ.
2.
ಮೀರ್
ಮಹಮದ್ ಮಾಸೂಮ್: ತಾರಿಕ್ ಎ ಸಿಂಧ್; ಸಾ.ಶ.ವ. 1600. ಅರಬ್ಬರ ಸಿಂಧ್ ದಾಳಿಯಿಂದ ಅಕ್ಬರನ ಕಾಲದವರೆಗಿನ
ಸಿಂಧ್ ಇತಿಹಾಸದ ಮಾಹಿತಿ.
3.
ಮಿನಾಜ್
ಉಸ್ ಸಿರಾಜ್; ತಬಕತ್ ಇ ನಾಸಿರ್; 1260. ಘೋರಿ ಮಹಮದ್ ಕಾಲದಿಂದ 1260ರ ವರೆಗಿನ ದೆಹಲಿ ಸುಲ್ತಾನರ
ಇತಿಹಾಸ.
4.
ಜಿಯಾವುದ್ದೀನ್
ಬರನಿ: ತಾರಿಕ್ ಇ ಫಿರೋಜ್ ಶಾಹಿ: 1359. ಮೂವರು ತುಘಲಕ್ ದೊರೆಗಳ ಕಾಲದಲ್ಲಿ ಜೀವಿಸಿದ್ದ. ಮೂರು
ಮನೆತನಗಳ ಮಾಹಿತಿ; ಗುಲಾಮಿ, ಖಿಲ್ಜಿ & ತುಘಲಕ್. ಉನ್ನತ ಅಧಿಕಾರಿ. ಕಂದಾಯ ಆಡಳಿತದ ಮಾಹಿತಿ.
5.
ಶಂಶ್
ಈ ಸಿರಾಜಿ ಅಫೀಫ್; ಫಿರೋಜ್ ಶಾ ತುಘಲಕನ ಆಶ್ರಿತ. ಆಶ್ರಯದಾತನನ್ನು ಅತಿಯಾಗಿ ಹೊಗಳಿದ್ದಾನೆ.
6.
ಫಿರೋಜ್
ಶಾ ತುಘಲಕ್; ಫತುಹತ್ ಇ ಫಿರೋಜ್ ಶಾಹಿ; ಸಣ್ಣ ಗ್ರಂಥ; ತನ್ನ ಧಾರ್ಮಿಕ ನೀತಿಯ ನಿರೂಪಣೆ.
7.
ಅಬು
ಮಲಿಕ್ ಇಸಾಮಿ: ಫತು ಉಲ್ ಸಲಾತಿನ್: 1349. ತುಘಲಕ್ ಆಸ್ಥಾನದಿಂದ ದಖನ್ನಿನಲ್ಲಿದ್ದ ಬಹಮನಿ ಸುಲ್ತಾನರ
ಅಲ್ಲಾವುದ್ದೀನ್ ಬಹಮನ್ ಶಾ ಆಸ್ಥಾನಕ್ಕೆ ವಲಸೆ ಬಂದನು. ಘಸ್ನಿ ಕಾಲದಿಂದ ತುಘಲಕ್ ಕಾಲದ ತನಕ ಇತಿಹಾಸದ
ಮಾಃಇತಿ.
8.
ಅಮೀರ್
ಖುಸ್ರೋ; ಜಲಾಲುದ್ದೀನ್ ಖಿಲ್ಜಿಯಿಂದ ಮಹಮದ್ ತುಘಲಕ್ ವರೆಗೆ. ಕಜೈನ್ ಉಲ್ ಫುತು; ದೆಹಲಿ ಸುಲ್ತಾನರ
ಆಳ್ವಿಕೆಯ ಮಾಹಿತಿ.
9.
ಯಾಹ್ಯಾ
ಬಿನ್ ಅಹಮದ್ ಸರಹಿಂದಿ: ತಾರಿಕ್ ಇ ಮುಬಾರಕ್ ಶಾಹಿ ಕೃತಿಯು ಸೈಯ್ಯದ್ ಸಂತತಿಯ ಆಳ್ವಿಕೆಯ ಮಾಹಿತಿ
ಒದಗಿಸುವ ಏಕೈಕ ಸಮಕಾಲೀನ ಕೃತಿ.
10. ಮಹಮ್ಮದ್ ಖಾಸಿಂ ಫೆರಿಶ್ತಾ; ಪರ್ಷಿಯಾದಿಂದ
ದಕ್ಷಿಣ ಭಾರತಕ್ಕೆ ವಲಸೆ. ಎರಡನೇ ಇಬ್ರಾಹಿಂ ಆದಿಲ್ ಶಾನ ಆಶ್ರಯ. ಗುಲ್ಶನ್ ಇ ಇಬ್ರಾಹಿಂ ಕೃತಿ
ರಚನೆ, 1596 ರಲ್ಲಿ. ವಿಜಾಪುರದ ಆದಿಲ್ ಶಾಹಿಗಳ ಬಗ್ಗೆ ಉತ್ತಮ ಮಾಹಿತಿ. ತಾರಿಕ್ ಇ ಫೆರಿಶ್ತಾ
ಇವನ ಮತ್ತೊಂದು ಕೃತಿ.
11. ತಬಾ-ತಬಾ: ಬುಹ್ರಾನ್ ಎ ಮಾಸಿರ್; ಅಹಮದ್
ನಗರದ ಬುಹ್ರಾನ್ ಶಾನ ಆಶ್ರಿತ. ಫೆರಿಶ್ತಾ ಮತ್ತು ತಬಾ-ತಬಾ ಇಬ್ಬರೂ ವಿಜಯನಗರ ಮತ್ತು ಬಹಮನಿ ಹಾಗೂ
ವಿಜಾಪುರದ ಸುಲ್ಥಾನರ ನಡುವಣ ರಾಜಕೀಯ ಸಂಬಂಧಗಳನ್ನು ವಿವರಿಸಿದ್ದಾರೆ.
12. ಜುಬೇರಿ- ಬಸಾತಿನ್ ಉಸ್ ಸಲಾತಿನ್ 1825; ಪರ್ಷಿಯ ಭಾಷೆ. ಆದಿಲ್ ಶಾಹಿಗಳು
ಮತ್ತು ಮೊಗಲರ ನಡುವಣ ಸಂಬಂಧಗಳ ಮಾಹಿತಿ.
ವಿದೇಶಿಯರ ಬರವಣಿಗೆಗಳು:-
1.
ಮಾರ್ಕೋ
ಪೋಲೊ: ಇಟಲಿಯ ಪ್ರವಾಸಿ. ಚೀನಾಕ್ಕೆ ಭೇಟಿ.
2.
ಇಬ್ನ
ಬತೂತ: ತಾಂಜಿಯರ್, ಮೊರಾಕ್ಕೊ, ಆಫ್ರಿಕಾ. ಕಿತಾಬ್
ಇ ರಿಹಾಲಾ ಇವನ ಕೃತಿ. ಇದು ಇತಿಹಾಸದ ಗಣಿ ಎಂದು ವಿದ್ವಾಂಸರಿಂದ ಮೆಚ್ಚುಗೆ. ಇವನು 14 ವರ್ಷ ದೆಹಲಿಯಲ್ಲಿದ್ದನು.
1333-1347. 8 ವರ್ಷ ದೆಹಲಿಯ ಖಾಜಿ ಾಗಿದ್ದ. 1342 ರಲ್ಲಿ ಚೀನಾದ ರಾಯಭಾರಿಯಾಗಿ ಚೀನಾಕ್ಕೆ ಹೋಗಿದ್ದನು.
೧೩೪೯ ರಲ್ಲಿ ತಾಯ್ನಾಡಿಗೆ ವಾಪಾಸು. ಮೊರಾಕ್ಕೊ ರಾಜನ ಬೇಡಿಕೆ ಮೇರೆಗೆ 1355 ರಲ್ಲಿ ಕಿತಾಬ್ ಇ ರಿಹಾಲಾ
ರಚನೆ.
3.
ಅಬ್ದುಲ್
ರಜಾಕ್: ವಿಜಯನಗರಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಪ್ರವಾಸಿಗ. 1442-43 ರಲ್ಲಿ ಭೇಟಿ. ರಾಜಕೀಯ,
ಆರ್ಥಿಕ & ಸಾಂಸ್ಕೃತಿಕ ವಿವರಗಳನ್ನು ನೀಡಿದ್ದಾನೆ.
4.
ನಿಕೊಲೋ
ಕೋಂಟಿ; ಇಟಲಿ. 1520 ರಲ್ಲಿ. ಇದೇ ಕಾಲಕ್ಕೆ ಇಟಲಿಯವನೇ ಆದ ಫೇಸ್ ಸಹಾ ಭೇಟಿ ನೀಡಿದ್ದ.
5.
ನ್ಯೂನಿಜ್;
ಕುದುರೆ ವ್ಯಾಪಾರಿ. ವಿಜಯನಗರಕ್ಕೆ ಭೇಟಿ, 1537 ರಲ್ಲಿ. ವೃತ್ತಾಂತ ಅಥವಾ Chronicles ವಿಜಯನಗರ
ಕುರಿತು ಹೆಚ್ಚಿನ ಮಾಹಿತಿ.
6.
ನಿಕೆಟಿನ್:
ರಷ್ಯಾದ ಪ್ರವಾಸಿಗ. 1570 ರಲ್ಲಿ ಬೀದರಿಗೆ ಭೇಟಿ. ಬಹಮನಿ ರಾಜ್ಯದ ಬಗ್ಗೆ ಮಾಹಿತಿ.
ವಿದೇಶೀ ಬರವಣಿಗೆಗಳಲ್ಲಿ ಮಾಹಿತಿ ಕೊರತೆ ಕಂಡುಬರುತ್ತದೆ. ಕಾರಣ, ಅವರಿಗೆ ಆಶ್ರಿತ ಇತಿಹಾಸಕಾರರಂತೆ
ಸರ್ಕಾರಿ ದಾಖಲೆಗಳನ್ನು ಪರಿಶೀಲಿಸುವ ಅವಕಾಶವಿರಲಿಲ್ಲ. ಅಲ್ಲದೇ ಐತಿಹಾಸಿಕ ವಿಶ್ಲೇಷಣೆಯ ಕೊರತೆಯು
ಅವರ ಬರವಣಿಗೆಗಳಲ್ಲಿ ಕಂಡು ಬರುತ್ತದೆ.
ವಿಜಯನಗರ ಕಾಲದ
ಸಾಹಿತ್ಯಾಧಾರಗಳು:-
1.
ಮಧುರಾವಿಜಯಂ
ಅಥವಾ ಕಂಪಣರಾಯ ವಿಜಯ- ಗಂಗಾದೇವಿ; ಕಂಪಣರಾಯನು ಮಧುರೈ ಜಯಿಸಿದ ವಿವರಗಳು.
2.
ಸಾಳುವಾಭ್ಯುದಯಂ
– ರಾಜನಾಥ ಡಿಂಡಿಮ; ಸಾಳುವ ವಂಶದ ಆಳ್ವಿಕೆ ಮಾಹಿತಿ.
3.
ಗಂಗಾಧರ
ಪ್ರತಾಪ ವಿಲಾಸಂ – ಗಂಗಾಧರ; ವಿಜಯನಗರ ಮತ್ತು ಒರಿಸ್ಸಾದ ಗಜಪತಿಗಳ ನಡುವಣ ಯುದ್ಧಗಳು.
4.
ರಾಯ
ವಾಚಕಮು ಮತ್ತು ಕೃಷ್ಣರಾಜ ವಿಜಯಮು – ದೂರ್ಜಟಿ; ಕೃಷ್ಣದೇವರಾಯನ ದಿಗ್ವಿಜಯಗಳು
5.
ಪಾರಿಜಾತಾಪಹರಣಮು
- ನಂದಿ ತಿಮ್ಮಣ್ಣ; ಒರಿಸ್ಸಾದ ಮೇಲಿನ ಕೃಷ್ಣದೇವರಾಯನ ದಿಗ್ವಿಜಯಗಳು
6.
ಮನುಚರಿತಮು
– ಪೆದ್ದಣ್ಣ; ಕೃಷ್ಣದೇವರಾಯನ ಕಾಲದ ಆಳ್ವಿಕೆಯ ಮಾಹಿತಿ
7.
ಮಾದಲಸಾ
ಚರಿತಂ, ರಸಮಂಜರಿ, ಉಷಾಪರಿಣಯ, ಜಾಂಬವತಿ ಕಲ್ಯಾಣ ಮತ್ತು ಅಮುಕ್ತ ಮಾಲ್ಯದ – ಕೃಷ್ಣದೇವರಾಯ; ಅಮುಕ್ತ
ಮಾಲ್ಯದದಲ್ಲಿ ಆಡಳಿತ ಪದ್ಧತಿಯ ಮಾಹಿತಿಗಳು.
8.
ಪರಾಶರ
ಮಾಧವಿಯ, ಶಂಕರ ವಿಜಯ, ಕಾಲನಿರ್ಣಯ, ವೇದಭಾಷ್ಯ ಮತ್ತು ಸಂಗೀತಸಾರ - ವಿದ್ಯಾರಣ್ಯ
9.
ವೇದಾರ್ಥ
ಪ್ರಕಾಶ, ಆಯುರ್ವೇದ ಸುಧಾನಿಧಿ, ಯಜ್ಞತಂತ್ರ ಸುಧಾನಿಧಿ ಮತ್ತು ಪುರುಷಾರ್ಥ ಸುಧಾನಿಧಿ – ಸಾಯಣಾಚಾರ್ಯ
10. ವರದಾಂಬಿಕಾ ಪರಿಣಯಂ – ತಿರುಮಲಾಂಬಿಕೆ
11. ಕುಮಾರರಾಮ ಚರಿತೆ – ನಂಜುಂಡ ಕವಿ; ಆನೆಗುಂದಿಯ
ಕಂಪಿಲರಾಯ ಮತ್ತು ಅವನ ಮಗ ಕುಮಾರರಾಮನ ಮಾಹಿತಿ
12. ಸ್ವರಮೇಳಕಲಾನಿಧಿ – ಸಂಗೀತ ಕಲೆ ಮತ್ತು ಅಳಿಯ
ರಾಮರಾಯನ ಬಗ್ಗೆ ಮಾಹಿತಿ.
13. ಶಿವತತ್ವ ಚಿಂತಾಮಣಿ – ಲಕ್ಕಣ ದಂಡೇಶ; ಎರಡನೆ
ದೇವರಾಯನ ಯುದ್ಧಗಳು
14. ಪ್ರಭುಲಿಂಗ ಲೀಲೆ – ಚಾಮರಸ
ಪುರಾತತ್ವ ಆಧಾರಗಳು:-
ಪ್ರಾಚೀನ ಅವಶೇಷಗಳನ್ನು ಪುರಾತತ್ವ ಆಧಾರಗಳು ಎನ್ನುವರು ಇವುಗಳನ್ನು ಶಾಸನಗಳು, ನಾಣ್ಯಗಳು ಮತ್ತು
ಸ್ಮಾರಕಗಳು ಎಂದು ಉಪವಿಭಾಗ ಮಾಡಲಾಗಿದೆ.
ದೆಹಲಿ
ಸುಲ್ತಾನರು, ಬಹಮನಿಗಳು ಮತ್ತು ವಿಜಾಪುರದ ಆದಿಲ್ ಶಾಹಿಗಳ ಕಾಲದಲ್ಲಿನ ಪರ್ಷಿಯಾ, ಅರಬ್ ಮತ್ತು
ಟರ್ಕಿ ಭಾಷೆಯ ಶಾಸನಗಳು ಆ ಕಾಲದ ವಿವಿಧ ಘಟನೆಗಳ ಮಾಹಿತಿಗಳನ್ನು ನೀಡುತ್ತವೆ. ಅಂತೆಯೇ ವಿಜಯನಗರ ಕಾಲದ
ಕನ್ನಡ, ಸಂಸ್ಕೃತ, ತೆಲುಗು ಮತ್ತು ತಮಿಳು ಭಾಷೆಯ ಸುಮಾರು ಏಳು ಸಾವಿರಕ್ಕೂ ಅಧಿಕ ಶಾಸನಗಳು ಲಭ್ಯವಾಗಿದ್ದು
ವಿಜಯನಗರದ ಇತಿಹಾಸ ಪುನರ್‌ರಚಿಸಲು ಅತ್ಯಮೂಲ್ಯ ಮಾಹಿತಿ ಒದಗಿಸುತ್ತವೆ. ಅಲ್ಲದೇ ಅಂದಿನ ಕಾಲದ ಸುಲ್ತಾನರು,
ರಾಜ-ಮಹಾರಾಜರು ನಿರ್ಮಿಸಿದ ಮಸೀದಿಗಳು, ಅರಮನೆಗಳು, ಕೋಟೆಗಳು, ವಿವಿಧ ಕಟ್ಟಡಗಳು, ದೇವಾಲಯಗಳು, ನೀರಾವರಿ
ನಿರ್ಮಾಣಗಳು ಮೊದಲಾದುವು ಅವರ ಕಾಲದ ವಾಸ್ತು-ಶಿಲ್ಪದ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಅನೇಕ
ಐತಿಹಾಸಿಕ ಮಾಹಿತಿ ಒದಗಿಸುತ್ತವೆ. ಅಂದಿನ ಕಾಲದ ನಾಣ್ಯಗಳು ಕಾಲ-ಕಾಲಕ್ಕೆ ಆದ ಆರ್ಥಿಕ ಬದಲಾವಣೆಗಳ
ಜೊತೆಗೆ ಅಂದಿನ ಅರಸ-ಸುಲ್ತಾನರ ಕಲಾಭಿರುಚಿ ತಿಳಿಸುವುದಲ್ಲದೇ ಅನೇಕ ಐತಿಹಾಸಿಕ ಘಟನೆಗಳ ಮಾಹಿತಿ ಒದಗಿಸುತ್ತವೆ.
ಉತ್ಖನನಗಳು ಈ ಕಾಲದ ಇತಿಹಾಸ ಪುನರ್‌ರಚನೆಗೆ ಅಗತ್ಯವಿದ್ದಲ್ಲಿ ಅಂತಹ ಪ್ರಯತ್ನಗಳೂ ಇತ್ತೀಚೆಗೆ ನಡೆಯುತ್ತಿವೆ.
ಉದಾ: ಭಾರತೀಯ ಪುರಾತತ್ವ ಇಲಾಖೆಯವರು ಹಂಪಿಯಲ್ಲಿ ಇತ್ತೀಚಿಗೆ ನಡೆಸಲು ಉದ್ದೇಶಿಸಿರುವ ರಾಜಪ್ರಾಂಗಣದ
ಉತ್ಖನನದ ಯೋಜನೆ.
ಹೆಚ್ಚಿನ ಓದಿಗಾಗಿ:-
ಭಾರತದ ಇತಿಹಾಸ ಮತ್ತು ಸಂಸ್ಕೃತಿ; ಲೇಖಕರು:-
ಡಿ.ಟಿ ಜೋಶಿ.
Comments
Post a Comment