ಎಷ್ಟು ಸುಲಭವೂ ಇತಿಹಾಸ!
ಗತಿಸಿದ ಘಟನೆಗಳೇ ಇತಿಹಾಸ
ಕಾಲಕ್ಕೆ ತಕ್ಕಂತೆ
ಬರೆವುದೇ ಪುನರ್‌ರಚನೆ
ಬದಿಯ ಕಲ್ಲು
ಆಗಲಾರದು ಆಧಾರ
ಕೊರೆದು ಕೆತ್ತಿದರೆ
ಅದುವೇ ಮೂಲಾಧಾರ
ಅಗೆದು ಬಗೆದರೆ
ಉತ್ಖನನ
ಹುಡುಕಿ ತೆಗೆದರೆ
ಸಂಶೋಧನ
ಲಂಬ ಉತ್ಖನನವು
ಆಳ-ಾಳಕೆ
ಸಮತಲವು ಉದ್ದ-ಅಗಲಕೆ
ಪಳೆಯುಳಿಕೆಗಳು
ಅಲಿಖಿತ
ಬರೆದುದೆಲ್ಲವೂ
ಲಿಖಿತ
ನಮ್ಮವರು ಬರೆದುದು
ದೇಶೀಯ
ಬಂದವರು ಬರೆದುದು
ವಿದೇಶೀಯ
ಎಷ್ಟು ಸುಲಭವೂ
ನೋಡಿ ಇತಿಹಾಸ!
ನೀವು ಕಲಿತರೆ
ನಮಗದೇ ಸಂತಸ!
ದಿನಾಂಕ: ೧ ನವೆಂಬರ್, ೨೦೨೧
ಸಮಯ: ಬೆಳಿಗ್ಗೆ ೯.೧೫.
ಸಂದರ್ಭ: ರಾಜ್ಯೋತ್ಸವದ ಸಲುವಾಗಿ ವಿದ್ಯಾರ್ಥಿಗಳಿಗಾಗಿ
ಏರ್ಪಡಿಸಿದ್ದ ಸ್ವರಚಿತ ಕವನ ವಾಚನ ಸಂದರ್ಭದಲ್ಲಿ ಭಾಷಣದ ವೇಳೆ ಉಪಯೋಗಿಸಲು ಬರೆದದ್ದು.
ಈ ಮೇಲಿನ ಇತಿಹಾಸಕ್ಕೆ ನೀವೇ ಸಾಟಿ ಸರ್... Super❤
ReplyDeleteಕಲಿಯಲಿಕ್ಕೆ ಸುಲಭದ ಹಾದಿ ಹುಡುಕಿದ ನಿಮಗೆ ಧನ್ಯವಾದಗಳು
ReplyDelete