ಬನವಾಸಿಯ ಕದಂಬರು - ರಾಜಕೀಯ ಇತಿಹಾಸ - ಸಂಕ್ಷಿಪ್ತ ಟಿಪ್ಪಣಿಗಳು
ಬನವಾಸಿಯ ಕದಂಬರು
ಪೀಠಿಕೆ: ಮೊದಲ ಕನ್ನಡದ ರಾಜ ಮನೆತನ. ಶಾತವಾಹನರ ಉತ್ತರಾಧಿಕಾರಿಗಳು.
೪ ರಿಂದ ೬ ನೆ ಶತಮಾನಗಳ ನಡುವೆ ಆಡಳಿತ. ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು. ಕಾರಣ ಹಿಂದಿನ
ಚುಟುಗಳ ಸಂಬಂಧಿಗಳಿರಬಹುದು. ಬನವಾಸಿ ಆಡಳಿತ ಕೇಂದ್ರ. ಪ್ರಾಚೀನ ಹೆಸರು ಕುಂತಳ. ಶಿವಮೊಗ್ಗ, ಬೆಳಗಾವಿ,
ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಆಡಳಿತದ ವ್ಯಾಪ್ತಿಗೆ.
ಆಧಾರಗಳು: ಚಂದ್ರವಳ್ಳಿ, ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ
ಹಾಸನ ಜಿಲ್ಲೆ, ತಾಳಗುಂದ (ಸ್ಥಾಣಕುಂದೂರು) ಶಿವಮೊಗ್ಗ ಜಿಲ್ಲೆ, ಹೆಬ್ಬಟ್ಟ, ಮಳವಳಿ, ಮಂಡ್ಯ ಜಿಲ್ಲೆ,
ಗುಡ್ನಾಪುರಗಳಲ್ಲಿನ ಶಿಲಾಶಾಸನಗಳು. ಹಲಸಿ ಬೆಳಗಾವಿ ಜಿಲೆ, ಮುತ್ತೂರು, ದೇವಗಿರಿ ರಾಣೆಬೆನ್ನೂರು ತಾ, ಸಂಗೊಳ್ಳಿಯ ತಾಮ್ರಪಟಗಳು.
೨ನೆ ಕಾಳಿದಾಸನ ಕೌಂತಳೇಶ್ವರ ದೌತ್ಯಂ. ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ
ಇವರ ಸ್ಮಾರಕಗಳು.
ಮೂಲ: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮಯೂರಶರ್ಮ
ಮೂಲಪುರುಷ. ಮನೆಯ ಬಳಿಯ ಕದಂಬ ವೃಕ್ಷದ ಕಾರಣ ಮನೆತನದ ಹೆಸರು. ಮಳವಳ್ಳಿ ಶಾಸನದಲ್ಲಿ ಮೊದಲ ಅರಸನನ್ನು
ʼದ್ವಿಜೋತ್ತಮʼ ಎಂದು ಉಲ್ಲೇಖ; ಕಾರಣ ವೈದಿಕ ಧರ್ಮಕ್ಕೆ ಸೇರಿದ ಬ್ರಾಹ್ಮಣ ವರ್ಗದವರು.
ಕದಂಬ ಅರಸರ ಕಾಲಾನುಕ್ರಮಣಿಕೆ
- (345-525)
- ಮಯೂರಶರ್ಮ: (345 - 365)
- ಕಂಗವರ್ಮ: (365 - 390)
- ಭಗಿರಥವರ್ಮ: (390 - 415)
- ರಘುವರ್ಮ: (415 - 435)
- ಕಾಕುಸ್ಥವರ್ಮ: (435 - 455)
- ಶಾಂತಿವರ್ಮ: (455 - 460)
- ಮೃಗೇಶವರ್ಮ: (460 - 480)
- ಶಿವಮಾಂಧಾತೃವರ್ಮ: (480 – 485)
- ರವಿವರ್ಮ: (485 – 519)
- ಹರಿವರ್ಮ: (519 – 525)
ಮಯೂರಶರ್ಮ ೩೪೫-೬೫:- ತಂದೆ ಬಂದುಸೇನ. ತಾಳಗುಂದದ ಅಗ್ರಹಾರದಲ್ಲಿ ಆರಂಭಿಕ ವಿದ್ಯಾಭ್ಯಾಸ. ನಂತರ ತಾತ/ಗುರು ವೀರಶರ್ಮನೊಂದಿಗೆ ವೇದಾಧ್ಯಯನಕ್ಕಾಗಿ ಕಂಚಿಗೆ ಪಯಣ. ಸ್ನಾನಘಟ್ಟದ ಬಳಿ ಪಲ್ಲವರ ಅಶ್ವಪಡೆಯಿಂದ ಅವಮಾನಿತ. ಆಸ್ಥಾನದಲ್ಲೂ ನ್ಯಾಯ ಸಿಗದೇ ಪಲ್ಲವರ ಸೊಕ್ಕು ಮುರಿಯಲು ರಾಜ್ಯ ನಿರ್ಮಾಣದ ತೀರ್ಮಾನ. “ಪಲ್ಲವಾಶ್ವಸಂಸ್ಥೆ ಕಲಹೇಣ ತ್ರಿವೇಣಿ ರೋಷಿತಹ” ಎಂಬ ಶಪಥ. ವರ್ಣ ಬದಲಾವಣೆ. ದರ್ಬೆ ಹಿಡಿಯುವ ಕೈ ಖಡ್ಗ ಧಾರಣೆ-ತಾಳಗುಂದ ಶಾಸನದಿಂದ. ಶ್ರೀಪರ್ವತದಲ್ಲಿ ಅಂದರೆ ಇಂದಿನ ಶ್ರೀಶೈಲದ ಬಳಿ ಸೈನ್ಯ ಸಂಘಟನೆ; ಪಲ್ಲವರ ಅಂತರಪಾಲ (ಗಡಿರಕ್ಷಕ) ರನ್ನು ಸೋಲಿಸಿದ. ಪಲ್ಲವರ ಸಾಮಂತರಾದ ಕೋಲಾರದ ಬಳಿಯ ಬಾಣರಿಂದ ಕಪ್ಪ ಸಂಗ್ರಹ. ಮಯೂರನ ಚಟುವಟಿಕೆಗಳನ್ನು ಹತ್ತಿಕ್ಕಲು ಪಲ್ಲವರ ಬೃಹತ್ ಸೈನ್ಯ ರವಾನೆ; ಆದರೆ ಅವನಿಂದ ಸೋಲು. ಕಡೆಗೆ ಪಶ್ಚಿಮ ಕರಾವಳಿಯಿಂದ ಪ್ರಹರ (ಮಲಪ್ರಭಾ) ನದಿಯವರೆಗಿನ ಪ್ರದೇಶಗಳ ಸ್ವತಂತ್ರ ರಾಜನೆಂದು ಮಾನ್ಯ. ಮಳವಳ್ಳಿಯ ಶಾಸನದಂತೆ ಪಲ್ಲವರ ಶಿವಸ್ಕಂದವರ್ಮನಿಂದ ಪಡೆದ ಕೆಲವು ದಾನ-ದತ್ತಿಗಳನ್ನು ಕದಂಬ ಅರಸನೊಬ್ಬ ಮುಂದುವರಿಸಿಕೊಂಡು ಹೋದನೆಂಬ ಉಲ್ಲೇಖದನ್ವಯ ಮಯೂರನಿಂದ ಸೋತವನು ಶಿವಸ್ಕಂದವರ್ಮನೆಂದು ಅಭಿಪ್ರಾಯ. ಚಂದ್ರವಳ್ಳಿಯ ಶಾಸನವು ಪ್ರಾಕೃತದ್ದೆಂದು, ಅಭೀರರು, ತ್ರಿಕೂಟ, ಪಾರಿಯಾತ್ರಕರು, ಪುನ್ನಾಟ, ಪಲ್ಲವರು, ಮೌಖರಿಗಳು, ಶಕಸ್ಥಾನ & ಸೇಂದ್ರಕರನ್ನು ಸೋಲಿಸಿದನೆಂದು M.H. ಕೃಷ್ಣರವರ ಅಭಿಪ್ರಾಯ. ಆದರೆ, ೧೯೮೯ ರಲ್ಲಿ ಪ್ರೊ. B. ರಾಜಶೇಖರಪ್ಪರವರು ಸಂಸ್ಕೃತದ್ದೆಂದೂ, ಚಂದ್ರವಳ್ಳಿಯ ಕೆರೆ ನಿರ್ಮಾಣದ ಮಾಹಿತಿ ಲಭ್ಯವೆಂದು ಸಾಬೀತು. ಕನ್ನಡದ ನೆಲಗಳ ಬಿಡುಗಡೆ. ಸಮುದ್ರಗುಪ್ತನ ದಾಳಿಯ ಕಾಲದ ಪಲ್ಲವರ ದುರ್ಬಲತೆಯ ಕಾರಣದಿಂದ ಸ್ವತಂತ್ರ: ಡಾ. ಮೋರಿಸ್ ಮತ್ತು ಪ್ರೊ. ನೀಲಕಂಠಶಾಸ್ತ್ರಿ.
ಕಂಗ ಅಥವಾ ಕೊಂಗುಣಿವರ್ಮ ೩೬೫-೯೦: ಅನೇಕ ಸಾಮಂತರಿಂದ ಗೌರವಿತ. ಸಾಮಂತರ ದಂಗೆಗಳನ್ನು
ಅಡಗಿಸಿ ಸಾರ್ವಭೌಮತ್ವದ ರಕ್ಷಣೆ. ವಾಕಾಟಕರ ಪೃಥ್ವಿಸೇನನಿಂದ ಸೋಲು. ರಾಜಕೀಯ ಹಿನ್ನಡೆ. ಭಗೀರಥವರ್ಮನ ಜನನ. ಕದಂಬಕುಲ ಪ್ರಚ್ಛನ್ನ ಜನ್ಮ.
ಕದಂಬ ಕುಲದಲ್ಲಿ ಗುಟ್ಟಾಗಿ ಹುಟ್ಟಿದವನು.
ಭಗೀರಥವರ್ಮ೩೯೦-೪೧೫: ತಂದೆಯ ಕಾಲದಲ್ಲಿ ಕಳೆದುಹೋದ ಮನೆತನದ ಕೀರ್ತಿಯ
ಮರುಸ್ಥಾಪಕ. ಗುಪ್ತರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದನು.
ರಘುಪತಿವರ್ಮ 415-35: ಸ್ವತಂತ್ರರಾಗಲು ಹವಣಿಸಿದ ಸಾಮಂತರನ್ನು ಮಣಿಸಿ
ಅಧೀನಕ್ಕೆ ಒಳಪಡಿಸಿದ. ಗುಪ್ತರ ೨ನೆ ಚಂದ್ರಗುಪ್ತನ ಸಮಕಾಲೀನ. ಕಾಳಿದಾಸನ ಭೇಟಿ. ಯಾವ ಕಾಳಿದಾಸನೆಂಬ
ಬಗ್ಗೆ ಇನ್ನೂ ಜಿಜ್ಞಾಸೆ. ಕೌಂತಳೇಶ್ವರ ದೌತ್ಯಂನಿಂದ ಮಾಹಿತಿ. ಆದರೆ ಕೃತಿ ಅಲಭ್ಯ. ಘನಪಂಡಿತ. ಸಂತಾನರಹಿತನಾದ
ಕಾರಣ ಸೋದರ ಕಾಕುಸ್ತ ಸಿಂಹಾಸನಕ್ಕೆ.
ಕಾಕುಸ್ತವರ್ಮ ೪೩೫-೫೫: ಡಾ. ಮೋರೀಸ್ರವರು ಇವನ ಕಾಲವು ಅತ್ಯಂತ ವೈಭವದ ಕಾಲ ಎಂದಿದ್ದಾರೆ.
ರಾಜ್ಯದ ವಿಸ್ತರಣೆ ಮಾಡಿದನು. ತಾಳಗುಂದ ಶಾಸನದಲ್ಲಿ ಕದಂಬ ಕುಲಭೂಷಣ ಎಂದು ವರ್ಣಿಸಲಾಗಿದೆ. ದೀನರು-ಪ್ರಜಾರಕ್ಷಕನಾಗಿದ್ದ
ಇವನು ಪ್ರಜಾಪ್ರೀತಿಗೆ ಪಾತ್ರನಾಗಿದ್ದನು. ಚಂಚಲ ಲಕ್ಷ್ಮಿ ಸ್ಥಿರ. ನೆರೆರಾಜ್ಯಗಳೊಂದಿಗೆ ವೈವಾಹಿಕ
ಸಂಬಂಧಗಳು; ಗುಪ್ತರ ಕುಮಾರಗುಪ್ತನಿಗೆ ಪುತ್ರಿ ವಿವಾಹ: ಕೌಂತಳೇಶ್ವರ ದೌತ್ಯಂನಿಂದ ಮಾಹಿತಿ. ವಾಕಾಟಕರ
ನರೇಂದ್ರಸೇನನಿಗೆ ಅಜಿತ ಭಟ್ಟಾರಿಕೆಯ ವಿವಾಹ, ಪಾಲ್‌ಘಾಟ್ ಶಾಸನದಿಂದ. D.C. ಸರ್ಕಾರ್ ಅಭಿಪ್ರಾಯ.
ಗಂಗರ ೨ನೆ ಮಾಧವನಿಗೆ ಮತ್ತೊಬ್ಬ ಮಗಳು. ಭಟಾರಿ ಕುಲದ ಮಾಂಡಲೀಕನೊಬ್ಬನಿಗೆ ಮಗಳು ಲಕ್ಷ್ಮಿಯ ವಿವಾಹ.
ನೆರೆಯವರೊಂದಿಗಿನ ವೈವಾಹಿಕ ಸಂಬಂಧಗಳು ಇವನ ರಾಜನೀತಿ ನಿಪುಣತೆಗೆ ಸಾಕ್ಷಿ. ಪ್ರಣವೇಶ್ವರ ದೇವಾಲಯದ
ಬಳಿ ತಟಾಕದ ನಿರ್ಮಾಣ. ಇಬ್ಬರು ಮಕ್ಕಳಿದ್ದು, ಶಾಂತಿವರ್ಮನು ಬನವಾಸಿಯಲ್ಲೂ & ಕೃಷ್ಣವರ್ಮನು
ತ್ರಿಪರ್ವತದಲ್ಲೂ ಆಳತೊಡಗಿ ಎರಡು ಶಾಖೆಗಳು ಏರ್ಪಟ್ಟವು. ತ್ರಿಪರ್ವತವು ಮೊರಗೋಡು ಇಲ್ಲವೇ ರಾಣೆಬೆನ್ನೂರು
ಬಳಿಯ ದೇವಗಿರಿಯೇ ಎಂಬ ಜಿಜ್ಞಾಸೆ.
ಶಾಂತಿವರ್ಮ 455-60: ದಕ್ಷಿಣದ ಮಾಂಡಲೀಕ ಸೋದರ ಕೃಷ್ಣನ ಮಗ ವಿಷ್ಣು
ತನ್ನ ಬೀರೂರು ತಾಮ್ರಪಟದಲ್ಲಿ ಧರ್ಮಮಹಾರಾಜ, ಸಮಗ್ರ ಕರ್ನಾಟದೇಶ ಭೂವರ್ಗ ಬ್ರರ್ತಾರ ಎಂದು ಹೊಗಳಿಕೆ.
ಮೃಗೇಶವರ್ಮ 460-80: ಶಾಂತಿವರ್ಮನ ಮಗ. ಬನವಾಸಿ ಮೃಗೇಶನ ಆಡಳಿತ
ಕೇಂದ್ರ. ಪಲಾಸಿಕ (ಬೆಳಗಾವಿ ಜಿಲ್ಲೆಯ ಹಲಸಿ) ದ್ವಿತೀಯ ರಾಜಧಾನಿ. ಕೇಕಯ ವಂಶದ ಪ್ರಭಾವತಿ ಇವನ ರಾಣಿ.
ಕೇಕಯರ ನಾಡು ಉತ್ತರ ಕನ್ನಡ ಜಿಲ್ಲೆಯಲ್ಲಿತ್ತು. ಗಂಗರ ವಿಷ್ಣುಗೋಪ ಮತ್ತು ಪಲ್ಲವರ ಸ್ಕಂದವರ್ಮರನ್ನು
ಸೋಲಿಸಿದ್ದನು. ಉಚ್ಚಂಗಿಯಲ್ಲಿ (ದಾವಣಗೆರೆ ಜಿಲ್ಲೆ) ಇವನ ಸೋದರ ಕುಮಾರವರ್ಮನ ಆಡಳಿತವಿತ್ತೆಂದು ಡಾ.
ಮೋರಿಸ್ ಹೇಳಿದ್ದು, ಇದನ್ನು ಇತರ ವಿದ್ವಾಂಸರು ಒಪ್ಪಿಲ್ಲ.
ಪರಮಬ್ರಾಹ್ಮಣನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ವೈದಿಕನಾದರೂ ಜೈನಧರ್ಮದ ಪೋಷಕನಾಗಿದ್ದನು. ಮಕ್ಕಳು
ರವಿವರ್ಮ, ಶಿವರಥಿವರ್ಮ & ಬಾನುವರ್ಮರೆಂಬುವರು ಅಪ್ರಾಪ್ತರಾದ ಕಾರಣ ಉಚ್ಚಂಗಿಯ ಶಿವ ಮಾಂಧಾತೃವರ್ಮನ
(480-85) ತಾತ್ಕಾಲಿಕ ಆಡಳಿತ; ನಂತರ ಮಗ ರವಿವರ್ಮನ ಆಡಳಿತ ಆರಂಭ.
ರವಿವರ್ಮ 485-519: ದೀರ್ಘಕಾಲದ ಆಡಳಿತ. ಗುಡ್ನಾಪುರ ಶಾಸನದ ಕರ್ತೃ.
ಕಂಚಿಯ ಚಂಡದಂಡನನ್ನು ಸೋಲಿಸಿದ್ದ; ಪಲ್ಲವರ ಶಾಂತಿವರ್ಮನೆಂದು ಡಾ. ಸತ್ಯನಾಥ ಅಯ್ಯರ್‌ರವರ ಅಭಿಪ್ರಾಯ.
ತ್ರಿಪರ್ವತದ ವಿಷ್ಣುವರ್ಮನ ಅಂತ್ಯ ಇವನಿಂದ. ಉಚ್ಚಂಗಿಯ ವಿಷ್ಣುವರ್ಮನ ಬಂಡಾಯ ಅಡಗಿಸಿ ಅಲ್ಲಿಗೆ ತನ್ನ
ಸೋದರ ಶಿವರಥನ ನೇಮಕ. ಗಂಗರ ಅವನೀತನನ್ನು ಸದೆಬಡಿದನು. ಮತ್ತೊಬ್ಬ ಸೋದರ ಭಾನುವರ್ಮ ಹಲಸಿಯಿಂದ ಆಳುತ್ತಿದ್ದ.
ಆಳೂಪರು, ಕೊಂಗ್ವಾಳ್ವರು, ಪಾಂಡ್ಯರು & ಪುನ್ನಾಟರು ಇವನ ಮಾಂಡಲೀಕರೆಂಬ ಮಾಃಇತಿ ಗುಡ್ನಾಪುರ
ಶಾಸನದಲ್ಲಿ. ಗುಡ್ನಾಪುರದಲ್ಲಿ ಕೆರೆ ನಿರ್ಮಾಣ.
ಹರಿವರ್ಮ 519-25: ಬನವಾಸಿಯ ಕೊನೆಯ ಅರಸು. ಶಾಂತಿಪ್ರಿಯ. ತ್ರಿಪರ್ವತದ ೨ನೆ ಕೃಷ್ಣವರ್ಮನಿಂದ ಇವನ ಕೊಲೆ. ಬನವಾಸಿಯ ಆಡಳಿತ ಅಂತ್ಯ. ಮುಂದೆ ಚಾಲುಕ್ಯರ ೧ನೆ ಪುಲಕೇಶಿ ಕೃಷ್ಣವರ್ಮನನ್ನು ಕೊಂದು ಬನವಾಸಿಯನ್ನು ವಶಪಡಿಸಿಕೊಂಡನು. ಮುಂದಿನ ಅಜವರ್ಮ & ಭೋಗಿವರ್ಮರು ಚಾಲುಕ್ಯರ ಸಾಮಂತರಾಗಿ ಆಳ್ವಿಕೆ ಮಾಡಿದರು.
Comments
Post a Comment