ಭಾಗ 3: ಪ್ರವಾಸಿ ಮಾರ್ಗದರ್ಶಕರ ವಿವಿಧ ವಿವರಗಳು

ಮಾರ್ಗದರ್ಶಕರ ವ್ಯಾಖ್ಯಾನ - Definition of Tourist Guide

ಪ್ರವಾಸಿ ಮಾರ್ಗದರ್ಶಕರು ಒಂದು ದೇಶದ ರಾಯಭಾರಿಗಳಂತೆ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಪ್ರವಾಸಿಗರನ್ನು ಸ್ವಾಗತಿಸುವ ಮತ್ತು ಅವರು ಹೊರಡುವ ಸಮಯದಲ್ಲಿ ಬೀಳ್ಕೊಡುವವರು ಸಹಾ ಮಾರ್ಗದರ್ಶಕರೇ.

ವಿವಿಧ ಅಂತರಾಷ್ಟ್ರೀಯ ಸಂಘಟನೆಗಳು ಅಂದರೆ ವಿಶ್ವ ಪ್ರವಾಸಿ ಮಾರ್ಗದರ್ಶಕರ ಸಂಘಗಳ ಮಹಾಒಕ್ಕೂಟವು ಪ್ರವಾಸಿ ಮಾರ್ಗದರ್ಶಕರನ್ನು ಕೆಳಕಂಡಂತೆ ವ್ಯಾಖ್ಯಾನಿಸಿದೆ:

 “ಒಂದು ಕ್ಷೇತ್ರ ಅಥವಾ ಪ್ರದೇಶದ ಬಗ್ಗೆ ವಿಶೇಷ ಜ್ಞಾನ ಮತ್ತು ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಯು ಪ್ರವಾಸಿಗರ ಭಾಷೆಯಲ್ಲಿಯೇ ಒಂದು ಪ್ರದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಸ್ವಾಭಾವಿಕ ರಚನೆಗಳ ವಿವರವನ್ನು ನೀಡುವ ವ್ಯಕ್ತಿ

ಇಂತಹ ನಿರ್ದಿಷ್ಟಗೊಳಿಸಿದ ಜ್ಞಾನ ಮತ್ತು ವಿದ್ಯಾರ್ಹತೆಗಳು ಸೂಕ್ತವಾದ ಸಂಘ/ಸಂಸ್ಥೆಗಳಿಂದ ನಿಗದಿಗೊಳಿಸಲ್ಪಟ್ಟಿರುತ್ತವೆ.

ಪ್ರವಾಸಿ ಮಾರ್ಗದರ್ಶಕನು ಪ್ರವಾಸಿಗರನ್ನು ಅವರ ಪ್ರವಾಸದ ವೇಳೆಯಲ್ಲಿ ಮಾರ್ಗದರ್ಶಿಸುತ್ತಾನೆ. ಸಾಮಾನ್ಯವಾಗಿ ಮಾರ್ಗದರ್ಶಕರು ಒಂದು ನಿರ್ದಿಷ್ಟ ಪ್ರದೇಶ ಅಥವಾ ನಗರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ಕೆಲವು ವೇಳೆ ಮಾರ್ಗದರ್ಶಕರು ದೇಶದ ವಿವಿಧ ಪ್ರವಾಸೀ ತಾಣಗಳಲ್ಲೂ ಸಹಾ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸಬಹುದು.

 

ಪ್ರವಾಸೀ ಮಾರ್ಗದರ್ಶಕ ಎಂದರೇನು?

ಪ್ರವಾಸಿ ಮಾರ್ಗದರ್ಶಕರು ಒಂದು ಪ್ರದೇಶದಲ್ಲಿ ಆದರಾತಿಥ್ಯ ನೀಡುವವರಾಗಿದ್ದು, ಅವರು ಪ್ರವಾಸೋದ್ಯಮದ ಒಂದು ಭಾಗವಾಗಿರುತ್ತಾರೆ ಮತ್ತು ಪ್ರವಾಸಿಗರಿಗೆ ಆಸಕ್ತಿದಾಯಕವಾದ ಸ್ಥಳಗಳಲ್ಲಿ ಮಾರ್ಗದರ್ಶನ ನೀಡುತ್ತಾರೆ. ಮಾರ್ಗದರ್ಶಕರು ಪ್ರವಾಸಿಗರ ಗುಂಪು ಅಥವಾ ವ್ಯಕ್ತಿಗಳಿಗೆ ಐತಿಹಾಸಿಕ ಸ್ಥಳಗಳು, ವಸ್ತು ಸಂಗ್ರಹಾಲಯಗಳು, ಭೌಗೋಳಿಕ ಪ್ರದೇಶಗಳು ಮತ್ತು ಹೊರಾಂಗಣ ಪ್ರವಾಸೀ ತಾಣಗಳಲ್ಲಿ ಮಾರ್ಗದರ್ಶಿಸುತ್ತಾರೆ.  ಅದಕ್ಕಾಗಿ ಮಾರ್ಗದರ್ಶಕರು ತಾವು ಹೊಂದಿರುವ ಆಯಾ ಪ್ರದೇಶಗಳ ಐಥೀಃಆಸಿಕ, ಸಾಂಸ್ಕೃತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಕಂಪೆನಿಗಳು ಮತ್ತು ಸಂಸ್ಥೆಗಳು ತಮ್ಮ ಪ್ರವಾಸಿಗರಿಗೆ ವಿಶೇಷ ತಿಳುವಳಿಕೆ ಸಲುವಾಗಿ ಮಾರ್ಗದರ್ಶಕರನ್ನು ನೇಮಕ ಮಾಡಿಕೊಳ್ಳುತ್ತಾರೆ. ಅಲ್ಲದೇ ಮಾರ್ಗದರ್ಶಕರು ಪ್ರವಾಸಿಗರು ನೋಡಬಯಸುವ ಸ್ಥಳಗಳ ಸಾಂಸ್ಕೃತಿಕ ಮತ್ತು ಮನರಂಜನಾತ್ಮಕ ವಿಷಯಗಳ ವಿಶೇಷ ಮಾಹಿತಿಗಳನ್ನು ಹೊಂದಿರಬೇಕಾಗುತ್ತದೆ.

 

ಪ್ರವಾಸಿ ಮಾರ್ಗದರ್ಶಕರ ಪ್ರಾಮುಖ್ಯತೆ -  Importance of Tourist Guides

ಪ್ರವಾಸೀ ಮಾರ್ಗದರ್ಶನವು ಪ್ರವಾಸೋದ್ಯಮದ ಬಹುಮುಖ್ಯ ಅಂಗವಾಗಿದೆ. ಏಕೆಂದರೆ ಮಾರ್ಗದರ್ಶಕರು ತಾವು ನೀಡುವ ಸೇವೆಯ ಮೂಲಕ ಪ್ರವಾಸಿಗರು ಆ ಸ್ಥಳಕ್ಕೆ ಅಥವಾ ದೇಶಕ್ಕೆ ಪುನಃ ಭೇಟಿ ನೀಡುವಂತೆ ಪ್ರವಾಸಿಗರ ಮನ ಗೆಲ್ಲುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ.

 

ಪ್ರವಾಸೀ ಮಾರ್ಗದರ್ಶಕರ ಗುಣಲಕ್ಷಣಗಳು - Characteristics of Tourist Guides

ಮಾರ್ಗದರ್ಶಕರು ಒಂದು ಪ್ರವಾಸದ ಅಥವಾ ಭೇಟಿಯನ್ನು ಆಯೋಜಿಸುವ, ಮಾಹಿತಿ ನೀಡುವ ಮತ್ತು ಮನರಂಜಿಸುವ ಪಾತ್ರವನ್ನು ನಿರ್ವಹಿಸುತ್ತಾರೆ. ಮಾರ್ಗದರ್ಶಕರು ಮುಕ್ತವಾಗಿ ಕರ್ತವ್ಯ ನಿರ್ವಹಿಸುವ ಸ್ವಯಂ ಉದ್ಯೋಗಿಗಳಾಗಿರುತ್ತಾರೆ. ಮಾರ್ಗದರ್ಶಕರ ಕಾರ್ಯವು ನಿರ್ದಿಷ್ಟ ಕಾಲದಲ್ಲಿ ನಡೆಯುವಂತಹುದು ಮತ್ತು ಸಮಯದ ಮಿತಿಯಿಲ್ಲದೇ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಮಾರ್ಗದರ್ಶನದ ಕೆಲಸವು ಕೆಲವೊಮ್ಮೆ ನೇರವಾಗಿ ಪ್ರವಾಸೋದ್ಯಮ ಸಂಸ್ಥೆಗಳ ಮುಖಾಂತರ ಸಿಗುವಂತಹುದು ಮತ್ತು ಕೆಲವೊಮ್ಮೆ ಪ್ರವಾಸಿಗರ ನೇರ ಸಂಪರ್ಕದಿಂದಲೂ ಮಾರ್ಗದರ್ಶನದ ಅವಕಾಶಗಳು ಲಭಿಸುತ್ತವೆ. ಆದ್ದರಿಂದ ಮಾರ್ಗದರ್ಶಕರು ತಮ್ಮ ಕ್ಷಮತೆಯನ್ನು ಸಾಬೀತುಪಡಿಸಿವ ಮೂಲಕ ಉತ್ತಮ ಮಾರ್ಗದರ್ಶಕರಾಗಬೇಕಾಗುತ್ತದೆ.

ಮಾರ್ಗದರ್ಶಕರು ಹೇಗೆ ಪ್ರವಾಸಿಗರೊಂದಿಗೆ ವರ್ತಿಸುತ್ತಾರೆ ಮತ್ತು ಅವರಿಗೆ ನೀಡುವ ಆತಿಥ್ಯದ ಸ್ವರೂಪವು ನಮ್ಮ ದೇಶದ ಬಗ್ಗೆ ಪ್ರವಾಸಿಗರಲ್ಲಿ ಉತ್ತಮವಾದ ಮತ್ತು ನೆನಪಿನಲ್ಲುಳಿಯಬಹುದಾದ ಭಾವನೆಯನ್ನು ಮೂಡಿಸುತ್ತದೆ. ಮಾರ್ಗದರ್ಶಕರು ತಾವು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಒಪ್ಪಿಕೊಂಡ ಷರತ್ತುಗಳಲ್ಲಿ ಹೇಗೆ ಕರ್ತವ್ಯ ನಿರ್ವಹಿಸಬೇಕು ಮತ್ತು ಪ್ರವಾಸಿಗರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಲಾಗಿರುತ್ತದೆ. ನೋಂದಾಯಿತ ಮಾರ್ಗದರ್ಶಕರು ತಮ್ಮ ದುರ್ನಡತೆ ಮತ್ತು ವೃತ್ತಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರು ಶಿಸ್ತಿನ ಕ್ರಮಕ್ಕೆ ಒಳಪಡುವ ಮತ್ತು ಶಿಕ್ಷೆಗೆ ಗುರಿಯಾಗುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಮಾರ್ಗದರ್ಶಕರು ಪ್ರತಿನಿತ್ಯವೂ ಹೊಸ ಪ್ರವಾಸಿಗರನ್ನು ಭೇಟಿ ಮಾಡುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪ್ರಯಾಣ ಮಾಡುವ ಮತ್ತು ಹೊಸ-ಹೊಸ ಸಂಗತಿಗಳನ್ನು ಕಲಿಯುವ ಅವಕಾಶವನ್ನು ಹೊಂದಿರುತ್ತಾರೆ. ಮಾರ್ಗದರ್ಶಕರಾಗುವುದು ಪ್ರೋತ್ಸಾಹದಾಯಕವಾದ ಮತ್ತು ಶೈಕ್ಷಣಿಕ ಅನುಭವವೂ ಆಗಿರುತ್ತದೆ. ಈ ವೃತ್ತಿಯಲ್ಲಿ ಅನೇಕ ರೀತಿಯ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುವ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶಗಳಿವೆ.

*****

 

ಕೆಲಸದ ವೈಖರಿ- Work Style

ಮಾರ್ಗದರ್ಶಕರು ದಿನವಿಡೀ ಸಂಚರಿಸುವ, ಮಾತನಾಡುವ, ಪ್ರವಾಸಿಗರೊಂದಿಗೆ ಸಂವಹಿಸುವ ಮತ್ತು ಹೊಸ-ಹೊಸ ವಿಷಯಗಳನ್ನು ತಿಳಿದುಕೊಳ್ಳವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಆದ್ದರಿಂದ ಮಾರ್ಗದರ್ಶಕರಿಗೆ ಉತ್ತಮವಾದ ಆರೋಗ್ಯ ಮತ್ತು ದೈಹಿಕ ಕ್ಷಮತೆ ಇರಬೇಕಾಗುತ್ತದೆ. ಇದರಿಂದಾಗಿಯೇ ಬಹುತೇಕ ಮಾರ್ಗದರ್ಶಕರು ಈ ಕೆಲಸವನ್ನು ಒಂದು ವಿಶೇಷ ಆಸಕ್ತಿದಾಯಕ ಕೆಲಸವಾಗಿ ಸ್ವೀಕರಿಸಿರುತ್ತಾರೆ.

 

ಅಗತ್ಯವಾದ ಕೌಶಲ್ಯಗಳು - Skills

ತಾವು ಮಾರ್ಗದರ್ಶಿಸುವ ಪ್ರಕಾರಕ್ಕೆ ತಕ್ಕಂತೆ ಅಗತ್ಯವಾದ ಕೌಶಲ್ಯಗಳು ಭಿನ್ನವಾಗಿರುತ್ತವೆ. ಆದರೆ ಎಲ್ಲಾ ಮಾರ್ಗದರ್ಶಕರೂ ಹೊಂದಿರಲೇಬೇಕಾದ ಕೆಲವು ಕೌಶಲ್ಯಗಳು ಈ ಕೆಳಗಿನಂತಿವೆ:-

ಸಂವಹನ ಕೌಶಲ್ಯ - Communication

ಗ್ರಾಹಕರಿಗೆ ಸೇವೆ ನೀಡುವುದು - Customer service

ಮಹತ್ವದ ಮತ್ತು ನಿಖರವಾದ ಪರಿಣತಿ - Significant, factual expertise

ಆಕರ್ಷಕ ವ್ಯಕ್ತಿತ್ವ - Charisma

ಹೊಂದಾಣಿಕೆಯ ಗುಣ - Adaptability

ಸಮಯಪಾಲನೆ - Punctuality

ನಾಯಕತ್ವದ ಗುಣ - Leadership

*****

 

ವಿವಿಧ ಮಾರ್ಗದರ್ಶಕರು Types of tour guides

ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಬಗೆಯ ಮಾರ್ಗದರ್ಶಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಸಾಮಾನ್ಯವಾಗಿರುವ ಕೆಲವು ಮಾರ್ಗದರ್ಶಕರ ಬಗೆಗಳನ್ನು ಇಲ್ಲಿ ನೀಡಲಾಗಿದೆ.

೧. ಐತಿಹಾಸಿಕ ಮಾರ್ಗದರ್ಶಕರು:

೨. ಸಾಹಸ ಮಾರ್ಗದರ್ಶಕರು:

೩. ನದಿ ಮಾರ್ಗದರ್ಶಕರು:

ಚಾರಣ ಮಾರ್ಗದರ್ಶಕರು:

೫. ಶೋದನಾ ಮಾರ್ಗದರ್ಶಕರು:

೬. ಹಿಮವಲಯದ ಮಾರ್ಗದರ್ಶಕರು:

೭. ಸವಾರಿಯ ಮಾರ್ಗದರ್ಶಕರು:

೮. ಮೀನುಗಾರಿಕಾ ಮಾರ್ಗದರ್ಶಕರು:

9. ಭೌಗೋಳಿಕ ಮಾರ್ಗದರ್ಶಕರು:

೧೦. ವಸ್ತುಸಂಗ್ರಹಾಲಯದ ಮಾರ್ಗದರ್ಶಕರು:

೧೧. ಪ್ರಕೃತಿ ಮಾರ್ಗದರ್ಶಕರು:

೧೨. ನಗರ ಮಾರ್ಗದರ್ಶಕ ರು:

೧೩. ಉದ್ಯಾನವನಗಳ ಮಾರ್ಗದರ್ಶಕರು:

೧೪. ಮುಕ್ತ ಮಾರ್ಗದರ್ಶಕರು:

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources