ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾರ್ಗದರ್ಶಕರು ಪಾಲಿಸಬೇಕಾದ ಕೆಲವು ನಿಯಮಾವಳಿಗಳು
ಪ್ರಾದೇಶಿಕ ಮಟ್ಟದ ಮಾರ್ಗದರ್ಶಕರ ನಡತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಅನ್ವಯಿಸುವ ನೀತಿ ಮತ್ತು ನಿಯಮಾವಳಿಗಳು.
1. ಮಾರ್ಗದರ್ಶಕರು ಕರ್ತವ್ಯನಿರತರಾಗಿರುವಾಗ ಅಧಿಕೃತ ಗುರುತಿನ ಪತ್ರವನ್ನು ಹೊಂದಿರಬೇಕು ಮತ್ತು ತಮ್ಮ ಹೆಸರಿನ ವಿವರವುಳ್ಳ Badge ಅನ್ನು ಧರಿಸಿರಬೇಕು.
2. ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾರ್ಗದರ್ಶಕರ ಗುರುತಿನ ಚೀಟಿಯು ವೈಯುಕ್ತಿಕ ದಾಖಲೆಯಾಗಿದ್ದು, ಅದನ್ನು ಅವರು ಬೇರೆ ಯಾರಿಗೂ ಉಪಯೋಗಿಸಲು ನೀಡಬಾರದು. ಒಂದುವೇಳೆ ಹಾಗೆ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಮತ್ತು ಅವರ ಪರವಾನಗಿಯನ್ನು ರದ್ದುಪಡಿಸಬಹುದು.
3. ಒಂದುವೇಳೆ ಗುರುತಿನ ಚೀಟಿ ಕಳೆದುಹೋದಲ್ಲಿ ಅಥವಾ ಹಾಳಾದಲ್ಲಿ ನಿಗದಿತ ಶುಲ್ಕ ಭರಿಸಿ ಹೊಸ ಗುರುತಿನ ಚೀಟಿಯನ್ನು ಪಡೆಯುವುದು. ಕಳೆದು ಹೋಗಿದ್ದಲ್ಲಿ ಪ್ರಥಮ ಮಾಹಿತಿ ವರದಿಯನ್ನು ಸಂಬಂಧಿತ ಅಧಿಕಾರಿಗೆ ಸಲ್ಲಿಸಬೇಕು.
4. ಮಾರ್ಗದರ್ಶಕರು ಪ್ರವಾಸಿಗರಿಂದ ಯಾವುದೇ ಭಕ್ಷೀಸು ರೂಪದ ಹಣವನ್ನು ನಿರೀಕ್ಷಿಸುವಂತಿಲ್ಲ.
5. ನೋಂದಾಯಿತ ಮಾರ್ಗದರ್ಶಕರು ಕರ್ತವ್ಯದ ವೇಳೆಯಲ್ಲಿ ತಮ್ಮ ಘನತೆಗೆ ತಕ್ಕ ಉತ್ತಮವಾದ ಉಡುಗೆಗಳನ್ನು ಧರಿಸಿರಬೇಕು.
6. ಮಾರ್ಗದರ್ಶಕರು ಭಾರತೀಯ ಮಾರ್ಗದರ್ಶಕರ ೊಕ್ಕೂಟವು ಕಾಲ-ಕಾಲಕ್ಕೆ ನಿಗದಿಪಡಿಸುವಷ್ಟು ಶುಲ್ಕವನ್ನು ಮಾತ್ರ ಪ್ರವಾಸಿಗರಿಂದ ಪಡೆಯಬೇಕು.
7. ಮಾರ್ಗದರ್ಶಕರು ಉದ್ಯಮದ ಯಾವುದೇ ಇತರೆ ಲಾಭದಾಯಕ ವ್ಯವಹಾರಸ್ಥರ ಪರವಾಗಿ ಶಿಫಾರಸ್ಸು ಮಾಡುವಂತಿಲ್ಲ ಮತ್ತು ಯಾವುದೇ ರೀತಿಯ ಮಧ್ಯವರ್ತಿಯ ಕೆಲಸ ಮಾಡಬಾರದು.
8. ಮಾರ್ಗದರ್ಶಕರು ಇತರೆ ಯಾವುದೇ ವ್ಯಕ್ತಿ ಅಥವಾ ಉದ್ಯಮದಲ್ಲಿರುವ ಯಾವುದೇ ಘಟಕದೊಂದಿಗೆ ವ್ಯವಹಾರ ಭಾಗಿತ್ವವನ್ನು ಹೊಂದಿರುವಂತಿಲ್ಲ.
9. ಪ್ರಾದೇಶಿಕ ಮಟ್ಟದ ಮಾರ್ಗದರ್ಶಕರು ಯಾವುದೇ ಟ್ರಾವೆಲ್ ಎಜೆನ್ಸಿಯಲ್ಲಿ ಶಾಶ್ವತ ಅಥವಾ ನಿಯಮಿತ ಸ್ವರೂಪದ ಹುದ್ದೆಯನ್ನು ಹೊಂದುವಂತಿಲ್ಲ.
10. ಸ್ಥಳೀಯವಾಗಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವವರೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿದ್ದಲ್ಲಿ ಅಂತಹ ಮಾರ್ಗದರ್ಶಕರ ಪರವಾನಗಿಯನ್ನು ರದ್ದುಪಡಿಸುವ ಷರತ್ತಿಗೆ ಅವರು ಒಳಗಾಗಿರುತ್ತಾರೆ.
11. ಮಾರ್ಗದರ್ಶಕರು ಪ್ರವಾಸಿಗರನ್ನು ಕೇವಲ ಭೇಟಿ ನೀಡಲು ನಿಗದಿಗೊಳಿಸಿರುವ ಪ್ರವಾಸೀ ತಾಣಗಳಿಗೆ ಮಾತ್ರ ಕರೆದೊಯ್ಯಬೇಕು. ಯಾವುದೇ ಕಾರಣಕ್ಕೂ ಪ್ರವಾಸಿಗರನ್ನು ಮಾರಾಟ ಮಳಿಗೆಗಳಿಗೆ ಕರೆದೊಯ್ಯುವಂತಿಲ್ಲ. ಹಾಗೆ ಮಾಡಿದಲ್ಲಿ ಅಂತಹ ಮಾರ್ಗದರ್ಶಕರ ಪರವಾನಗಿಯನ್ನು ರದ್ದುಪಡಿಸಬಹುದಾಗಿರುತ್ತದೆ.
12. ಮಾರ್ಗದರ್ಶಕರು ಸಕಾರಣವಿಲ್ಲದೇ ಸರ್ಕಾರ ಅಥವಾ ಏಜೆನ್ಸಿಗಳು ವಹಿಸುವ ಕರ್ತವ್ಯವನ್ನು ನಿರಾಕರಿಸುವಂತಿಲ್ಲ. ಒಂದುವೇಳೆ ನಿರಂತರವಾಗಿ ಮೂರು ಬಾರಿ ಅಂತಹ ಕರ್ತವ್ಯದ ನಿರಾಕರಣೆ ಸಂಭವಿಸಿದಲ್ಲಿ ಅವರ ಪರವಾನಗಿಯು ರದ್ದಾಗುವ ಷರತ್ತಿಗೆ ಒಳಪಟ್ಟಿರುತ್ತಾರೆ.
13. ಮಾರ್ಗದರ್ಶಕರು ತಮ್ಮ ಕರ್ತವ್ಯದ ವೇಳೆಯಲ್ಲಿ ಸಂಪರ್ಕಕ್ಕೆ ಬರುವ ಪ್ರವಾಸಿಗರು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಮತ್ತು ಸೌಹಾರ್ದಯುತ ನಡತೆಯನ್ನು ಹೊಂದಿರಬೇಕು.
14. ಮಾರ್ಗದರ್ಶಕರು ವರ್ಷಕ್ಕೊಮ್ಮೆ ತಾವು ಸೇವೆ ನೀಡಿದ ವಿಶೇಷ ವ್ಯಕ್ತಿಗಳ, ಗುಂಪುಗಳ ಮತ್ತು ವಿದೇಶೀ ಪ್ರವಾಸಿಗರ ಕರ್ತವ್ಯಗಳ ಒಟ್ಟು ಸಂಖ್ಯೆಯನ್ನು ವರದಿ ರೂಪದಲ್ಲಿ ಸಲ್ಲಿಸುವುದು ಅಗತ್ಯವಾಗಿರುತ್ತದೆ.
15. ಸರ್ಕಾರದವರು ಕಾಲಕಾಲಕ್ಕೆ ನಿಗದಿಪಡಿಸುವ ಅಲ್ಪಕಾಲಿಕ ತರಬೇತಿಗಳು ಮತ್ತು ಪುನಶ್ಚೇತನ ತರಬೇತಿಗಳನ್ನು
16. ಮಾರ್ಗದರ್ಶಕರು ಸೇವೆಗೆ ಸೇರುವಾಗ ಮತ್ತು ಇಲಾಖೆಯವರು ತಿಳಿಸಿದಾಗ ತಮ್ಮ ದೈಹಿಕ ದೃಢತೆಯ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
17. ಮೂರು ತಿಂಗಳವರೆಗೆ ಕರ್ತವ್ಯಕ್ಕೆ ಗೈರುಹಾಜರಾಗುವವರು ಮುಂಚಿತವಾಗಿ ಬರವಣಿಗೆ ರೂಪದಲ್ಲಿ ಸಂಬಂಧಿತ ಕಛೇರಿಗೆ ಮಾಹಿತಿ ನೀಡಬೇಕು.
18. ತಮ್ಮ ದುರ್ನಡತೆಯ ಕಾರಣದಿಂದ ಪೋಲೀಸ್ ಬಂಧನಕ್ಕೊಳಗಾಗಿರುವ ಮಾರ್ಗದರ್ಶಕರ ಪರವಾನಗಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗುತ್ತದೆ. ಒಂದುವೇಳೆ ಅಪರಾಧ ಸಾಬೀತಾದಲ್ಲಿ ಅವರ ಪರವಾನಗಿಯು ರದ್ದಾಗುತ್ತದೆ.
19. ದೇಶದ ನಕಾರಾತ್ಮಕ ಚಿತ್ರಣ ನೀಡುವ ಸ್ಥಳಗಳ ಭಾವಚಿತ್ರಗಳ ಗ್ರಹಿಕೆ ಅಥವಾ ಕಾನೂನಾನುಸಾರ ನಿರ್ಬಂಧಕ್ಕೊಳಪಡಿಸಿದ ಸ್ಥಳಗಳ ಭಾವಚಿತ್ರಗಳನ್ನು ವಿದೇಶೀ ಪ್ರವಾಸಿಗರು ತೆಗೆಯದಂತೆ ಅವರಿಗೆ ಎಚ್ಚರಿಕೆ ನೀಡುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ.
20. ಒಂದುವೇಳೆ ಮಾರ್ಗದರ್ಶಕನೊಬ್ಬನು ನಿರಂತರ ಎರಡು ವರ್ಷಗಳ ಕಾಲ ಅನಾರೋಗ್ಯದ ಕಾರಣದಿಂದ ಅಥವಾ ವಿದೇಶಕ್ಕೆ ಹೋಗಿದ್ದು, ವೃತ್ತಿಯಿಂದ ದೂರವಿದ್ದರೆ ಅಂತಹವರ ಪರವಾನಗಿಯು ರದ್ದಾಗುತ್ತದೆ. ಅವರು ಮತ್ತೊಮ್ಮೆ ಮಾರ್ಗದರ್ಶಕ ವೃತ್ತಿಗೆ ಬರುವುದಾದರೆ ಸರ್ಕಾರ ನಿಗದಿಪಡಿಸಿರುವ ಪುನಶ್ಚೇತನ ತರಬೇತಿಯನ್ನು ಮುಗಿಸಿಕೊಂಡು ಹೊಸ ಪರವಾನಗಿ ಪಡೆಯಬೇಕಾಗುತ್ತದೆ.
21. ಮಾರ್ಗದರ್ಶಕರು ಸರ್ಕಾರವು ಕಾಲಕಾಲಕ್ಕೆ ವಿದಿಸುವ ನಿಯಮಗಳಿಗೆ ಬದ್ಧರಾಗಿರಬೇಕು. ತಪ್ಪಿದಲ್ಲಿ ಅಂತಹವರ ಪರವಾನಗಿಯನ್ನು ಹಿಂಪಡೆಯಬಹುದಾಗಿರುತ್ತದೆ.
22. ಮಾರ್ಗದರ್ಶಕರು ಪರವಾನಗಿ ಪಡೆಯುವ ಮುನ್ನ ಸನ್ನಡತೆಯ ಘೋಷಣೆಗೆ ಸಹಿ ಹಾಕಬೇಕು ಮತ್ತು ಅದಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು.
23. ಮಾರ್ಗದರ್ಶಕರು 1958ರ ಪ್ರಾಚೀನ ಸ್ಮಾರಕಗಳು ಪುರಾತತ್ವ ಸ್ಥಳಗಳು & ಅವಶೇಷಗಳ ಕಾಯ್ದೆಯ ನೀತಿ ಮತ್ತು 1959ರ ನಿಯಮಗಳಿಗೆ ಬದ್ಧರಾಗಿರಬೇಕು.
24. ಮಾರ್ಗದರ್ಶಕರು ಭಾರತೀಯ ಪುರಾತತ್ವ ಸ್ಮಾರಕಗಳ ಪ್ರಾಂಗಣದಲ್ಲಿರುವಾಗ ಅಲ್ಲಿನ ಸಿಬ್ಬಂದಿಗಳು ನೀಡುವ ಸೂಚನೆಗಳನ್ನು ಪಾಲಿಸಬೇಕು.
25. ಮಾರ್ಗದರ್ಶಕರು ಪುರಾತತ್ವ ಇಲಾಖೆಯ ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ಸಮಯದಲ್ಲಿ ಅಲ್ಲಿನ ಸಂದರ್ಶಕರ ನೋಂದಣಿ ಕಡತದಲ್ಲಿ ಭೇಟಿಯ ವಿವರಗಳನ್ನು ನಮೂದಿಸಬೇಕು.
****************************************
Comments
Post a Comment