ಮಾರ್ಗದರ್ಶಕರ ವಿಧಗಳು Types of tour guides & ಸಾಮಾನ್ಯ ಕೌಶಲ್ಯಗಳು - Common Skills

ಮಾರ್ಗದರ್ಶಕರ ವಿಧಗಳು  Types of tour guides

ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಬಗೆಯ ಮಾರ್ಗದರ್ಶಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಸಾಮಾನ್ಯವಾಗಿರುವ ಕೆಲವು ಮಾರ್ಗದರ್ಶಕರ ಬಗೆಗಳನ್ನು ಇಲ್ಲಿ ನೀಡಲಾಗಿದೆ.

೧. ಐತಿಹಾಸಿಕ ಮಾರ್ಗದರ್ಶಕರು: ಐತಿಹಾಸಿಕ ಅವಶೇಷಗಳು, ಕೋಟೆಗಳು, ದೇವಾಲಯಗಳು, ಯುದ್ಧಭೂಮಿಗಳು ಮೊದಲಾದೆಡೆ ಮಾರ್ಗದರ್ಶಿಸುವ ಮಾರ್ಗದರ್ಶಕರು ಆಯಾ ಸ್ಥಳಗಳ ಐತಿಹಾಸಿಕ ಮಾಹಿತಿ ಹೊಂದಿರುತ್ತಾರೆ ಮತ್ತು ಪ್ರವಾಸಿಗರಿಗೆ ಆಕರ್ಷಕವಾಗಿ ಅವುಗಳ ಬಗ್ಗೆ ವಿವರಣೆ ನೀಡುತ್ತಾರೆ.

೨. ಸಾಹಸ ಮಾರ್ಗದರ್ಶಕರು: ಪ್ರವಾಸಿಗರಿಗೆ ಅಗತ್ಯವಾದ ಸುರಕ್ಷತಾ ವಿವರಗಳನ್ನು ನೀಡುವುದರ ಜೊತೆಗೆ, ಸುರಕ್ಷತಾ ಸಾದನ ಸಲಕರಣೆಗಳನ್ನು ಬಳಸುವ ಮತ್ತು ಅವುಗಳ ಪ್ರಾಯೋಗಿಕ ತಿಳುವಳಿಕೆಯನ್ನು ಹೊಂದಿ ಪ್ರವಾಸಿಗರಿಗೆ ಅಗತ್ಯವಾದ ಮಾರ್ಗದರ್ಶನ ಮಾಡುತ್ತಾರೆ. ಕೆಳಗೆ ಅಂತಹ ಕೆಲವು ಸಾಹಸ ಮಾರ್ಗದರ್ಶಕರ  ವಿವರಗಳನ್ನು ನೀಡಲಾಗಿದೆ.:

  1. ನದಿ ಮಾರ್ಗದರ್ಶಕರು: ನದಿ ನೀರಿನಲ್ಲಿ ಪುಟ್ಟ ದೋಣಿಗಳಲ್ಲಿ ಪ್ರವಾಹದೊಂದಿಗೆ ಸಂಚರಿಸುವ ಈ ಕ್ರೀಡೆಯಲ್ಲಿ ಮಾರ್ಗದರ್ಶಕರು ಪ್ರವಾಸಿಗರಿಗೆ ಅಗತ್ಯ ಸೇವೆ ಒದಗಿಸುವ ಜೊತೆಗೆ ಉಳಿದುಕೊಳ್ಳಲು ವ್ಯವಸ್ಥೆ ಮತ್ತು ಆಹಾರದ ಅನುಕೂಲಗಳನ್ನೂ ಕಲ್ಪಿಸಬೇಕಾಗುತ್ತದೆ. ಏಕೆಂದರೆ ಈ ಪ್ರವಾಸವು ಒಂದು ದಿನ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಳ್ಳಬಹುದು. ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ. ಈ ಕ್ಷೇತ್ರದಲ್ಲಿ ಮಾರ್ಗದರ್ಶಕರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುತ್ತದೆ.
  2. ಚಾರಣ ಮಾರ್ಗದರ್ಶಕರು: ಕಡಿದಾದ ಬೆಟ್ಟ-ಗುಡ್ಡಗಳನ್ನು ವಿವಿಧ ಸುರಕ್ಷತಾ ಸಲಕರಣೆಗಳ ಸಹಾಯದಿಂದ ಹತ್ತುವುದೇ ಚಾರಣ. ಈ ಸ್ಥಳಗಳಲ್ಲಿ ಮಾರ್ಗದರ್ಶನ ಮಾಡುವವರು ಪ್ರವಾಸಿಗರಿಗೆ ವಿವಿಧ ಕೌಶಲ್ಯಗಳನ್ನು ಕಲಿಸಬೇಕಾಗುವುದರಿಂದ ಅಲ್ಲಿ ಬಳಸುವ ಸುರಕ್ಷತಾ ಸಾಧನ-ಸಲಕರಣೆಗಳ ಬಗ್ಗೆ ವಿಶೇಷ ತರಬೇತಿ ಹೊಂದಿರಬೇಕಾಗುತ್ತದೆ.
  3. ಶೋದನಾ ಮಾರ್ಗದರ್ಶಕರು: ಈ ಬಗೆಯ ಮಾರ್ಗದರ್ಶನದಲ್ಲಿ ಪ್ರವಾಸಿಗರಿಗೆ ವಿವಿಧ ಪ್ರದೇಶಗಳ ಮೂಲಕ ಹಾದು ತಮ್ಮ ಗುರಿ ತಲುಪುವ ಬಗ್ಗೆ ಮಾರ್ಗದರ್ಶನ ಮಾಡಬೇಕಾಗುವುದರಿಂದ ಮಾರ್ಗದರ್ಶಕರಿಗೆ ಆ ಭೌಗೋಳಿಕ ಸನ್ನಿವೇಶದ ಬಗ್ಗೆ ವಿಶೇಷ ತಿಳುವಳಿಕೆ ಇರಬೇಕಾಗುತ್ತದೆ.

D.    ಹಿಮವಲಯದ ಮಾರ್ಗದರ್ಶಕರು: ಹಿಮಾಚ್ಛಾದಿತ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ವಿವಿಧ ಸುರಕ್ಷತಾ ಸಲಕರಣೆಗಳ ಮೂಲಕ ಅಲ್ಲಿನ ಸ್ಥಳಗಳಲ್ಲಿ ಮಾರ್ಗದರ್ಶನ ಮಾಡುವುದು. ಇದರಲ್ಲೂ ಸಹಾ ಬಳಸುವ ಉಪಕರಣಗಳ ಬಗ್ಗೆ ಮಾರ್ಗದರ್ಶಕರಿಗೆ ಮಾಹಿತಿ ಇರಬೇಕಾಗುತ್ತದೆ.

E.     ಅಶ್ವ ಸವಾರಿಯ ಮಾರ್ಗದರ್ಶಕರು: ಕುದುರೆಗಳ ಮೇಲೆ ಸವಾರಿ ಮಾಡುತ್ತಾ ವನ್ಯಜೀವಿಗಳು, ಭೌಗೋಳಿಕ ವಿವರಗಳು ಮತ್ತು ಸಸ್ಯವರ್ಗದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇಂತಹ ಮಾರ್ಗದರ್ಶಕರು ಕುದುರೆಗಳ ನಿರ್ವಹಣೆಯ ಬಗ್ಗೆಯೂ ತರಬೇತಿ ಪಡೆದಿರಬೇಕಾಗುತ್ತದೆ.

  1. ಮೀನುಗಾರಿಕಾ ಮಾರ್ಗದರ್ಶಕರು: ಸಮುದ್ರ, ನದಿ, ಸರೋವರ ಮೊದಲಾದ ಜಲಕೇಂದ್ರಗಳಲ್ಲಿ ಮೀನು ಹಿಡಿಯುವ ಬಗ್ಗೆ ಮಾರ್ಗದರ್ಶನ ಮಾಡುವುದು ಇಲ್ಲಿನ ಮಾರ್ಗದರ್ಶಕರ ಕೆಲಸವಾಗಿರುತ್ತದೆ. ಆಳ ನೀರು ಅಥವಾ ಸಮುದ್ರದಲ್ಲಿ ಮಾರ್ಗದರ್ಶನ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆಯ ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮಾರ್ಗದರ್ಶಕರ ಜವಾಬ್ದಾರಿಯಾಗಿರುತ್ತದೆ.
  2. ಭೌಗೋಳಿಕ ಮಾರ್ಗದರ್ಶಕರು: ಚತುರ್ಚಕ್ರ ವಾಹನಗಳಲ್ಲಿ ಪ್ರವಾಸಿಗರನ್ನು ವಿಶಾಲವಾದ ಭೌಗೋಳಿಕ ಪ್ರದೇಶವೊಂದರಲ್ಲಿ ಸಂಚರಿಸುವಾಗ ಮಾರ್ಗದರ್ಶನ ಮಾಡುವುದು ಇಲ್ಲಿನ ಕೆಲಸವಾಗಿರುತ್ತದೆ. ಮಾರ್ಗದರ್ಶಕರು ವಾಹನ ಚಾಲನೆಯ ಜೊತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ. ಎಲ್ಲಾ ಸಾಹಸ ಮಾರ್ಗದರ್ಶನ ಕಾರ್ಯಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಮನರಂಜನೆಗಳು ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳಾಗಿರುತ್ತವೆ.

೩. ವಸ್ತುಸಂಗ್ರಹಾಲಯದ ಮಾರ್ಗದರ್ಶಕರು: ವಿಶಾಲವಾದ ವಸ್ತುಸಂಗ್ರಹಾಲಯಗಳಲ್ಲಿ ಅಲ್ಲಿನ ವ್ಯವಸ್ಥಾಪಕರು ಮಾರ್ಗದರ್ಶಕರನ್ನು ನೇಮಿಸಿರುತ್ತಾರೆ. ವಸ್ತುಸಂಗ್ರಹಾಲಯದ ಪ್ರವೇಶದಿಂದ ಮೊದಲ್ಗೊಂಡು ಎಲ್ಲಾ ವಿಭಾಗಗಳಲ್ಲಿನ ವಿವಿಧ ವಸ್ತುಗಳ ವಿವರವಾದ ಮಾಹಿತಿ ನೀಡುವುದು ಇಲ್ಲಿನ ಮಾರ್ಗದರ್ಶಕರ ಕರ್ತವ್ಯವಾಗಿರುತ್ತದೆ.

೪. ಪ್ರಕೃತಿ ಮಾರ್ಗದರ್ಶಕರು: ಸಾಹಸ ಮಾರ್ಗದರ್ಶಕರಂತಲ್ಲದೇ ಇಲ್ಲಿ ನಡಿಗೆ, ವಾಹನ ಸವಾರಿ ಮೊದಲಾದ ಮಾಧ್ಯಮಗಳ ಮೂಲಕ ವಿಶಾಲವಾದ ಪ್ರದೇಶ ಅಥವಾ ಮರಳುಗಾಡಿನಂತಹ ಸ್ಥಳಗಳಲ್ಲಿ ಪ್ರವಾಸಿಗರಿಗೆ ಭೂಮೇಲ್ಮೈ ವಿವರಗಳು, ಪ್ರಕೃತಿ ಮತ್ತು ಪ್ರಾಣಿ-ಪಕ್ಷಿಗಳ ಪ್ರಭೇದಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.

೫. ನಗರ ಮಾರ್ಗದರ್ಶಕ: ದೊಡ್ಡ ನಗರಗಳಲ್ಲಿ ದ್ವಿಚಕ್ರ, ಚತುರ್ಚಕ್ರ ಅಥವಾ ಬಸ್ಸಿನಂತಹ ವಾಹನಗಳಲ್ಲಿ ಆಯಾ ನಗರಗಳಲ್ಲಿನ ಐತಿಹಾಸಿಕ ಸ್ಥಳಗಳು, ಉದ್ಯಾನವನಗಳು, ಆಕರ್ಷಕವಾದ ಕಟ್ಟಡಗಳು, ಹೋಟೇಲುಗಳು, ದೇವಾಲಯಗಳು, ಮಾರುಕಟ್ಟೆ ಪ್ರದೇಶಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಮಾರ್ಗದರ್ಶಕನದ್ದಾಗಿರುತ್ತದೆ. ಆದ್ದರಿಂದ ಆ ನಗರದ ವಿವಿಧ ಪ್ರವಾಸಿ ತಾಣಗಳ ಮಾಹಿತಿ ಹೊಂದಿರುವುದು ಅವಶ್ಯಕವಾಗಿರುತ್ತದೆ.

೬. ಉದ್ಯಾನವನಗಳ ಮಾರ್ಗದರ್ಶಕರು: ವಿಶೇಷ, ಪ್ರಾಣಿ, ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದ ಉದ್ಯಾನವನಗಳಲ್ಲಿ ಅಲ್ಲಿನ ಪ್ರಾಣಿ-ಪಕ್ಷಿ ಸಂಕುಲದ ಬಗ್ಗೆ ವಿಶೇಷವಾದ ವಿವರಗಳನ್ನು ನೀಡುವುದು ಇಲ್ಲಿನ ಮಾರ್ಗದರ್ಶಕರ ಕೆಲಸವಾಗಿರುತ್ತದೆ.

***** 


ಅಗತ್ಯವಾದ ಕೌಶಲ್ಯಗಳು - Skills

ತಾವು ಮಾರ್ಗದರ್ಶಿಸುವ ಪ್ರಕಾರಕ್ಕೆ ತಕ್ಕಂತೆ ಅಗತ್ಯವಾದ ಕೌಶಲ್ಯಗಳು ಭಿನ್ನವಾಗಿರುತ್ತವೆ. ಆದರೆ ಎಲ್ಲಾ ಮಾರ್ಗದರ್ಶಕರೂ ಹೊಂದಿರಲೇಬೇಕಾದ ಕೆಲವು ಕೌಶಲ್ಯಗಳು ಈ ಕೆಳಗಿನಂತಿವೆ:-

• ಸಂವಹನ ಕೌಶಲ್ಯ - Communication

• ಗ್ರಾಹಕರಿಗೆ ಸೇವೆ ನೀಡುವುದು - Customer service

• ಮಹತ್ವದ ಮತ್ತು ನಿಖರವಾದ ಪರಿಣತಿ - Significant, factual expertise

• ಆಕರ್ಷಕ ವ್ಯಕ್ತಿತ್ವ - Charisma

• ಹೊಂದಾಣಿಕೆಯ ಗುಣ - Adaptability

• ಸಮಯಪಾಲನೆ - Punctuality

• ನಾಯಕತ್ವದ ಗುಣ - Leadership

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources