ತಲಕಾಡಿನ ಗಂಗರ ಕಲೆ, ವಾಸ್ತು, ಶಿಲ್ಪ, ಸಾಹಿತ್ಯ, ಶಿಕ್ಷಣ ಮತ್ತು ಆಡಳಿತ ಪದ್ಧತಿ
ಗಂಗರ ಸಾಂಸ್ಕೃತಿಕ
ಕೊಡುಗೆಗಳು
ಶಿಕ್ಷಣ:- ಅಗ್ರಹಾರಗಳು,
ಮಠಗಳು, ಜೈನ ಬಸದಿಗಳು ಶಿಕ್ಷಣದ ಕೇಂದ್ರಗಳಾಗಿದ್ದವು. ರಾಜಕುಮಾರರಿಗೆ ಶಿಕ್ಷಣ ಕಡ್ಡಾಯವಾಗಿತ್ತು.
ತತ್ವ, ವೈದಿಕ, ಜೈನ ತತ್ವ, ಸಾಹಿತ್ಯ, ವ್ಯಾಕರಣ ಮೊದಲಾದವು ಬೋಧನಾ ವಿಷಯಗಳು. ಪಾಳಿ, ಪ್ರಾಕೃತ, ಕನ್ನಡ
ಮತ್ತು ಸಂಸ್ಕೃತ ಭಾಷೆಗಳ ಕಲಿಕೆ ಇತ್ತು. ಶ್ರವಣಬೆಳಗೊಳ, ತಲಕಾಡು, ಮಾಕುಂದ
& ಮಾನ್ಯಪುರಗಳು ಪ್ರಸಿದ್ದ ಶಿಕ್ಷಣ
ಕೇಂದ್ರಗಳು. ಅಗ್ರಹಾರಗಳಲ್ಲಿ ವೈದಿಕ
ಶಿಕ್ಷಣ ಸಂಸ್ಕೃತದಲ್ಲಿ ನಡೆಯುತ್ತಿತ್ತು. ಧಾರ್ಮಿಕ ಮಠಗಳಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವಿತ್ತು.
ಧರ್ಮ:- ಆರಂಭದಲ್ಲಿ
ಶೈವರಾಗಿದ್ದು ತದನಂತರ ಜೈನ ಧರ್ಮ ಸ್ವೀಕಾರ ಮಾಡಿದರು. ಪರಧರ್ಮಸಹಿಷ್ಣುಗಳು. ಪ್ರಜೆಗಳಿಗೆ ಧಾರ್ಮಿಕ
ಸ್ವಾತಂತ್ರವಿತ್ತು. ಕಾಳಮುಖ , ಕಾಪಾಲಿಕಾ
ಹಾಗೂ ಪಾಶುಪಥ - ಇವರ ಕಾಲದಲ್ಲಿದ್ದ ಶೈವ ಪಂಥಗಳು.
ಇವರ ಕಾಲದಲ್ಲಿ ಜೈನ ಧರ್ಮ ರಾಜಾಶ್ರಯ ಪಡೆದಿತ್ತು. ಶ್ರವಣಬೆಳಗೊಳ ಜೈನರ ಕಾಶಿ ಎಂದು
ಪ್ರಸಿದ್ದಿಯಾಗಿದೆ
ಸಾಹಿತ್ಯದ
ಕೊಡುಗೆಗಳು:-
ಪಾಳಿ, ಪ್ರಾಕೃತ,
ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಸಾಹಿತ್ಯ ರಚನೆಗೊಂಡಿತು. ಸ್ವತಃ ರಾಜರೇ ಕವಿಗಳಾಗಿದ್ದರು. ಗಂಗರ ಆಶ್ರಯದಲ್ಲಿ
ಬರೆಯಲ್ಪಟ್ಟ ಮಹಾ ಕೃತಿಗಳು ಮತ್ತು ಕವಿಗಳ ವಿವರಗಳು:
ದತ್ತಕ
ಸೂತ್ರ - raja2 ನೇ ಮಾಧವ
ಶೂದ್ರಂತ
ಹಾಗೂ ಹರಿವಂಶ - ಗುಣವರ್ಮ
ಛಂದೋಂಬುದಿ
- 1ನೇ ನಾಗವರ್ಮ
ಗಜಾಷ್ಟಕ
, ಸೇತುಬಂಧ , ಶಿವಮಾರ ತರ್ಕ - 2 ನೇ ಶಿವಮಾರ
ಚಂದ್ರ
ಪ್ರಭಾ ಪುರಾಣ - ವೀರನಂದಿ
ಬೃಹತ್
ಕಥಾವನ್ನು ಸಂಸ್ಕೃತ ಭಾಷೆಗೆ ಅನುವಾದ ಹಾಗೂ ಭಾರವಿಯ ಕಿರತಾರ್ಜುನಿಯ
ಕೃತಿಯ 15ನೆ ಸರ್ಗಕ್ಕೆ ಭಾಷ್ಯ - ದುರ್ವೀನಿತ
ಗಜಶಾಸ್ತ್ರ
– ಶ್ರೀಪುರುಷ
ರಾಘವಪಾಂಡವೀಯ
– ಹೇಮಸೇನ
ಗದ್ಯಚಿಂತಾಮಣಿ,
ಕ್ಷಾತ್ರ ಚೂಡಾಮಣಿ – ವಾಧಿಭಸಿಂಹ
ಚರಿತ್ರಸಾರ,
ಚಾವುಂಡರಾಯ ಪುರಾಣ ಅಥವಾ ತ್ರಿಶಷ್ಟಿಲಕ್ಷಣ ಪುರಾಣ, ಲೋಕೋಪಕಾರ – ಚಾವುಂಡರಾಯ
ಪರಶುರಾಮ ಚರಿತೆ
– ರನ್ನ (ಕೃತಿ ಅಲಭ್ಯ)
ಕಲೆ
ಮತ್ತು ವಾಸ್ತುಶಿಲ್ಪಕ್ಕೆ ಗಂಗರ ಕೊಡುಗೆಗಳು:
ಇವರ
ವಾಸ್ತು ಶಿಲ್ಪ ಕದಂಬರು ಹಾಗೂ ಪಲ್ಲವರ ಕಲೆಯ
ಮಿಶ್ರಣವಾಗಿದೆ
ಇವರ ಕಾಲದ ಮನ್ನೇಯ
ಕಪಿಲೇಶ್ವರ ದೇವಾಲಯ - ವಾಸ್ತುಶಿಲ್ಪದ ದೃಷ್ಠಿಯಿಂದ ಪ್ರಸಿದ್ದವಾಗಿದೆ
ಗಂಗರ
ಕಾಲದ ಪ್ರಮುಖ ಬಸದಿಗಳು - ಪಾಶ್ವನಾಥ ಬಸದಿ ಹಾಗೂ ಚಾವುಂಡರಾಯ
ಬಸದಿ; ಇವು ಶ್ರವಣಬೆಳಗೊಳದಲ್ಲಿವೆ.
ಶ್ರವಣಬೆಳಗೊಳದಲ್ಲಿರುವ
ಪ್ರಮುಖ ಸ್ಥಂಭಗಳು - ಮಾನಸ್ತಂಭ , ಬ್ರಹ್ಮದೇವರ ಸ್ತಂಭ ಹಾಗೂ ತ್ಯಾಗದ ಬ್ರಹ್ಮ
ದೇವರ ಸ್ತಂಭ
ಮಾನಸ್ತಂಭಗಳ
ಮೇಲೆ ತೀರ್ಥಂಕರರ ವಿಗ್ರಹಗಳನ್ನು ಮತ್ತು ಬ್ರಹ್ಮದೇವರ ಸ್ತಂಭಗಳು ಮೇಲೆ ಬ್ರಹ್ಮದೇವರ ವಿಗ್ರಹಗಳನ್ನು
ಸ್ಥಾಪಿಸಲಾಗಿದೆ.
ತೀರ್ಥಂಕರರ ವಿಗ್ರಹಗಳು
ಹೆಚ್ಚು ನಿರ್ಮಾಣಗೊಂಡಿವೆ.
ಸರಸ್ವತಿ, ಲಕ್ಷ್ಮಿ,
ವಿಷ್ಣು, ಬುದ್ಧ, ಮಹಾವೀರ, ಯಕ್ಷ ಮತ್ತು ಯಕ್ಷಿಯರ ವಿಗ್ರಹಗಳು ನಿರ್ಮಾಣಗೊಂಡಿವೆ.
ನೊಳಂಬರು ನಿರ್ಮಿಸಿದ
ತುಮಕೂರು ಜಿಲ್ಲೆಯ ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯದ ನವರಂಗದ ಛಾವಣಿಯಲ್ಲಿನ ನಟರಾಜ ಮತ್ತು ಅಷ್ಟದಿಕ್ಪಾಲಕರ
ಕೆತ್ತನೆಗಳು ಅಪೂರ್ವವಾಗಿವೆ.
ವಿಗ್ರಹಗಳಿಗೆ
ಕಿರೀಟ, ವಸ್ತ್ರಾಭರಣಗಳು, ಯಜ್ಞೋಪವೀತ, ಶಂಖ-ಚಕ್ರಗಳು ಕಲಾತ್ಮಕವಾಗಿ ಮೂಡಿವೆ.
ಇವರ ಶಿವಾಲಯಗಳಲ್ಲಿ
ಸೂರ್ಯನ ವಿಗ್ರಹ (ರವಿಶಂಕರ) ವಿಶೇಷವಾಗಿ ಕಂಡುಬಂದಿವೆ.
ತಲಕಾಡಿನ ಮರುಳೇಶ್ವರ
ದೇವಾಲಯದಲ್ಲಿ ಸೂರ್ಯನ ಪ್ರಭಾವಳಿಯಲ್ಲಿ ಅಷ್ಟಗ್ರಹಗಳ ಮೂರ್ತಿಗಳು ಸೂಕ್ಷ್ಮವಾಗಿ ಮೂಡಿಬಂದಿವೆ.
ಶಿವ ದೇವಾಲಯಗಳಲ್ಲಿ
ಸುಬ್ರಮಣ್ಯ, ಗಣೇಶ, ನಂದಿ, ದುರ್ಗಿ ಮತ್ತು ಸಪ್ತಮಾತೃಕೆಯರ ವಿಗ್ರಹಗಳು ಕಂಡುಬಂದಿವೆ.
ಚಿತ್ರಕಲೆ:-
ಶ್ರವಣಬೆಳಗೊಳದ ಜೈನಮಠ, ಗುಬ್ಬಿ ಮತ್ತು ನಿಟ್ಟೂರುಗಳಲ್ಲಿನ ಜೈನಬಸದಿಗಳಲ್ಲಿ ಇವರ ಕಾಲದ ಚಿತ್ರಕಲೆಯನ್ನು
ಜೈನ ಯಕ್ಷ, ಯಕ್ಷಿ ಮತ್ತು ಜೈನ ಯತಿಗಳ ಚಿತ್ರಗಳಿವೆ. ಜೈನ ಧಾರ್ಮಿಕ ಕೃತಿಗಳಲ್ಲೂ ಚಿತ್ರಗಳು ಕಂಡುಬಂದಿವೆ.
ಗಂಗರ
ಕಾಲದ ಅಭೂತ ಪೂರ್ವ ಶಿಲ್ಪ
ಕಲಾ ಕೆತ್ತನೆ - ಶ್ರವಣಬೆಳಗೊಳದ 58.8 ಅಡಿಗಳ ಎತ್ತರದ ಗೊಮ್ಮಟೇಶ್ವರ ಏಕಶಿಲಾವಿಗ್ರಹ
ಹೆಚ್ಚಿನ ವಿವರಗಳು:
ಪಾದದಿಂದ ಕಿವಿ:- 51 ಅಡಿಗಳು.
ಕೇಶದ ಅಂಚಿನಿಂದ
ನೆತ್ತಿಯವರೆಗಿನ ಎತ್ತರ:- 6.6 ಅಡಿಗಳು
ಟೊಂಕ/ಸೊಂಟದ
ಅಗಲ:- ಹತ್ತು ಅಡಿಗಳು
ಮಧ್ಯದ ಕೈಬೆರಳ
ಉದ್ದ:- ಐದು ಅಡಿಗಳು
ಹೆಬ್ಬೆಟ್ಟು:-
4.8 ಅಡಿಗಳು
1980 ರಲ್ಲಿ
ಕರ್ನಾಟಕ ವಿಶ್ವವಿದ್ಯಾಲಯದ ಭಾರತೀಯ ಕಲಾಸಂಸ್ಥೆಯ ಥಿಯೋಡಲೈಟ್ ಉಪಕರಣದಿಂದ ವಿಗ್ರಹದ ನಿಖರವಾದ ಎತ್ತರ
58.8 ಅಡಿಗಳು ಎಂದು ನಿರ್ಧರಿಸಲಾಯಿತು
ಸಂಗೀತ-ನೃತ್ಯ:-
ಅರಸು ಮನೆತನದವರು ಮತ್ತು ಸಾರ್ವಜನಿಕರಿಗೆ ಕಲಿಯಲು ಅವಕಾಶವಿತ್ತು. ಸ್ತ್ರೀ-ಪುರುಷರಿಗೆ ಸಮಾನಾವಕಾಶವಿತ್ತು.
ಇವರ ಕಾಲದಲ್ಲಿದ್ದ
ಪ್ರಸಿದ್ದ ನೃತ್ಯಗಾತಿ - ಬಾಚಲದೇವಿ
ಬಾಚಲದೇವಿಗೆ
ಇದ್ದ ಬಿರುದುಗಳು - ನೃತ್ಯವಿಶಾರದೆ ಹಾಗೂ ಪಾತ್ರ ಜಗದವಳೆ;
ಇವು ಶಾಸನೋಕ್ತವಾಗಿವೆ.
ಗಂಗರ
ಆಡಳಿತ
ಗಂಗರು
ತಮ್ಮದೇ ಆದ ರೀತಿಯಲ್ಲಿ ನಾಡಿನ ಏಳಿಗೆಗೆ ಆಡಳಿತವನ್ನು ನೀಡಿದರು.
ಕದಂಬರಂತೆ
ಗಂಗರು ಕೂಡ ಆಡಳಿತದಲ್ಲಿ ಕನ್ನಡವನ್ನು
ಬಳಸಿದರು, ಇವರ ಎಲ್ಲಾ ಶಾಸನಗಳು
ಕನ್ನಡದಲ್ಲಿವೆ.
ಗಂಗರಿಗೆ
ರಾಜ್ಯವನ್ನು ವಿಸ್ತರಿಸುವುದು ಎಷ್ಟು
ಮುಕ್ಯವಾಗಿತ್ತೋ ಹಾಗೆಯೇ ಪ್ರಜೆಗಳಿಗೆ ಒಳ್ಳೆಯ ಆಡಳಿತವನ್ನು ನೀಡುವದು ಅಷ್ಟೇ ಮುಕ್ಯವಾಗಿತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ.
ಗಂಗರು
ತಮ್ಮ ಲಾಂಚನವಾಗಿ ಮದದಾನೆಯನ್ನು ಬಳಸಿಕೊಂಡರು, ಇದರ ಹಿನ್ನೆಲೆ ಹಳೆಮೈಸೂರು
ಬಾಗದಲ್ಲಿ ಆನೆಗಳು ಹೆಚ್ಚು ಇದ್ದುದರಿಂದವಿರಬಹುದು.
ಮೊದಲು
‘ಕುವಲಾಲ’(ಕೋಲಾರ)ದಿಂದ ಆಳುತ್ತಿದ್ದ ದಡಿಗ
ಮತ್ತು ಮಾದವರು ಹಾಗು ಇನ್ನಿತರ ಗಂಗರಸರು
ಹರಿವರ್ಮನ ಕಾಲದಲ್ಲಿ ( ಕ್ರಿ.ಶ 390- 410) ಕುವಲಾಳವನ್ನುಬಿಟ್ಟು
ತಲಕಾಡಿನಿಂದ ಆಳಲಾರಂಬಿಸಿದರು.
ಚನ್ನಪಟ್ಟಣ
ಬಳಿಯ ಮಾಕುಂದ ಮತ್ತು ನೆಲಮಂಗಲ ಬಳಿಯ ಮಾನ್ಯಪುರ (ಇಂದಿನ
ನೆಲಮಂಗಲ ತಾಲೂಕಿನ ಮಣ್ಣೆ) ಇವರ ಕಿರುಪಟ್ಟಣಗಳಾಗಿದ್ದವು, ಹಾಗು ಮಾನ್ಯಪುರದಲ್ಲಿ
ಇವರ ಅರಮನೆ ಕೂಡ ಇದ್ದಿತು.
ಹೀಗಾಗಿ
ಕೋಲಾರ, ಬೆಂಗಳೂರು, ತುಮಕೂರು ಇವರ ಆಡಳಿತದ ಬಾಗವಾಗಿದ್ದವು.
ಅವಿನೀತನು(ಕ್ರಿ.ಶ 469 – 529) ತನ್ನ
ಆಡಳಿತದ ವಿಸ್ತಾರವನ್ನು ಕೊಂಗುನಾಡಿನವರೆಗೆ ಹರಡಿದನು ಹಾಗು ಸೇಂದ್ರಕ (ಚಿಕ್ಕಮಗಳೂರು
ಜಿಲ್ಲೆಯ ಬಾಗಗಳು), ಪುನ್ನಾಟ ಮತ್ತು ಪನ್ನಾಡ(ಚಾಮರಾಜನಗರ ಜಿಲ್ಲೆಯ ಬಾಗಗಳು)ದವರೆಗೂ ವಿಸ್ತರಿಸಿದನು.
ಗಂಗನಾಡಿನ
ಕೇಂದ್ರಬಾಗವನ್ನು ‘ಗಂಗವಾಡಿ’ ಎಂದು ಕರೆಯಲಾಗುತ್ತಿತ್ತು.
ಗಂಗವಾಡಿ
ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು
ಒಳಗೊಂಡಿತ್ತು.
’ಪುನ್ನಾಟ’ಕ್ಕೆ ತಲಕಾಡಿನ ಗಂಗರು
ತಮ್ಮ ಆಡಳಿತವನ್ನು ವಿಸ್ತರಿಸಿದ ಸಂಗತಿಯನ್ನು ಮಡಕೆರೆ(ಕ್ರಿ.ಶ 466), ಸಾಲಿಗ್ರಾಮ
(ಕ್ರಿ.ಶ 600ರ ಸುಮಾರು),
ತಿರುಮೊರೆಕೋಳಿ(ಕ್ರಿ.ಶ 700ರ
ಸುಮಾರು), ಕುಲಗಾಣ, ದೇಬೂರು ಮತ್ತು ಹೆಬ್ಬೂರಿನ ಶಾಸನಗಳು ಹೇಳುತ್ತವೆ. ಹಿಂದೆ ಪುನ್ನಾಟವು ಒಂದು ಚಿಕ್ಕ ನಾಡಗಿತ್ತು
ಎಂದು ಅವನೀತನ ಶಾಸನಗಳಿಂದ ತಿಳಿದು ಬರುತ್ತದೆ ಹಾಗು ಪುನ್ನಾಟರ ಪಟ್ಟದರಸಿಯನ್ನು
ಅವನೀತನು ಮದುವೆಯಾಗುತ್ತಾನೆ ಮತ್ತು ಅವರಿಬ್ಬರ ಮಗನೇ ದುರ್ವಿನೀತ. ಗಂಗರಸರಲ್ಲೇ
ಗಟ್ಟಿಗನಾದ ‘ದುರ್ವಿನೀತ’ನು (ಕ್ರಿ.ಶ
529 – 579 ) ತಮಿಳುನಾಡಿನ
ತೊಂಡಯ್ಮಂಡಲದ ಕಾಳಗದಲ್ಲಿ ಪಲ್ಲವರನ್ನು ಸೋಲಿಸಿದನು. ನಲ್ಲಾಳ ಮತ್ತು ಕಡಗತ್ತುರು ಶಾಸನವು ಇದರ ಬಗ್ಗೆ ವಿವರಿಸುತ್ತದೆ.
ಹೀಗಾಗಿ ತಮಿಳುನಾಡಿನ ಹಲವು ಬಾಗವನ್ನು ಕನ್ನಡಿಗರಾದ
ಗಂಗರು ಆಳಿದರು.
ದುರ್ವೀನೀತನ
ಆಡಳಿತದ ಹರವು ತೆಂಕಣದಲ್ಲಿ ತಮಿಳುನಾಡಿನ
ಕೊಯಮತ್ತೂರಿನಿಂದ ಬಡಗಣದ ಬಳ್ಳಾರಿಯವರೆಗೆ ಹರಡಿತ್ತು. ಅವನು ತನ್ನ ಮಗಳನ್ನು ಕನ್ನಡಿಗರ ಕೆಚ್ಚೆದೆಯ ಚಾಲುಕ್ಯರಸು ಇಮ್ಮಡಿ ಪುಲಿಕೇಶಿಗೆ ಮದುವೆಮಾಡಿಕೊಟ್ಟಿದ್ದ
ಅವನು ಕಲೆ
ಮತ್ತು ಸಾಹಿತ್ಯಕ್ಕೆ ಬೆಂಬಲ ನೀಡಿದ್ದನು, ಅವನೇ ‘ಶಬ್ದಾವತಾರ‘ ಎಂಬ ಹೊತ್ತಿಗೆಯನ್ನು ಬರೆದಿದ್ದನೆಂದು
‘ಗುಮ್ಮರೆಡ್ಡಿಪುರದ ಶಾಸನ’ವು ತಿಳಿಸುತ್ತದೆ.
ಪ್ರಾಂತ್ಯಾಡಳಿತ:- ಗಂಗರ ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವು ಬಾಗಗಳಾಗಿ ವಿಂಗಡಿಸಲಾಗಿತ್ತು:-
ಅವುಗಳೆಂದರೆ
ರಾಷ್ಟ್ರ(ಜಿಲ್ಲೆ), ವಿಶಯ(ಸಾವಿರ ಹಳ್ಳಿಗಳು)
ಸರಿಸುಮಾರು
800ರ ಹೊತ್ತಿನಲ್ಲಿ ‘ವಿಶಯ’ ಎಂಬ ಸಂಸ್ಕ್ರುತ ಪದದ
ಬದಲಾಗಿ ‘ನಾಡು‘ ಎಂಬ ಪದದ ಬಳಕೆ ಆರಂಭವಾಯಿತು.
ಉದಾ:-
ಸಿಂದನಾಡು, ಪುನ್ನಾಡು(ಪುನ್ನಾಟ).
ನಾಡು
ಎಂದರೆ ಸಾವಿರ ಹಳ್ಳಿಗಳನ್ನೊಳಗೊಂಡ ಒಂದು ಬಾಗವಾಗಿತ್ತು.
ಇವುಗಳಲ್ಲಿ
ದೊಡ್ಡ ನಾಡೆಂದರೆ ‘ಗಂಗವಾಡಿ’.
ಮಂತ್ರಿಗಳು
& ಅಧಿಕಾರಿಗಳು
ಗಂಗರ
ಹಲವಾರು ಶಾಸನಗಳಿಂದ ಅವರ ಆಡಳಿತದಲ್ಲಿ ಬಳಸುತ್ತಿದ್ದ
ವಿವಿಧ ಅಧಿಕಾರಿಗಳ ಹೆಸರುಗಳನ್ನು
ತಿಳಿಯಬಹುದಾಗಿದೆ.
ಪ್ರಧಾನಮಂತ್ರಿಯನ್ನು
ಸರ್ವಾದಿಕಾರಿ,
ಹಣಕಾಸು
ನೋಡಿಕೊಳ್ಳುವವರನ್ನು ಶ್ರೀಬಂಡಾರಿ,
ಹೊರನಾಡಿನ
ಆಡಳಿತದ ಮೇಲ್ವಿಚಾರಕನನ್ನು (minister)
ಸಂದಿವಿಗ್ರಹ,
ನಾಡಾಳುವನ್ನು
ಮಹಾಪ್ರದಾನ,
ಅರಮನೆಯ ಮೇಲ್ವಿಚಾರಕನನ್ನು
ಮನೆಪೆರ್ಗಡೆ,
ವೀಳ್ಯದೆಲೆ
ನೋಡಿಕೊಳ್ಳುವವರನ್ನು ಅಡೆಪ,
ಅರಸರ
ನೆರವಿಗನನ್ನು ರಾಜಸೂತ್ರದಾರಿ,
ಗುಟ್ಟಿನ
ನೆರವಿಗನನ್ನು ರಹಸ್ಯಾದಿಕ್ರುತ
ಹಳೆಯ
ದಾಕಲೆಗಳನ್ನು ನೋಡಿಕೊಳ್ಳುವವರನ್ನು ಶಾಸನದೊರೆ,
ಹಣಕಾಸಿನ
ಲೆಕ್ಕಾಚಾರ ನೋಡಿಕೊಳ್ಳುವವನನ್ನು ಲೆಕ್ಕಿಗ.
ನಿಯೋಗಿಯು
ಅರಮನೆಯ ಮೇಲುಸ್ತುವಾರಿಯಾಗಿದ್ದು ಅರಸುಮನೆತನದ
ಬಟ್ಟೆ ಮತ್ತು ಒಡವೆಯನ್ನು ನೋಡಿಕೊಳ್ಳು,ವವ
ಅರಸರ
ಸಬೆಗಳನ್ನು ಮತ್ತು ಹೆಬ್ಬಾಗಿಲಿನ ಉಸ್ತುವಾರಿ ನೋಡಿಕೊಳ್ಳುವವರನ್ನು ಪಡಿಯಾರ
ಕಂದಾಯಾಡಳಿತ:-
ಪೆರ್ಗಡೆಯು ಗಂಗರ ನಾಡಿನಲ್ಲಿ ವೃತ್ತಿನಿರತರಾದ ಅಕ್ಕಸಾಲಿಗರು, ಕಲೆಗಾರರು, ಕಮ್ಮಾರರು ಮತ್ತು ಕುಂಬಾರರ ಮೇಲ್ವಿಚಾರಣೆ ಮಾಡುತ್ತಿದ್ದವ,
ಗಂಗರ
ನಾಡಿನ ಸುಂಕ ಮತ್ತು ತೆರಿಗೆಯನ್ನು
ನೋಡಿಕೊಳ್ಳುತ್ತಿದ್ದವ ಸುಂಕಪೆರ್ಗಡೆ,
ಈ ಸುಂಕ ಪೆರ್ಗಡೆಯ
ಕೆಳಗೆ ನಾಡಬೊವರು ಕೆಲಸ ಮಾಡುತ್ತಿದ್ದರು
ನೆಲದಳೆವಿಗನನ್ನು
ರಜ್ಜುಕ,
ನೆಲದ
ಮೇಲುಸ್ತುವಾರಿ ನೋಡಿಕೊಳ್ಳುವವ ಪ್ರಬು,.
ಹಳ್ಳಿಗಳ
ಮುಖ್ಯಸ್ಥರನ್ನು ಗಾವುಂಡ ಎಂದು ಕರೆಯುತ್ತಿದ್ದರು.
ಸೇನಾಡಳಿತ:- ಚತುರಂಗ ಬಲವಿತ್ತು. ಸಾಮಂತರು ಸೇನೆ ಹೊಂದಿರುತ್ತಿದ್ದರು.
ದಂಡನಾಯಕ, ಮಹಾಪ್ರಚಂಡ, ಸೇನಾಪತಿ ಮೊದಲಾದ ಅಧಿಕಾರಿಗಳಿದ್ದರು.
ಪಡೆಯ
ಮುಖ್ಯಸ್ಥನನ್ನು ದಂಡನಾಯಕ,
ಆನೆಪಡೆಯ
ಮೇಲಾಳುವನ್ನು ಗಜಸಹಾನಿ,
ಕುದುರೆಪಡೆಯ
ಮುಖ್ಯಸ್ಥನನ್ನು ತುರುಗಸಹಾನಿ
ಮಯ್ಗಾವಲುಗಾರರನ್ನು
ವೆಲಾವಳಿ
ನ್ಯಾಯಾಡಳಿತ:- ನ್ಯಾಯಾಡಳಿತದಲ್ಲಿ ಧರ್ಮಾಧ್ಯಕ್ಷ, ರಾಜಾಧ್ಯಕ್ಷ
ಎಂಬ ಸಹಾಯಕರಿದ್ದರು. ವರಮಾನದ ಪ್ರಕರಣಗಳಲ್ಲಿ ಧರ್ಮಕರಣಿಕನೆಂಬುವನು ನ್ಯಾಯತೀರ್ಪು ನೀಡುತ್ತಿದ್ದನು.
ನಾಡುಗಳಲ್ಲಿ ಸಾಮಂತರು ಮತ್ತು ಗ್ರಾಮಗಳಲ್ಲಿ ಗ್ರಾಮಸಭೆಯು ತೀರ್ಮಾನ ನೀಡುತ್ತಿತ್ತು.
ಕೃಷಿ, ನೀರಾವರಿ
ಮತ್ತು ಪಶುಪಾಲನೆ:-
ಮಾವಳ್ಳಿ,
ಕುಂಸಿ, ದೊಡ್ಡಹೊಮ್ಮ ಹಾಗು ಇನ್ನಿತರ ಶಾಸನಗಳಲ್ಲಿ
ಹೇಳಿರುವಂತೆ ಪ್ರಜೆಗಳ ಅನುಕೂಲಕ್ಕಾಗಿ ನದಿ, ಹೊಳೆ, ಕಾಲುವೆ,
ಹಳ್ಳಿಗಳ ಎಲ್ಲೆ, ಬೆಟ್ಟ ಗುಡ್ಡಗಳು, ಕೋಟೆಗಳು, ಕಾಡುಗಳು, ದೇವಸ್ತಾನಗಳು, ನೀರಿನ ತೊಟ್ಟಿಗಳ ಇರುವಿಕೆಯ ಗುರುತುಗಳನ್ನು ಮಾಡಿದ್ದರು.
ಹಾಗೆಯೇ
ಆಯಾ ನೆಲದ ಮಣ್ಣಿಗೆ ಸರಿಯಾಗಿ
ಯಾವ ಯಾವ ಬೆಳೆಗಳನ್ನು ಬೆಳೆಯಬೇಕೆಂಬುದನ್ನು
ತಿಳಿಸಿದ್ದರು.
ಅದಕ್ಕಾಗಿ
ನೀರಾವರಿ ಕಾಲುವೆ ಮತ್ತು ತೊಟ್ಟಿಗಳನ್ನು ಕಟ್ಟಿಸಿದ್ದರು.
ಶಾಸನಗಳಲ್ಲಿ
ಹೇಳಿರುವಂತೆ ಬೇಡರಿಗಾಗಿಯೇ ಹಳ್ಳಿಗಳು ಇರುತ್ತಿದ್ದವು ಹಾಗು ಅದನ್ನು ‘ಬೇಡಪಳ್ಳಿ’
ಎಂದು ಕರೆಯುತ್ತಿದ್ದರು.
ಮೇಲುಕೋಟೆಯ
ತಾಮ್ರದ ಬರಹ, ಮಾಂಬಳ್ಳಿ ಶಾಸನ
ಮತ್ತು ಮೇಡುತಂಬಳ್ಳಿ ಶಾಸನಗಳಿಂದ ಗಂಗವಾಡಿ ಬಾಗವು ಮಲೆನಾಡು, ಅರೆ-ಮಲೆನಾಡು, ಬಯಲುಸೀಮೆಯನ್ನು
ಒಳಗೊಂಡಿದ್ದರಿಂದ ಆಯಾ ಬಾಗಗಳಲ್ಲಿ ಅಡಿಕೆ,
ಕಾಳು ಮೆಣಸು, ತೆಂಗು, ಬತ್ತ, ರಾಗಿ, ಎಣ್ಣೆ ಬೀಜಗಳು ಹಾಗು ಜೋಳ ಈ
ಬೆಳೆಗಳಿಗೆ ಕಾವೇರಿ, ತುಂಗಬದ್ರ, ವೇದಾವತಿ ನದಿಗಳಿಗೆ ಕಟ್ಟಿದ ಅಣೆಕಟ್ಟುಗಳಿಂದ ಕಾಲುವೆಗಳಲ್ಲಿ ನೀರುಣಿಸುತ್ತಿದ್ದರು.
ಗಂಗರಸು
ನಾಲ್ವಡಿ ರಾಚಮಲ್ಲನ ದೊಡ್ಡಹೊಮ್ಮ ಶಾಸನದಿಂದ ಹಲವಾರು ಮಣ್ಣು ಮತ್ತು ನೆಲದ ಬಗೆಯನ್ನು ತಿಳಿಸುವ
ಕನ್ನಡದ ಪದಗಳು ಕಂಡುಬರುತ್ತದೆ.
ಕರಿಮಣ್ಣಿಯ-ಕಪ್ಪುಮಣ್ಣು, ಕೆಬ್ಬಯಮಣ್ಣು- ಕೆಂಪುಮಣ್ಣು ಎಂದು, ಹಸಿನೆಲ-ಕಳನಿ, ಗಳ್ಡೆ, ಪಣ್ಯ ಎಂದು ಕರೆಯುತ್ತಿದ್ದರು.
ರೈತರ
ಬಗ್ಗೆ ಹೆಚ್ಚು ಒಲವಿದ್ದ ತಲಕಾಡಿನ ಗಂಗರು ಹಸುಸಾಕಣೆಗೆ ಒತ್ತು ನೀಡಿದರು.
ಹಲವು
ಹಸು ಸಾಕಣೆಯ ಹಟ್ಟಿಗಳನ್ನು ಅವರೇ ನಡೆಸುತ್ತಿದ್ದರು.
ಅಧಿಕಾರದ ವಿಕೇಂದ್ರೀಕರಣ:- ಹಲವಾರು ನ್ಯಾಯ ತೀರ್ಮಾನಗಳನ್ನು ಮತ್ತು ಮಂದಿಯ ಹಣಕಾಸಿನ ಪರಿಸ್ತಿತಿ ನೋಡಿ ಸುಂಕ ರದ್ದತಿಯ
ತೀರ್ಮಾನಗಳನ್ನು ಹಳ್ಳಿಯ ಮೇಲುಗರಾದ ಗಾವುಂಡರೆ ತೆಗೆದುಕೊಳ್ಳುತ್ತಿದ್ದರು
ಇವರ ಕಾಲದಲ್ಲಿ
ಸುಂಕರದ್ದತಿ ನೀಡುವ ಪದ್ಧತಿಯಿದ್ದು, ರದ್ದು ಮಾಡಿದ
ಸುಂಕವನ್ನು ‘ಮಾನ್ಯ’ ಎಂದು ಕರೆಯಲಾಗುತ್ತಿತ್ತು.
ಸುಂಕ
‘ಮಾನ್ಯ’ವಾದ ನೆಲವನ್ನು ಸೈನ್ಯದಲ್ಲಿ
ಕಾದಾಡಿದವರಿಗೆ ಮತ್ತು ನಾಡವೀರರಿಗೆ ಕೊಡುತ್ತಿದ್ದರು
ಇದನ್ನು
ಬಿಳವ್ರುತ್ತಿ(ಬಿೞವ್ರುತ್ತಿ) ಹಾಗು ಕಲ್ನಾಡ್ ಎಂದು
ಕರೆಯುತ್ತಿದ್ದರು
ಈ ಸಂಗತಿಯನ್ನು ನರಸಿಂಹಪುರದ ಶಾಸನದಲ್ಲಿ ತಿಳಿಸಲಾಗಿದೆ.
ತೆರಿಗೆಗಳು:- ಹೀಗಾಗಿ ಆಡಳಿತವನ್ನು ಕೆಳಗಿನ ಅದಿಕಾರಿಗಳಿಗೆ ಹಂಚಿದ್ದರು.
ಒಳಸುಂಕವನ್ನು
ಅಂತಕರ ಎಂದು ಕರೆಯುತ್ತಿದ್ದರು
ಅಧೀನ ರಾಜನಿಂದ
ಬಂದ ಬಹುಮಾನವನ್ನು ಉತ್ಕೊಟವೆಂದು ಕರೆಯುತ್ತಿದ್ದರು.
ಆಮದು
ವಸ್ತುಗಳ ಸುಂಕ ಮತ್ತು ತೆರಿಗೆಗೆ
ಸುಲಿಕ ಎಂದು ಕರೆಯುತ್ತಿದ್ದರು.
ಕ್ರುಶಿಯ
ಮೇಲಿನ ತೆರಿಗೆಯನ್ನು ‘ಸಿದ್ದಾಯ’ ಎಂದು
ಮಾರಾಟದ
ಮೇಲಿನ ತೆರಿಗೆಯನ್ನು ಪೊತ್ತೊಂದಿ ಎಂದು ಕರೆಯುತ್ತಿದ್ದರು.
ಮಣ್ಣದಾರೆ
ಎಂಬ ಸುಂಕವನ್ನು ನೆಲಗಂದಾಯದ ಜೊತೆಗೆ ಕುರಿಂಬದೆರೆ ಎಂಬ ಕುರಿಸಾಕಣೆ ಮೇಲಿನ
ಸುಂಕವನ್ನು ಕುರುಬರು ಅವರ ಮುಖಂಡನಿಗೆ ಕೊಡುತ್ತಿದ್ದರು.
ಹಲವು
ಕಿರುಸುಂಕವನ್ನು ಕಿರುದೆರೆ ಎಂದು ಕರೆಯುತ್ತಿದ್ದರು.
ಇವೆಲ್ಲವನ್ನೂ
ನಾಡಿನ(ಸಾವಿರಹಳ್ಳಿಗಳು) ಮೇಲುಗರು ಮತ್ತು ಸುಂಕಪೆರ್ಗಡೆಯವರು ಲೆಕ್ಕಾಚಾರ ಮಾಡುತ್ತಿದ್ದರು.
ಹಲವು
ಕಡೆಗಳಲ್ಲಿ ‘ಪೊತ್ತೊಂದಿ’ ತೆರಿಗೆಯನ್ನು ಹತ್ತನೇ ಒಂದು ಬಾಗದ ತೆರಿಗೆ
ಎಂದು, ‘ಐದಾಳ್ವಿ’ಯನ್ನು ಐದನೇ ಒಂದು ಬಾಗದ
ತೆರಿಗೆ ಎಂದು, ‘ಏಳಾಳ್ವಿ’ಯನ್ನು ಏಳನೇ ಒಂದು ಬಾಗದ
ತೆರಿಗೆ ಎಂದು ಕರೆಯುತ್ತಿದ್ದರು.
ಕಾಳಗದ
ಹೊತ್ತಿನಲ್ಲಿ ಪಡೆಯ ಕಾಳಗದ ತರಬೇತಿಗಾಗಿ
ಹಾಗು ಕುದುರೆ ಪಡೆಯ ಕುದುರೆಗಳು, ಆನೆಪಡೆಯ
ಆನೆಗಳನ್ನು ಮೇಯಿಸಲು ಹಲವು ಹಳ್ಳಿಗಳನ್ನು ದತ್ತು
ತೆಗೆದುಕೊಳ್ಳುತ್ತಿದ್ದರು ಹಾಗು ಇದಕ್ಕಾಗಿ ಸುಂಕ
ತೆರಿಗೆಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು.
ಪ್ರಜೆಗಳ ಅನುಕೂಲಕ್ಕಾಗಿ
ನೀರಿನ ತೊಟ್ಟಿಗಳನ್ನು ಕಟ್ಟಿಸಲು ಬೇಕಾದ ಹಣಕಾಸಿಗೆ ಬಿಟ್ಟುವತ್ತ ಎಂಬ ತೆರಿಗೆಯನ್ನು ಹಾಕುತ್ತಿದ್ದರು.
ಹೀಗೆ
ಆಳ್ವಿಕೆಯಲ್ಲಿ ಗಟ್ಟಿಗರಾದ ತಲಕಾಡಿನ ಗಂಗರು ಯಾವುದೇ ಅರಸುಮನೆತನಗಳಿಗಿಂತ ಕಡಿಮೆಯಿಲ್ಲದೆ ಕನ್ನಡ ನಾಡಿನ ಏಳಿಗೆಗಾಗಿ ಒಳ್ಳೆಯ ಆಡಳಿತ ನೀಡಿದರು.
ಮಾಹಿತಿ ಸಂಗ್ರಹ:-
ಫಾಲಾಕ್ಷ ಅವರ ಸಮಗ್ರ ಕರ್ನಾಟಕ ಇತಿಹಾಸ ಸಂಪುಟದಿಂದ ಮತ್ತು ಅಂತರ್ಜಾಲದ ಪುಟಗಳಿಂದ.
**********
Comments
Post a Comment