ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು

ರಾಷ್ಟ್ರಕೂಟರ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ

ರಾಷ್ಟ್ರಕೂಟರೆಂದ ಕೂಡಲೇ ಇಂದಿಗೂ ನಮ್ಮ ನೆನಪಿಗೆ ಬರುವುದೆಂದರೆ ಭಾರತದಲ್ಲಿ ಅಚ್ಚಳಿಯದೆ ಇರುವ ಅವರ ಶಿಲ್ಪಕಲೆ ಮತ್ತು ಕನ್ನಡ ಸಾಹಿತ್ಯ ಬೆಳವಣಿಗೆಗೆ ಅವರು ಸಲ್ಲಿಸಿರುವ ಸೇವೆ.

ರಾಷ್ಟ್ರಕೂಟರ ಕಾಲ ಶಿಲ್ಪಕಲೆಗೆ ಪ್ರಸಿದ್ಧಿಯಾಗಿತ್ತು. ಎಲ್ಲೋರ, ಎಲಿಫೆಂಟಾ ದೇವಾಲಯಗಳು ಭಾರತದ ವಿಖ್ಯಾತ ದೇವಾಲಯಗಳು. ಇವುಗಳನ್ನು ಗುಹಾಂತರ ದೇವಾಲಯಗಳೆಂದು ಕರೆಯುವರು. ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯದ ಮಧ್ಯೆ ಬಂಡೆಯಲ್ಲಿ ಕೊರೆದಿರುವ ದೇವಾಲಯಗಳು ಇವು. ಆದ್ದರಿಂದ ಇವುಗಳಿಗೆ ಗುಹಾಲಯಗಳೆಂದು ಹೆಸರು.

ದೇವಾಲಯಗಳ ವಿಶೇಷತೆ ಏನೆಂದರೆ ಒಂದೇ ಬಂಡೆಯನ್ನು ಕೊರೆದು ಕಂಬಗಳನ್ನೂ ಸಭಾಂಗಣವನ್ನೂ ದೇವರ ಮೂರ್ತಿಗಳನ್ನು ಕೆತ್ತಿದ್ದಾರೆ. ಬೇರೆ ಬೇರೆಯಾಗಿ ಕಲ್ಲುಗಳನ್ನು ತಂದು ಜೋಡಿಸಿ ಕಟ್ಟಿದ ಕಟ್ಟಡಗಳಲ್ಲ ಇವು. ಮಾನವನಿರ್ಮಿತ ಕಲಾಕೃತಿ ಎಷ್ಟು ಅದ್ಭುತವಾದುದು ಎಂಬುದಕ್ಕೆ ಗುಹಾಲಯಗಳು ಸಾಕ್ಷಿಯಾಗಿವೆ.

ಎಲ್ಲೋರದ ದಶಾವತಾರ ಗುಹೆಯು ಆಶ್ಚರ್ಯಕರವಾಗಿ ಕೊರೆಯಲ್ಪಟ್ಟಿದೆ. ಒಂದೇ ಬಂಡೆಯಿಂದ ಕೊರೆದ ಎರಡು ಅಂತಸ್ತಿನ ದೇವಾಲಯವಿದು. ಕೆಳ ಅಂತಸ್ತಿನಲ್ಲಿ ಕಂಬಗಳಿಂದ ಕೂಡಿದ ವಿಶಾಲವಾದ ಸಭಾಂಗಣವಿದೆ. ಮಹಡಿಯಲ್ಲಿ ಸುಮಾರು ೫೪ ಕಂಬಗಳಿಂದ ಕೂಡಿದ ಇನ್ನೂ ವಿಶಾಲವಾದ ಮಂದಿರವಿದೆ. ಗುಹಾಲಯದಲ್ಲಿ ಶೈವ ಮತ್ತು ವೈಷ್ಣವ ದೇವರುಗಳನ್ನು ಕೆತ್ತಲಾಗಿದೆ. ತಾಂಡವ ನೃತ್ಯದ ಶಿವನಮೂರ್ತಿ ಮತ್ತು ಹಿರಣ್ಯಕಶ್ಯಪುವಿನ ಸಂಹಾರ ಬಹಳ ಮನೋಹರವಾಗಿ ಮೂಡಿಬಂದಿದೆ.

ಎಲ್ಲೋರದ ಮತ್ತೊಂದು ದೇವಾಲಯಕೈಲಾಸಎಂಬುದು. ಕೈಲಾಸ ದೇವಾಲಯವು ಅತ್ಯಂತ ಉತ್ತಮ ಮಟ್ಟದ ಕಲೆ ಎಂದು ಹೆಸರುವಾಸಿಯಾಗಿದೆ. ಗುಹಾಲಯದಲ್ಲಿ ಗರ್ಭಗುಡಿ, ಮಹಾದ್ವಾರ, ನಂದಿ ಮಂದಿರ ಮತ್ತು ಅಂಗಳದ ಸುತ್ತಲೂ ಇರುವ ಪ್ರಾಕಾರ ಇವೆಲ್ಲವನ್ನು ಒಂದೇ ಬಂಡೆಯಿಂದ ಬಿಡಿಸಿ ಕೊರೆದಿದ್ದಾರೆ. ದೇವಾಲಯದ ಮೇಲ್ಛಾವಣಿಯಲ್ಲಿ ಅನೇಕ ವರ್ಣರಂಜಿತ ಚಿತ್ರಗಳಿವೆ. ಗೋಡೆಗಳ ಮೇಲೆ ಅಸಂಖ್ಯಾತ ದೇವತಾ ವಿಗ್ರಹಗಳಿವೆ. ಕೈಲಾಸ ಪರ್ವತವನ್ನು ಅಲ್ಲಾಡಿಸುತ್ತಿರುವ ರಾವಣನ ವಿಗ್ರಹವನ್ನು ಬಹಳ ಭವ್ಯವಾಗಿ ಕೆತ್ತಿದ್ದಾರೆ.

ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಗುಹಾದೇವಾಲಯಗಳು ಕಾಲದಲ್ಲಿ ಸೃಜನಶೀಲವಾಗಿ ನಿರ್ಮಾಣಗೊಂಡು ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಇವರ ಕಾಲದ ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಇವರ ಕಾಲದಲ್ಲಿ ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತವು. ಎಲ್ಲೋರ, ಐಹೊಳೆ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟ ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು, ಜೈನ ಬಸದಿಗಳು ಮತ್ತು ಬೌದ್ಧ ವಿಹಾರಗಳ ಕಟ್ಟಡಗಳು ಕಂಡುಬಂದಿವೆ.

ದೇಶವಿದೇಶಗಳ ಪ್ರವಾಸಿಗರು ಗುಹಾಲಯ ಗಳನ್ನು ನೋಡಿ ಬೆರಗಾಗಿದ್ದಾರೆ. ಇಂತಹ ಅದ್ಭುತ ಕಲಾಕೃತಿಯನ್ನು ನಿರ್ಮಿಸಿದವರು ರಾಷ್ಟ್ರಕೂಟರು. ಇವರ ಕಾಲದ ಶಿಲ್ಪಕಲೆಯು ಎಲಿಫೆಂಟಾದಲ್ಲಿ ತನ್ನ ಶಿಖರವನ್ನು ಮುಟ್ಟಿತು. ಎಲಿಫೆಂಟಾ ಗುಹೆಗಳ ಅರ್ಧನಾರೀಶ್ವರ ಮತ್ತು ತ್ರಿಮೂರ್ತಿಯ ವಿಗ್ರಹಗಳು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿವೆ. ತ್ರಿಮೂರ್ತಿಯೆಂದು ಪ್ರಸಿದ್ಧವಾಗಿರುವ ಮಹೇಶ ಮೂರ್ತಿಯ ಆಕೃತಿಯು ಅತ್ಯಂತ ದೊಡ್ಡದಾದ ಭವ್ಯವಾದ ವಿಗ್ರಹ.

   ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಭೂಲೋಕಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ದೇವಾಲಯ ಎರಡು ಅಂತಸ್ತಿನಿಂದ ಕೂಡಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತು ನಿಂತಂತಿದೆ. ಮುಂದೆ ನಂದಿಮಂಟಪವಿದ್ದು, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೊಂದಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಲಾಗಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲಿನ ಪ್ರಾಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಅದಕ್ಕೆಂದೇ ಕಣ್ಣಿದ್ದವರು ಎಲ್ಲೋರಾ ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ.

   ಇದಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಂಧಿಸಿವೆ.

ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು ಇವರ ಕಾಲದಲ್ಲಿ ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ತೋರಣಗಳನ್ನು ಕಟ್ಟಲಾಗಿದೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು . ಉದಾ:ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು. ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು. ನಿಜಾಮಾಬಾದ್ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು.

   ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು, ಜೈನಬಸದಿಗಳಲ್ಲಿ ಗರ್ಭಗೃಹಕ್ಕೆ ಹೊಂದಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು.

 

ಸಾಹಿತ್ಯ, ಧರ್ಮ

ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ ಶಿಕ್ಷಣ ಮತ್ತು ಸಾಹಿತ್ಯ  ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆದವು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದುಕನ್ನಡಸಂಸ್ಕೃತ ಹಾಗೂ ಪ್ರಾಕೃತ ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ ಕವಿಚಕ್ರವರ್ತಿಗಳೂ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದ್ದರುವ್ಯಾಕರಣಕಾವ್ಯನಾಟಕ, ಜನಪದ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ಕೇಂದ್ರಗಳಿದ್ದವು. ಇಂಥಹ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆತ ಅನೇಕ ಶಾಸನಗಳು ಅವರ ಆಶ್ರಿತ ಕವಿಗಳ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನಆಂಗಿರಸ, ಯಮರಾಜಶೇಖರತ್ರಿವಿಕ್ರಮ, ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ ಮಹಾರಾಷ್ಟ್ರವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನ-ಗೌರವ ಸಿಕ್ಕದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.

 

   ಈ ಕಾಲದಲ್ಲಿ ಜೈನಧರ್ಮ ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ ಜಿನಸೇನ, ಶಾಕಟಾಯನ, ವೀರಾಚಾರ್ಯ, ಗುಣಭದ್ರ ಮುಂತಾದ ಜೈನ ಕವಿಗಳನ್ನು ಇಲ್ಲಿ ಸ್ಮರಿಸಬಹುದು. ಹರಿವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ ಪಉಮಚರಿಉ ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಜಿನಸೇನರು ಪಾರ್ಶ್ವಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ (ಆದಿಪುರಾಣ) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗಿದೆ. ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರುಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತಯಶೋಧರ ಚರಿತ ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರ ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುವರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ ರುದ್ರಟ (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.

   ಇವರ ಕಾಲದ ಸಾಹಿತ್ಯದ ಕೊಡುಗೆಗಳನ್ನು ಗಮನಿಸಿದರೆ, ರಾಷ್ಟ್ರಕೂಟ ಅರಸರು ಎಲ್ಲಾ ಧರ್ಮಗಳ ಕವಿಗಳಿಗೂ ಆಶ್ರಯ ನೀಡಿದ್ದುದು ಕಂಡುಬರುತ್ತದೆ. ಇವರ ಕಾಲದ ಕವಿಗಳು ಮತ್ತು ಕೃತಿಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು:-

ಕವಿಗಳು ಮತ್ತು ಕೃತಿಗಳು

ಶಕಟಾಯನ  ಶಬ್ಧಾನುಶಾಸನ ಮತ್ತು ಅಮೋಘವೃತ್ತಿ

ಮಹಾವೀರಾಚಾರ್ಯ – ಗಣಿತಸಾರಸಂಗ್ರಹ

ಕುಮಧೇಂದು – ಸಿರಿಭೂವಲಯ

ಜಿನಸೇನಾಚಾರ್ಯ – ಇವನು ಅಮೋಘನ ಜಿನ ಗುರು

ಹರಿವಂಶ, ಆದಿಪುರಾಣ, ಪಾರ್ಶ್ವಾಭ್ಯುದಯಂ

ಉಗ್ರಾದಿತ್ಯ – ಕಲ್ಯಾಣಕಾರಕ

ಮಾಣಿಕ್ಯನಂದಿನ್‌ - ಪರೀಕ್ಷಾಮುಖಸೂತ್ರ

ವಿದ್ಯಾನಂದಿನ್‌ - ತತ್ವಾರ್ಥ ಶ್ಲೋಕ ವಾರ್ತಿಕಾ

ಗುಣಭದ್ರ, ಇವನು ಕೃಷ್ಣನ ಗುರು

ಉತ್ತರಪುರಾಣ

ಪ್ರಭಾಚಂದ್ರ – ಕುಮಾರ ಚಂದ್ರೋದಯ, ಪ್ರಮೇಯ ಕಮಲ, ಮಾರ್ಕಾಂಡೇಯ ನ್ಯಾಯ

ಅಮೋಘ – ಕವಿರಾಜಮಾರ್ಗ, ಪ್ರಶ್ನೋತ್ತರ ರತ್ನಮಾಲಾ

ಪುಷ್ಪದಂತ ಹರಿಚರಣ ಜಸವು ಮತ್ತು ಮಹಾಪುರಾಣ

ಹಲಾಯುಧ – ಮಿತ್ರ ಸಂಜೀವಿನಿ ಮತ್ತು ಕವಿ ರಹಸ್ಯ

ಸೋಮದೇವ ಸೂರಿ – ನೀತಿ ವಾಕ್ಯಾಮೃತ, ಯಶಸ್‌ತಿಲಕ

ಅಕಳಂಕದೇವ – ಅಷ್ಟಸತಿ, ಪ್ರಮೋದಕಮಲ

ಜಿನಸೇನ – ದವಳ ಮತ್ತು ಜಯದವಳ

ಶಿವಕೋಟ್ಯಾಚಾರ್ಯ – ವಡ್ಡಾರಾಧನೆ

ಅಸಗ – ವರ್ಧಮಾನ ಪುರಾಣ

ತ್ರಿವಿಕ್ರಮ – ನಳ ಚಂಪೂ ಮತ್ತು ಮದಾಲಸ ಚಂಪೂ

ಪೊನ್ನ – ಭುವನೈಕ್ಯ ರಾಮಾಭ್ಯುದಯ, ಶಾಂತಿಪುರಾಣ, ಜಿನಾಕ್ಷರ ಮಾಲೆ, ಗಾತ ಪ್ರತ್ಯಾಗಾತ

ಪಂಪ – ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ

(ಕೆಳಗಿನ ಆಂಗ್ಲ ವಿವರಗಳನ್ನು ವಿಕಿಪಿಡಿಯ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಸಂಕಲಿಸಿ ಇಲ್ಲಿ ವಿದ್ಯಾರ್ತಿಗಳ ಅನುಕೂಲಕ್ಕಾಗಿ ನೀಡಲಾಗಿದೆ)

Rashtrakuta literature

   Rashtrakuta literature  is the body of work created during the rule of the Rastrakutas of Manyakheta, a dynasty that ruled the southern and central parts of the Deccan, India between the 8th and 10th centuries. The period of their rule was an important time in the history of South Indian literature in general and Kannada literature in particular. This era was practically the end of classical Prakrit and Sanskrit writings when a whole wealth of topics were available to be written in Kannada. Some of Kannada's most famous poets graced the courts of the Rashtrakuta kings. Court poets and royalty created eminent works in Kannada and Sanskrit, that spanned such literary forms as prose, poetry, rhetoric, epics and grammar. Famous scholars even wrote on secular subjects such as mathematics. Rashtrakuta inscriptions were also written in expressive and poetic Kannada and Sanskrit, rather than plain documentary prose.

 

Kannada writings:-

Kannada poets and writers in the Rashtrakuta Empire

Amoghavarsha - 850

Srivijaya - 850

Asaga - 850

Shivakotiacharya - 900

Ravinagabhatta - 930

Adikavi Pampa - 941

Jainachandra - 950

Sri Ponna - 950

Rudrabhatta - 9th-10th c.

Kavi Rajaraja - 9th-10th c.

Gajanakusha - 10th century

Earlier Kannada poets and writers praised in Kavirajamarga

Durvinita - 6th century

Vimala - Pre-850

Nagarjuna - Pre-850

Jayabodhi - Pre-850

Udaya - Pre-850

Kavisvara - Pre-850

Pandita Chandra - Pre-850

Lokapala - Pre-850

 

   Kavirajamarga (850) by King Amoghavarsha I and his court poet Srivijaya is the earliest extant book on rhetoric and poetics[1] but it is evident from this book that several styles of Kannada literature and poetry had already existed in previous centuries. Kavirajamarga is a guide to poets (Kavishiksha) that aims to standardize these various styles. The book references early Kannada writers such as the 6th century Western Ganga Dynasty King Durvinita, an early writer of Kannada prose.

   Adikavi Pampa, widely regarded as one of the greatest Kannada writers, became famous for Adipurana (941). Written in champu style, it is the life history of the first Jain thirtankara Rishabhadeva. In this unique work of spiritual heroism, the soul moves through a series of births before attaining emancipation. The quest in this spiritual saga, as in many others, is the liberation of the soul from the cycle of life and death. Pampa's other classic Vikramarjuna Vijaya (or Pampa Bharata, 941), is the author's version of the Hindu epic the Mahabharata. The story differs from other earlier versions of the epic in that Arjuna alone is the hero, not the other Pandava brothers, and Draupadi is solely Arjuna's wife. The author underplays the role of the Hindu god Krishna and favourably compares his patron king Chalukya Arikesari (a Rashtrakuta feudatory) to Arjuna, while casting a lofty and noble image of Karna and the Kaurava prince Duryodhana. Pampa demonstrates such a command of classical Kannada that scholars over the centuries have written many interpretations of his work.

   Another great writer in Kannada was Sri Ponna, patronised by King Krishna III and famed for his description of the life of the 16th Jain tirthankara Shantinatha entitled Santipurana. He earned the title Ubhaya Kavichakravathi (supreme poet in two languages) for his command over both Kannada and Sanskrit. His other writings in Kannada were Bhuvanaika-ramabhyudaya, Jinaksaramale and Gatapratiagata. Adikavi Pampa, Sri Ponna and Ranna (court poet of Western Chalukya King Tailapa II) are called the "three gems" of Kannada literature.

   The earliest extant prose work in Kannada is Vaddaradhane (c. 900) by Shivakotiacharya. The title means "worship of elders". The writing contains 19 stories mostly borrowed from the Sanskrit book Brihatkatha-Kosha and is about Jain tenets. The writing describes issues such as rebirth, Karma, plight of humans on earth, social issues of the time such as education, trade and commerce, magic, superstitions and condition of women in society. Other well-known writers from this era were Rudrabhatta of Banahatti, Ravinagabhatta who was patronised by King Govinda IV, Kavi Rajaraja who wrote the Kalasa record, Gajanakusha (also known as Gajaga or Narayana) who wrote on erotics and was a minister in the court of King Krishna III.

   A contemporary of Amoghavarsha I was the bilingual (Sanskrit and Kannada) Digambara Jain poet Asaga (or Asoka), who is known to have written in Kannada, the Karnatakumarasambhava Kavya and the Vardhamana Purana. These writings, which are not extant now, have been praised by later day poets such as Jayakirthi, and grammarian Kesiraja, (author of Shabdamanidarpana in c.1260 C.E), who cite Asaga as an authoritative writer of his time and place him along with other masters of early Kannada poetry.

   Sri Vijaya, court poet of Amoghavarsha I, wrote Chandraprabha-purana in the early 9th century. Though this work is now extinct, the author and the writing have been praised by Chalukya minister Durgasimha (c. 1025). Jinachandra, who is referred to by Sri Ponna as the author of Pujyapada Charita, had earned the honorific "modern Samantha Bhadra". This classic is considered extinct.

   The inscriptions of the Rashtrakutas show a remarkable change, moving away from the purely documentary Kannada prose of the previous centuries to a more expressive language suffused with literary characteristics. The Mavalli inscription by King Govinda III (c. 793 - 814); the Shiruru inscription by Amoghavarsha I (c. 814 - 878); the Gangadharam inscription written by poet Jinavallabha which gives us an account of the life of his elder brother and poet Adikavi Pampa. The Kalasa inscription (c. 930) of Govinda IV contains various metrical forms. The Athakuru inscription (or Atakuru, Athaguru, c. 949 - 950) from the reign of King Krishna III – is a unique hero stone that eulogises the valor of a dog called Kali that died fighting a wild boar. The Shishuvinahalli and Kalasa inscriptions; and the Jura (Jabalpur) inscription of King Krishna III (c. 964) which describes his military success serve as good examples of classical Kannada composition styles popular during that time.

 

Sanskrit writings:-

   Many enduring works on religion and secular subjects were written in Sanskrit. In mathematics, ground breaking theories on Algebra, Arithmetic and Geometry were postulated by Mahaviracharya, a native of Gulbarga who belonged to the Karnataka mathematical tradition. He was patronised by King Amoghavarsha I. His greatest contribution was Ganitasarasangraha, a writing in 9 chapters that defined important axioms. These axioms state that a proper fraction is a sum of improper fractions, a negative number is not a square number and hence does not have a square root. He also defined formulae to calculate the sum of complex progressions and a measurement unit for the size of an atom. His other works are Chattisa Ganitha, a volumnous work that contains 9,000 Granthas (manuscripts) pertaining to mathematical collection. The Shlokas (verses) are in Sanskrit and the commentary is in Kannada language. His other writings are Shatrinshika and Jyotish Patal.

   Trivikrama Bhatta was a noted scholar in the court of King Indra III. His classics were Nalachampu (915), the earliest in champu style in Sanskrit, Damayanti Katha, Madalasachampu and Begumra plates. Legend has it that Goddess Saraswati helped him in his effort to compete with a rival in the king's court. Jinasena was the spiritual preceptor and guru of Amoghavarsha I. A theologian, his contributions are Dhavala and Jayadhavala (written with another theologian Virasena). These writings are named after their patron king who was also called Athishayadhavala. Other contributions from Jinasena were Adipurana (later completed by his disciple Gunabhadracharya who also wrote Atmanushasana), Harivamsha and Parshvabhyudaya. Halayudha patronised by King Krishna III wrote Kavirahasya, a list of verbs with their meanings written in verse and a work on prosody called Mritasanjivini.

   Somadevasuri of 950 wrote in the court of Arikesari II, a feudatory of Rashtrakuta Krishna III in Vemulavada. He was the author of Yasastilaka champu, Nitivakyamrita and other writings. The main aim of the champu writing was to propagate Jain tenets and ethics. Yasastilaka describes different types of foods consumed by various classes of people in the Rashtrakuta empire. The second writing reviews the subject matter of Arthashastra from the standpoint of Jain morals in a clear and pithy manner. Well-known Advaita philosophers from present day Karnataka region were Padmapada and Sureshvara (also known as Visvarupa) who wrote commentaries such as Balakrida upholding the Advaita beliefs. Pushpadanta who was patronised by a minister of King Krishna III wrote Mahapurana, Nagakumara charita and Yashodhara charita. King Amoghavarsha I himself a noted poet wrote Prashnottara Ratnamalika, a book of high value on religion, later translated into Tibetian language. Other well-known scholars were logicians such as Manikyanandin, Mallavadin and Prabhachandra. Sakatayana patronised by Amoghavarsha I wrote Sabdanusasana and Amoghavritti and Chavundaraya wrote Charitrasara. Akalanka Bhatta wrote Rajavarthika, Nyayavinishchaya, Ashtashati and the Laghiyastraya, Lakshmidhara compiled Vyavahara Kalpataru, Khandana Khanda Khadya and others.

   The Sanskrit writing on medicine Kalyanakaraka by a court poet, Ugraditya, relates that the king requested the poet give the court a discourse on the evils of a non-vegetarian diet and the need to avoid such a diet to treat illnesses.

 

Prakrit:-

Pushpadanta's contributions in Prakrit were Jasaurachariu and Nayakumarachariu.[22]

ಸೂಚನೆ:- ಮೇಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳು ಮತ್ತು ಪಠ್ಯಪುಸ್ತಕಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.

********** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources