ಕುಶಾಣರು - ಅಧ್ಯಯನ ಸಾಮಗ್ರಿ
ಪೀಠಿಕೆ:- ಕುಶಾಣರು ಮೌರ್ಯರ ನಂತರ ಉತ್ತರ ಭಾರತದಲ್ಲಿ ವಿಶಾಲ ರಾಜ್ಯ ಸ್ಥಾಪಿಸಿದವರು.
ಪುರುಷಪುರ ಇವರ ರಾಜಧಾನಿಯಾಗಿತ್ತು. ಇವರು ಭಾರತಕ್ಕೆ ರಾಜಕೀಯ ಮತ್ತು ಆರ್ಥಿಕ ಐಕ್ಯತೆ ತಂದ ಪ್ರಥಮ ವಿದೇಶಿಯರು.
ಇವರ ರಾಜ್ಯವು ಉತ್ತರ
ಭಾರತ, ದಕ್ಷಿಣ ಚೀನಾ ಮತ್ತು
ಬ್ಯಾಕ್ಟ್ರಿಯಾ ಸೇರಿದಂತೆ ಮೂರು ರಾಜ್ಯಗಳಲ್ಲಿ ಹರಡಿತ್ತು.
ಇವರು ಗಾಂಧಾರ ಕಲೆ ಮತ್ತು ಮಹಾಯಾನ ಬೌದ್ಧಪಂಥದ ಪೋಷಕರಾಗಿದ್ದರು.
ಇವರ ಕಾಲದಲ್ಲಿ ಗ್ರೀಕ್ ಮತ್ತುರೋಮ್ ನೊಂದಿಗಿನ ವ್ಯಾಪಾರ ಸಂಪರ್ಕ
ಮತ್ತಷ್ಟು ವೃದ್ಧಿಯಾಯಿತು.
ಕುಶಾನರ ಬಗೆಗಿನ ಆಧಾರಗಳು
ಅಶ್ವಘೋಷನ ಬುದ್ಧಚರಿತೆ, ಕಲ್ಹನನ ರಾಜತರಂಗಿಣಿ, ಹ್ಯೂಯನ್ ತ್ಸಾಂಗನ ಬರವಣಿಗೆಗಳು,
ಚೀನಿ ಬರವಣಿಗೆಗಳು.
ಕುಶಾಣರ
ಮೂಲ:- ಇವರು
ದಕ್ಷಿಣ ಚೀನಾದ ಯೂಚಿ ಪಂಗಡದ ಅಲೆಮಾರಿಗಳು; ಇವರನ್ನು
ಟೊಚಾರಿಯನ್ನರೆಂದೂ ಕರೆಯುತ್ತಾರೆ . ಕ್ರಿ.
ಪೂ. 165 ರಲ್ಲಿ ಹೂಣರ ಧಾಳಿಯಿಂದಾಗಿ ಪಶ್ಚಿಮಕ್ಕೆ
ವಲಸೆ ಹೊರಟರು.
ಹಾಗೆ ಹೊರಟ ಒಂದು ಗುಂಪು ಟಿಬೆಟ್ನತ್ತ ಪಯಣ ಮಾಡಿತು. ಮತ್ತೊಂದು ಗುಂಪಿನವರು
ಜಾಕ್ಸಾರ್ಟನ್ ನದಿ ದಂಡೆಯಲ್ಲಿ ಶಕರನ್ನು ಸೋಲಿಸಿ ಬ್ಯಾಕ್ಟ್ರಿಯಾದಲ್ಲಿ ನೆಲೆಸಿದರು.
ಇವರು
ಬ್ಯಾಕ್ಟ್ರಿಯಾದಲ್ಲಿದ್ದಾಗ 5 ಪ್ರಾಂತ್ಯಗಳಿಂದ ಕೂಡಿದ್ದರು. ಅವುಗಳೆಂದರೆ
ಕಿಷಾಂಗ್(ಕುಶಾನ), ಹುವಿ, ಕುಲಿಶುಂಗ್, ಹಿಲೂಯನ್ ಮತ್ತು ತುಮಿ
ಅವುಗಳಲ್ಲಿ
ಕಿಷಾಂಗ್ ಪ್ರಾಂತ್ಯದಲ್ಲಿ ಆಳುತ್ತಿದ್ದವರೇ ಕುಶಾನರು. ಕಿಷಾಂಗರ
ನಾಯಕ ಒಂದನೇ ಕ್ಯಾಡ್ಫಿಸೆಸ್ ಕಾಲಕ್ರಮೇಣ
ಇನ್ನುಳಿದ ಐದು ಪ್ರಾಂತ್ಯಗಳನ್ನು ಕೂಡಿಸಿ ಕುಶಾನ ರಾಜ್ಯವನ್ನು ಸ್ಥಾಪಿಸಿದನು
ರಾಜಕೀಯ ಇತಿಹಾಸ
ಒಂದನೇ ಕ್ಯಾಡ್ ಫಿಸೆಸ್ ( ಕ್ರಿ ಶ 15-65):
ಇವನು
ಕುಶಾನ ರಾಜ್ಯ ಸ್ಥಾಪಕ(ಕ್ರಿ.ಶ 50-65 ಎಂದೂ ಹೇಳುತ್ತಾರೆ). ಇವನಿಗೆ
ವಾಂಗ್ ಅಥವಾ ರಾಜ ಎಂಬ ಬಿರುದು
ಇತ್ತು. ಇವನು
ಆರಂಭದಲ್ಲಿ ಇಂಡೋ ಗ್ರೀಕರ ಹರಮಿಯಸ್ನ ಅಧೀನ ರಾಜನಾಗಿದ್ದನು. ಮುಂದೆ ಇಂಡೋ ಗ್ರೀಕರು, ಶಕರು, ಪಾರ್ಥಿಯನ್ನರನ್ನು ಸೋಲಿಸಿ ಕಾಬೂಲ್ , ಕಾಂದಹಾರ, ಗಾಂಧಾರ, ತಕ್ಷಶಿಲೆ ವಶಪಡಿಸಿಕೊಂಡನು. ಇದರಿಂದ ಇವನ ರಾಜ್ಯವು
ಪರ್ಷಿಯಾದಿಂದ ಸಿಂಧೂವರೆಗೆ ವಿಸ್ತರಿಸಿತು. ರೋಮ್‌ನ ದಿನಾರ್ ಮಾದರಿಯ ಚಿನ್ನದ ನಾಣ್ಯಗಳನ್ನು ಹೊರಡಿಸಿ ಅವುಗಳ ಮೇಲೆ ಖರೋಷ್ಠಿ ಲಿಪಿಯಲ್ಲಿ ಮಹಾರಾಜ, ಮಹಾರಾಜಾಧಿರಾಜ ಎಂಬ ಬಿರುದು ಹಾಕಿಸಿದನು. ಈತ ಬೌದ್ಧ
ಮತಾವಲಂಭಿಯಾಗಿದ್ದನು.
ಎರಡನೇ ಕ್ಯಾಡ್ಫಿಸೆಸ್:(ಕ್ರಿ. ಶ 65-78). ಇವನನ್ನು
ವಿಮಾಕ್ಯಾಡ್‌ಫಿಸೆಸ್ ಎಂದೂ ಕರೆಯುತ್ತಾರೆ
ಇವನು
ಪಂಜಾಬ್ ಭಾಗವನ್ನು
ಗೆದ್ದು ಅಲ್ಲಿಗೆ
ತನ್ನ ಪ್ರಾಂತ್ಯಾಧಿಕಾರಿಯನ್ನು ನೇಮಕ
ಮಾಡಿದನು.
ನಾಣ್ಯಗಳು: ಇವನು
ಅತಿ ಹೆಚ್ಚು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದನು
ಇವನ ನಾಣ್ಯಗಳು
ಪಂಜಾಬ್, ಕಾಂದಹಾರ್, ಗಾಂಧಾರ, ಕಾಬೂಲ್ ಕಣಿವೆಯಲ್ಲಿ ಲಭ್ಯವಾಗಿವೆ. ಇವನು ಶೈವ ಮತಕ್ಕೆ ಪರಿವರ್ತನೆಗೊಂಡ ವಿವರ ಇವನ
ನಾಣ್ಯಗಳಿಂದ ದೊರೆತಿದೆ. ಇವನ ನಾಣ್ಯಗಳಲ್ಲಿ ಮಹೀಶ್ವರ, ಸಮಗ್ರ
ಪ್ರಪಂಚದ ಒಡೆಯ, ಎಂದು ಅಚ್ಚು
ಹಾಕಿಸಲಾಗಿದೆ. ಇವನು ಶಿವನ ಆರಾಧಕನಾಗಿದ್ದು, ಅದಕ್ಕೆ
ಸಾಕ್ಷಿಯಾಗಿ ಇವನ ನಾಣ್ಯಗಳ ಮೇಲೆ ತ್ರಿಶೂಲ ಧಾರಿಯ ಚಿತ್ರಗಳಿವೆ. ಇವನು
ತಾಮ್ರ ಮತ್ತು ಕಂಚಿನ ನಾಣ್ಯಗಳನ್ನೂ ಸಹ
ಅಚ್ಚು ಹಾಕಿಸಿದ್ದನು
ಕನಿಷ್ಕ (ಕ್ರಿ. ಶ 78-120)::- ಇವನು
ಎರಡನೆ ಅಶೋಕ ಎಂದು ಹೆಸರಾಗಿದ್ದಾನೆ.
ಇವನದು ಚಂದ್ರಗುಪ್ತ ಮೌರ್ಯನ ದಿಗ್ವಿಜಯದಂತ ಆಸಕ್ತಿ, ಅಶೊಕನ ಧರ್ಮಾಸಕ್ತಿಯಾಗಿತ್ತು. ಬೌದ್ಧ
ಧರ್ಮ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಅದನ್ನು ಹರಡಿದ.
ಪೆಷಾವರ ಅಥವಾ ಪುರುಷಪುರ ಇವನ
ಪ್ರಥಮ ರಾಜಧಾನಿಯಾಗಿದ್ದು, ಮಥುರಾ ಎರಡನೆ ರಾಜಧಾನಿಯಾಗಿತ್ತು.
ಶಕ ವರ್ಷಾರಂಭ – ಶಕಕರ್ತ:-
ಜೆ ಎಫ್ ಪ್ಲೀಟ್-ಕ್ರಿ.ಶ 58 ರ ವಿಕ್ರಮ ಶಕೆ ಕಾನಿಷ್ಕನಿಂದ
ಆರಂಭವಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ತ್ರಿಪಾಠಿ, ಬ್ಯಾನರ್ಜಿ- ಕ್ರಿ.ಶ
78 ರಲ್ಲಿ ಅಧಿಕಾರಕ್ಕೆ ಬಂದನೆಂದೂ, ಇಲ್ಲಿಂದ ಶಕಶಕೆ ಅಥವಾ ಶಾಲಿವಾಹನ ಶಕೆ ಆರಂಭವಾಯಿತೆಂದು ಹೇಳಿದ್ದಾರೆ. ಆರ್ ಸಿ ಮಜುಂದಾರ್ಅವರು ಇವನು ಕ್ರಿ.ಶ 78 ರಲ್ಲಿ ಶಾಲಿವಾಹನ ಶಕವನ್ನು ಆರಂಭಿಸಿದನು ಎಂದಿದ್ದಾರೆ.
ಸೈನಿಕ
ಸಾಧನೆಗಳು:- 1. ಕಾಶ್ಮೀರದ ದಿಗ್ವಿಜಯ, ಕಲ್ಹನನ ರಾಜತರಂಗಿಣಿಯಿಂದ
ವಿವರ, ಕನಿಷ್ಕಪುರ ನಿರ್ಮಾಣ, ಸುಂದರ ಸ್ಮಾರಕ, ಬೌದ್ಧಸ್ತೂಪ ನಿರ್ಮಾಣ
2.
ಸಿಂಧ್ ಮತ್ತು ಮಾಳವದ ಉಜ್ಜೈಯಿನಿಯ ಕ್ಷತ್ರಪರನ್ನು ಸೋಲಿಸಿ ಮಾಳವ , ಮಥುರಾ ವಶ
3.
ಇವನಿಂದ
ಪಾರ್ಥಿಯನ್ನರು ಸೋಲು ಅನುಭವಿಸಿದರು.
4.
ಮಗಧದ ಮೇಲೆ ದಂಡಯಾತ್ರೆ: ಬನಾರಸ್ ಮತ್ತು ಗೋರಖ್ ಪುರದಲ್ಲಿ ನಾಣ್ಯಗಳು ದೊರೆತಿದ್ದರಿಂದ ದಂಡಯಾತ್ರೆಯ ವಿವರ
ಬೌದ್ಧ
ಧರ್ಮದ ಸ್ವೀಕಾರ:- ಮಗಧದ ದಾಳಿಯ ವೇಳೆ ಪಾಟಲೀಪುತ್ರವನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲಿ
ಕನಿಷ್ಕನಿಗೆ ಅಶ್ವಘೋಷನೆಂಭ ಬೌದ್ಧ ಬಿಕ್ಷುವಿನೊಂದಿಗೆ ಭೇಟಿಯಾಯಿತು. ಅವನನ್ನು ರಾಜಧಾನಿಗೆ ಕರೆತಂದನು. ಅವನ
ವಿದ್ವತ್ತಿನ ಪ್ರಭಾವಕ್ಕೆ ಒಳಗಾಗಿ ಬೌದ್ಧಮತ ಸ್ವೀಕರಿಸಿದ.
ಅಶ್ವಘೋಷ ಕಾನಿಷ್ಕನ ಆಸ್ಥಾನ ಕವಿಯಾದ.
ಚೀನಾದ ಮೇಲಿನ ದಂಡಯಾತ್ರೆ:-
ಎರಡನೇ ಕ್ಯಾಡ್‌ಫಿಸಿಸ್ ಕಾಲದಲ್ಲಿ ಕುಶಾಣರು ಚೀನಿಯರಿಗೆ ಸೋತು ಅವರಿಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದರು. ಕಾನಿಷ್ಕನು ಆ ಸೋಲಿನ ಸೇಡು ತೀರಿಸಿಕೊಳ್ಳಲು ಯತ್ನ ನಡೆಸಿದನು. ಅದರ ಅಂಗವಾಗಿ ತಾನೂ ಸಹ ಚೀನಿ ರಾಜರಿಗೆ ಸಮಾನವಾಗಿ ದೇವಪುತ್ರ ಬಿರುದು ಧರಿಸಿದ.
ಅಲ್ಲದೇ ಅವರ ರಾಜಕುಮಾರಿಯನ್ನು ತನಗೆ ವಿವಾಹ ಮಾಡಿಕೊಡಲು ಒತ್ತಾಯಪಡಿಸಿದನು. ಇದರಿಂದ ಇಬ್ಬರ ನಡುವೆ
ಸಂಘರ್ಷ ಏರ್ಪಟ್ಟಿತು.
ಮೊದಲ
ದಂಡಯಾತ್ರೆಯಲ್ಲಿ ಪಾನ್ ಚೌನಿಗೆ ಕಾನಿಷ್ಕ ಸೋತನು. ಆದರೆ ಕ್ರಿ.ಶ 87 ರಲ್ಲಿ
ಪಾನ್ ಚೌನ ಮಗ ಪಾನ್ ಯಂಗ್ ನನ್ನು ಸೋಲಿಸಿ ಖೋಟಾನ್, ಕ್ಯಾಷ್ ಘರ್, ಯಾರ್ಕಂಡ್ ವಶಪಡಿಸಿಕೊಂಡನು. ಈ ವಿಜಯದ
ನೆನಪಿಗೆ ಕಾನಿಷ್ಕನು
ಕೈಸರ್ ಅಥವಾ ಸೀಸರ್ ಬಿರುದು ಧರಿಸಿದನು. ಚೀನಾದ ತುರ್ಕಿಸ್ತಾನದಲ್ಲಿ ಖರೋಷ್ಠಿ ಮತ್ತು ಪಾಳಿ ಭಾಷೆಯ ಆಧಾರಗಳು ದೊರೆತಿರುವುದು ಈ ವಿಜಯಕ್ಕೆ ಸಾಕ್ಷ್ಯ
ಒದಗಿಸಿವೆ.
ಕಾನಿಷ್ಕನ ಸಾಮ್ರಾಜ್ಯ ವಿಸ್ತಾರ:-
ಉತ್ತರದಲ್ಲಿ ಚೀನಾದ ಖೋಟಾನ್ , ಕ್ಯಾಷ್‌ಘರ್, ಯಾರ್ಕಂಡ್‌ಗಳಿಂದ ದಕ್ಷಿಣದಲ್ಲಿ ಮಧ್ಯ ಭಾರತದ ಮಾಳವದವರೆಗೂ ಮತ್ತು ಪಶ್ಚಿಮದಲ್ಲಿ ಬ್ಯಾಕ್ಟ್ರಿಯಾ, ಆಫ್ಘಾನಿಸ್ತಾನ, ಪಾಮೀರ್‌ಗಳಿಂದ ಪೂರ್ವದಲ್ಲಿ ಬನಾರಸ್ ಅಥವಾ ಕಾಶಿಯವರೆಗೂ ಹರಡಿತ್ತು.
ಬಿರುದುಗಳು:-
ಈತನಿಗೆ ದೇವಪುತ್ರ,
ಕೈಸರ್, ಷಹಾನ್ಷಾಹಿ ಎಂಬ
ಬಿರುದುಗಳಿದ್ದವು.
ಅಂತ್ಯ:-
ಕ್ರಿ.ಶ 120ರಲ್ಲಿ ಚೀನಾದ
ಮೇಲಿನ ದಂಡಯಾತ್ರೆ ಸಂದರ್ಭದಲ್ಲಿ ಇವನ
ಯುದ್ಧಗಳಿಂದ ಬೇಸತ್ತ ತನ್ನ
ಸೈನಿಕರಿಂದಲೇ ಕೊಲೆಯಾದನು
ಕಾನಿಷ್ಕನ ಆಡಳಿತ:-
ಇವನು ಮೌರ್ಯರ ಆಡಳಿತ ಪದ್ದತಿಯನ್ನೇ ಅಲ್ಪ
ಬದಲಾವಣೆಯೊಂದಿಗೆ ಮುಂದುವರಿಸಿದನು. ತನ್ನ ಸಾಮ್ರಾಜ್ಯವನ್ನು
ಆಡಳಿತದ ಅನುಕೂಲಕ್ಕಾಗಿ ಸತ್ರಪಿ ಅಂದರೆ ಪ್ರಾಂತ್ಯ, ವಿಷಯ - ಗ್ರಾಮ ಗಳಾಗಿ ವಿಂಗಡನೆ ಮಾಡಿದ್ದನು. ಇವನ ಸಾಮ್ರಾಜ್ಯದಲ್ಲಿ
( ಸೌರಾಷ್ಟ್ರ, ಸಿಂಧ್,
ಕಾಬೂಲ್, ಬ್ಯಾಕ್ಟ್ರಿಯಾ, ಖೋಟಾನ್, ಯಾರ್ಕಂಡ್, ಕ್ಯಾಷ್ ಘರ್ ಎಂಬ ಪ್ರಾಂತ್ಯಗಳಿದ್ದವು. ಸತ್ರಪಿಗಳನ್ನು ವಿಷಯಗಳಾಗಿ ವಿಂಗಡನೆ
ಮಾಡಿ ಅವುಗಳ ಆಡಳಿತಕ್ಕೆ
ವಿಷಯಪತಿ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು. ಅವನ್ನು ಅಹರ , ರಾಷ್ಟ್ರ, ಜನಪದ, ದೇಶ
ಎನ್ನುತ್ತಿದ್ದರು ಗ್ರಾಮ ಆಡಳಿತದ ಚಿಕ್ಕ ಘಟಕವಾಗಿದ್ದು, ಅದರ ಮುಖ್ಯಸ್ಥನನ್ನು ಗ್ರಾಮಿಣಿ ಎಂದು ಕರೆಯಲಾಗುತ್ತಿತ್ತು. ಇವನು ರಾಜ್ಯದ ಆಗು-ಹೋಗುಗಳನ್ನು ಬರೆದಿಡುವ
ಪದ್ದತಿಯನ್ನು ಚೀನಿಯರಿಂದ ಕಲಿತು ಅಳವಡಿಸಿಕೊಂಡಿದ್ದನು.
ಸಾಂಸ್ಕೃತಿಕ ಸಾಧನೆಗಳು:-
ಧಾರ್ಮಿಕ
ನೀತಿ: ಈತ ವಿದೇಶಿಯನಾದರೂ ಆಚರಣೆಯಲ್ಲಿ ಭಾರತೀಯನಾಗಿದ್ದನು. ಆರಂಭದಲ್ಲಿ ಶೈವನಾಗಿದ್ದು, ನಂತರ ಬೌದ್ಧಮತ ಸ್ವೀಕಾರ ಮಾಡಿದನು. ಈತನ ನಾಣ್ಯಗಳ ಮೇಲೆ ಶಿವ , ಬುದ್ಧ,
ಅಗ್ನಿ, ಸೂರ್ಯ, ಮತ್ತು ಗ್ರೀಕ್, ಮೈತ್ರಾಯಿಕ್, ಜೊರಾಷ್ಟ್ರಿಯನ್ ಹೀಗೆ ವಿವಿಧ ದೇವತೆಗಳ ಚಿತ್ರಗಳಿವೆ. ಇದು ಇವನ ಇದು ಸರ್ವಧರ್ಮಸಹಿಷ್ಣುತೆಯ ಸೂಚಕವಾಗಿದೆ.
ಕಾನಿಷ್ಕ ಮತ್ತು ಬೌದ್ಧ ಧರ್ಮ:-
ಇವನನ್ನು ಎರಡನೇ ಅಶೋಕನೆಂದು ಕರೆಯುತ್ತಾರೆ. ಇವನು ಅಶ್ವಘೋಷನ ಪ್ರಭಾವದಿಂದ ಬೌದ್ಧಧರ್ಮ
ಸ್ವೀಕಾರ ಮಾಡಿದ್ದಲ್ಲದೇ
ಬೌದ್ಧ ಧರ್ಮದ ಪ್ರಚಾರಕ್ಕೆ
ಅಶೋಕನಂತೆ ಆಸಕ್ತಿ ತೋರಿಸಿದನು. ಅದಕ್ಕಾಗಿ ವಿಹಾರ, ಚೈತ್ಯಾಲಯ, ಸ್ತೂಪಗಳನ್ನು
ನಿರ್ಮಿಸಿದನು.
ಅಲ್ಲದೇ ಬುದ್ಧನ ವಿಗ್ರಹ
ಕೆತ್ತಿಸಿದನು. ತನ್ನ ನಾಣ್ಯಗಳ ಮೇಲೆ ಬುದ್ಧನ ಚಿತ್ರ ಅಚ್ಚು ಹಾಕಿಸಿದನು. ಜೊತೆಗೆ ಪುರುಷಪುರದಲ್ಲಿ400 ಅಡಿ ಎತ್ತರದ ಸ್ಮಾರಕ
ಗೋಪುರ ನಿರ್ಮಾಣ ಮಾಡಿಸಿದ್ದನು.
ಇವನು ಅಶೋಕನಂತೆ ಬೌದ್ಧ
ಬಿಕ್ಷುಗಳಿಗೆ ಉದಾರ ದಾನ ದತ್ತಿಗಳನ್ನು ನೀಡಿದನು.
ವಸುಮಿತ್ರ
, ಮಾಥುರ, ಸಂಘರಕ್ಷ, ನಾಗಾರ್ಜುನ, ಅಶ್ವಘೋಷ ಎಂಬ ಬೌದ್ಧ ವಿದ್ವಾಂಸರಿಗೆ ಆಶ್ರಯ ನೀಡಿದ್ದನು.
ನಾಲ್ಕನೇ ಬೌದ್ಧ ಸಮ್ಮೇಳನ:-
ಸಮ್ಮೇಳನ ನಡೆದ
ಕಾಲ ಕ್ರಿ.ಶ 100ರಲ್ಲಿ
ಎನ್ನಲಾಗಿದೆ.
ಕಾಶ್ಮೀರದ ಕುಂಡಲವನದಲ್ಲಿ
ಈ ಸಭೆ ನಡೆಯಿತು.
ಸಭೆಯ ಉದ್ದೇಶವೆಂದರೆ ಬೌದ್ಧಮತದಲ್ಲಿದ್ದ
18 ಪಂಥಗಳನ್ನು ಒಂದುಗೂಡಿಸುವುದು ಮತ್ತು ಬುದ್ಧನ ತತ್ವಗಳನ್ನು ಕ್ರೋಡೀಕರಿಸುವುದು. ಈ ಸಮ್ಮೇಳನಕ್ಕೆ ಪಾರ್ಶ್ವ ಎಂಬ ಬೌದ್ಧ ಬಿಕ್ಕುವಿನ ಸಲಹೆ ಪಡೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು
ವಸುಮಿತ್ರ ವಹಿಸಿದ್ದನು. ಅಶ್ವಘೋಷ ಉಪಾಧ್ಯಕ್ಷನಾಗಿದ್ದನು. ಆದರೆ ತಾರಾನಾಥ ಎಂಬ
ವಿದ್ವಾಂಸರು ನಾಲ್ಕನೇ
ಬೌದ್ಧ ಸಭೆ ಪಂಜಾಬಿನ ಜಲಂಧರ್ ನಲ್ಲಿ ನಡೆಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯ ಪ್ರಮುಖಾಂಶಗಳು::- ತ್ರಿಪಿಟಕಗಳ ಮೇಲೆ ಮಹಾವಿಭಾಷ್ಯ ಎಂಬ ಟೀಕಾ ಗ್ರಂಥ ವಸುಮಿತ್ರನಿಂದ ರಚನೆಯಾಯಿತು. ಇದನ್ನು
ಬೌದ್ಧ ಧರ್ಮದ ವಿಶ್ವ ಕೋಶ ಎನ್ನುತ್ತಾರೆ. ನಂತರ
ಅದನ್ನು ತಾಮ್ರಪಟಗಳಲ್ಲಿ ಬರೆಸಿ ಕಲ್ಲಿನ
ಪೆಟ್ಟಿಗೆಗಳಲ್ಲಿರಿಸಿ ಹೂತು ಅದರ ಮೇಲೆ ಸ್ತೂಪ
ನಿರ್ಮಾಣ ಮಾಡಲಾಯಿತು. ಈ ಸಭೆಯ ನಂತರ ಬೌದ್ಧ
ಧರ್ಮದಲ್ಲಿ ಹೀನಯಾನ ಮತ್ತು ಮಹಾಯಾನ ಎಂಬೆರಡು ಪಂಥಗಳ ಉದಯವಾಯಿತು.
ಸಭೆಯಲ್ಲಿ
ಬೌದ್ಧ ಧರ್ಮವನ್ನು ವಿದೇಶಗಳಲ್ಲಿ ಸಹಾ
ಪ್ರಚಾರ ಮಾಡಲು
ನಿರ್ಣಯ ಕೈಗೊಳ್ಳಲಾಯಿತು. ಅದಕ್ಕಾಗಿ ಮಧ್ಯ ಏಷ್ಯಾ,
ಚೀನಾ, ಜಾವಾ , ಸುಮಾತ್ರ, ಮಲಯಾ, ಬರ್ಮಾಗಳಿಗೆ ಪ್ರಚಾರಕರನ್ನು ನಿಯೋಜನೆ
ಮಾಡಲಾಯಿತು.
ಕಾಶ್ಯಪ, ಮಾತಂಗಾ ಮತ್ತು ಧರ್ಮ ರತ್ನ ಎಂಬುವವರನ್ನು
ಚೀನಾ ದೇಶ
ಮತ್ತು ಮಧ್ಯಏಷ್ಯಾಕ್ಕೆ
ಕಳುಹಿಸಲಾಯಿತು.
ಸಾಹಿತ್ಯ ಪೋಷಣೆ:-
ಕಾನಿಷ್ಕನು ತನ್ನ
ಆಸ್ಥಾನದಲ್ಲಿ ಅಶ್ವಘೋಷ
, ಚರಕ, ಮಾಥುರ, ವಸುಮಿತ್ರ, ಪಾರ್ಶ್ವ, ನಾಗಾರ್ಜುನ, ಸಂಘರಕ್ಷ ಎಂಬ ಬೌದ್ಧ ವಿದ್ವಾಂಸರಿಗೆ ಆಶ್ರಯ ನೀಡಿದ್ದನು. ಇವನ ಕಾಲದಲ್ಲಿ ಸಂಸ್ಕೃತದಲ್ಲಿ ಹೇರಳ ಸಾಹಿತ್ಯ ರಚನೆಯಾಯಿತು. ಇವನ ಆಸ್ಥಾನಿಕರಾದ ಕವಿಗಳು
ಮತ್ತು ಅವರ ಕೃತಿಗಳ ವಿವರಗಳು ಕೆಳಕಂಡಂತಿವೆ:-
A. ಅಶ್ವಘೋಷ-
ಇವನ ಕೃತಿಗಳು:-
ಬುದ್ಧಚರಿತೆ(ಮಹಾಕಾವ್ಯ), ಸೌಂದರಾನಂದ, ಸೂತ್ರಾಲಂಕಾರ. ವಜ್ರಸೂಚಿ, (ಇದರಲ್ಲಿ ವೈದಿಕ ಮತದ ಜಾತಿ ಪದ್ಧತಿಯ ಖಂಡನೆ ಇದೆ) ಮಹಾಯಾನ
ಶ್ರದ್ಧೋತ್ಪಾದ. ಸಾರೀಪುತ್ರ ಪ್ರಕರಣ(ನಾಟಕ)
ನಾಗಾರ್ಜುನ:-
ಆಂಧ್ರಪ್ರದೇಶದ ಬ್ರಾಹ್ಮಣ ಮನೆತನಕ್ಕೆ ಸೇರಿದವನು.
ಇವನ ಪ್ರಮುಖ ಕೃತಿಗಳು:-
ಮಹಾಯಾನ ಸೂತ್ರ,, ಮಾಧ್ಯಮಿಕ
ಸೂತ್ರ, (ಸಾಪೇಕ್ಷವಾದದ ಪ್ರತಿಪಾದನೆ) ಸುಹುಲ್ಲೇಖ,ಶತಸಾಹಸ್ರಿಕ
ಮತ್ತು ಪ್ರಾಜ್ಞಪರಿಮಿತ. ಹ್ಯೂಯೆನ್ ತ್ಸಾಂಗ್ ಇವನನ್ನು ಪ್ರಪಂಚದ
ನಾಲ್ಕು ಜ್ಯೋತಿಗಳಲ್ಲಿ ಒಂದು ಎಂದಿದ್ದಾನೆ
ಇನ್ನಿತರ ಸಾಹಿತಿಗಳು
ಮತ್ತು ಅವರ ಕೃತಿಗಳು:-
ವಸುಮಿತ್ರ:-
ಮಹಾವಿಭಾಷ್ಯ
ಚರಕ:-
ಕೃತಿ ಚರಕ ಸಂಹಿತೆ (ಆಯುರ್ವೇದ ಗ್ರಂಥ). ಇದರಲ್ಲಿ 127 ಗಿಡಮೂಲಿಕೆಗಳ ವಿವರಣೆ ನೀಡಲಾಗಿದೆ.
ಎರಡನೆ
ನಾಗಾರ್ಜುನ-ರಸವೈಧ್ಯ ಗ್ರಂಥ
ಸಂಘರಕ್ಷ-ಮಾರ್ಗಭೂಮಿ
ಧ್ಯಾನ ಸೂತ್ರ
ವ್ಯಾಪಾರ ಮತ್ತು ವಾಣಿಜ್ಯ:-
ಕುಶಾಣರ ಕಾಲದಲ್ಲಿ
ಗ್ರೀಕ್, ರೋಮ್ ,
ಪರ್ಷಿಯಾ, ಚೀನಾಗಳೊಂದಿಗೆ ವ್ಯಾಪಾರ
ಸಂಪರ್ಕವಿತ್ತು. ಚಿನ್ನದ ನಾಣ್ಯಗಳನ್ನು ಮೊದಲು ಜಾರಿಗೆ
ತಂದದ್ದರಿಂದ ಇಂಡೋ ಯುರೋಪಿಯನ್ ವ್ಯಾಪಾರ ಬೆಳವಣಿಗೆ ಆಯಿತು.
ಕಲೆ ಮತ್ತು ವಾಸ್ತು ಶಿಲ್ಪ:-
ಇವರ ಕಾಲದಲ್ಲಿ
ಸ್ತೂಪ, ವಿಹಾರ, ಚೈತ್ಯಾಲಯಗಳ
ನಿರ್ಮಾಣ ಮಾಡಿಸಲಾಗಿದೆ.
ವಿವಿಧ ಭಂಗಿಗಳಿಂದ ಕೂಡಿದ ಬುದ್ಧನ ಮೂರ್ತಿಗಳ ರಚನೆಯಾಯಿತು. ಕಾನಿಷ್ಕನ ಆಸ್ಥಾನದಲ್ಲಿ ಎಜಿಸಿಲಾನ್
ಎಂಬ ಗ್ರೀಕ್ ಶಿಲ್ಪಿ ಇದ್ದ. ಪುರುಷಪುರ, ಮಥುರಾ, ತಕ್ಷಶಿಲೆ, ಸಾರಾನಾತ, ಗಾಂಧಾರ ಇವರ ಪ್ರಮುಖ ಕಲಾಕೇಂದ್ರಗಳಾಗಿದ್ದವು.
ಪುರುಷಪುರದಲ್ಲಿ400
ಅಡಿ ಎತ್ತರದ ಅನೇಕ ಅಂತಸ್ತುಗಳ ಸ್ತೂಪ ನಿರ್ಮಾಣವಾಗಿತ್ತು. ಹ್ಯೂಯೆನ್ ತ್ಸಾಂಗ್ ತನ್ನ ಬರವಣಿಗೆಗಳಲ್ಲಿ ಇದರ
ಬಗ್ಗೆ ವಿವರ ನೀಡಿದ್ದಾನೆ. ಕಾನಿಷ್ಕನು
ಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ಹೊಸ ನಗರವನ್ನು ನಿರ್ಮಿಸಿದನು. ಇವರ ಕಾಲದ ಸಿರ್ ಸುಖ್ ನಗರ (ತಕ್ಷಶಿಲೆಯ ಬಳಿ) ಸರ್ ಜಾನ್ ಮಾರ್ಷಲ್ ರಿಂದ ಶೋಧಗೊಂಡಿದೆ. ಅಲ್ಲದೇ ರಾಜತರಂಗಿಣಿ ಪ್ರಕಾರ ಕುಶಾಣರ ಕಾಲದಲ್ಲಿ ಅನೇಕ ಮಠ ಮತ್ತು ಬೌದ್ಧ ಸ್ತೂಪಗಳ ನಿರ್ಮಾಣ
ಮಾಡಿಸಲಾಗಿದೆ.
ಶಿಲ್ಪಗಳ ನಿರ್ಮಾಣ:-
ಸಾರನಾಥ ಮ್ಯೂಸಿಯಂನಲ್ಲಿರುವ ನಿಂತ ಭಂಗಿಯ ಬುದ್ಧನ ವಿಗ್ರಹ ಇವರ ಕಾಲದಲ್ಲಿ ನಿರ್ಮಾಣಗೊಂಡಿತ್ತು.
ಮಥುರಾದ ಬಳಿ ದೊರೆತಿರುವ
ಕಾನಿಷ್ಕನ ಆಳೆತ್ತರದ ಶಿರರಹಿತ ವಿಗ್ರಹ ಇವರ ಕಾಲದ ಶಿಲ್ಪಕಲೆಗೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿದೆ.
ಗಾಂಧಾರ ಶಿಲ್ಪಕಲೆ:-
ಈ ಕಲಾಶೈಲಿಯು
ಕಾನಿಷ್ಕನ ಕಾಲದಲ್ಲಿ
ರೂಪುಗೊಂಡಿತು. ಇಂದಿನ
ಪೆಷಾವರ, ತಕ್ಷಶಿಲೆ,
ಕಾಬೂಲ್ ಸುತ್ತ-ಮುತ್ತಲಿನ ಪ್ರದೇಶವೇ ಗಾಂಧಾರ ನಾಡು ಎಂದು ಅಂದಿಗೆ ಕರೆಯಲ್ಪಡುತ್ತಿತ್ತು. ಅದಕ್ಕಾಗಿ
ಆ ಭಾಗದಲ್ಲಿ ಬೆಳೆದುಬಂದ ಕಲೆಗೆ “ಗಾಂಧಾರ ಶೈಲಿ” ಎಂದು ಹೆಸರು ಬಂದಿದೆ. ಈ ವಲಯದಲ್ಲಿ ಗ್ರೀಕ್ ಮತ್ತು ಭಾರತೀಯ
ಕಲೆಗಳ ಸಮ್ಮಿಶ್ರಣ ಉಂಟಾಗಿ
ಹೊಸದಾದ ಗಾಂಧಾರ ಶೈಲಿಯ ಬೆಳವಣಿಗೆ ಉಂಟಾಯಿತು. ತಕ್ಷಶಿಲೆ , ಆಫ್ಘಾನಿಸ್ತಾನ, ಬಮಿಯಾನ್, ಮಧ್ಯ ಏಷ್ಯಾ, ಸ್ವಾತ್ ಕಣಿವೆ
ಮತ್ತು ಪುರುಷಪುರ ಇವು
ಈ ಕಲಾಶೈಲಿಯ ಪ್ರಮುಖ
ಕೇಂದ್ರಗಳು.
ಗಾಂಧಾರ ಶಿಲ್ಪಕಲೆಯ ಲಕ್ಷಣಗಳು:-
ಮೂರ್ತಿ ಕೆತ್ತನೆಯಲ್ಲಿ ಉಬ್ಬಿದ ಮಾಂಸ ಖಂಡ, ಮೀಸೆಗೆ ಪ್ರಾಧಾನ್ಯತೆ, ಅಂಗರಚನೆ ಮತ್ತು ದೈಹಿಕ ಸೌಂದರ್ಯಕ್ಕೆ
ಒತ್ತು ನೀಡಲಾಗಿದೆ.
ದಪ್ಪನಾದ ವಸ್ತ್ರಗಳ
ಒತ್ತಾದ ಮಡಿಕೆ, ನೆರಿಗೆ, ಶ್ರೀಮಂತ ಆಭರಣಗಳು ಹಾಗೂ ಉಡುಪುಗಳನ್ನು ಧರಿಸಿರುವಂತೆ ಕೆತ್ತನೆ ಮಾಡಲಾಗಿದೆ. ಬುದ್ಧ ಮತ್ತು ಬೋಧಿಸತ್ವರ ವಿಗ್ರಹಗಳು
ಗ್ರೀಕರ ಅಪೋಲೋ ದೇವರನ್ನು ಹೋಲುತ್ತವೆ. ಭಾರತದ
ಶಿಲ್ಪಿಗಳು -ಶಾಂತ ಮುಖಮುದ್ರೆ ಮತ್ತು ಆಧ್ಯಾತ್ಮಿಕತೆಗೆ ಒತ್ತು ನೀಡಿದರೆ, ಗಾಂಧಾರದ ಶಿಲ್ಪಿಗಳು-ಅಂಗರಚನೆ ಮತ್ತು ದೈಹಿಕ ಸೌಂದರ್ಯಕ್ಕೆ
ಒತ್ತು ನೀಡಿದ್ದಾರೆ.
*****
Comments
Post a Comment