ಮೊಗಲರು ಮತ್ತು ಮರಾಠರ ಇತಿಹಾಸ ಪುನರ್‌ರಚನೆ: ಪ್ರಮುಖ ಆಧಾರಗಳು

ಮೊಗಲರು ಮತ್ತು ಮರಾಠರ ಇತಿಹಾಸ ಪುನರ್‌ರಚನೆ

Reconstruction of history of Moguls and Maratas

ಇತಿಹಾಸ ರಚನೆಗೆ ಮೂಲಾಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳು ಐತಿಹಾಸಿಕ ಮೌಲ್ಯವನ್ನು ಹೊಂದಿರಬೇಕು.

ಮೂಲಾಧಾರಗಳಲ್ಲಿ ಎರಡು ವಿಧಗಳು:

1.     ಸಾಹಿತ್ಯದ ಆಧಾರಗಳು (Literary Sources) ಅಥವಾ ಲಿಖಿತ ಆಧಾರಗಳು.

2.     ಪುರಾತತ್ವ (ಪ್ರಾಚ್ಯ ಅಥವಾ ಪ್ರಾಕ್ತನಾ) ಆಧಾರಗಳು (Archaeological Sources). ಇವಕ್ಕೆ ಅಲಿಖಿತ ಆಧಾರಗಳು ಎಂದೂ ಹೆಸರು.

ಸಾಹಿತ್ಯಾಧಾರಗಳಲ್ಲಿ: ದೇಶೀಯ (Indigenous Sources) ಮತ್ತು ವಿದೇಶೀಯ ಬರವಣಿಗೆಗಳು (Foreign Sources or accounts) ಎಂದು ಎರಡು ವಿಧಗಳಿವೆ.

ಪುರಾತತ್ವ ಆಧಾರಗಳು: ಶಾಸನಗಳು, ನಾಣ್ಯಗಳು & ಸ್ಮಾರಕಗಳು ಒಳಗೊಳ್ಳುತ್ತವೆ.

    ಮಧ್ಯಕಾಲೀನ ಇತಿಹಾಸ ಕೃತಿಗಳ ರಚನೆಯಲ್ಲಿ ಅರಬ್‌ ಇತಿಹಾಸ ರಚನಾ ಕಲೆಯ ಪ್ರಭಾವ ಕಂಡು ಬರುತ್ತದೆ. ಸತ್ಯ ಘಟನೆಗಳ ವರದಿ, ಕಾಲಾನುಕ್ರಮಣಿಕೆ ಈ ಲೇಖಕರ ಪ್ರಮುಖ ಲಕ್ಷಣಗಳು.

ಹೀಗೆ ಅರಬ್‌ ಇತಿಹಾಸಕಾರರು ಕೃತಿಗಳ ರಚನೆ ಮಾಡಲು ಕಾಗದದ ಬಳಕೆ ಆ ವೇಳೆಗೆ ಆರಂಭವಾದುದು ಮತ್ತು ಬರವಣಿಗೆಯ ಜ್ಞಾನ ಪ್ರೇರಣೆ ನೀಡಿತು.

 ಅಲ್ಲದೇ ವಿದ್ವಾಂಸರುಗಳಿಗೆ ಮತ್ತು ಇತಿಹಾಸಕಾರರಿಗೆ ರಾಜ ಮನೆತನಗಳಿಂದ ಪ್ರೋತ್ಸಾಹ & ಆಶ್ರಯ ಸಹಾ ದೊರೆಯಿತು.

   ಅರಬ್‌ ಇತಿಹಾಸ ರಚನಾ ಕಲೆಯು ಉತ್ತಮ ಲಕ್ಷಣಗಳಿಂದ ಕೂಡಿದ್ದರೂ ಆ ಕಾಲದಲ್ಲಿ ರಚನೆಗೊಂಡ ಐತಿಹಾಸಿಕ ಕೃತಿಗಳನ್ನು ಆಧಾರಗಳಾಗಿ ಬಳಸುವಾಗ ಕೂಲಂಕಷ ಪರಿಶೀಲನೆ ಅಗತ್ಯ; ಏಕೆಂದರೆ ಅವರು ಆಶ್ರಯದಾತರ ಬಗ್ಗೆ ಅತಿಯಾದ ಹೊಗಳಿಕೆ ಮತ್ತು ಕೆಲವೊಮ್ಮೆ ಘಟನೆಗಳ ಸತ್ಯಾಸತ್ಯತೆಯನ್ನು ಮರೆಮಾಡಿರುವುದು ಕೆಲವು ಇತಿಹಾಸಕಾರರ ಬರವಣಿಗೆಗಳಲ್ಲಿ ಕಂಡು ಬರುತ್ತದೆ.

 ಇಂತಹ ಸನ್ನಿವೇಶಗಳಲ್ಲಿ ಘಟನೆಗಳ ಸತ್ಯಾಸತ್ಯತೆ ತಿಳಿಯಲು ಇತರೆ ಮೂಲಗಳಿಂದ ಮಾಹಿತಿ ಸಂಗ್ರಹ ಅಗತ್ಯ.

 ಮಧ್ಯಕಾಲೀನ ಭಾರತದ ಇತಿಹಾಸ ರಚನೆಗೆ ಲಭ್ಯವಿರುವ ಲಿಖಿತ ದಾಖಲೆಗಳು ವೈವಿಧ್ಯತೆಯಿಂದ ಕೂಡಿದ್ದು, ಐತಿಹಾಸಿಕ ಕೃತಿಗಳು, ರಾಜ ವಂಶಾವಳಿಗಳು, ಪತ್ರ ವ್ಯವಹಾರಗಳು, ವರದಿಗಳು, ಸೇನಾಧಿಕಾರಿಗಳ & ಅಧಿಕಾರಿಗಳ ಪತ್ರಗಳು, ರಾಜರುಗಳ ಆತ್ಮಕಥನಗಳು & ವಿದೇಶಿಯರ ಬರವಣಿಗೆಗಳು ವಿಫುಲ ಮಾಹಿತಿ ಒದಗಿಸುತ್ತವೆ.

 ಇಸ್ಲಾಂ ಲೇಖಕರು ಅರಬ್‌, ಪರ್ಷಿಯಾ & ಟರ್ಕಿ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದಾರೆ.

 

ಇನ್ನು ಆ ಕಾಲದ ಭಾರತೀಯ ರಾಜರುಗಳ ಕುರಿತಂತೆ ದೇಶೀಯ ಬರವಣಿಗೆಗಳು ಮಾಹಿತಿ ನೀಡುತ್ತವೆ. ದೆಹಲಿ ಸುಲ್ತಾನರು ಮತ್ತು ಮೊಗಲರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ದೇಶೀಯ ಅರಸರುಗಳ ಆಸ್ಥಾನಗಳಲ್ಲಿ ಆಶ್ರಯ ಪಡೆದಿದ್ದ ಸಂಸ್ಕೃತ ಮತ್ತು ಪ್ರಾದೇಶಿಕ ಭಾಷೆಗಳ ಕವಿಗಳು ಮತ್ತು ವಿದ್ವಾಂಸರು ಅನೇಕ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿರುವ ಐತಿಹಾಸಿಕ ಅಂಶಗಳು ಭಾರತೀಯ ಅರಸರ ಇತಿಹಾಸ ಪುನರ್‌ರಚನೆಗೆ ಪ್ರಮುಖ ಆಧಾರಗಳಾಗಿವೆ. ಅಂತೆಯೇ ಶಿವಾಜಿಯ ಜೀವನ ಮತ್ತು ಪೇಶ್ವೆಗಳ ಕಾಲದ ಮರಾಠಾ ಸಾಮ್ರಾಜ್ಯ ಕುರಿತಂತೆ ಅನೇಕ ಸಂಸ್ಕೃತ ಮತ್ತು ಮರಾಠಿ ಭಾಷೆಯ ಕೃತಿಗಳು ಲಭ್ಯವಿವೆ. ಪ್ರಸ್ತುತ ಮೊಗಲರು ಮತ್ತು ಮರಾಠರ ಇತಿಹಾಸದ ಪುನರ್‌ರಚನೆಗೆ ಲಭ್ಯವಿರುವ ಲಿಖಿತ ಮತ್ತು ಪುರಾತತ್ವ ಆಧಾರಗಳನ್ನು ಕೆಳಕಂಡಂತೆ ವಿವರಿಸಬಹುದು.

 

ಮೊಗಲರ ಕಾಲದ ಸಾಹಿತ್ಯಾಧಾರಗಳು   Literary Sources of Mughal Empire

ಮೊಗಲರ ಕಾಲದ ಕೆಲವು ಪ್ರಮುಖ ಸಾಹಿತ್ಯಾಧಾರಗಳು ಕೆಳಕಂಡಂತಿವೆ. The important literary sources of Mughal Empire are as follows:

·         Baburnama: The writer of Baburnama was Zahiruddin Muhommad Babur himself. It is  an autobiography of Babur. It was written in Turkish language. It was  translated in Persian language by Sheik Jainuddin Khwaja. On the order of  Akbar, Abdul rahim khan i khana translated it in Persian language in 1589  90 A.D. In 1826A.D Baburnama was translated by A.S Bevrich in English  language under the name of ‘Memoirs of Babur’. Mirza Nassiruddin Haidar  translated it in Urdu language in 1924A.D. Baburnama gives information of the incidents from 1504 1529A.D. Babur has given detailed information  about political,natural,economic and environamental condition of India. He  also mentioned about the types of farming and crops cultivated in India.

·         Habib us Siyar: The writer of this book is Khondmir. This book gives information about the  mughal empire from 1521 1529A.D. It gives the detailed description about  the general history of the contemporary world.

·         Tarikh i Rashidi: It was written by Mirza Haidar Ali Doglat. It gives information about the  mughals and the Turks of Central Asia. The writer is said to be the cousin of Babur. It throws light on the political condition of Central Asia. He also gives detailed information about the ancestors of Babur. And also informs about the war skills of Humayun.

·         Kanoon i Humayuni : This book was written by Khondmir.he began to write this book in 1533A.D. and completed it in May, 1534 A.D. He gives information about the policies, philosophies, cultures and rituals followed by Humayun in his court. He has given few titles to Humayun as Sikandar i azam and shadow of God.

·         Humayunama: It was written by Gulbadan Begum in 1523A.D she witnessed  the life of Babur as she was 8 years when her father died. Humayunama is  divided into two parts. The first part consists the life history of Babur and  the second part consists of information about Humayun’s rule. She has given  detailed information about the war expeditions of Humayun. Besides  political conditions she has also given detailed information about social conditions  such as marriages, rituals of the Haram, etc.

·         Tohfa i Akbarshahi: It was written by Abbas Khan Sherwani on the orders of Akbar. The book is dedicated to him. The book begins with the information about the era of Bhalol Lodi and ends at the rule of Sher Shah. It also provides information about the initial rule of Akbar.

·         Tarikh i Shahi: It was written by Ahmad Yadgar. This book begins with the rule of Bhalol Lodi and ends at the rule of Hemu. His father was the Wazir in the court of Shehzad Mirza Askari.

·         Tarikh i Akbari: It was written by Arif Quandhari. The book tells about the improvements done during the rule of Akbar. He considers the policies adopted by Akbar towards the Zamindars to be the greatest policy of him.

·         Akbarnama: It was written by Abul Fazl. His father’s name was Sheikh Mubarak. He was born in 1531A.D. in Agra. He prepared the policy of Sulh i kul for Akbar. It took him 7 years to complete the book. It was divided in 3 parts. Ain iAkbari was the last part of the book. The first part consist of detailed information about the ancestors of Akbar from Taimur to Humayun. Abul Fazl calls Akbar as Insan i kamil i.e, the perfect man.

·         Tuzuk i Jahangiri: It is an autobiography of Jahangir. It is the primary source of his era. Jahangir has broadly illustrated 16 years of his rule and all the happenings. The rest of the incidences of his rule is covered in the book named Iqbalnam i jahangiri written by Muhommad Qadi.

·         Badshahnama: It is the first official document of Jahangir’s era. The work is compilation of three writers named Muhommad Amin Kazwini, Abdul Hamid Lahori and Muhommad Waris. The book gives detailed information about the rule of Jahangir.

·         Tarikh i Shahjahani: It was written by Sadik Khan. The book gives detailed information about the rule of Shahjahan and the situations prevailing in the Mughal Empire and it also tells about the interrelation of the officials. The author himself a mansabdar who held the mansabdari of 6000.

·         Alamgirnama: The book was written by Kazim Shiraji. It provides detailed information about the rule of Aurangzeb. He informs about the economic condition, rise in the prices of commodities, decline in agriculture and natural calamities like flood. 

·         Futuhat i Alamgiri: The book was written by Isardas Nagar. It tells about the relation of Aurangzeb with the rajputs.

 Collected from:  Bhawana Singh(Guest Faculty)Department of History, Magadh Mahila College, Patna University

 

ಮೊಗಲರು – ಸಂಕ್ಷಿಪ್ತ ಪರಿಚಯ

   ಮೊಗಲರು 1526 ರಿಂದ 1858 ತನಕ ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ವಂಶ. ಮೊದಲನೆಯ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ದೆಹಲಿ ಮತ್ತು ಆಗ್ರಗಳನ್ನು ವಶಪಡಿಸಿಕೊಂಡ ಜಾಹಿರುದ್ದೀನ್ ಮಹಮದ್ ಬಾಬರ್ ವಂಶದ ಸ್ಥಾಪಕ. ಈತ ತಾಯಿಯ ಕಡೆಯಿಂದ ತೈಮೂರನ ಮತ್ತು ತಂದೆಯ ಕಡೆಯಿಂದ ಚೆಂಗೀಜ್ಖಾನನ ವಂಶಕ್ಕೆ ಸೇರಿದವ. 1527ರಲ್ಲಿ ಸಂಭವಿಸಿದ ಖನುವಾ ಕದನದಲ್ಲಿ ಮೇವಾಡದ ರಾಣಾ ಸಂಗ್ರಾಮವನ್ನು ಸೋಲಿಸಿದ ಬಾಬರ್ ಮರುವರ್ಷವೇ ಆಘ್ಘನ್ನರನ್ನು ಗೋಗ್ರ ಕದನದಲ್ಲಿ ಸೋಲಿಸಿ ತನ್ನ ರಾಜ್ಯವನ್ನು ಬಿಹಾರ ಬಂಗಾಲಗಳಿಗೂ ವಿಸ್ತರಿಸಿದ. ವಿಜಯಗಳಿಂದ ಉತ್ತರ ಭಾರತದ ಸಾರ್ವಭೌಮನಾದ ಬಾಬರ್ 1530ರಲ್ಲಿ ಕೊನೆಯುಸಿರೆಳೆದ.

ಮೊಗಲ್ ವಂಶಕ್ಕೆ ಸೇರಿದ ಹತ್ತೊಂಬತ್ತು ಬಾದಶಹಾರ ಪೈಕಿ ಮೊದಲ ಆರು ಮಂದಿಯನ್ನು, ಎಂದರೆ ಬಾಬರ್ (1526   30), ಹುಮಾಯೂನ್ (1530   56); 1540   55 ಅವಧಿಯನ್ನು ಹೊರತುಪಡಿಸಿ), ಅಕ್ಬರ್ (1556   1605), ಜಹಾಂಗೀರ್ (1605   27), ಷಹಜಹಾನ್ (1627   58) ಹಾಗೂ ಔರಂಗಜೇಬ ಇವರನ್ನು ( 1658   1707) ಮಹಾಮೊಗಲರೆಂದು ಕರೆಯಲಾಗಿದೆ. ಅಕ್ಬರನ ಕಾಲದಲ್ಲಿ ಇಡೀ ಉತ್ತರ ಭಾರತ ಹಾಗೂ ದಖನ್ನಿನ ಖಾಂದೇಶ್ ಮತ್ತು ಬೀರಾರ್ ಪ್ರದೇಶಗಳು ಮೊಗಲ್ ಸಾಮ್ರಾಜ್ಯಕ್ಕೆ ಸೇರಿದ್ದವು. ಔರಂಗಜೇಬನ ಕಾಲದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮೊಗಲ್ ಸಾಮ್ರಾಜ್ಯ ವಿಸ್ತರಿಸಿತು. ಆದರೆ, ನಿಭಾಯಿಸಲಾಗದಷ್ಟು ಬೃಹತ್ತಾಗಿ ಸಾಮ್ರಾಜ್ಯ ಬೆಳೆದುಬಿಟ್ಟಿತೆಂಬ ಸತ್ಯವನ್ನು ತರುವಾಯ ಸಂಭವಿಸಿದ ಘಟನೆಗಳು ತೋರಿಸಿಕೊಟ್ಟವು. ಅಕ್ಬರ್ ಮತ್ತು ಔರಂಗಜೇಬ್ ಅನುಸರಿಸಿದ ಸಾಮ್ರಾಜ್ಯಷಾಹಿ ರೀತಿನೀತಿಗಳಲ್ಲಿ ಅಜಗಜಾಂತರವಿತ್ತು. ಅಕ್ಬರನ ಧರ್ಮಸಹಿಷ್ಣುತೆಯ ನೀತಿಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಲು ಹೊರಟ ಔರಂಗಜೇಬನ ನೀತಿಯಿಂದಾಗಿ ಸ್ವಾಭಾವಿಕವಾಗಿಯೇ ಅಸಮಾಧಾನದಿಂದ ಕುದಿದ ಹಿಂದೂಗಳು ದಂಗೆ ಎದ್ದರು. ಅವರ ಪೈಕಿ ಪ್ರಮುಖರು ಮಹಾರಾಷ್ಟ್ರದಲ್ಲಿ ಶಿವಾಜಿಯ ನೇತೃತ್ವದಲ್ಲಿ ಮರಾಠರು. ಅನಂತರ ಪಂಜಾಬಿನಲ್ಲಿ ಸಿಖ್ಖರು. ಅಕ್ಬರನ ಕಾಲದಿಂದ ಮೊಗಲ್ ಸಿಂಹಾಸನಕ್ಕೆ ನಿಷ್ಠಬೆಂಬಲಿಗರಾಗಿದ್ದ ರಜಪೂತರು ಕೂಡ, ವಿಶೇಷವಾಗಿ ರಾಜಪುಟಾನದವರು ಮತ್ತು ಬುಂದೇಲಖಂಡದ ಜಾಟರು, ಮೊಗಲ ನೀತಿಯನ್ನು ವಿರೋಧಿಸುವ ಪ್ರವೃತ್ತಿ ತೋರಿದರು. ಇಷ್ಟೇ ಅಲ್ಲದೆ, ಪೋರ್ಚುಗಲ್, ಹಾಲೆಂಡ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಿಂದ ಬಂದ ಐರೋಪ್ಯ ವ್ಯಾಪಾರಿಗಳ ಶಾಂತಿಯುತ ವಾಣಿಜ್ಯ ವ್ಯವಹಾರಗಳ ಮರೆಯಲ್ಲಿ ರಾಜಕೀಯ ಮಹತ್ವಾಕಾಂಕ್ಷೆಗಳಿದ್ದವು. ಸುಸಜ್ಜಿತ ನೌಕಾಬಲ, ಸೈನಿಕರ ಶಿಸ್ತು ತರಬೇತಿ, ಯೋಜನಾ ನೈಪುಣ್ಯಗಳಲ್ಲಿ ಮೊಗಲರು ಬ್ರಿಟಿಷರಿಗೆ ಸಾಟಿಯಾಗಿರಲಿಲ್ಲ.

ಜಹಾಂಗೀರ್ ಆಳ್ವಿಕೆಯ ಅಂತ್ಯದಿಂದ ಮೊಗಲ್ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ನಡೆದ ಕಚ್ಚಾಟ, ಮೊಗಲ್ ಸಾಮ್ರಾಜ್ಯದ ಸಾಮಾನ್ಯ ಲಕ್ಷಣವಾಗಿ ಪರಿಣಮಿಸಿತು. ಇದರಿಂದ ಅಧಿಕಾರಿಶಕ್ತಿ, ಸದೃಢತೆ ಶಿಥಿಲಗೊಂಡವು. ಹೀಗಾಗಿ ತರುವಾಯದ ಮೊಗಲ್ ಸಾಮ್ರಾಟರೆಂದು ಪರಿಚಿತರಾದ ಬಾದಶಹಾರ ಆಳ್ವಿಕೆಯ ಕಾಲಗಳಲ್ಲಿ ಸಾಮ್ರಾಜ್ಯದ ಎಲ್ಲೆಗಳು ಬಲುಬೇಗನೆ ಕುಗ್ಗತೊಡಗಿದವು. 1739ರಲ್ಲಿ ನಾದಿರ್ ಷಹ ಮತ್ತು 1751   67 ತನಕ ಅಹಮದ್ ಷಹ ಅಬ್ದಾಲಿಯ ಆಕ್ರಮಣಗಳಿಂದ ಮೊಗಲ್ ಸಾಮ್ರಾಜ್ಯ ಮತ್ತಷ್ಟು ಜರ್ಜರಿತವಾಯಿತು. ತರುವಾಯದ ಮೊಗಲ್ ಸಾರ್ವಭೌಮರೆಂದರೆ ಮೊದಲನೆಯ ಬಹಾದುರ್ ಷಹ ಅಥವಾ ಮೊದಲನೆಯ ಷಹ ಆಲಂ (1707   12), ಜಹಂದರ್ ಷಹ(1712   13), ಫರುಕ್ಸೆಯಾರ್ (1713   19), ರಫೀದ್   ಉದ್   ದರಾಜತ್ (1719), ರಫಿ,   ಉದ್   ದೌಲತ್ (1719), ನೆಕುಸಿಯಾರ್ (1719), ಇಬ್ರಾಹಿಂ (1719), ಮಹಮ್ಮದ್ ಷಹ (1719   48), ಅಹಮದ್ ಷಹ (1748   54), ಎರಡನೆಯ ಆಲಂಗೀರ್ (1754   59), ಎರಡನೆಯ ಷಹ ಆಲಂ (1759   1806), ಎರಡನೆಯ ಅಕ್ಬರ್ (1806   37), ಹಾಗೂ ಎರಡನೆಯ ಬಹಾದುರ್ ಷಹ (1837   38).

ಮೊದಲನೆಯ ಪಾಣಿಪತ್ ಕದನದಲ್ಲಿ (1526) ಜಯಗಳಿಸಿದ ಬಾಬರ್ ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ. ಎರಡನೆಯ ಪಾಣಿಪತ್ ಕದನದಲ್ಲಿ (1556) ಜಯಪಡೆದು ಅಕ್ಬರ್ ಅದನ್ನು ಸದೃಢಗೊಳಿಸಿದ. ಮೂರನೆಯ ಪಾಣಿಪತ್ ಕದನದಲ್ಲಿ (1761) ಅದೇ ಮೊಗಲ್ ಸಾಮ್ರಾಜ್ಯ ಮಾರಕ ಆಘಾತಕ್ಕೀಡಾದುದು ಇತಿಹಾಸ ವ್ಯಂಗ್ಯಗಳಲ್ಲೊಂದು. ಔಧ್ ನವಾಬ ಶೂಜಾ ಉದ್ ದೌಲನ ಸಹಾಯ ಪಡೆದ ಅಹಮದ್ ಷಹ ಅಬ್ದಾಲಿ ಮೊಗಲ್ ಸಾಮ್ರಾಟಷಹ ಆಲಂ ಹಾಗೂ ಆತನ ಮರಾಠ ಬೆಂಬಲಿಗರನ್ನು ನಿರ್ಣಾಯಕ ಹೋರಾಟದಲ್ಲಿ ಸೋಲಿಸಿದ. ತರುವಾಯ ಮೊಗಲ್ ಸಾಮ್ರಾಜ್ಯದ ಅಸ್ತಿತ್ವ ಹಾಗು ಸ್ಥಾನಮಾನ ತೀರಾ ಹೀನಾಯಕರವಾದುದಾಗಿತ್ತು. ಕಾಲದ ಇತಿಹಾಸವೆಂದರೆ ಆಂತರಿಕ ಕಚ್ಚಾಟ, ಹಿಂದೂಗಳ ದಂಗೆ ಹಾಗೂ ಬ್ರಿಟಿಷರ ಒಡೆದು ಆಳುವ ಕುಟಿಲ ರಾಜಕಾರಣಗಳಷ್ಟೇ. ಕೊನೆಯ ಮೊಗಲ್ ಬಾದಶಹಾ ಎರಡನೆಯ ಬಹಾದುರ್ ಷಹ ಬ್ರಿಟಿಷರು ನೀಡಿದ ವರ್ಷಾಶನವನ್ನು ಅವಲಂಬಿಸಿ ಬದುಕಬೇಕಾಯಿತು. 1858 ಪ್ರಸಿದ್ಧದಂಗೆಯಲ್ಲಿ ಈತನ ಪಾತ್ರವಿದ್ದಿತೆಂಬ ಆರೋಪದ ಮೇಲೆ ಈತನನ್ನು ರಂಗೂನಿಗೆ ಕಳುಹಿಸಲಾಯಿತು, 1862ರಲ್ಲಿ ಈತ ಮೃತನಾದ.

ಮಾಹಿತಿ ಮೂಲ:  ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿದ ವಿವರಗಳನ್ನು ಇಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನೀಡಲಾಗಿದೆ

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧